ದೆಹಲಿ ವಿಧಾನಸಭೆಯೊಳಗೆ ಕೆಂಪುಕೋಟೆಗೆ ಸಂಪರ್ಕ ಕಲ್ಪಿಸುವ ರಹಸ್ಯ ಸುರಂಗ ಮಾರ್ಗ ಪತ್ತೆ!
ನಾನು ಕೂಡಾ ಈ ಬಗ್ಗೆ ಇತಿಹಾಸದ ಪುಟಗಳಲ್ಲಿ ಏನಾದರು ಮಾಹಿತಿ ಲಭ್ಯವಾಗುತ್ತದೆಯೋ ಎಂದು ಪರಿಶೀಲಿಸಿದ್ದೆ.
Team Udayavani, Sep 3, 2021, 11:39 AM IST
ನವದೆಹಲಿ: ಚಾಂದಿನಿ ಚೌಕದಲ್ಲಿರುವ ಕೆಂಪುಕೋಟೆಗೆ ಸಂಪರ್ಕ ಕಲ್ಪಿಸುವ ರಹಸ್ಯ ಸುರಂಗ ಮಾರ್ಗವೊಂದು ದೆಹಲಿ ವಿಧಾನಸಭೆ ಒಳಗಡೆ ಪತ್ತೆಯಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ದೆಹಲಿ ವಿಧಾನಸಭೆಯೊಳಗೆ ಪತ್ತೆಯಾಗಿರುವ ಈ ರಹಸ್ಯ ಸುರಂಗ ಕೆಂಪು ಕೋಟೆಯನ್ನು ಸಂಪರ್ಕಿಸುತ್ತದೆ ಎಂದು ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಈ ಸುರಂಗ ಮಾರ್ಗವನ್ನು ಬ್ರಿಟಿಷರು ನಿರ್ಮಿಸಿದ್ದರು, ಅಂದು ಸ್ವಾತಂತ್ರ್ಯ ಹೋರಾಟಗಾರರನ್ನು ಕರೆದೊಯ್ಯುವಾಗ ಯಾವುದೇ ಪ್ರತಿರೋಧ, ಪ್ರತೀಕಾರದ ಘಟನೆ ನಡೆಯದಂತೆ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ರಹಸ್ಯ ಮಾರ್ಗವನ್ನು ಬ್ರಿಟಿಷರು ಉಪಯೋಗಿಸುತ್ತಿದ್ದರು ಎಂದು ವರದಿ ವಿವರಿಸಿದೆ.
“1993ರಲ್ಲಿ ಶಾಸಕನಾದ ಮೇಲೆ, ದೆಹಲಿ ವಿಧಾನಸಭೆಯೊಳಗೆ ಕೆಂಪುಕೋಟೆಯವರೆಗೆ ತಲುಪಲು ರಹಸ್ಯ ಸುರಂಗ ಮಾರ್ಗವೊಂದು ಇದೆ ಎಂಬ ಬಗ್ಗೆ ಸುದ್ದಿ ಕೇಳಿದ್ದೆ. ನಾನು ಕೂಡಾ ಈ ಬಗ್ಗೆ ಇತಿಹಾಸದ ಪುಟಗಳಲ್ಲಿ ಏನಾದರು ಮಾಹಿತಿ ಲಭ್ಯವಾಗುತ್ತದೆಯೋ ಎಂದು ಪರಿಶೀಲಿಸಿದ್ದೆ. ಆದರೆ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿರಲಿಲ್ಲವಾಗಿತ್ತು ಎಂದು ಸ್ಪೀಕರ್ ಗೋಯೆಲ್ ತಿಳಿಸಿದ್ದಾರೆ.
ಕೊನೆಗೂ ಸುರಂಗ ಮಾರ್ಗದೊಳಕ್ಕೆ ಹೋಗುವ ದಾರಿ ವಿಧಾನಸಭೆಯೊಳಗೆ ಪತ್ತೆಯಾಗಿದೆ. ಆದರೆ ನಮಗೆ ಸುರಂಗ ಮಾರ್ಗವನ್ನು ಅಗೆಯಲು ಸಾಧ್ಯವಿಲ್ಲ, ಯಾಕೆಂದರೆ ಸುರಂಗ ಮಾರ್ಗದ ಎಲ್ಲಾ ಹಾದಿ ಮೆಟ್ರೋ ಯೋಜನೆಯಿಂದ ನಾಶವಾಗಿ ಹೋಗಿದೆ ಎಂದು ಮಾಹಿತಿ ನೀಡಿದ್ದಾರೆ.
ದೆಹಲಿ ವಿಧಾನಸಭೆ ಕಟ್ಟಡದಲ್ಲಿ 1912ರಲ್ಲಿ ಬ್ರಿಟಿಷರು ಕೋಲ್ಕತಾದಿಂದ ಕೇಂದ್ರ ಶಾಸಕಾಂಗ ಕಚೇರಿಯನ್ನು ಇಲ್ಲಿಗೆ ಸ್ಥಳಾಂತರಿಸಿದ್ದರು. ನಂತರ 1926ರಲ್ಲಿ ಕೋರ್ಟ್ ಆಗಿ ಪರಿವರ್ತಿಸಿದ್ದರು. ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಕೋರ್ಟ್ ಗೆ ಹಾಜರುಪಡಿಸಲು ಬ್ರಿಟಿಷರು ಈ ರಹಸ್ಯ ಸುರಂಗ ಮಾರ್ಗವನ್ನು ಬಳಸುತ್ತಿದ್ದರು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
“ಟೋಲ್‌ಗಳಲ್ಲಿ ಸೌಲಭ್ಯವಿಲ್ಲ’: ಮಂಜುನಾಥ ಭಂಡಾರಿ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.