![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Sep 4, 2021, 6:50 AM IST
ಹೊಸದಿಲ್ಲಿ: “ಪುನರ್ ನವೀಕರಿಸಬಹುದಾದ ಇಂಧನ ಮೂಲಗಳಾದ ಸೂರ್ಯಕಿರಣ ಮತ್ತು ಗಾಳಿಯಿಂದ ವಿದ್ಯುತ್ ತಯಾರಿಸಬಹುದು. ಅದನ್ನು ಹಸರು ಜಲಜನಕವನ್ನಾಗಿ ಪರಿವರ್ತಿಸಿದರೆ, ಸಾಂಪ್ರದಾಯಿಕ ಇಂಧನಗಳಾದ ಪೆಟ್ರೋಲ್, ಡೀಸೆಲ್ ಹಾಗೂ ಇನ್ನಿತರ ತೈಲಗಳಿಗೆ ಪರ್ಯಾಯವಾದ ಇಂಧನವನ್ನು ಸೃಷ್ಟಿಸ ಬಹುದು. ಆಗ, ಒಂದು ಲೀಟರ್ ಹಸುರು ಜಲಜನಕದ ಬೆಲೆ 1 ಡಾಲರ್‌ಗೆ ಸಮವಾಗಿರಲಿದೆ’ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ.
2021ರ ಅಂತಾರಾಷ್ಟ್ರೀಯ ಹವಾ ಮಾನ ಸಮ್ಮೇಳನದಲ್ಲಿ ಮಾತನಾಡಿದ ಅವರು “ಇದೇ ದಶಕದ ಅಂತ್ಯದ ಹೊತ್ತಿಗೆ ಗುಜರಾತ್‌ನ ಜಾಮ್‌ನಗರ್‌ನಲ್ಲಿ ನಿರ್ಮಿಸಲಾಗಿರುವ “ಧೀರೂಭಾಯ್ ಅಂಬಾನಿ ಗ್ರೀನ್ ಎನರ್ಜಿ ಗಿಗಾ ಕಾಂಪ್ಲೆಕ್ಸ್’ ಕಂಪೆನಿ, ವಿವಿಧ ಪುನರ್ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಾರ್ಷಿಕವಾಗಿ 100 ಗಿಗಾ ವ್ಯಾಟ್ ಸೋಲಾರ್ ವಿದ್ಯುತ್ತನ್ನು ಉತ್ಪಾದಿಸಲಿದೆ’ ಎಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ ತಿಳಿಸಿದ್ದಾರೆ
ವಾರದಲ್ಲಿ ಜಿಯೋ ಫೋನ್‌ಗಳ ಲಗ್ಗೆ
ಜಿಯೋ ಹಾಗೂ ಗೂಗಲ್ ಸಹಯೋಗದೊಂದಿಗೆ ರೂಪಿಸಲ್ಪಟ್ಟಿರುವ ಜಿಯೋ ಮೊಬೈಲ್ ಫೋನ್‌ಗಳು ಇನ್ನೊಂದು ವಾರದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎಂದು ಮೂಲಗಳು ತಿಳಿಸಿವೆ. ಆ್ಯಂಡ್ರಾಯ್ಡ ಆಪರೇಟಿಂಗ್ ಸಿಸ್ಟಂ ಹೊಂದಿರುವ ಈ ಫೋನ್‌ಗಳು, ವಿಶ್ವದಲ್ಲೇ ಅತೀ ಅಗ್ಗದ ಪೋನ್‌ಗಳಾಗಿರಲಿದ್ದು, ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಗೆ ಮತ್ತಷ್ಟು ಪುಷ್ಟಿ ತುಂಬುವಂಥ ಸೌಲಭ್ಯಗಳನ್ನು ಒಳಗೊಂಡಿರುತ್ತವೆ ಎನ್ನಲಾಗಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.