![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Sep 3, 2021, 6:22 AM IST
ಮಂಗಳೂರು: ಕೊರೊನಾ ಸಂಕಟದ ಮಧ್ಯೆಯೇ ದೇಶ-ವಿದೇಶಗಳಿಗೆ ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆ ಏರಿಕೆಯಾ ಗಿದ್ದು ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳವಾಗಿದೆ.
ದೇಶದ ವಿವಿಧ ರಾಜ್ಯಗಳಿಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಸ್ಟ್‌ನಲ್ಲಿ 26,067 ಪ್ರಯಾಣಿಕರು ತೆರಳಿದ್ದಾರೆ. ಜುಲೈ ಯಲ್ಲಿ ಈ ಸಂಖ್ಯೆ 18,557 ಆಗಿತ್ತು. ಈ ಮೂಲಕ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 40ರಷ್ಟು ಏರಿಕೆ ದಾಖಲಿ ಸಿದಂತಾಗಿದೆ. ಈ ಮಧ್ಯೆ ಆಗಸ್ಟ್‌ನಲ್ಲಿ ವಿವಿಧ ರಾಜ್ಯಗಳಿಂದ ಮಂಗಳೂರಿಗೆ 26,732 ಪ್ರಯಾಣಿಕರು ಬಂದಿಳಿದಿ ದ್ದರೆ, ಜುಲೈಯಲ್ಲಿ ಈ ಸಂಖ್ಯೆ 19,744 ಆಗಿತ್ತು.
ಭಾರತದೊಳಗೆ ಮತ್ತು ವಿದೇಶ ಗಳು ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸಿರುವುದರಿಂದ ವಿವಿಧ ವಿಮಾನ ಯಾನ ಸಂಸ್ಥೆಗಳು ಮಂಗಳೂರಿನಿಂದ ವಿವಿಧ ಸ್ಥಳಗಳಿಗೆ ವಿಮಾನಯಾನವನ್ನು ಪುನರಾರಂಭಿಸಿರುವುದರಿಂದ ಪ್ರಯಾಣಿಕರ ಸಂಖ್ಯೆ ಏರಿಕೆ ಕಂಡಿದೆ.
ಕೊರೊನಾ ಬಳಿಕ ಇಂಡಿಗೋ ಸಂಸ್ಥೆಯು ಶಾರ್ಜಾಕ್ಕೆ ತನ್ನ ವಿಮಾನ ಯಾನ ಪುನರಾರಂಭಿಸಿದೆ. ಹೈದಾರಾ ಬಾದ್‌ಗೂ ಹೆಚ್ಚುವರಿ ಹಾರಾಟ ಆರಂಭಿಸಿದೆ. ಏರ್ ಇಂಡಿಯಾ ಎಕ್ಸ್ ಪ್ರಸ್ ಅಬುಧಾಬಿ ಸಂಚಾರವನ್ನು ಪುನರಾರಂಭಿಸಿದೆ. ಆಗಸ್ಟ್‌ನಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಬುಧಾಬಿ, ದುಬಾೖ, ತಿರುವನಂತಪುರಕ್ಕೆ ಯಾನ ನಡೆಸಿದ್ದರೆ, ಇಂಡಿಗೋ ಹೈದರಾ ಬಾದ್ ಮತ್ತು ಶಾರ್ಜಾಕ್ಕೆ, ಏರ್ ಇಂಡಿಯಾವು ಮುಂಬಯಿ ಮತ್ತು ಕೊಯಮತ್ತೂರಿಗೆ ಪ್ರತಿನಿತ್ಯದ ಯಾನ ಆರಂಭಿಸಿದೆ ಎಂದು ನಿಲ್ದಾಣದ ಮೂಲಗಳು ತಿಳಿಸಿವೆ.
You seem to have an Ad Blocker on.
To continue reading, please turn it off or whitelist Udayavani.