ಮೆಟ್ರೋ: ಗರಿಗೆದರಿದ ರಿಯಲ್ ಎಸ್ಟೇಟ್
ಕೋವಿಡ್ ಲಾಕ್‌ಡೌನ್ ನಿಂದ ಕಳೆದೆರಡು ವರ್ಷಗಳಿಂದ ಮಂಕಾಗಿದ್ದ ಉದ್ಯಮ ಚೇತರಿಕೆಯತ್ತ
Team Udayavani, Sep 3, 2021, 3:15 PM IST
ಬೆಂಗಳೂರು: “ನಮ್ಮ ಮೆಟ್ರೋ’2ನೇ ಹಂತದ ವಿಸ್ತರಿತ ಕೆಂಗೇರಿ ಮಾರ್ಗವು ಕೇವಲ ಹೊರವಲಯವನ್ನು ನಗರದ ಹೃದಯಭಾಗಕ್ಕೆ ಸಂಪರ್ಕ ಕಲ್ಪಿಸುವ “ಸಂಚಾರ ನಾಡಿ’ ಮಾತ್ರವಲ್ಲ; ಆ ಭಾಗದ ಸುತ್ತಲಿನ ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರುವಲ್ಲಿಯೂ ಪ್ರಮುಖಪಾತ್ರ ವಹಿಸಲಿದೆ.
ಕೋವಿಡ್ ಹಾವಳಿ ಮತ್ತು ಲಾಕ್‌ಡೌನ್ ನಿಂದ ಕಳೆದೆರಡು ವರ್ಷಗಳಿಂದ ಮಂಕಾಗಿದ್ದ ಈ ಉದ್ಯಮಕ್ಕೆ “ನಮ್ಮ ಮೆಟ್ರೋ’ ಉತ್ತೇಜನ
ನೀಡಿದಂತಾಗಿದ್ದು, ನಗರದ ಪಶ್ಚಿಮ ಭಾಗದ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು, ದೊಡ್ಡ ಸಮ್ಮೇಳನ ಸಭಾಂಗಣಗಳು, ಮಾಲ್‌ಗಳು,
ಅಪಾರ್ಟ್‌ಮೆಂಟ್‌ಗಳು ತಲೆಯೆತ್ತಲಿವೆ. ಈಗಾಗಲೇ ಇರುವ ಮಳಿಗೆಗಳು, ವಸತಿ ಸಮುತ್ಛಯಗಳು ಮತ್ತು ನಿವೇಶನಗಳಿಗೆ ಬೇಡಿಕೆ ಬರುವ ನಿರೀಕ್ಷೆ ಇದೆ.
ಈ ಮೊದಲು ನಗರದ ಕೋರ್ ಏರಿಯಾದಲ್ಲಿಯೇ ಬೀಡುಬಿಡಲು ಇಚ್ಛಿಸುತ್ತಿದ್ದ ಜನ ಈಗ ಹೊರವಲಯದಲ್ಲಿ ಹರಡಿಕೊಳ್ಳಲಿದ್ದಾರೆ. ಇದರಿಂದ ಕೆಂಗೇರಿ,ಪಟ್ಟಣಗೆರೆ, ಕುಂಬಳಗೋಡು,ಬಿಡದಿ ಸೇರಿದಂತೆ ಮಾರ್ಗದ ಆಸುಪಾಸು ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿಗೆ ಮತ್ತಷ್ಟು ಬೆಲೆ ಬರಲಿದೆ. ಇದೇ ವೇಳೆ ನಗರದ ಹೃದಯಭಾಗದಲ್ಲಿ ಗಗನಕ್ಕೇರಿರುವ ಮಳಿಗೆಗಳು, ಮನೆಗಳ ಬಾಡಿಗೆ ದರ ತಕ್ಕಮಟ್ಟಿಗೆ ಕಡಿಮೆ ಆಗಲೂ ಬಹುದು. ಕಾರಣವಿಷ್ಟೇ, ಸಾರ್ವಜನಿಕರು ಹೊರವಲಯದತ್ತ ಹೋದರೆ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳೂ ವಿಸ್ತರಿಸಲಿವೆ.
ಆಗ ಹೃದಯಭಾಗದಲ್ಲೂ ಕೈಗೆಟಕುವ ದರದಲ್ಲಿ ಬಾಡಿಗೆ ಮನೆಗಳು ದೊರೆಯಬಹುದು. ಉದ್ದೇಶಿತ ಮಾರ್ಗಗಳುದ್ದಕ್ಕೂ ವಾಹನಗಳ ದಟ್ಟಣೆ ತಗ್ಗಲಿದೆ.ಇದರಿಂದವಾಯುಮಾಲಿನ್ಯ ಕಡಿಮೆ ಆಗಲಿದೆ. ಮನರಂಜನಾ ತಾಣಗಳು, ಶಾಪಿಂಗ್ ಮಾಲ್‌ಗಳ ಆಯ್ಕೆ ಕೂಡ ಬದಲಾಗಲಿದೆ.
ಈಗಾಗಲೇ ಜನ ಅಲ್ಲೆಲ್ಲಾ ಭೂಮಿ ಖರೀದಿ, ಮನೆ ನಿರ್ಮಾಣದಲ್ಲಿ ತೊಡಗಿದ್ದಾರೆ. ಈ ವಿಸ್ತರಣೆ ಮಾರ್ಗಗಳಿಂದ ನಗರದ ಯಾವುದೇ ಮೂಲೆ ಯಿಂದ ಕೇವಲ ಅರ್ಧ ಗಂಟೆಯಲ್ಲಿ ನಗರದ ಹೃದಯಭಾಗವನ್ನುತಲುಪಬಹುದು. ಹಾಗಾಗಿ, ಸಹಜವಾಗಿಯೇ ಜನ ಮೆಟ್ರೋ ಹಾದು ಹೋಗುವ ಮಾರ್ಗಗಳ ಸುತ್ತಮುತ್ತ ನೆಲೆಸಲುಬಯಸುತ್ತಾರೆ. ಪರಿಣಾಮ ನಗರದ ಹೊರವಲಯಗಳಲ್ಲಿ ಭೂಮಿ ಬೆಲೆ ಶೇ.15ರಿಂದ 20ರಷ್ಟು ಏರಿಕೆ ಆಗಬಹುದು’ ಎಂದು ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ತಿಳಿಸುತ್ತಾರೆ.
ಇದನ್ನೂ ಓದಿ:ಮಕ್ಕಳ ಭವಿಷ್ಯದ ಕುತ್ತಿಗೆ ಕೊಯ್ಯುವಂಥ ಕೆಲಸದಲ್ಲಿ ಭಾಗಿಯಾದ ಪಶ್ಚಾತ್ತಾಪ ಹೊರಬೇಕಾದೀತು!
ಮೆಟ್ರೋ ನಿಲ್ದಾಣಗಳಿಂದ ವ್ಯವಸ್ಥಿತವಾಗಿ ಬಸ್ ಸಂಪರ್ಕ ಸೇವೆ ದೊರೆತರೆ, ಆಟೋ, ಟ್ಯಾಕ್ಸಿಗಳಿಗೂ ಹೊಡೆತ ಬೀಳಲಿದೆ. ಆಗ, ಜನ ಉದ್ದೇಶಿತ ಮಾರ್ಗಗಳಲ್ಲಿ ಸಂಪೂರ್ಣವಾಗಿ ಸಾರ್ವಜನಿಕ ಸಾರಿಗೆ ಮೊರೆಹೋಗುತ್ತಾರೆ. ಆಗ ವಾಹನ ದಟ್ಟಣೆ ಕಡಿಮೆ ಆಗಲಿದ್ದು, ಅಪಘಾತಗಳ ಸಂಖ್ಯೆ ತಗ್ಗಿಸಲಿಕ್ಕೂ ಕಾರಣವಾಗಲಿದೆ. ಎಂದು ಸಾರಿಗೆ ತಜ್ಞರು ವಿವರಿಸುತ್ತಾರೆ.
ಶೇ. 20-25ರಷ್ಟು ವೃದ್ಧಿ ನಿರೀಕ್ಷೆ
“ಜಗತ್ತಿನ ಯಾವುದೇ ಭಾಗದಲ್ಲಿ ಮೆಟ್ರೋದಂತಹ ನಗರ ಸಮೂಹ ಸಾರಿಗೆಗಳು ಬಂದಲ್ಲೆಲ್ಲಾ ವಸತಿ, ವಾಣಿಜ್ಯ ಚಟುವಟಿಕೆಗಳು ಗರಿಗೆದರಿರುವುದನ್ನು ಕಾಣಬಹುದು. ಉದಾಹರಣೆಗೆ ನ್ಯೂಯಾರ್ಕ್, ಲಂಡನ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಶೇ. 30ರಷ್ಟು ವೃದ್ಧಿ ಯಾಯಿತು. ಸಿಲಿಕಾನ್ ಸಿಟಿ ಕೂಡ ಇದಕ್ಕೆ ಹೊರತಾಗಿಲ್ಲ. ಕೆಂಗೇರಿವರೆಗೆ ಮೆಟ್ರೋ ವಿಸ್ತರಣೆ ಆಗಿದ್ದರಿಂದ ಆ ಭಾಗದಲ್ಲಿ ಶೇ.20 ರಿಂದ 25 ರಷ್ಟು ಭೂಮಿ ಬೆಲೆಯಲ್ಲಿ ಏರಿಕೆಕಂಡುಬರಲಿದೆ’ ಎಂದು ಭಾರತೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಘಗಳ ಒಕ್ಕೂಟ (ಕ್ರೆಡಾಯ್)ಬೆಂಗಳೂರು ಘಟಕದ ಅಧ್ಯಕ್ಷ ಭಾಸ್ಕರ್ ಟಿ. ನಾಗೇಂದ್ರಪ್ಪ ಅಭಿಪ್ರಾಯಪಡುತ್ತಾರೆ. ಕೆಂಗೇರಿ ಬಲಭಾಗ, ಆರ್.ಆರ್. ನಗರದ ಆಲದಮರ ರಸ್ತೆ ಬಳಿ ಹತ್ತಾರು ಕೈಗಾರಿಕೆಗಳಿವೆ. ಅಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡುತ್ತಾರೆ. ಅವರೆಲ್ಲರಿಗೂ ಸುರಕ್ಷಿತ ಸಾರಿಗೆ ಸೇವೆ ದೊರೆಯುತ್ತದೆ. ಸಮಯವೂ ಉಳಿತಾಯ ಆಗುತ್ತದೆ. ಅದೇ ರೀತಿ,ಕೈಗಾರಿಕೆಗಳಿಗೆ ಬಂದುಹೋಗುವ ಗ್ರಾಹಕರು, ಮೆಟ್ರೋ ಮಾರ್ಗ ಬಂದಿರುವುದರಿಂದ ಮತ್ತಷ್ಟು ಕೈಗಾರಿಕೆ ಗಳು ಅಲ್ಲಿ ಬರಲು ಅನುಕೂಲ ಆಗಲಿದೆ. ಇದೆಲ್ಲವೂಕೈಗಾರಿಕೆ ಬೆಳವಣಿಗೆಗೆ ಪೂರಕ ಎಂದುಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾಮಹಾಸಂಸ್ಥೆ (ಎಫ್ಕೆಸಿಸಿಐ) ಅಧ್ಯಕ್ಷ ಪೆರಿಕಲ್ ಸುಂದರ್ ತಿಳಿಸುತ್ತಾರೆ. ಅಲ್ಲದೆ, ಮೆಟ್ರೋ ಕಾರಿಡಾರ್‌ಗಳು ಟ್ರಾನ್ಸಿಟ್ ಓರಿಯಂಟೆಡ್ ಡೆವಲಪ್‌ಮೆಂಟ್ (ಟಿಒಡಿ) ನೀತಿ ಅಡಿ ಬರುವುದರಿಂದ ಆಸುಪಾಸು ಇರುವ ಕಟ್ಟಡಗಳ ಫ್ಲೋರ್ ಏರಿಯಾ ರೇಷಿಯೋ ಹೆಚ್ಚಳಕ್ಕೂ ಉತ್ತೇಜನ ಸಿಗಲಿದೆ.
-ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
Bengaluru: ಸೆಂಟ್ರಿಂಗ್ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್ ವಶಕ್ಕೆ
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.