ರೈತರ ಮಹಾ ಪಂಚಾಯತ್ : ನಮ್ಮನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ : ಟಿಕಾಯತ್
ಉತ್ತರ ಪ್ರದೇಶದ ಮುಜಾಫರ್ ನಗರದ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್..!
Team Udayavani, Sep 4, 2021, 1:51 PM IST
ನವ ದೆಹಲಿ : ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ದ ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಮಹಾ ಪಂಚಾಯತ್ ನನ್ನು ಆಯೋಜಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್, ಮಹಾ ಪಂಚಾಯತ್ ಗೆ ಸಾವಿರಾರು ಮಂದಿ ರೈತರು ಭಾಗವಹಿಸಲಿದ್ದಾರೆ. ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಚರ್ಚೆ ಮಾಡಲಾಗುತ್ತದೆ. ಎಷ್ಟು ಮಂದಿ ರೈತರು ಸೇರುತ್ತಾರೆ ಎನ್ನುವುದನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ದೇಶದಾದ್ಯಂತ ಸಹಸ್ರಾರು ಮಂದಿ ಭಾಗಿಯಾಗಲಿದ್ದಾರೆ. ಕೇಂದ್ರ ಸರ್ಕಾರದ ವಿರುದ್ದ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ : ಚೊಚ್ಚಲ ಸ್ವದೇಶಿ ನಿರ್ಮಿತ “ಸೂಪರ್ ಪವರ್ ಧ್ರುವ್”; ಭಾರತಕ್ಕೆ ಏನು ಲಾಭ?
ಮಹಾ ಪಂಚಾಯತ್ ಗೆ ಬರುವ ರೈತರನ್ನು ಯಾರಿಂದಲೂ ತಡೆಯುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ರೈತರನ್ನು ತಡೆದರೇ, ನಾವು ಅದನ್ನು ಮೀರುತ್ತೇವೆ. ನಮ್ಮ ಗುರಿಯನ್ನು ತಲುಪಿಯೇ ತಲುಪುತ್ತೇವೆ ಎಂದು ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.
मुजफ्फरनगर में 5 सितंबर की किसान महापंचायत ऐतिहासिक होगी ।
5 सितंबर चलो मुजफ्फरनगर#FarmersProtest— Rakesh Tikait (@RakeshTikaitBKU) September 3, 2021
ಪಂಜಾಬ್ ನಿಂದ ಬರಲಿದ್ದಾರೆ 2000 ಕ್ಕೂಅಧಿಕ ಮಂದಿ ರೈತರು..!
ಸರಿ ಸುಮಾರು 2000ಕ್ಕೂ ಅಧಿಕ ಮಂದಿ ರೈತರು ಅಮೃತಸರದಿಂದ ಬೆಳಿಗ್ಗೆ 4 ಗಂಟೆಗೆ, ಜಲಂಧರ್ ನಿಂದ 5 ಗಂಟೆಗೆ ಮತ್ತು ಲುಧಿಯಾನದಿಂದ ಬೆಳಿಗ್ಗೆ 6 ಗಂಟೆಗೆ ಎಕ್ಸ್ ಪ್ರೆಸ್ ರೈಲುಗಳ ಮೂಲಕ ಬರಲಿದ್ದಾರೆ.
ದೆಹಲಿ ಗಡಿಯಲ್ಲಿರುವ ಪ್ರತಿಭಟನಾ ಸ್ಥಳಗಳಿಂದ 400-500 ರೈತರು ಮಹಾಪಂಚಾಯತ್ ಗೆ ತೆರಳುತ್ತಾರೆ. ರೈತರು ಟಿಕ್ರಿ ಮತ್ತು ಗಾಜಿಪುರ ಗಡಿಗಳಿಂದ ಬಸ್ಸುಗಳಲ್ಲಿ ಹೊರಡುತ್ತಿದ್ದಾರೆ. ಪ್ರತಿಭಟನಾ ಸ್ಥಳಗಳಿಂದ ಎರಡು ಬಸ್ಸುಗಳು ಈಗಾಗಲೇ ಮುಜಫರ್ ನಗರಕ್ಕೆ ಶುಕ್ರವಾರ ರಾತ್ರಿ ಹೊರಟವು. ಇಂದು(ಶನಿವಾರ) ಬೆಳಿಗ್ಗೆ ಇನ್ನೆರಡು ಹೊರಟಿದ್ದವು ಮತ್ತು ಇನ್ನೂ ಎರಡು ಬಸ್ ಗಳು ಇಂದು ಸಂಜೆ 4 ಗಂಟೆಗೆ ಹೊರಡುತ್ತವೆ.
ಆದಾಗ್ಯೂ, ರೈತರು ಮುಖ್ಯವಾಗಿ ಹಳ್ಳಿ ಹಳ್ಳಿಗಳಿಂದ ಬರುತ್ತಿದ್ದಾರೆ. ಹರಿಯಾಣ, ಮಹಾರಾಷ್ಟ್ರ ಮತ್ತು ಭಾರತದ ಇತರ ಭಾಗಗಳ ರೈತರು ಸಹ ಸೇರುವ ನಿರೀಕ್ಷೆಯಿದೆ ಎಂದು ಟಿಕಾಯತ್ ತಿಳಿಸಿದ್ದಾರೆ.
ಇನ್ನು, ಈ ಮಹಾಪಂಚಾಯತ್ ಕೇವಲ ಚುನಾವಣೆಗೆ ಸಂಬಂಧಿಸಿಲ್ಲ. ಚುನಾವಣೆ ಆರು ತಿಂಗಳ ನಂತರ. ಯುಪಿಯಲ್ಲಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಯುಪಿಯಲ್ಲಿ ವಿದ್ಯುತ್ ದರಗಳು ಕೂಡ ಹೆಚ್ಚಾಗಿದೆ. ಕಳೆದ 2016 ರಿಂದ ಕಬ್ಬಿನ ದರ ಏರಿಕೆಯಾಗಿಲ್ಲ. ಕೇಂದ್ರವು ಇದನ್ನು ಪ್ರತಿ ಕಿಲೋಗ್ರಾಂಗೆ ಐದು ಪೈಸಯಂತೆ ಹೆಚ್ಚಿಸಿದೆ. ನೀವು ರೈತರನ್ನು ಅವಮಾನಿಸುತ್ತಿದ್ದೀರಾ? ಎಂದು ಅವರು ಕಿಡಿ ಕಾರಿದ್ದಾರೆ.
ರೈತರ ಮಹಾ ಪಂಚಾಯತ್ ಹಿನ್ನೆಲೆಯಲ್ಲಿ ಹೆಚ್ಚಿದ ಬಿಗಿ ಭದ್ರತೆ :
ಕೇಂದ್ರದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳು ಸೇರಿದಂತೆ ರೈತರಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಭಾನುವಾರ(ಸೆ.5) ಇಲ್ಲಿ ಆಯೋಜಿಸಲಾಗಿರುವ ‘ರೈತರ ಮಹಾಪಂಚಾಯತ್‘ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ.
ಭದ್ರತೆಗಾಗಿ ಆರು ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆಗಳ (ಪಿಎಸಿ) ತಂಡಗಳು ಮತ್ತು ಎರಡು ಕ್ಷಿಪ್ರ ಕಾರ್ಯಪಡೆಯ (ಆರ್ ಎ ಎಫ್) ತುಕಡಿಗಳನ್ನು ನಿಯೋಜಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಸಹಾರನ್‌ಪುರ ವಲಯದ ಡಿಐಜಿ ಪ್ರೀತಿಂದರ್ ಸಿಂಗ್, ‘ರೈತ ಮಹಾಪಂಚಾಯತ್ ಹಿನ್ನೆಲೆಯಲ್ಲಿ ಐದು ಎಸ್‌ಎಸ್‌ಪಿ, ಏಳು ಎಎಸ್‌ಪಿ ಮತ್ತು 40 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ಭದ್ರತೆಗೆ ನಿಯೋಜಿಸಲಾಗುವುದು. ಇಡೀ ಕಾರ್ಯಕ್ರಮವನ್ನು ವಿಡಿಯೊ ಚಿತ್ರೀಕರಣ ಮಾಡಿಸಲಾಗುವುದು‘ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೆರಿಸ್ಟೋ ಮೇಲೆ ಹಲ್ಲೆ ಆರೋಪ: ವಿಚಿತ್ರ ಅಭಿಮಾನಿ ‘ಜಾರ್ವೋ’ ಇದೀಗ ಪೊಲೀಸರ ಅತಿಥಿ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.