ಸಿ ಗೋಲ್ಡ್ ತಂದ ಕೋಟಿ
Team Udayavani, Sep 2, 2021, 7:10 AM IST
ಪಾಲ್ಘರ್: ಅದೃಷ್ಟವೆಂದರೆ ಹೇಳದೆಯೇ ಬರುತ್ತದೆ. ಮಹಾರಾಷ್ಟ್ರದ ಪಾಲ^ರ್ ಜಿಲ್ಲೆಯ ಚಂದ್ರಕಾಂತ ತಾರೆ ಎಂಬ ಮೀನುಗಾರ ಮೀನು ಮಾರಾಟ ಮಾಡಿ 1.33 ಕೋಟಿ ರೂ. ಸಂಗ್ರಹಿಸಿಕೊಂಡು ಮನೆಗೆ ಖುಷಿಯಿಂದ ತೆರಳಿದ್ದಾರೆ.
ಆ.28ರಂದು ಮಳೆಗಾಲದ ಮೀನುಗಾರಿಕೆ ನಿರ್ಬಂಧ ಮುಗಿದು ಕಡಲಿಗೆ ಇಳಿದ ಚಂದ್ರಕಾಂತ ಮತ್ತು ಗುಂಪಿಗೆ ಮೀನು ಹಿಡಿಯುತ್ತಿದ್ದ ವೇಳೆ ಭಾರವಾದದ್ದು ಏನೋ ಸಿಕ್ಕಿದಂತಾಯಿತು. ಅದನ್ನು ಎಳೆದು ನೋಡಿದಾಗ ಅದರಲ್ಲಿ “ಘೋಲ್’ ತಳಿಯ 157 ಮೀನುಗಳು ಸಿಕ್ಕಿದ್ದವು. ಮಾರುಕಟ್ಟೆ ಯಲ್ಲಿ “ಸಮುದ್ರದ ಚಿನ್ನ (ಸಿ ಗೋಲ್ಡ್-Sea Gold)ಎಂಬ ಹೆಸರಿನಿಂದ ಅದಕ್ಕೆ ಖ್ಯಾತಿಯಿದೆ. ಪಾಲ್ಘರ್ನ ಮರ್ಬೆ ಮಾರುಕಟ್ಟೆಯಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶದ ವ್ಯಾಪಾರಿಗಳು 1.33 ಕೋಟಿ ರೂ. ನೀಡಿ ಪೂರ್ಣ ಪ್ರಮಾಣದಲ್ಲಿ ಅದನ್ನು ಖರೀಸಿದ್ದಾರೆ.
ಔಷಧೋದ್ಯಮ ಮತ್ತು ವೈದ್ಯಕೀಯ ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ ಆ ಮೀನು ಮೌಲ್ಯಯುತವೂ ಹೌದು. ಹಾಂಕಾಂಗ್, ಮಲೇಷ್ಯಾ, ಥೈಲ್ಯಾಂಡ್, ಸಿಂಗಾಪುರ, ಜಪಾನ್ಗಳಲ್ಲಿ ಅದಕ್ಕೆ ಭಾರೀ ಬೇಡಿಕೆ ಇದೆ. ಹೆಚ್ಚುತ್ತಿರುವ ಸಮುದ್ರ ಮಾಲಿನ್ಯದಿಂದಾಗಿ ಅವುಗಳ ತಳಿ ನಶಿಸುತ್ತಿದೆ. ಈ ಮೀನಿನ ವೈಜ್ಞಾನಿಕ ಹೆಸರು “ಪ್ರೊಟೋನಿಬಿ ದಯಾಕ್ಯಾಂತಸ್’ (Protonibea Diacanthus). ಅದರ ಚರ್ಮದಿಂದ ಶಸ್ತ್ರಚಿಕಿತ್ಸೆಯ ಬಳಿಕ ಸ್ವಯಂಚಾಲಿತವಾಗಿ ಕರಗಿ ಹೋಗುವ ಸ್ಟಿಚ್ ತಯಾರಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Flight: ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?
Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ
Surat: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.