ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

Team Udayavani, Sep 4, 2021, 6:38 PM IST

4-17

ಶೃಂಗೇರಿ: “ಓಟು ಏಕೆ ಹಾಕಬೇಕ್ರಿ? ಓಡಾಡಲು ಸಮರ್ಪಕವಾದ ರಸ್ತೆಯನ್ನೇ ಮಾಡಿಕೊಡದ ಮೇಲೆ ನಮಗ್ಯಾಕ್ರಿ ಓಟು? ಓಟು ಹಾಕಿ ಸಾಕಾಗಿದೆ. ಇನ್ನು ನಮ್ಮ ಮನೆ ಮುಂದೆ ಯಾರೂ ಓಟು ಕೇಳಲು ಬರಬ್ಯಾಡ್ರಿ. ಇದು ತಾಲೂಕಿನ ಧರೆಕೊಪ್ಪ ಗ್ರಾಪಂನ ಧರೆಕೊಪ್ಪ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳ ಜನರ ಮಾತಾಗಿದೆ.

ಕಳೆದ 2-3 ದಶಕಗಳಿಂದ ರಸ್ತೆಯ ಅಭಿವೃದ್ಧಿಯನ್ನೇ ಕಾಣದೆ ಇರುವ ಶೃಂಗೇರಿ- ಆಗುಂಬೆ ಮಾರ್ಗವಾದ ರಾಜ್ಯ ಹೆದ್ದಾರಿ ರಸ್ತೆ ತಾಲೂಕಿನ ಧರೇಕೊಪ್ಪ ಗ್ರಾಪಂನ ಕೈಮನೆ ಬಳಿಯ ಬೈಪಾಸ್‌ ರಸ್ತೆಯಿಂದ ತೆರಳುವ ಮಾರ್ಗವಾಗಿದೆ. ಧರೆಕೊಪ್ಪ ಮಾರ್ಗವಾಗಿ ಜಿಲ್ಲೆಯ ಮಳೆಯ ದೇವರೆಂದೇ ಕರೆಯಲ್ಪಡುವ ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳುವ ರಸ್ತೆಯಾಗಿದೆ.

ಪ್ರತಿನಿತ್ಯ ಇಲ್ಲಿ ನೂರಾರು ಜನರು, ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ತೀವ್ರವಾಗಿ ಹದಗೆಟ್ಟಿರುವ ರಸ್ತೆಯಾಗಿದ್ದು, ಭಾರೀ ಗಾತ್ರದ ಹೊಂಡಗಳು ಉಂಟಾಗಿದ್ದು ಡಾಂಬರು ಕಾಣದೆ ಕಲ್ಲು, ಮಣ್ಣು, ಜಲ್ಲಿಕಲ್ಲುಗಳಿಂದಕೂಡಿದ ಅರೆಬರೆ ರಸ್ತೆಯಾಗಿ ನಿತ್ಯ ಸಂಚರಿಸುವವರ ಪಾಲಿಗೆ ನಿತ್ಯ ಕಿರಿಕಿರಿಯಾಗಿದೆ. ರಸ್ತೆಯಲ್ಲಿ ಹೊಂಡ ಮಳೆಗಾಲದಲ್ಲಿ ಮಳೆಯ ನೀರೆಲ್ಲಾ ರಸ್ತೆಯ ಮೇಲೆ ಹರಿಯುವುದರಿಂದ ಗುಂಡಿಗಳಲ್ಲಿ ನಿಂತ ನೀರು ವಾಹನ ಅಪಘಾತಕ್ಕೆ ಕಾರಣವಾಗಿದೆ.

ರಸ್ತೆ ಸಂಪೂರ್ಣ ಹಾನಿಗೊಂಡಿದ್ದರೂ ಜಿಲ್ಲಾ, ತಾಲೂಕು ಆಡಳಿತ, ಗ್ರಾಪಂ, ತಾಪಂ, ಜಿಪಂ ಜನಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳದಿರುವುದು ಆಶ್ಚರ್ಯ ತಂದಿದೆ. ಕಳೆದ 3 ವರ್ಷದಿಂದ ತಾಲೂಕಿನಲ್ಲಿ ದಾಖಲೆ ಪ್ರಮಾಣದಲ್ಲಿ ಅತಿವೃಷ್ಟಿಯಾಗುತ್ತಿದ್ದು, ಗ್ರಾಮೀಣ ಭಾಗದ ರಸ್ತೆಗಳು ಅತಿವೃಷ್ಟಿಯಿಂದಾಗಿ ಸಂಪೂರ್ಣ ಹದಗೆಟ್ಟಿದೆ. ಸರ್ಕಾರ ಅತಿವೃಷ್ಟಿ ಪೀಡಿತ ಪ್ರದೇಶವೆಂದು ಘೋಷಿಸಿದ್ದು ಅನುದಾನಗಳನ್ನು ಸಾಕಷ್ಟು ಬಿಡುಗಡೆ ಮಾಡಿದ್ದರೂ ಬಂದಿರುವ ಅನುದಾನದಲ್ಲಿ ಈ ರಸ್ತೆಯ ಅಭಿವೃದ್ಧಿಗೆ ಮೀಸಲಿಡುವುದು ಬಿಟ್ಟು ಜನಪ್ರತಿನಿಧಿ ಗಳು ತಮ್ಮ ಪಕ್ಷದ ಕಾರ್ಯಕರ್ತರ ಮನೆಗಳಿಗೆ ಹೋಗುವ ರಸ್ತೆಗಳಿಗೆ ಮಾತ್ರ ಅನುದಾನವನ್ನು ಮೀಸಲಿಡಲಾಗುತ್ತಿದೆ.

ಇಂತಹ ಕುಗ್ರಾಮ ಹಳ್ಳಿಗಳಿಗೆ ತೆರಳುವ ರಸೆ ¤ಗಳು ಹದಗೆಟ್ಟಿರುವುದು ಇವರ ಕಣ್ಣಿಗೆ ಬೀಳುವುದೇ ಇಲ್ಲ. ಚುನಾವಣಾ ಬಹಿಷ್ಕಾರ: ಪ್ರತೀ ಚುನಾವಣಾ ಸಂದರ್ಭದಲ್ಲಿ ಜನಪ್ರತಿನಿಧಿಗಳು ನೀಡುವ ಆಶ್ವಾಸನೆ, ಭರವಸೆಗಳನ್ನು ಕೇಳಿ ಕೇಳಿ ಬೇಸತ್ತ ಜನ ಈ ಭಾರಿ ಸ್ಥಳೀಯ ಚುನಾವಣೆಗಳನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ. ಈ ರಸ್ತೆಯ ಅಭಿವೃದ್ಧಿ ಬಗ್ಗೆ ಯಾರೂ ಗಮನ ನೀಡದೇ ಇರುವುದರಿಂದ ಈ ಭಾಗದ ಗ್ರಾಮಸ್ಥರು ರಸ್ತೆಯಪಕ್ಕದಲ್ಲಿ ಚುನಾವಣೆ  ಬ್ಯಾನರ್‌ಗಳನ್ನು ಹಾಕಿ ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಿದ್ದಾರೆ.

ಈ ರಸ್ತೆಯು ಶೃಂಗೇರಿ- ಆಗುಂಬೆ ಮಾರ್ಗದ ಕೈಮನೆ ಬಳಿ ಬೈಪಾಸ್‌ ರಸ್ತೆಯಿಂದ ತೆರಳುವ ಮಾರ್ಕಸು, ಧರೆಕೊಪ್ಪ, ಚೋಳರಮನೆ, ಮೀಗಾ, ಚೇರುಗೋಡು, ಬೀಳೂಕೊಪ್ಪ, ಬೋಳೂರು, ಕೆಲ್ಲಾರು, ಕಂಪಿನಬೈಲು, ಹೆಡ್ಲುಕುಡಿಗೆ, ಕಿತ್ಲೆಬೈಲ್‌, ಕೆರೆಕುಡಿಗೆ, ಗಗ್ಗುಡಿಗೆ ಮುಂತಾದ ಹಳ್ಳಿಯ ಗ್ರಾಮಸ್ಥರು ನಿತ್ಯ ಓಡಾಡುವ ಮಾರ್ಗವಾಗಿದೆ. ಇಷ್ಟೇ ಅಲ್ಲದೆ ಈ ರಸ್ತೆಯು ತಾಲೂಕಿನ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕಿಗ್ಗಾ-ಸಿರಿಮನೆ ಜಲಪಾತಕ್ಕೆ ವೀಕ್ಷಿಸಲು ತೆರಳುವ ಮಾರ್ಗವಾಗಿದೆ.

ನಿತ್ಯ ನೂರಾರು ಪ್ರವಾಸಿಗರು ಆಗುಂಬೆ, ತೀರ್ಥಹಳ್ಳಿ, ದ.ಕ. ಜಿಲ್ಲೆ, ಶಿವಮೊಗ್ಗ ಜಿಲ್ಲೆಯಿಂದ ಬರುವ ಪ್ರವಾಸಿಗರು ಶೃಂಗೇರಿಗೆ 4-5 ಕಿ.ಮೀ ಸುತ್ತಿ ಬಳಸಿ ಬರುವುದರ ಬದಲು ಹತ್ತಿರದ ಮಾರ್ಗವಾದ ಕೈಮನೆ ಬೈಪಾಸ್‌ ರಸ್ತೆಯಿಂದ ಸಿರಿಮನೆ ಜಲಪಾತ ವೀಕ್ಷಿಸಲು ತೆರಳುವವರಾಗಿದ್ದಾರೆ. ಆದರೆಈರಸ್ತೆ ಸಮರ್ಪಕವಾಗಿ ಹದಗೆಟ್ಟಿರುವುದರಿಂದ ಪ್ರವಾಸಿಗರುಈಮಾರ್ಗದಲ್ಲಿ ಬರುವವರ ಸಂಖ್ಯೆ ಇದೀಗ ಕಡಿಮೆಯಾಗಿದೆ.

ಈ ಹಿಂದೆ ಉಡುಪಿ‌ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಡಿ.ಸಿ. ಶ್ರೀಕಂಠಪ್ಪನವರ ಕಾಲದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಈ ಅಭಿವೃದ್ಧಿಪಡಿಸಲಾಗಿತ್ತು. ನಂತರ ಇಲ್ಲಿಯತನ ಅಭಿವೃದ್ಧಿಪಡಿಸದೇ ಇರುವುದು ಇದೀಗ ಸಂಪೂರ್ಣ ರಸ್ತೆಯೇ ನೇಪಥ್ಯಕ್ಕೆ ಸರಿದಿದೆ. ತುರ್ತು ಚಿಕಿತ್ಸೆಗೆ ಪರದಾಡಬೇಕಿದೆ. ಇನ್ನಾದರೂ ಸಂಬಂಧ ಪಟ್ಟ ಇಲಾಖೆ ಗಮನ ಹರಿಸಬೇಕಾಗಿದೆ.

ಟಾಪ್ ನ್ಯೂಸ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.