ಅಮೃತಾಪುರ ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ
Team Udayavani, Sep 4, 2021, 5:49 PM IST
ರಾಜ ಸಿರಿಗೆರೆ
ಸಿರಿಗೆರೆ : ಶಿಕ್ಷಕರಿಗೆ ಇಚ್ಛಾಶಕ್ತಿ ಇದ್ದರೆ ಸರ್ಕಾರಿ ಶಾಲೆಯನ್ನೂ ಹೈಟೆಕ್ ಆಗಿಸಬಹುದು ಎಂಬುದಕ್ಕೆ ಗಡಿ ಗ್ರಾಮ ಅಮೃತಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಸಾಕ್ಷಿ. ಈ ಶಾಲೆಯ ಬಹುಮುಖ ಪ್ರತಿಭೆ ಹೊಂದಿರುವ ಸಹಶಿಕ್ಷಕರೊಬ್ಬರ ಶ್ರಮದಿಂದ ನಗರ ಪ್ರದೇಶದ ಶಾಲೆಗಳನ್ನೂ ನಾಚಿಸುವಂತಹ ಸೌಲಭ್ಯಗಳನ್ನು ಪಡೆದು ಚಿತ್ರದುರ್ಗ ಜಿಲ್ಲೆಯಲ್ಲಿಯೇ ಮಾದರಿ ಶಾಲೆಯಾಗಿ ರೂಪುಗೊಂಡಿದೆ. ಅವರ ಸಾಧನೆಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಅರಸಿ ಬಂದಿದೆ.
ಈ ಶಾಲೆಯಲ್ಲಿ 1-5 ತರಗತಿ ನಡೆಯುತ್ತದೆ. 82 ವಿದ್ಯಾರ್ಥಿಗಳಿಗೆ ಮೂವರು ಶಿಕ್ಷಕರಿದ್ದಾರೆ. ಅವರಲ್ಲಿ ಸಹಶಿಕ್ಷಕ ಟಿ.ಪಿ. ಉಮೇಶ್ ಅವರ ಶ್ರಮ ಶಾಲೆಯ ಬೆಳವಣಿಗೆಯಲ್ಲಿ ಗಮನಾರ್ಹವಾಗಿದೆ. ಆರು ವರ್ಷಗಳ ಹಿಂದಿನ ಮಾತು. ಭಾರೀ ಮಳೆಯಿಂದ ಶಾಲೆಯ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದವು. ಮಕ್ಕಳು ಪ್ರಾಣಭಯದಿಂದಲೇ ಪಾಠ ಆಲಿಸುವ ಸ್ಥಿತಿ ಇತ್ತು. ದುರಸ್ತಿಗೆ ಸರ್ಕಾರದಿಂದ ಆರ್ಥಿಕ ನೆರವು ಸಿಗದೇ ಹೋದಾಗ ಮಕ್ಕಳನ್ನು ಬಯಲಲ್ಲಿ, ಗಿಡ-ಮರಗಳ ಕೆಳಗೆ ಕುಳ್ಳಿರಿಸಿ ಪಾಠ ಹೇಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆಗ ಬೆಂಗಳೂರಿನ ಖಾಸಗಿ ಸಂಸ್ಥೆ ಓಸಾಟ್ ಸಂಪರ್ಕಿಸಿ 40 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ತರಗತಿ ಕೊಠಡಿಗಳನ್ನು ನಿರ್ಮಿಸಲಾಯಿತು. ಬೆಂಗಳೂರಿನ ರೋಟರಿ ಸಂಸ್ಥೆ ಅತ್ಯಾಧುನಿಕ ಡೆಸ್ಕ್, ನಲಿ-ಕಲಿ ಮಕ್ಕಳಿಗೆ ಓದುವ ಟೇಬಲ್ ಕೊಡುಗೆಯಾಗಿ ನೀಡಿತು. ಇದರಿಂದ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದ ಮಕ್ಕಳು ಸರ್ಕಾರಿ ಶಾಲೆಯತ್ತ ಆಕರ್ಷಿತರಾದರು. ಯಾವುದೇ ಹೆಸರಾಂತ ಖಾಸಗಿ ಶಾಲೆಗಳಲ್ಲಿಯೂ ಇರದಂತಹ ಸೌಲಭ್ಯಗಳು ಇದೀಗ ಅಮೃತಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿವೆ. ಈ ಶಾಲೆಯ ಪುಟಾಣಿ ಮಕ್ಕಳು ಇದೀಗ ಸೂಕ್ಷ್ಮದರ್ಶಕ ಯಂತ್ರವನ್ನು ಭೌತಿಕವಾಗಿ ನೋಡುವುದಲ್ಲದೆ ಪ್ರಾಯೋಗಿಕವಾಗಿಯೂ ಬಳಸುತ್ತಿದ್ದಾರೆ.
ಅಲ್ಲದೆ ದಾನಿಗಳು ನೀಡಿರುವ ಲ್ಯಾಪ್‌ಟಾಪ್‌ಗ್ಳನ್ನು ಪರಿಣಾಮಕಾರಿಬೋಧನೆಗೆಬಳಸಿಕೊಳ್ಳಲಾಗುತ್ತಿದೆ.ಈ ಶಾಲೆಯಮಕ್ಕಳು ಚಿತ್ರದುರ್ಗ ಆಕಾಶವಾಣಿ ನಡೆಸುವ “ಚಿಗುರು’ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ. ಮಕ್ಕಳಲ್ಲಿ ಪರಿಸರ ಹಾಗೂ ವಿಜ್ಞಾನದತ್ತ ಆಸಕ್ತಿ ಬೆಳೆಸಲು ವಿಜ್ಞಾನ ಪ್ರಯೋಗಾಲಯ ನಿರ್ಮಿಸಲಾಗಿದೆ. ಪಾಠೊಪಕರಣಗಳ ಕೊಠಡಿಯೂ ಆಕರ್ಷಣೀಯವಾಗಿದೆ. ಇದೆಲ್ಲದರ ಹಿಂದೆ ಉಮೇಶ್ ಹಾಗೂ ಉಳಿಸ ಶಿಕ್ಷಕರ ಶ್ರಮ ಎದ್ದು ಕಾಣುತ್ತಿದೆ.
ಮಿಸ್ಡ್ ಕಾಲ್ ಕೊಡಿ ಪಾಠ ಕೇಳಿ: ಆನಲೈನ್ ಶಿಕ್ಷಣ ನೀಡಲು ಮಕ್ಕಳ ಬಳಿ ಸ್ಮಾರ್ಟ್‌ಫೋನ್ ಇರಲಿಲ್ಲ. ಹಾಗಾಗಿ ಅವರ ಕೀಪ್ಯಾಡ್ ಮೊಬೈಲ್ ಉಮೇಶ್‌ಅವರೇಕರೆಮಾಡಿಪಾಠಹೇಳಿದ್ದಾರೆ.ಯಾವುದೇಸಮಯದಲ್ಲಿ ಕರೆ ಮಾಡಿದರೂ ಒಂದಿನಿತೂ ಬೇಸರಪಟ್ಟುಕೊಳ್ಳದೆ ವಿದ್ಯಾರ್ಥಿಗಳ ಸಂದೇಹ ಬಗೆಹರಿಸಿದ್ದಾರೆ. ಅಲ್ಲದೆ ತಮ್ಮ ಸೈಕಲ್ ಏರಿ ಹಳ್ಳಿಗಳಿಗೆ ತೆರಳಿ ಮಕ್ಕಳನ್ನು ಹುಡುಕಾಡಿ ಪಾಠ ಹೇಳಿದ್ದು ಅವರ ಕಾರ್ಯತತ್ಪರತೆಗೆ ನಿದರ್ಶನ.
ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಮೂರು ತಿಂಗಳ ಕಾಲ ಬಹುಪಾಲು ಶಾಲೆಯಲ್ಲಿಯೇ ಉಳಿದು ಪಾಳಿ ಪದ್ಧತಿಯಲ್ಲಿ ಗ್ರಾಮದ ದೇವಾಲಯ, ಜಗಲಿ ಕಟ್ಟೆಗಳ ಮೇಲೆ ಸಾಮಾಜಿಕ ಅಂತರ ಪಾಲಿಸಿ ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಅಲ್ಲದೆ ಕೋವಿಡ್ ಜಾಗೃತಿ ಕಾರ್ಯಕ್ಕೂ ಕೈ ಜೋಡಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಇವರ ಈ ಕಾರ್ಯ ಇತರ ಶಿಕ್ಷಕರಿಗೆ ಮಾದರಿಯಾಗಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.