ನಗರಸಭೆಯಲ್ಲಿ ರಾಜಕೀಯ ಮೇಲಾಟ

ಪಕ್ಷಗಳ ವೈಷಮ್ಯದಿಂದ ನಗರಸಭೆ ಕಚೇರಿ ಒಳಹೊರಗೆ ಪ್ರತಿನಿತ್ಯ ನಾಗರಿಕರ ಕೆಲಸಗಳಿಗೆ ತೊಂದರೆ

Team Udayavani, Sep 2, 2021, 4:42 PM IST

ನಗರಸಭೆಯಲ್ಲಿ ರಾಜಕೀಯ ಮೇಲಾಟ

ಅರಸೀಕೆರೆ: ಗಂಡ ಹೆಂಡತಿ ಜಗಳದ ನಡುವೆ ಕೂಸು ಬಡವಾಯ್ತು ಎಂಬ ನಾಣ್ನುಡಿಯಂತೆ ನಗರಸಭೆ ಆಡಳಿತದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ
ಪಕ್ಷಗಳ ನಡುವಿನ ರಾಜಕೀಯ ವೈಷಮ್ಯಗಳಿಂದ ನಗರ ಸಭೆ ಕಚೇರಿ ಒಳಗೆ ಮತ್ತು ಹೊರಗೆ ಪ್ರತಿನಿತ್ಯ ನಾಗರಿಕರ ಕೆಲಸಗಳಿಗೆ ತೊಂದರೆಗಳು ಉಂಟಾಗುತ್ತಿದೆ.

ನಗರಸಭೆ ಆಡಳಿತದಲ್ಲಿ ಬಹುಮತ ವಿಲ್ಲದಿದ್ದರೂ ಮೀಸಲಾತಿ ಆಧಾರದ ಮೇಲೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ, ಸದಸ್ಯರ ಸಂಖ್ಯಾಬಲ ಕೊರತೆಯಿಂದಾಗಿ ದಿನದಿಂದ ದಿನಕ್ಕೆ ನಗರಸಭೆ ಆಡಳಿತದ ಕಾರ್ಯವೈಖರಿಯನ್ನು ಹಳಿ ತಪ್ಪುತಿದ್ದು, ಅದನ್ನು ಸರಿದಾರಿಗೆ ತರಲು ಯಾರು ಕೂಡ ಮುಂದಾಗುತ್ತಿಲ. ಜೆಡಿಎಸ್‌ ಪಕ್ಷದ ಸದಸ್ಯರು ಸ್ಪಷ್ಟ ಬಹುಮತವಿದ್ದರೂ ಮೀಸಲಾತಿ ಹೆಸರಿನಲ್ಲಿ ಅಧಿಕಾರಿ ಕೈತಪ್ಪಿರುವುದರಿಂದ ಆಕ್ರೋಶಗೊಂಡು ನಗರದ ಅಭಿವೃದ್ಧಿ ಕಾರ್ಯಗಳನ್ನು ಮರೆತವರಂತೆ ವರ್ತಿಸುತ್ತಿರುವುದು ಮೇಲ್ನೋಟಕ್ಕೆಕಂಡು ಬರುತ್ತಿದೆ. ಅಂತೆಯೇ ಬಿಜೆಪಿ ಸದಸ್ಯರು ತಮ್ಮ ಕೈ ವಶವಾಗಿರುವ ಅಧಿಕಾರವನ್ನು ಸರಿಯಾದ ಸನ್ಮಾರ್ಗದಲ್ಲಿ ನಡೆಸುವ ಪ್ರಾಮಾಣಿಕ ಪ್ರಯತ್ನವನ್ನು ಇದುವರೆಗೂ ಮಾಡದಿರುವುದು ಆಶ್ವರ್ಯ ಕರ ಸಂಗತಿಯೂ ಆಗಿದೆ. ಒಟ್ಟಿನಲ್ಲಿ ಜನರಿಂದ ಚುನಾಯಿತರಾದ ಜನ ಪ್ರತಿನಿಧಿಗಳು ತಮ್ಮಲ್ಲಿನ ರಾಜಕೀಯ ವೈಷಮ್ಯವನ್ನು ಮರೆತು ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪರಸ್ಪರ ಅನ್ಯೊನತೆಯಿಂದ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸುವದನ್ನು ಬಿಟ್ಟು ತಮ್ಮ, ತಮ್ಮ ಪ್ರತಿಷ್ಠೆಗೆ ಶರಣಾಗಿ ನಗರಸಭೆಆಡಳಿತದಲ್ಲಿಯಾವುದೇ ಕೆಲಸಕಾರ್ಯಗಳು ನಡೆದಂತೆ ಮಾಡಿದ್ದಾರೆ.

ಇದನ್ನೂ ಓದಿ:ಡ್ರಗ್ಸ್‌ ಪ್ರಕರಣ: ಭಟ್ಕಳ ಮೂಲದ ಮೆಸ್ಸಿ ಬಂಧನ

ಪಕ್ಷಗಳ ರಾಜಕೀಯ ವೈಷಮ್ಯದಿಂದ ಸಾರ್ವಜನಿಕರು ಖಾತೆ ಬದಲಾವಣೆ, ಹೊಸ ಮನೆಗಳ ಕಟ್ಟಡಗಳ ನಿರ್ಮಾಣಕ್ಕೆ ಪರವಾತ್ತು ಇ ಸ್ವತ್ತು. ಹಾಗೂ ಜನನ, ಮರಣಪತ್ರಗಳನ್ನು ಪಡೆಯಲು ಜನರು ನಿತ್ಯ ನಗರಸಭೆ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ವಾರ್ಡ್‌ ಗಳಲ್ಲಿ ಒಳಚರಂಡಿ ವ್ಯವಸ್ಥೆ ಹಾಳಾಗಿದ್ದು, ಕಲುಷಿತ ನೀರು ರಸ್ತೆಗಳ ಮೇಲೆ ಅಲ್ಲಲ್ಲಿ ಹರಿಯುತ್ತಿದೆ. ರಸ್ತೆಯಲ್ಲಿ ಕಸದ ರಾಶಿ ಜನರಿಗೆ ಸಾಂಕ್ರಾಮಿಕ ದ ರೋಗಕ್ಕೆ ಕಾರಣವಾಗಿದೆ. ನಗರಸಭೆ ಆಡಳಿತ ಕಾರ್ಯವೈಖರಿ ಜನಜೀವನಕ್ಕೆ ತೊಡಕುಂಟು ಮಾಡಿದೆ. ರಾಷ್ಟ್ರೀಯ ಹೆದ್ದಾರಿ ಬಿ.ಎಚ್‌ ರಸ್ತೆ
ಹೆಂಜುಗೊಂಡನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೀರು ಹರಿಯುತ್ತಿರುವ ಪರಿಣಾಮ ಕೆಸರು ಗದ್ದೆಯಾಗಿದ್ದು ವಾಹನ ಸಾಗುವುದಿರಲಿ ಈ ಭಾಗದ ಜನತೆ ನಡೆದಾಡಲೂ ಸಹ ಸಾಧ್ಯವಾಗದಂತಾಗಿದೆ. ನಗರಸಭೆ ಅಧಿಕಾರಿಗಳಾಗಲಿ, ಚುನಾಯಿತ ಜನಪ್ರತಿನಿಧಿಗಳಾಗಲಿ ಇತ್ತ ತಿರುಗಿ ನೋಡುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿವರ್ಷ ತಪ್ಪದೇ ಕರ ವಸೂಲಿ ಮಾಡುವ ನಗರಸಭೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ. ಅಲ್ಪಸ್ವಲ್ಪ ಮಳೆಯಾದರೂ ಮನೆಯ ಮುಂದಿನ ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಡುತ್ತದೆ ಮಹಿಳೆಯರು ಮಕ್ಕಳು ಮನೆಯಿಂದ ಹೊರಬರಲುಬೇಸರಿಸಿಕೊಳ್ಳುವಸ್ಥಿತಿನಿರ್ಮಾಣವಾಗಿದೆ ಎಂದು ಹಿರಿಯ ನಾಗರಿಕ ಜಗದೀಶ್‌ ತಿಳಿಸಿದರು.

ಪೌರಾಯುಕ್ತರ ಬದಲಾವಣೆ ಅಗತ್ಯ
ನಗರಸಭೆಯಲ್ಲಿ ಅಧಿಕಾರದ ಮೇಲೈಗೆ ಸಾಧಿಸಲು ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ತಾವುಗಳು ಮುಂದು ಎನ್ನುವ ಮನೋಭಾವನೆಯಲ್ಲಿ ಅಧಿಕಾರಿಗಳ ಮೇಲೆ ಏರುತ್ತಿರುವ ಒತ್ತಡದಿಂದಾಗಿ ಸುಲಭವಾಗಿ ಕಚೇರಿಯಲ್ಲಿ ಕೆಲಸ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಳಲು ಇಲ್ಲಿನ ಕೆಲವು ಅಧಿಕಾರಿಗಳಿಂದ ಕೇಳಿ ಬರುತ್ತಿದ್ದು, ಇದರ ಪರಿಣಾಮ ಪದೇ ಪದೇ ಪೌರಾಯುಕ್ತರು ಬದಲಾವಣೆ ಆಗುತ್ತಿದ್ದಾರೆ. ಬಂದವರೂ ಇಲ್ಲಿನ ರಾಜಕೀಯ ಬೆಳೆವಣಿಗೆ ನೋಡಿಕೊಂಡು ಬೇರೆಡೆಗೆ ವರ್ಗಾ ಆಗುತ್ತಿರುವುದು ನಗರಸಭೆ ಕೆಲಸ ಕಾರ್ಯಗಳಿಗೆ ತೊಡಕಾಗಿದೆ ಎಂದು ಸಾರ್ವಜನಿಕರ ದೂರಾಗಿದೆ

ನಗರಸಭೆ ಅಧ್ಯಕ್ಷರು ತಮ್ಮ ಇಚ್ಛೆಯಿಂದ ಪಕ್ಷಾತೀತವಾಗಿ ಎಲ್ಲಾ ಸದಸ್ಯರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಅಧಿಕಾರ ನಡೆಸದೆ ಪ್ರತಿಯೊಂದು ವಿಷಯಕ್ಕೂ ಕ್ಷೇತ್ರದ ಶಾಸಕರನ್ನು ಹಾಗೂ ಜೆಡಿಎಸ್‌ ಪಕ್ಷದ ನಾಯಕರ ಹೆಸರನ್ನು ದುರುದ್ದೇಶ ಪೂರ್ವಕ ಎಳೆದುತರುತ್ತಾರೆ. ಅಭಿವೃದ್ಧಿ ದೃಷ್ಟಿಯಿಂದ ಪಕ್ಷ ಭೇದ ಮರೆತುಕಾರ್ಯ ನಿರ್ವಹಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಒಂದು ಪಕ್ಷದ ಅಧ್ಯಕ್ಷರಂತೆ ವರ್ತಿಸಿದರೆ ಎಲ್ಲರಿಗೂ ಸಂಕಷ್ಟ.
-ಕಾಂತೇಶ್‌, ನಗರಸಭೆ ಉಪಾಧ್ಯಕ್ಷ(ಜೆಡಿಎಸ್‌)

ಸಂವಿಧಾನದ ಬದ್ಧವಾಗಿ ಮೀಸಲಾತಿಯ ಆಧಾರದಲ್ಲಿ ತಾವು ಅಧ್ಯಕ್ಷನಾಗಿದ್ದೇನೆ. ಇದನ್ನು ಅರಿತು ನಗರದ ಅಭಿವೃದ್ಧಿ ದೃಷ್ಟಿಯಿಂದ ಜೆಡಿಎಸ್‌ ಸದಸ್ಯರು ಸಹಕಾರ ನೀಡಿದರೆ ನಾವೆಲ್ಲ ಸೇರಿ ಅರಸೀಕೆರೆ ನಗರವನ್ನು ಮಾದರಿ ನಗರವನ್ನಾಗಿ ಮಾಡಲು ಸಾಧ್ಯ. ಎಲ್ಲಕ್ಕೂ ರಾಜಕೀಯ ಮಾಡುವುದುಯಾರಿಗೂ ಶೋಭೆ ತರುವುದಿಲ್ಲ.
-ಗಿರೀಶ್‌, ನಗರಸಭೆ ಅಧ್ಯಕ್ಷ(ಬಿಜೆಪಿ)

ಟಾಪ್ ನ್ಯೂಸ್

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.