ಕಸ ವಿಲೇವಾರಿ ಘಟಕವಾದ ಸಮುದಾಯ ಭವನ!
Team Udayavani, Sep 3, 2021, 3:00 AM IST
ಗೋಳಿಯಂಗಡಿ: ಜನರು, ಸಂಘ-ಸಂಸ್ಥೆಗಳಿಗೆ ಕಾರ್ಯಕ್ರಮ ಆಯೋಜಿಸಲು ಸರಕಾರದ ಲಕ್ಷಾಂತರ ರೂ. ಅನುದಾನದಲ್ಲಿ ನಿರ್ಮಿಸಿದ ಸಮುದಾಯ ಭವನವನ್ನು ಕಸ ವಿಲೇವಾರಿ ಘಟಕವಾಗಿ ಮಾಡಲಾಗಿದ್ದು, ಇದು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಶಾಲೆ, ಸಹಕಾರಿ ಸಂಘ, ಇನ್ನಿತರ ಜನವಸತಿ ಪ್ರದೇಶವಿರುವ ಜಾಗದಲ್ಲಿ ಈ ರೀತಿ ಕಸ ವಿಲೇವಾರಿ ಮಾಡುತ್ತಿರುವುದು ಸರಿಯಲ್ಲ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ಬೆಳ್ವೆ ಗ್ರಾ.ಪಂ. ವ್ಯಾಪ್ತಿಯ ಅಲಾºಡಿ ಗ್ರಾಮದ ಆರ್ಡಿಯಲ್ಲಿ ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಿದ ಸಮುದಾಯ ಭವನದಲ್ಲಿ ಈಗ ಬೆಳ್ವೆ, ಮಡಾಮಕ್ಕಿ ಹಾಗೂ ಹೆಂಗವಳ್ಳಿ ಈ 3 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಒಣ ಕಸವನ್ನು ಸಂಗ್ರಹಿಸಲಾಗುತ್ತಿದೆ. ಇದಕ್ಕೆ ನಾಗರಿಕರಿಂದ ವಿರೋಧ ವ್ಯಕ್ತವಾಗಿದೆ.
10 ವರ್ಷಗಳ ಹಿಂದೆ ನಿರ್ಮಾಣ:
2009- 10ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಅಲಾºಡಿ ಗ್ರಾಮದ ಆರ್ಡಿಯಲ್ಲಿ ಈ ಸಮುದಾಯ ಭವನವನ್ನು ನಿರ್ಮಿಸಲಾಗಿತ್ತು. ನಿರ್ಮಾಣಗೊಂಡು, ಉದ್ಘಾಟನೆ ಬಳಿಕ ಅನೇಕ ವರ್ಷಗಳವರೆಗೆ ಈ ಸಮುದಾಯ ಭವನದಲ್ಲಿ ಹಲವಾರು ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು, ಸಾರ್ವಜನಿಕ ಆಚರಣೆ ಕುರಿತ ಪೂರ್ವಭಾವಿ ಸಭೆಗಳೆಲ್ಲ ನಡೆಯುತ್ತಿತ್ತು. ಆದರೆ ಕಳೆದ ಒಂದೆರಡು ವರ್ಷಗಳಿಂದ ಇಲ್ಲಿ ಯಾವುದೇ ಕಾರ್ಯಕ್ರಮ ನಡೆಯುತ್ತಿರಲಿಲ್ಲ.
ಶಾಲೆ, ಸೊಸೈಟಿಗೆ ಸಂಕಷ್ಟ:
ಆರ್ಡಿಯ ಈ ಸಮುದಾಯ ಭವನದ ಸಮೀಪವೇ ಸರಕಾರಿ ಪ್ರೌಢಶಾಲೆಯಿದ್ದು, ಇದಲ್ಲದೆ ಪಡಿತರ ವಿತರಣೆಯ ಸೊಸೈಟಿ, ಸರಕಾರಿ ಅಧಿಕಾರಿಗಳ ಮನೆಗಳಿರುವ ಕಾಲನಿ ಸಹ ಇಲ್ಲಿದೆ. ಆಸುಪಾಸಿನಲ್ಲಿ ಮನೆಗಳಿದ್ದು, ಇದು ಜನವಸತಿ ಪ್ರದೇಶವಾಗಿರುವುದರಿಂದ ಈ ಸಮುದಾಯ ಭವನದಲ್ಲಿ ಕಸ ವಿಲೇವಾರಿ ಮಾಡುವುದು ಸರಿಯಲ್ಲ ಎನ್ನುವ ಅಭಿಪ್ರಾಯ ಸ್ಥಳೀಯರದ್ದಾಗಿದೆ.
ಬಹುಗ್ರಾಮ ಕಸ ವಿಲೇವಾರಿ ಘಟಕ :
ಬೆಳ್ವೆ, ಮಡಾಮಕ್ಕಿ ಹಾಗೂ ಹೆಂಗವಳ್ಳಿ ಈ ಮೂರು ಗ್ರಾ.ಪಂ.ಗಳ ಸಂಯುಕ್ತ ಆಶ್ರಯದಲ್ಲಿ ಬೆಳ್ವೆಯ ಗುಮ್ಮೊàಲದ 10 ಎಕರೆ ಜಾಗದಲ್ಲಿ ಬಹುಗ್ರಾಮ ಘನ ತ್ಯಾಜ್ಯ ಸಂಪನ್ಮೂಲ ನಿರ್ವಹಣ ಘಟಕ ನಿರ್ಮಾಣಗೊಳ್ಳುತ್ತಿದೆ. ಆದರೆ ಅದರ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿರುವುದರಿಂದ ಈಗ ಸಂಗ್ರಹಿಸುತ್ತಿರುವ ಒಣ ಕಸವನ್ನು ತಾತ್ಕಾಲಿಕವಾಗಿ ಈ ಸಮುದಾಯ ಭವನದಲ್ಲಿ ಸಂಗ್ರಹಿಸಲಾಗುತ್ತಿದೆ ಎನ್ನುವುದು ಪಂಚಾಯತ್ ಸ್ಪಷ್ಟನೆಯಾಗಿದೆ.
ನಮ್ಮ ಈ ಬಾರಿಯ ಆಡಳಿತಾವಧಿಯ ಮುನ್ನವೇ ಇಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿತ್ತು. ನಾನು ಸದಸ್ಯನಾದ ಬಳಿಕ ಇಲ್ಲಿ ಕಸ ವಿಲೇವಾರಿ ಮಾಡುವುದು ಸರಿಯಲ್ಲ. ಇಲ್ಲಿ ಶಾಲೆ, ಸೊಸೈಟಿಗಳೆಲ್ಲ ಇರುವುದರಿಂದ ಇಲ್ಲಿಂದ ತೆರವು ಮಾಡಿ ಎಂದು ಗ್ರಾ.ಪಂ.ಗೆ ಮನವಿ ಪತ್ರವನ್ನು ಸಹ ಸಲ್ಲಿಸಲಾಗಿದೆ. – ರೋಹಿತ್ ಕುಮಾರ್ ಶೆಟ್ಟಿ, ಸ್ಥಳೀಯ ಗ್ರಾ.ಪಂ. ಸದಸ್ಯ
ಬೆಳ್ವೆ, ಮಡಾಮಕ್ಕಿ ಹಾಗೂ ಹೆಂಗವಳ್ಳಿ ಗ್ರಾ.ಪಂ. ಸಹಯೋಗದಲ್ಲಿ ಸುಸಜ್ಜಿತ ಘನ ತ್ಯಾಜ್ಯ ವಿಲೇವಾರಿ ಘಟಕ ತಯಾರಾಗುತ್ತಿದೆ. ಆದರೆ ಸದ್ಯಕ್ಕೆ ಆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಇಲ್ಲಿ ತಾತ್ಕಾಲಿಕವಾಗಿ ಕಸವನ್ನು ಸಂಗ್ರಹಿಸಲಾಗುತ್ತಿದೆ. ಇಲ್ಲಿ ಶಾಶ್ವತ ಕಸ ವಿಲೇವಾರಿ ಘಟಕವಲ್ಲ. ಹಸಿ ಕಸವನ್ನು ಇಲ್ಲಿ ವಿಲೇವಾರಿ ಮಾಡುತ್ತಿಲ್ಲ. ಒಣ ಕಸವನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ. – ಚಂದ್ರಶೇಖರ್ ಶೆಟ್ಟಿ ಸೂರ್ಗೋಳಿ, ಬೆಳ್ವೆ ಗ್ರಾ.ಪಂ. ಅಧ್ಯಕ್ಷ
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Today World Fisheries Day: ಸಮಸ್ಯೆ ಗೂಡಾಗಿರುವ ಕರಾವಳಿಯ ಪ್ರಮುಖ ಆರ್ಥಿಕತೆ
Road Mishap: ಇನ್ನೋವಾ ಕಾರಿಗೆ ಇನ್ಸುಲೇಟರ್ ಲಾರಿ ಢಿಕ್ಕಿ; ನಾಲ್ವರು ಗಂಭೀರ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.