ಇಡಾ ಚಂಡಮಾರುತ ಹಾವಳಿಯಿಂದ 46 ಸಾವು : ನ್ಯೂಯಾರ್ಕ್‌ನಲ್ಲೇ 26 ಸಾವು
Team Udayavani, Sep 4, 2021, 8:00 AM IST
ನ್ಯೂಯಾರ್ಕ್: ಅಮೆರಿಕದಲ್ಲಿ ಇಡಾ ಚಂಡಮಾರುತ, ದೇಶದ ಈಶಾನ್ಯ ಭಾಗದ ಆರು ಪ್ರಾಂತ್ಯಗಳಲ್ಲಿ ಅನಾಹುತಕ್ಕೆ ಕಾರಣವಾಗಿದೆ. ಮೇರಿಲ್ಯಾಂಡ್, ಕನೆಕ್ಟಿಕಟ್, ವರ್ಜೀನಿಯಾ, ಲೂಸಿಯಾನಾ, ಮಿಸಿಸಿಪ್ಪಿ, ನ್ಯೂಯಾರ್ಕ್ ಪ್ರಾಂತ್ಯಗಳು ಹೆಚ್ಚು ಹಾನಿಗೊಳಗಾದ ಪ್ರಾಂತ್ಯಗಳು. ನ್ಯೂಯಾರ್ಕ್‌ನಲ್ಲಿ 26 ಮಂದಿ ಜನ, ಮೇರಿಲ್ಯಾಂಡ್, ಕನೆಕ್ಟಿಕಟ್ ಹಾಗೂ ವರ್ಜೀನಿಯಾದಲ್ಲಿ ತಲಾ ಒಬ್ಬರು ಸಾವನ ಪ್ಪಿದ್ದಾರೆೆ. ಮತ್ತೂಂದೆಡೆ, ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವ ಸಾಧ್ಯತೆಗಳನ್ನು ಮನಗಂಡಿರುವ ಅಮೆರಿಕ ಸರಕಾರ, ಆ ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ.
ಜನಜೀವನ ತತ್ತರ : ಇಡಾ ಚಂಡಮಾರುತದ ಪರಿಣಾಮವಾಗಿ, ಲೂಸಿಯಾನಾದಲ್ಲಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಅಲ್ಲಿ ಒಂದೆರಡು ದಿನಗಳಿಂದ ವಿದ್ಯುತ್ ಇಲ್ಲ, ಕುಡಿಯಲು ಶುದ್ಧ ನೀರೂ ಸಿಗುತ್ತಿಲ್ಲ. ಗಂಟೆಗೆ 240 ಕಿ.ಮೀ.ನಷ್ಟು ರಭಸವಾಗಿ ಸಾಗುತ್ತಿರುವ ಚಂಡಮಾರುತ, ಈ ಪ್ರಾಂತ್ಯಗಳಿಗೆ ವಿದ್ಯುತ್ ಪೂರೈಸುತ್ತಿದ್ದ ದೈತ್ಯ ವಿದ್ಯುತ್ ಕಂಬಗಳನ್ನು ಬುಡಮೇಲು ಮಾಡಿದ್ದರಿಂದ ಎಂದು ಲೂಸಿಯಾನಾ, ಮಿಸಿಸಿಪ್ಪಿ, ನ್ಯೂ ಆರ್ಲಿಯನ್ಸ್ ಪ್ರಾಂತ್ಯಗಳಲ್ಲಿನ ಸುಮಾರು 10 ಲಕ್ಷ ಮನೆಗಳು ಹಾಗೂ ಕಾರ್ಖಾನೆಗಳಿಗೆ ವಿದ್ಯುತ್ ಸರಬರಾಜು ನಿಂತು ಹೋಗಿದೆ.
ನೀರು ಶುದ್ಧೀಕರಣ ಘಟಕಗಳಿಗೆ ನೀರು ನುಗ್ಗಿದ್ದರಿಂದಾಗಿ ಕುಡಿಯುವ ನೀರಿನ ಸರಬರಾಜು ಕೂಡ ನಿಂತು ಹೋಗಿದೆ ಎಂದು “ಅಸೋಸಿಯೇಟೆಡ್ ಪ್ರಸ್’ ತಿಳಿಸಿದೆ. ಇನ್ನು, ರಸ್ತೆಗಳಲ್ಲೆಲ್ಲ ನೀರು ನಿಂತು ವಾಹನ ಸಂಚಾರವೂ ನಿಲುಗಡೆಯಾಗಿದ್ದು ಅಗತ್ಯ ವಸ್ತುಗಳ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.