ಡ್ರಗ್ಸ್ ಪ್ರಕರಣ: ಭಟ್ಕಳ ಮೂಲದ ಮೆಸ್ಸಿ ಬಂಧನ
Team Udayavani, Sep 2, 2021, 4:30 PM IST
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದ ಮೋಸ್ಟ್ ವಾಡೆಂಟ್ ಡ್ರಗ್ಸ್ ಡೀಲರ್, ಭಟ್ಕಳ ಮೂಲದ ಆರೋಪಿಯನ್ನು ಕೇಂದ್ರ ಅಪರಾಧ
ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಭಟ್ಕಳ ಮೂಲದ ಶರೀಫ್ ಹಸನ್ ಮಸೂರಿ ಅಲಿಯಾಸ್ ಮೆಸ್ಸಿ(35) ಬಂಧಿತ. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ
ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದ 21ನೇ ಆರೋಪಿಯಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಿರೀಕ್ಷಣಾ ಜಾಮೀನು ಪಡೆದು
ಕೊಂಡಿದ್ದ. ಆದರೆ, ಮೆಸ್ಸಿ 2018ರಲ್ಲಿ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣದ ಆರೋಪಿಗಳಾದ ಪ್ರತೀಕ್ ಶೆಟ್ಟಿ ಸೇರಿ ಇಬ್ಬರು ವಿದೇಶಿ ಪ್ರಜೆಗಳ ಜತೆ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸ್ಯಾಂಡಲ್‌ವುಡ್ ಡ್ರಗ್ಸ್ ಆರೋಪಿಗಳ ಜತೆ ಸಂಪರ್ಕ: ಬೆಂಗಳೂರಿನಲ್ಲಿ ನಡೆಯುತ್ತಿದ್ದ ಐಷಾರಾಮಿ ಪಾರ್ಟಿಗಳನ್ನು ಮೆಸ್ಸಿಯೇ ಆಯೋಜಿಸು
ತ್ತಿದ್ದ. ಈ ಪಾರ್ಟಿಗಳಿಗೆ ಬರುತ್ತಿದ್ದ ಸೆಲೆಬ್ರಿಟಿಗಳು, ಉದ್ಯಮಿಗಳು, ರಾಜಕಾರಣಿಗಳ ಮಕ್ಕಳಿಗೆ ಡ್ರಗ್ಸ್ ಪೆಡ್ಲರ್‌ಗಳ ಮೂಲಕ ಮಾದಕ ವಸ್ತುಗಳಾದ ಕೋಕೇನ್, ಗಾಂಜಾ, ಎಂಡಿಎಂಎ ಹಾಗೂ ಇತರೆ ಐಷಾರಾಮಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ.
ಇದನ್ನೂ ಓದಿ:‘ಹ್ಯಾಪಿಲಿ ಮ್ಯಾರೀಡ್’ ಸ್ಟೋರಿ: ಪೃಥ್ವಿ ಅಂಬಾರ್-ಮಾನ್ವಿತಾ ಕಾಮತ್ ಜೋಡಿಯ ಹೊಸ ಚಿತ್ರ
ಆರೋಪಿ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಗಳ ಎಲ್ಲ ಆರೋಪಿಗಳ ಜತೆ ಸಂಪರ್ಕದಲ್ಲಿರುವ ಮಾಹಿತಿ ಸಿಕ್ಕಿದ್ದು, ಅವರೊಂದಿಗೆ ತೆಗೆಸಿಕೊಂಡಿರು
ವ ಫೋಟೋಗಳು ಲಭ್ಯವಾಗಿದೆ. ರಾಗಿಣಿ,ಸಂಜನಾ ಗಲ್ರಾನಿ ಮತ್ತು ಆಫ್ರಿಕಾದ ಲೂಮ್ ಪೆಪ್ಪರ್ ಸಾಂಬಾ ಹಾಗೂ ಆದಿತ್ಯಾ ಆಳ್ವ, ರವಿ
ಶಂಕರ್ ಇತರೆ ಆರೋಪಿಗಳ ಜತೆ ಸಂಪರ್ಕದಲ್ಲಿದ್ದ. ಮುಖ್ಯವಾಗಿ ಸಂಜನಾ ಗಲ್ರಾನಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ.
ಆರೋಪಿ ಪ್ರಕರಣದಲ್ಲಿ ತನ್ನ ಸ್ನೇಹಿತರು ಬಂಧನವಾಗುತ್ತಿದ್ದಂತೆ ನಿರೀಕ್ಷಣಾ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ. ಆದರೆ, ಸಿಸಿಬಿ ಪೊಲೀಸರು ಇತ್ತೀಚೆಗೆ ಸಲ್ಲಿಸಿದ ಆರೋಪಪಟ್ಟಿಯಲ್ಲೂ ಆತನ ಹೆಸರು ಉಲ್ಲೇಖಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
2018ರ ಪ್ರಕರಣದಲ್ಲಿ ಭಾಗಿ: ಸ್ಯಾಂಡಲ್‌ವುಡ್ ಪ್ರಕರಣದಲ್ಲಿ ಆರೋಪಿ ಪಾತ್ರ ಖಚಿತವಾಗಿತ್ತು. ಆದರೆ, ಆರೋಪಿ ನಿರೀಕ್ಷಣಾ ಜಾಮೀನು
ಪಡೆದುಕೊಂಡಿದ್ದ. ಈತನ ಬಗ್ಗೆ ತನಿಖೆ ನಡೆಸುವಾಗ 2018ರ ಪ್ರಕರಣದ ಆರೋಪಿಗಳಿಗೆ ಡ್ರಗ್ಸ್ ಪೂರೈಕೆ ಮಾಡಿರುವುದು, ಪ್ರತೀಕ್ ಶೆಟ್ಟಿ
ಹಾಗೂ ಇಬ್ಬರು ವಿದೇಶಿ ಪ್ರಜೆಗಳ ವಿಚಾರಣೆಯಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನನ್ನುಬಂಧಿಸಲಾಗಿದೆ ಎಂದು ಸಿಸಿಬಿಪೊಲೀಸರು
ಹೇಳಿದರು.
ಡ್ರಗ್ಸ್ ಪೆಡ್ಲರ್‌ಗಳ ಮುಖ್ಯಸ್ಥ ಮೆಸ್ಸಿ ನಗರದಲ್ಲಿದ್ದ ಸ್ಥಳೀಯ ಪೆಡ್ಲರ್‌ಗಳು ಮತ್ತು ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್‌ಗಳನ್ನು ಮಾಸಿಕ ಇಂತಿಷ್ಟು ಹಣ ನಿಗದಿ ಮಾಡಿ ನೇಮಿಸಿಕೊಂಡಿದ್ದ. ಹೀಗಾಗಿ ಈತನನ್ನು ಡ್ರಗ್ಸ್ ಪೆಡ್ಲರ್‌ಗಳ ಮುಖ್ಯಸ್ಥ ಎಂದು ಕರೆಯುತ್ತಿದ್ದರು. ತಾನೂ ಆಯೋಜನೆ ಮಾಡುತ್ತಿದ್ದ ಪಾರ್ಟಿಗಳಿಗೆ ಅವರಿಂದ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ನೋಡಲು ಸ್ಮಾರ್ಟ್ ಆಗಿದ್ದರಿಂದ ಡ್ರಗ್ಸ್ ಪಡೆಯುತ್ತಿದ್ದ ಕೆಲವರು ಈತನನ್ನು ಮೆಸ್ಸಿ ಎಂದು ಕರೆಯುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.