ಕೋವಿಡ್ ಕಾಲದಲ್ಲಿ ಸದ್ದು ಮಾಡಿದ ವಠಾರ ಪಾಠ
Team Udayavani, Sep 5, 2021, 8:10 AM IST
ಪುತ್ತೂರು: ಕೋವಿಡ್ ಕಾಲದಲ್ಲಿ ಮಕ್ಕಳ ಕಲಿಕೆಗೆ ತೊಂದರೆ ಆಗುತ್ತಿರುವುದನ್ನು ಮನಗಂಡು ರೀಡರ್ ಸಂಸ್ಥೆ ಪ್ರಾರಂಭಿಸಿದ ವಠಾರ ಪಾಠ ಯೋಜನೆ ಯಶಸ್ಸು ಕಂಡು ಗಮನ ಸೆಳೆದಿದೆ.
ಮಕ್ಕಳ ಮನಸ್ಸು ಶಿಕ್ಷಣದಿಂದ ದೂರವಾಗಬಾರದು ಎಂಬ ಉದ್ದೇಶದಿಂದ ಪುತ್ತೂರಿನ ನಿವಾಸಿ ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗದ ನಿರ್ದೇಶಕ ಡಾ| ರಾಜೇಶ್ ಬೆಜ್ಜಂಗಳ ಅವರು ಸ್ಥಾಪಿಸಿದ ರೀಡರ್ಸ್ ಫಾರಂ ಸಂಸ್ಥೆಯ ವಿನೂತನ ಯೋಜನೆ ಇದು.
ಏನಿದು ವಠಾರ ಯೋಜನೆ :
ವಠಾರ ಪಾಠ ಯೋಜನೆಯ ಸಾರವೇ ವಿಶಿಷ್ಟ. ಕೋವಿಡ್ ಕಾರಣ ದಿಂದ ಮನೆಯಲ್ಲೇ ಉಳಿದು ಕೊಂಡಿರುವ ವಿದ್ಯಾವಂತರು, ಪದವಿ, ಸ್ನಾತಕೋತ್ತರ ಪದವೀಧರು ತಮ್ಮ ಪರಿಸರದ ಐವರು ವಿದ್ಯಾರ್ಥಿ ಗಳಿಗೆ ಪ್ರಾಥಮಿಕ ವಿಷಯಗಳನ್ನು ಕಲಿಸುವುದು ಕಷ್ಟವಾಗಲಾರದು ಎಂದರಿತ ರಾಜೇಶ್ ಈ ಯೋಜನೆ ಅನುಷ್ಠಾನಕ್ಕೆ ಮುಂದಡಿ ಇಟ್ಟರು.
ಉಚಿತ ಸೇವೆ :
ಇಡೀ ಯೋಜನೆ ಸಂಪೂರ್ಣ ಸೇವಾ ರೂಪದಲ್ಲೇ ಇದೆ. ಗೂಗಲ್ ಫಾರಂ ತುಂಬಿ ವಠಾರ ಪಾಠ ಯೋಜನೆಗೆ ಸೇರಿ ಎಂಬ ಕರೆಗೆ ಕಾಸರಗೋಡು, ದಕ್ಷಿಣ ಕನ್ನಡವಲ್ಲದೆ ಮೈಸೂರಿನ ಕೆಲವು ಕಡೆಗಳ ಸುಮಾರು 60ಕ್ಕೂ ಮಂದಿ ಕೈಜೋಡಿಸಿದರು. ಅನಂತರ
ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿ ಕಾರ್ಯ ಚಟು ವಟಿಕೆಗಳ ಬಗ್ಗೆ ಮಾಹಿತಿ ವಿನಿಮಯ ನಡೆಸ ಲಾ ಯಿತು. ವಿದ್ಯಾರ್ಥಿಗಳ ಆಸಕ್ತಿಯ ಪಠ್ಯೇತರ ವಿಷಯಗಳೂ ಸೇರಿದಂತೆ ಪಠ್ಯ ವಿಷಯಗಳನ್ನು ಸ್ವಯಂಸೇವಕರು ಕಲಿಸುತ್ತಿದ್ದಾರೆ. ಹೆತ್ತವರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಯಂಸೇವಕರಿಗೆ ಪ್ರಮಾಣ ಪತ್ರ ನೀಡಲಾಗುತ್ತಿದೆ.
ಮಕ್ಕಳ ಕೂಟಶಾಲಾ ತರಗತಿಗಳು ಪುನಾರಾರಂಭಗೊಂಡ ಬಳಿಕ ವಠಾರ ಪಾಠ ಯೋಜನೆಯಲ್ಲಿ ಸೇರಿದವರನ್ನು ಮುಂದುವರಿಸಿ ಮಕ್ಕಳ ಕೂಟ ಹುಟ್ಟುಹಾಕುವ ಚಿಂತನೆ ನಡೆದಿದೆ. ಇದರಲ್ಲಿ ವಾರಕೊಮ್ಮೆ ಅವರ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ವೇದಿಕೆ ಒದಗಿಸಲು ಯೋಜಿಸಲಾಗಿದೆ. ಧನಾತ್ಮಕ ನೆಲೆಯಲ್ಲಿ ಪ್ರಾರಂಭಗೊಂಡ ಈ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ.
400 ಫಲಾನುಭವಿಗಳು :
2021ರ ಜುಲೈಯಲ್ಲಿ ಆರಂಭವಾದ ಈ ಪ್ರಯತ್ನದಲ್ಲಿ ಈ ವರೆಗೆ 60 ಮಂದಿ ಪದವೀಧರರು ಪ್ರತೀ ಬ್ಯಾಚಲ್ಲಿ ಐವರು ವಿದ್ಯಾರ್ಥಿಗಳಂತೆ ಸುಮಾರು 400 ಮಂದಿಗೆ ಬೋಧಿಸಿದ್ದಾರೆ.
ಜುಲೈಯಲ್ಲಿ ವಠಾರ ಪಾಠದ ಚಿಂತನೆ ಹುಟ್ಟಿಕೊಂಡಿತ್ತು. ಮನೆ ಪರಿಸರದ ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಪಠ್ಯೇತರ ಕಲಿಕೆಯನ್ನು ಉಚಿತವಾಗಿ ಕಲ್ಪಿಸುವ ಕರೆಗೆ ಅಪೂರ್ವ ಸ್ಪಂದನೆ ದೊರೆತಿದೆ. ಮಕ್ಕಳನ್ನು ಸದಾ ಚಟುವಟಿಕೆಯಿಂದ ಇರಿಸುವ ಪ್ರಯತ್ನಕ್ಕೆ ವಿದ್ಯಾವಂತರ ಬಳಗ ಕೈ ಜೋಡಿಸಿದೆ. – ಡಾ| ರಾಜೇಶ್ ಬೆಜ್ಜಂಗಳ, ನಿರ್ದೇಶಕ, ಕಣ್ಣೂರು ವಿ.ವಿ. ಭಾರತೀಯ ಭಾಷಾ, ಅಧ್ಯಯನಾಂಗ ಕನ್ನಡ ವಿಭಾಗ
-ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.