ನೇತ್ರಾವತಿ ಕಿನಾರೆಯಲ್ಲಿದ್ದರೂ ನೀರಿನ ಬರ


Team Udayavani, Sep 3, 2021, 3:20 AM IST

Untitled-1

ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದಿಂದ ಹಲವು ಬೃಹತ್‌ ಉದ್ದಿಮೆಗಳು, ಸ್ಥಳೀಯಾಡಳಿತ ಸಂಸ್ಥೆ ಗಳಿಗೆ ನೀರು ಸರಬರಾಜಾದರೂ ಇಲ್ಲಿನ ನೀರಿನ ಕೊರತೆ ನೀಗಿಲ್ಲ. ಮಾತ್ರವಲ್ಲ ಇಲ್ಲಿನ ಇನ್ನೂ ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಒಂದು ಊರು; ಹಲವು ದೂರು ಅಂಕಣದಲ್ಲಿ.

ಬಂಟ್ವಾಳ: ಹಲವು ಬೃಹತ್‌ ಉದ್ದಿಮೆಗಳು, ಸ್ಥಳೀಯಾಡಳಿತ ಸಂಸ್ಥೆ ಗಳಿಗೆ ಇದೇ ಗ್ರಾಮದಿಂದ ನೀರು ಸರಬ ರಾಜಾದರೂ, ಈ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆಗೆ ಇನ್ನೂ ಕೂಡ ಪರಿಹಾರ ಕಂಡು ಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಗ್ರಾಮದ ಬಹುತೇಕ ಪ್ರದೇಶ ನೇತ್ರಾವತಿ ನದಿ ಕಿನಾರೆಯಲ್ಲಿದ್ದರೂ, ಗ್ರಾಮಕ್ಕೆ ನೀರಿನ ಸಮಸ್ಯೆ ಇರುವುದು ವಿಪರ್ಯಾಸ.

ಇದು ಸಜೀಪಮುನ್ನೂರು ಗ್ರಾಮದ ಕಥೆ. ಸರಕಾರದ ಅನುದಾನಗಳ ಮೂಲಕ ತಾಲೂಕಿನ ಹಲವಾರು ಗ್ರಾಮಗಳಿಗೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಸಜೀಪಮುನ್ನೂರು ಗ್ರಾಮದಲ್ಲಿ ಕೊಳವೆಬಾವಿಯನ್ನೇ ನಂಬಿ ನೀರು ಪೂರೈಕೆ ಮಾಡಲಾಗುತ್ತಿದೆ. ನದಿಯಿಂದ ಹತ್ತಾರು ಕಿ.ಮೀ.ದೂರಕ್ಕೆ ನೀರು ಕೊಂಡುಹೋದರೆ ನದಿ ಕಿನಾರೆಯಲ್ಲೇ ಇರುವ ಗ್ರಾಮಕ್ಕೆ ನೀರಿಲ್ಲ.

ಇದರ ಜತೆಗೆ ಹತ್ತು ಹಲವು ಸಮಸ್ಯೆಗಳು ಗ್ರಾಮಸ್ಥರನ್ನು ಕಾಡುತ್ತಿದ್ದು,  ಕೆಲವೊಂದು ಒಳರಸ್ತೆಗಳು ಹದಗೆಟ್ಟು ಹೋಗಿವೆ. ಗ್ರಾಮದಲ್ಲಿ ನಿವೇಶನ, ವಸತಿ ಸಮಸ್ಯೆಯೂ ಸಾಕಷ್ಟು ಕಡೆಗಳಲ್ಲಿದೆ. ಇನ್ನು ಗ್ರಾಮದ ಬೊಕ್ಕಸ ಪ್ರದೇಶದಲ್ಲಿ ಮಂಗಳೂರು ವಿವಿಯ ಜಾಕ್‌ವೆಲ್‌ ಸಿಬಂದಿ ವಸತಿ ಗೃಹದ ಕಟ್ಟಡ ಪಾಳು ಬಿದ್ದಿದ್ದು, ಅದರ ತೆರವು ಕಾರ್ಯವೂ ಇನ್ನೂ ನಡೆದಿಲ್ಲ. ವಿವಿ ಸಿಂಡಿಕೇಟ್‌ ಸಭೆಯಲ್ಲಿ ತೆರವಿಗೆ ನಿರ್ಧಾರವಾದರೂ, ಇನ್ನೂ ಅದರ ಕಾರ್ಯ ನಡೆದಿಲ್ಲ.

ಹಲವು ಕಡೆಗೆ ಇಲ್ಲಿಂದ ನೀರು :

ಸಜೀಪಮುನ್ನೂರು ಗ್ರಾಮದ ಹಲವು ಕಡೆಗಳಿಂದ ಮಂಗಳೂರು ವಿಶ್ವ ವಿದ್ಯಾನಿಲಯ, ಕರೋಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀರು ಕೊಂಡು ಹೋಗಲಾಗುತ್ತಿದೆ. ಗ್ರಾಮದಲ್ಲೇ ಜಾಕ್‌ವೆಲ್‌ ಕೂಡ ನಿರ್ಮಿಸಲಾಗಿದೆ. ಉಳ್ಳಾಲ ನಗರ ಸಭೆ ಸೇರಿದಂತೆ ಅಲ್ಲಿ ಹಲವು ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೀರು ಪೂರೈಕೆಯ ದೃಷ್ಟಿಯಿಂದ ಬೃಹತ್‌ ಜಾಕ್‌ವೆಲ್‌ ಅನುಷ್ಠಾನಗೊಳ್ಳುತ್ತಿದ್ದು, ಅದರ ಕಾಮಗಾರಿಯೂ ಬಹುತೇಕ ಪೂರ್ಣಗೊಂಡಿದೆ.

ಸಜೀಪಮುನ್ನೂರು ಗ್ರಾಮಕ್ಕೆ ನೀರು ನೀಡುತ್ತಿಲ್ಲ ಎಂಬ ಕಾರಣಕ್ಕೆ ಜಾಕ್‌ವೆಲ್‌ ನಿರ್ಮಾಣಕ್ಕೆ ಪ್ರಾರಂಭದಲ್ಲಿ ಸಾಕಷ್ಟು ವಿರೋಧಗಳು ಕೇಳಿಬಂದಿತ್ತು. ಬಳಿಕ ಸ್ಥಳೀಯ ಗ್ರಾಮಕ್ಕೂ ನೀರು ನೀಡ ಲಾಗುತ್ತದೆ ಎಂಬ ಭರವಸೆಯ ಹಿನ್ನೆಲೆಯಲ್ಲಿ ಕಾಮಗಾರಿಗೆ ಅವಕಾಶ ನೀಡಿದ್ದರು. ಇಲ್ಲಿಂದ ನೀರು ಕೊಂಡು ಹೋಗುವ ವೇಳೆಯೇ ಹಿಂತಿರುಗಿ ಬರುವ ಪೈಪುಲೈನ್‌ ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಆದರೆ ನೀರು ಶುದ್ಧೀಕರಣಗೊಂಡು ಹಿಂದಿರುಗಿ ಬರುವ ಪೈಪ್‌ಲೈನ್‌ ಹಾಕದಿರುವುದರಿಂದ ಗ್ರಾಮಸ್ಥರಿಗೆ ಇನ್ನೂ ನೀರು ಸಿಗುವ ಭರ ವಸೆ ಸಿಕ್ಕಿಲ್ಲ.

ನೇರವಾಗಿ ನದಿಯಿಂದ ನೀರು :

ನದಿಯಲ್ಲಿ ಸಾಕಷ್ಟು ನೀರಿದ್ದರೂ ಜನತೆಗೆ ಕುಡಿಯುವ ನೀರು ಕೊಡುವ ಸಂದರ್ಭದಲ್ಲಿ ನೇರವಾಗಿ ಕೊಡುವಂತಿಲ್ಲ ಎಂಬ ನಿಯಮವಿದ್ದರೂ, ನಂದಾವರ ಪ್ರದೇಶ ಸೇರಿದಂತೆ ಗ್ರಾಮದ ಕೆಲ ವೊಂದೆಡೆ ನೇರವಾಗಿ ನೀರು ಕೊಡ ಲಾಗುತ್ತಿದೆ ಎಂಬ ಆರೋಪ ಇದೆ. ಅಂದರೆ ಶುದೀœಕರಣ ಘಟಕಕ್ಕೆ ಸಾಕಷ್ಟು ಅನುದಾನ ಬೇಕಿ ರುವು ದರಿಂದ ಅನುಷ್ಠಾನ ಮಾಡ ಲಾಗಿಲ್ಲ. ಕೆಲವು ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋದ ಸಂದರ್ಭದಲ್ಲೂ ಪದೇ ಪದೆ ಗ್ರಾಮಕ್ಕೆ ನೀರಿನ ಸಮಸ್ಯೆ ಎದುರಾಗುತ್ತಲೇ ಇರುತ್ತದೆ.

ರುದ್ರಭೂಮಿ ಅನುಷ್ಠಾನಗೊಂಡಿಲ್ಲ  :

ಪ್ರತೀ ಗ್ರಾಮದಲ್ಲೂ ಮುಕ್ತಿಧಾಮದ ಹೆಸರಿನಲ್ಲಿ ಹಿಂದೂ ರುದ್ರಭೂಮಿ ಇರ ಬೇಕು ಎಂಬ ನಿಯಮವಿದ್ದರೂ, ಸಜೀಪ ಮುನ್ನೂ ರಿನಲ್ಲಿ ಇನ್ನೂ ರುದ್ರಭೂಮಿ ಅನುಷ್ಠಾನಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆಯೇ ರುದ್ರ ಭೂಮಿಗೆ ಜಾಗ ಮೀಸ ಲಿಟ್ಟಿ ದ್ದರೂ, ಅದು ಕೂಡ ಗೊಂದಲದಲ್ಲಿದೆ. ರುದ್ರಭೂಮಿಯ ನಿವೇಶ ನದ ಸಮಸ್ಯೆಯನ್ನು ಅಂತಿಮ ಗೊಳಿಸುವುದಕ್ಕೆ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂಬ ಆರೋಪವೂ ಇದೆ.

ಸಾವಿರಕ್ಕೂ ಅಧಿಕ ಅರ್ಜಿ :

ಗ್ರಾಮದಲ್ಲಿ ಹಲವಾರು ಮಂದಿ ನಿವೇಶನರಹಿತರಾಗಿದ್ದು ಫಲಾನುಭವಿಗಳ ಸಂಖ್ಯೆ ಸಾವಿರ ದಾಟಿದೆ. ಆದರೆ ಅದರ ಹಂಚಿಕೆಯೂ ಇನ್ನೂ ಕೂಡ ವಿಳಂಬವಾಗುತ್ತಲೇ ಇದೆ. ಅಂದರೆ ಒಂದೇ ಮನೆಯಲ್ಲಿ 10-15 ಮಂದಿ ವಾಸಿಸುತ್ತಿದ್ದು, ಅವರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅದಕ್ಕೆ ಸರಕಾರಿ ಭೂಮಿಯ ಲಭ್ಯತೆಯ ಆಧಾರದಲ್ಲಿ ಭೂಮಿ ಹಂಚಿಕೆಯ ಕಾರ್ಯ ನಡೆಯಬೇಕಿದೆ.

-ಕಿರಣ್‌ ಸರಪಾಡಿ

 

ಟಾಪ್ ನ್ಯೂಸ್

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.