ತಾಯಿ,ಅಜ್ಜಿ,ಮುತ್ತಜ್ಜಿಯ ನೆನಪಿಗಾಗಿ ಮಂದಿರ ನಿರ್ಮಿಸಿ,ಮೂರ್ತಿ ಪ್ರತಿಷ್ಠಾಪಿಸಿ ಮಾತೃ ಪ್ರೇಮ
ಕಾಪು ಗರಡಿಮನೆ ಕುಟುಂಬದ ಅಗಲಿದ ಮೂರು ತಲೆಮಾರಿನ ಹಿರಿಯ ಸದಸ್ಯರಿಗೆ ಕರಾವಳಿಯಲ್ಲೇ ಅಪರೂಪದ ಗೌರವ ಸಲ್ಲಿಕೆ
Team Udayavani, Sep 4, 2021, 1:00 PM IST
ರಾಕೇಶ್ ಕುಂಜೂರು
ಕಾಪು : ತುಳುನಾಡಿನಲ್ಲಿ ಯಾವುದೇ ದೇವಸ್ಥಾನ, ದೈವಸ್ಥಾನ ನಿರ್ಮಾಣವಾಗುವುದಿದ್ದರೂ ಅದರಲ್ಲಿ ಮುಂಬಯಿಯಲ್ಲಿ ನೆಲೆಸಿರುವ ತುಳುವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅಂತಹ ಸಾಧನೆಯ ನಡುವೆ ಕರಾವಳಿಯಲ್ಲಿ ಹುಟ್ಟಿ, ಬೆಳೆದು ಮುಂಬಯಿಯಲ್ಲಿ ಸಾಧನೆಗೈದ ತಮ್ಮ ತಾಯಿಯ ಜೊತೆಗೆ, ಕುಟುಂಬದ ಹಿರಿಯರ ನೆನಪಿನಲ್ಲಿ ಮಂದಿರವೊಂದನ್ನು ನಿರ್ಮಿಸಿ, ಅದರಲ್ಲಿ ತಾಯಿಯ ಜೊತೆಗೆ, ಅಜ್ಜಿ ಮತ್ತು ಮುತ್ತಜ್ಜಿಯ ಶಿಲಾ ಮೂರ್ತಿಯನ್ನೂ ಪ್ರತಿಷ್ಟಾಪಿಸುವ ಮೂಲಕ ಮುಂಬಯಿಯಲ್ಲೇ ಮುಟ್ಟಿ ಬೆಳೆದ ಮಕ್ಕಳು ಕರಾವಳಿಯಲ್ಲೇ ಅಪರೂಪವೆಂಬತಂಹ ಸೇವಾ ಕಾರ್ಯವನ್ನು ನಡೆಸಿ, ಮಾದರಿಯಾಗಿದ್ದಾರೆ.
ಇದನ್ನೂ ಓದಿ : ದನ ಮೇಯಿಸಲು ಹೋಗಿದ್ದವನ ಮೇಲೆ ಮೊಸಳೆ ದಾಳಿ: ಮೊಸಳೆಯ ಒಂದೇ ಹೊಡೆತಕ್ಕೆ ವ್ಯಕ್ತಿ ಬಲಿ!
ತಾಯಿಯೇ ಸರ್ವಸ್ವ, ಹಿರಿಯರ ಆಶೀರ್ವಾದವೇ ತಮ್ಮ ಜೀವನಕ್ಕೆ ಆಧಾರ ಎಂದು ತಿಳಿದಿರುವ ಮಕ್ಕಳು ಕಾಪು ಗರಡಿ ರಸ್ತೆಯ ಬದಿಯಲ್ಲಿರುವ ನವದುರ್ಗಾ ಲಕ್ಷ್ಮೀ ನಿವಾಸ್ ಮನೆಯ ಆವರಣದಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಪೊಯ್ಯ ಪೊಡಿಕಲ್ಲ ಗರೊಡಿಯ ಗರಡಿ ಮನೆಯ ಸದಸ್ಯರಾದ ಗೀತಾ ಯಾದವ್ ಪೂಜಾರಿ , ಅವರ ತಾಯಿ ಕಲ್ಯಾಣಿ ಬಾಯಿ ಪೂಜಾರಿ, ಮುತ್ತಜ್ಜಿ ಮುತ್ತಕ್ಕ ಬೈದಿ ಪೂಜಾರ್ತಿ ಅವರ ಮೂರ್ತಿಯನ್ನು ಕೆತ್ತಿಸಿ, ಗುಡಿಯೊಳಗೆ ಪ್ರತಿಷ್ಠಾಪನೆ ಮಾಡಿಸಿದ್ದಾರೆ.
ಅಪ್ರತಿಮ ಸಮಾಜ ಸೇವಕಿ : ಮುಂಬೈ ಮಹಾನಗರದಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿದ್ದ ಗೀತಾ ಯಾದವ್ ಪೂಜಾರಿ ಅವರು, ಮುಂಬಯಿ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಆಗಿ, ರಾಜಕೀಯದ ಜೊತೆಗೆ ವಿವಿಧ ಧಾರ್ಮಿಕ, ಶೈಕ್ಷಣಿಕ ಮತ್ತು ಸಮಾಜ ಸೇವಾ ಕಾರ್ಯಗಳಲ್ಲೂ ಮುಂಚೂಣಿಯಲ್ಲಿ ನಿಂತು ವಿವಿಧ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮುಂಬೈ ಜೋಸೆಫ್ ಪಠೇಲ್ ಎಸ್ಟೇಟ್ ನವರಾತ್ರಿ ದುರ್ಗಾ ಪೂಜಾ ಮಂಡಲ್‌ನ ಸಂಸ್ಥಾಪಕರಾಗಿದ್ದ ಅವರು, ಮುಂಬೈ ತುಳುನಾಡ ಕನ್ನಡಿಗರ ಜೊತೆಗೂ ಉತ್ತಮ ಭಾಂದವ್ಯವನ್ನು ಹೊಂದಿದ್ದು ಕಾಪು ಪರಿಸರದಲ್ಲಿಯೂ ಸಮಾಜ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕೊರೊನಾ ಸಂದರ್ಭದಲ್ಲಿ ಜನತೆಯ ಪರವಾಗಿ ಅಪಾರ ಸೇವೆ ಸಲ್ಲಿಸಿದ್ದು, ಜನರಿಗೆ ಉಚಿತ ಆಂಬುಲೆನ್ಸ್, ಊಟ, ಮಾಸ್ಕ್, ಸ್ಯಾನಿಟೈಸರ್ ಸಹಿತವಾದ ವಿವಿಧ ಸೊತ್ತುಗಳನ್ನು ವಿತರಿಸಿದ್ದ ಅವರು ಕಳೆದ ವರ್ಷ ಸೆ. 3ರಂದು ಹೃದಯಾಘಾತದಿಂದಾಗಿ ನಿಧನ ಹೊಂದಿದ್ದರು.
27 ಲಕ್ಷ ರೂ. ವೆಚ್ಚ : ಗೀತಾ ಯಾದವ್, ಕಲ್ಯಾಣಿ ಪೂಜಾರ್ತಿ ಮತ್ತು ಮುತ್ತಕ್ಕ ಬೈದಿ ಪೂಜಾರ್ತಿ ಅವರ ನೆನಪಿನಲ್ಲಿ ನಿರ್ಮಿಸಲಾದ ಮಂದಿರವನ್ನು ಗೀತಾ ಯಾದವ್ ಅವರ ವರ್ಷಾಂತಿಕದ ದಿನವಾದ ಸೆ. ೩ರಂದು ಉದ್ಘಾಟಿಸಲಾಗಿದೆ. ಮಂದಿರ ನಿರ್ಮಾಣಕ್ಕೆ ಪಿಂಕ್ ಸ್ಟೋನ್ ವಿಯೆಟ್ನಾಂ ಮಾರ್ಬಲ್‌ನ್ನು ಬಳಸಲಾಗಿದ್ದು, ಪುತ್ಥಳಿ (ಮೂರ್ತಿ) ಕೆತ್ತನೆಗೆ ವೈಟ್ ಸ್ಟೋನ್ ವಿಯೆಟ್ನಾಂ ಮಾರ್ಬಲ್‌ನ್ನು ಬಳಸಲಾಗಿದೆ. ಗುಡಿ ನಿರ್ಮಾಣ, ಪುತ್ಥಳಿ ರಚನೆ, ಮಂದಿರದ ಅಽಷ್ಟಾನದೊಳಗೆ ಮೂರ್ತಿ ಪ್ರತಿಷ್ಟಾಪನೆ ಸಹಿತವಾದ ಜೋಡಣಾ ಕಾರ್ಯಗಳಿಗೆ 27 ಲಕ್ಷ ರೂ. ಖರ್ಚಾಗಿದೆ. ರಾಜಸ್ಥಾನದ ಜೈಪುರದ ಕಾರ್ಮಿಕರ ತಂಡವು ಗುಡಿ ನಿರ್ಮಾಣ ಮತ್ತು ಮೂರ್ತಿ ಕೆತ್ತನಾ ಕಾರ್ಯಗಳ ಕಾಮಗಾರಿಗಳ ಉಸ್ತುವಾರಿ ವಹಿಸಿದ್ದು, ಕಾಮಗಾರಿ ಪೂರ್ಣಗೊಳಿಸಲು 3 ತಿಂಗಳು 22 ದಿನಗಳ ಕಾಲ ಹಿಡಿದಿದೆ.
ಮಾಜಿ ಕಾರ್ಪೋರೇಟರ್ ಗೀತಾ ಯಾದವ್ ಪೂಜಾರಿ ಅವರ ನೆನಪಿನಲ್ಲಿ ಪತಿ ವಸಂತ್ ಯಾದವ್, ಮಕ್ಕಳಾದ ಮನೋಜ್ ವಿ. ಯಾದವ್, ಸಂತೋಷ್ ವಿ. ಯಾದವ್, ವಿನಯ್ ವಿ. ಯಾದವ್ ಮತ್ತು ನವದುರ್ಗಾ ಲಕ್ಷೀ ಅವರು ತಾಯಿ, ಅಜ್ಜಿ ಮತ್ತು ಮುತ್ತಜ್ಜಿಯ ಪುತ್ಥಳಿಯನ್ನು ನಿರ್ಮಿಸಿ, ಮಂದಿರದೊಳಗೆ ಪ್ರತಿಷ್ಠಾಪಿಸಿ, ಕುಟುಂಬದ ಮೂರು ತಲೆಮಾರಿನ ಹಿರಿಯರ ನೆನಪನ್ನು ಶಾಶ್ವತವಾಗಿಸುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ : ಚೊಚ್ಚಲ ಸ್ವದೇಶಿ ನಿರ್ಮಿತ “ಸೂಪರ್ ಪವರ್ ಧ್ರುವ್”; ಭಾರತಕ್ಕೆ ಏನು ಲಾಭ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.