ಪ್ರತಿಷ್ಠಿತ ವಾರ್ಡ್‌ಗಳಲ್ಲೇ ಮತದಾನಕ್ಕೆ ಉದಾಸೀನ
Team Udayavani, Sep 5, 2021, 3:00 PM IST
ಹುಬ್ಬಳ್ಳಿ: ಪ್ರಚಾರಕ್ಕೆ ಹೆಚ್ಚಿನ ಸಮಯಾವಕಾಶಕೊರತೆ, ಕೊರೊನಾ ಕಾಟ, ಮತದಾರರ ಉದಾಸೀನ,ಪಕ್ಷಗಳ ಕಾರ್ಯಕರ್ತರ ನಿರುತ್ಸಾಹ, ಟಿಕೆಟ್‌ದೊರೆಯದ ಅಸಮಾಧಾನ, ಧಾರ್ಮಿಕ ಆಚರಣೆ ಇನ್ನಿತರ ವಿಚಾರ-ವಿಷಯಗಳು ಮಹಾನಗರಪಾಲಿಕೆ ಚುನಾವಣೆ ಮತದಾನ ಕುಗ್ಗುವಂತೆ ಮಾಡಿವೆ.
ನಗರವಾಸಿಗಳು ಮತದಾನದಿಂದ ದೂರಎಂಬ ಮಾತನ್ನು ಮತ್ತೂಮ್ಮೆ ಸಾಬೀತು ಪಡಿಸಿದ್ದು,ರಾಜಕೀಯ ಪಕ್ಷಗಳು ಮತದಾನ ಕುರಿತಾಗಿಆತ್ಮಾವಲೋಕನ ಮಾಡುವಂತೆ ಮಾಡಿದೆ. ಸಾಮಾನ್ಯವಾಗಿ ನಗರ ಇಲ್ಲವೇ ಗ್ರಾಮೀಣಸ್ಥಳೀಯ ಚುನಾವಣೆಗಳು ತೀವ್ರ ತುರುಸಿನಿಂದ ಕೂಡಿರುತ್ತವೆ.
ಮತದಾನ ಕನಿಷ್ಟ ಪ್ರಮಾಣಶೇ.70-80ರವರೆಗೆ ತಲುಪುತ್ತದೆ.
ಕೆಲವೊಂದು ಕಡೆಶೇ.90 ಮೇಲ್ಪಟ್ಟು ಆಗುತ್ತದೆ. ಆದರೆ, ಹು-ಧಾ,ಬೆಳಗಾವಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆಚುನಾವಣೆಗಳ ಮತದಾನ ಪ್ರಮಾಣ ಗಮನಿಸಿದರೆವಿಧಾನಸಭೆ, ಲೋಕಸಭೆ ಚುನಾವಣೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಆಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
2013ರ ಮಾ. 7ರಂದು ಹು-ಧಾ ಮಹಾನಗರಪಾಲಿಕೆ 67 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿಶೇ.66 ಮತದಾನವಾಗಿತ್ತು. ಪ್ರಸ್ತುತ 82 ವಾಡ್ìಗಳಿಗೆ ನಡೆದ ಚುನಾವಣೆಯಲ್ಲಿ ಕೇವಲ 53.81ಮತದಾನವಾಗಿದೆ. ಕಳೆದ ಬಾರಿಗಿಂತ ಶೇ.13.19ಕಡಿಮೆ ಮತದಾನವಾಗಿದೆ. ಮಹಾನಗರದಲ್ಲಿ 8.17ಲಕ್ಷ ಮತದಾರರಿದ್ದು, ಅರ್ಧದಷ್ಟು ಜನ ಮಾತ್ರಮತದಾನ ಮಾಡಿದ್ದಾರೆ.
ಕಾರ್ಯಕರ್ತರ ನಿರುತ್ಸಾಹ: ಯಾವುದೇ ಚುನಾವಣೆನಡೆದರೂ ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರಪಾತ್ರ ಪ್ರಮುಖವಾಗಿರುತ್ತದೆ. ಅಭ್ಯರ್ಥಿಗಳಕುರಿತಾಗಿ ಪ್ರಚಾರ, ಮತದಾರರ ಮನವೊಲಿಕೆ,ಮತದಾನ ದಿನದಂದು ಮತಕೇಂದ್ರಗಳಿಗೆಮತದಾರರನ್ನು ಕರೆತರುವುದು, ಯಾರುಮತದಾನಕ್ಕೆ ಬಂದಿಲ್ಲ ಎಂಬುದರ ನಿಗಾ,ಕೊನೆಗಳಿಯಲ್ಲಾದರೂ ಸರಿ ಅವರನ್ನು ಮತದಾನಕ್ಕೆಮುಂದಾಗುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರಶ್ರಮ ಅಧಿಕವಾಗಿರುತ್ತದೆ.
ಆದರೆ, ಈ ಬಾರಿಯಮಹಾನಗರ ಚುನಾವಣೆಯಲ್ಲಿ ಪ್ರಮುಖಪಕ್ಷಗಳ ಕಾರ್ಯಕರ್ತರು ಮತದಾನ ದಿನದಂದುಮತದಾರರನ್ನು ಕರೆತರುವಲ್ಲಿ ನಿರುತ್ಸಾಹತೋರಿರುವುದೇ ಮತದಾನಕ್ಕೆ ಮುಳುವಾಯಿತುಎನ್ನಲಾಗುತ್ತಿದೆ. ಪಾಲಿಕೆ ಚುನಾವಣೆ ಇಷ್ಟುಬೇಗ ಆಗುವುದಿಲ್ಲ, ಮತ್ತೆ ಮುಂದೂಡಿಕೆ ಆಗಬಹುದೆಂಬ ಲೆಕ್ಕಾಚಾರ ಆಡಳಿತ ಪಕ್ಷ ಬಿಜೆಪಿ ಸೇರಿದಂತೆ ಬಹುತೇಕರಾಜಕೀಯ ಪಕ್ಷಗಳದ್ದಾಗಿತ್ತು.ಆದರೆ, ಚುನಾವಣಾ ಆಯೋಗ ದಿಢೀರನೇ ಚುನಾವಣೆ ಘೋಷಣೆಮಾಡಿರುವುದು ರಾಜಕೀಯ ಪಕ್ಷಗಳ ಲೆಕ್ಕಾಚಾರ ತಪ್ಪುವಂತೆ ಮಾಡಿತು.
ನಾಮಪತ್ರ ಹಿಂಪಡೆದ ನಂತರ ಅಖಾಡಸ್ಪಷ್ಟವಾಗಿ ಪ್ರಚಾರದ ಕಾವು ಹೆಚ್ಚುತ್ತದೆ. ಈ ಬಾರಿಚುನಾವಣೆಯಲ್ಲಿ ಪ್ರಚಾರಕ್ಕೆಂದು ಸಿಕ್ಕಿದ್ದು ಕೇವಲಎಂಟು ದಿನ ಮಾತ್ರ. ಕೋವಿಡ್ ಹಿನ್ನೆಲೆಯಲ್ಲಿಪ್ರಚಾರ ಸಭೆಗಳನ್ನು ನಡೆಸದೆ ಅನೇಕ ನಾಯಕರುಮನೆ, ಮನೆ ಪ್ರಚಾರಕ್ಕೆ ಒತ್ತು ನೀಡಿದ್ದರು.
ಚುನಾವಣೆಯ ಅಬ್ಬರದ ಕಾವು ನಿರೀಕ್ಷಿತ ಮಟ್ಟದಲ್ಲಿ ಇರದಿರುವುದು ಸಹ ಮತದಾರರುಮತಕೇಂದ್ರಗಳ ಕಡೆ ಹೆಚ್ಚಿನ ರೀತಿಯಲ್ಲಿ ಬಾರದಿರುವುದಕ್ಕೆಕಾರಣವಾಗಿರಬಹುದು.ಚುನಾವಣೆ ಎಂದರೆ ಪೂರ್ವತಯಾರಿ, ಸಂಘಟನಾತ್ಮಕ ಕಾರ್ಯತಂತ್ರ,ಸಭೆ-ಸಂವಾದ, ಮತ ಪ್ರಚಾರ, ಮತದಾನದಿನದಂದು ಮತದಾರರ ಕರೆತರುವುದು ಹೀಗೆ ಎಲ್ಲದರಲ್ಲಿಯೂ ಒಂದು ಹೆಜ್ಜೆ ಮುಂದೆಯೇ ಇರುತ್ತಿದ್ದ ಬಿಜೆಪಿ, ಪಾಲಿಕೆ ಚುನಾವಣೆ ನಿಟ್ಟಿನಲ್ಲಿ ಪೇಜ್ ಪ್ರಮುಖರು, ಶಕ್ತಿ ಕೇಂದ್ರ ಎಂದೆಲ್ಲಮಾಡಿತ್ತಾದರೂ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಕಾರ್ಯಕರ್ತರ ನಿರುತ್ಸಾಹ ಎದ್ದು ಕಾಣುತ್ತಿತ್ತು.ಕಾಂಗ್ರೆಸ್‌ನಲ್ಲಿಯೂ ಇದು ಭಿನ್ನವಾಗಿರಲಿಲ್ಲ.
ಬಸವರಾಜ ಹೊಂಗಲ್ ಧಾರವಾಡ: ಗೆಲ್ಲುವುದು ನಾವೇ, ಈ ಬಾರಿಯೂನಮ್ಮದೇ ಸರ್ಕಾರ ಎಂಬ ಆತ್ಮವಿಶ್ವಾಸದಲ್ಲಿರುವ ಕಮಲಅಭ್ಯರ್ಥಿಗಳು. ಜನರಿಗೆ ತೆರಿಗೆ ಸಂಕಷ್ಟ, ಬೆಲೆ ಏರಿಕೆಯಿಂದಸಾಕಾಗಿದ್ದು, ಈ ಬಾರಿ ಮತ್ತೆ ಕಾಂಗ್ರೆಸ್‌ಗೆ ಜನ ಮತಕೊಡುವುದು ನಿಶ್ಚಿತ ಎನ್ನುತ್ತಿರುವ ಕೈ ಅಭ್ಯರ್ಥಿಗಳು. ಎರಡೂಪಕ್ಷಗಳಿಗೆ ಬಹುಮತ ಬರುವುದಿಲ್ಲ.
ಪಾಲಿಕೆಯಲ್ಲಿ ಆಡಳಿತನಡೆಸಲು ನಮ್ಮ ಸಹಾಯ ಬೇಕೇಬೇಕು ಎನ್ನುತ್ತಿರುವ ದಳಹಾಗೂ ಪಕ್ಷೇತರರು. ಒಟ್ಟಿನಲ್ಲಿ ಎಲ್ಲರಲ್ಲೂ ಫಲಿತಾಂಶದ್ದೇಕುತೂಹಲ.ಹೌದು, ಹು-ಧಾ ಮಹಾನಗರ ಪಾಲಿಕೆಯ ಒಟ್ಟು 82ವಾರ್ಡ್‌ಗಳ ಪೈಕಿ 27 ವಾರ್ಡ್ ವ್ಯಾಪ್ತಿ ಒಳಗೊಂಡಿರುವವಿದ್ಯಾಕಾಶಿ ಧಾರವಾಡದಲ್ಲಿ ಈ ಬಾರಿ ಕೈ-ಕಮಲ ಪಕ್ಷಗಳಮಧ್ಯೆ ನೇರ ಹಣಾಹಣೆ ಏರ್ಪಟ್ಟು, ಸಮಬಲದ ಕಾದಾಟನಡೆದಿದೆ.
ಹೀಗಾಗಿ ಜೆಡಿಎಸ್ ಮತ್ತು ಪಕ್ಷೇತರರ ಅಸ್ತಿತ್ವಸಾಬೀತು ಪಡಿಸಿಕೊಳ್ಳುವುದು ಕಷ್ಟವೇ ಆಗಿದ್ದು, ಈ ಎರಡೂಪಕ್ಷಗಳೇ ಹೆಚ್ಚಿನ ಸ್ಥಾನ ಗೆದ್ದುಕೊಳ್ಳುವ ಸಾಧ್ಯತೆ ಇದೆ.1-9ನೇ ವಾರ್ಡ್‌ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಪಕ್ಷಗಳು ಅಖಾಡ ರಂಗೇರುವಂತೆ ಮಾಡಿದ್ದು, ಇಲ್ಲಿ ಮಾಜಿಸಚಿವ ವಿನಯ್ ಕುಲಕರ್ಣಿ ಹಾಗೂ ಹಾಲಿ ಶಾಸಕ ಅಮೃತದೇಸಾಯಿ ಮಧ್ಯದ ರಾಜಕೀಯ ಪಾಳೆಗಾರರಿಬ್ಬರ ಫೈಟ್‌ನಡೆದಿದೆ.
ವಿನಯ್ ಧಾರವಾಡ ಪ್ರವೇಶಕ್ಕೆ ಸುಪ್ರಿಂ ಕೋರ್ಟ್‌ಒಪ್ಪಿಗೆ ನೀಡದೇ ಇರುವುದರಿಂದ ಅವರು ಮೊಬೈಲ್ ಮೂಲಕವಿಡಿಯೋ ತುಣಕುಗಳನ್ನು ಹರಿಬಿಟ್ಟು ತಮ್ಮ ಬೆಂಬಲಿಗರನ್ನುಗೆಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಷ್ಟೇಯಲ್ಲವಿನಯ್ ಪತ್ನಿ ಶಿವಲೀಲಾ ಕುಲಕರ್ಣಿ ಅವರೇ ಈ ವಾಡ್ìಗಳಲ್ಲಿ ಕೈ ಪಕ್ಷದ ಅಭ್ಯರ್ಥಿಗಳ ಪರವಾಗಿ ಅಖಾಡಕ್ಕಿಳಿದುಪ್ರಚಾರ ಮಾಡಿದ್ದಾರೆ.
ಮಾಜಿ ಸಚಿವ ಆರ್.ವಿ. ದೇಶಪಾಂಡೆಸೇರಿದಂತೆ ಗಣ್ಯರು ಪ್ರಚಾರ ಮಾಡಿದ್ದಾರೆ.ಇನ್ನು ಕಮಲ ಪಡೆ ಎಂದಿನಂತೆ ಆರೆಸ್ಸೆಸ್ ಸೇರಿ ಸಂಘಪರಿವಾರದ ಎಲ್ಲಾ ಘಟಕಗಳನ್ನು ಒಗ್ಗೂಡಿಸಿಕೊಂಡೇಚುನಾವಣೆಯಲ್ಲಿ ಚುರುಕಾಗಿ ಕೆಲಸ ಮಾಡಿದೆ. 10-25ನೇವಾರ್ಡ್‌ಗಳಲ್ಲಿ ಸಾಹಿತ್ಯ, ಸಂಗೀತ ಮತ್ತು ಶಿಕ್ಷಣ ಕ್ಷೇತ್ರದಲ್ಲಿನಜನರು ಹಾಗೂ ಇತರೇ ನೌಕರರು ಅಧಿಕವಾಗಿದ್ದು, ಇಲ್ಲಿಕಳೆದ ಬಾರಿಯಂತೆ ಈ ಬಾರಿಯೂ ಬಿಜೆಪಿ ಸಂಘಟಿತಪ್ರಯತ್ನ ನಡೆಸಿದೆ.
ಲಿಂಗಾಯತ ಟ್ರಂಪ್‌ಕಾರ್ಡ್: ವಿಧಾನಸಭೆ, ಲೋಕಸಭೆಚುನಾವಣೆಯಂತೆಯೇ ಈ ಚುನಾವಣೆಯಲ್ಲೂಸ್ಥಳೀಯವಾಗಿ ಪ್ರಬಲವಾಗಿರುವ ಜಾತಿಗಳ ಅಭ್ಯರ್ಥಿಗಳಿಗೆಕೈ ಮತ್ತು ಕಮಲ ಪಕ್ಷಗಳು ಮಣೆ ಹಾಕಿದ್ದರಿಂದ ಕೆಲವು ವಾಡ್ìಗಳಲ್ಲಿ ಧರ್ಮದ ಆಧಾರದ ಮೇಲೆ ಚುನಾವಣೆ ನಡೆದಿದೆ.ಬಿಜೆಪಿ ಹಿಂದುತ್ವ ಅಜೆಂಡಾದ ಜೊತೆಗೆ ಮುನ್ನಡೆದಿದ್ದು,ಲಿಂಗಾಯತ ಮತಗಳ ಕ್ರೋಢೀಕರಣಕ್ಕೆ ತೆರೆಮರೆಯಲ್ಲೇಪ್ರಯತ್ನ ಮಾಡಿದೆ. ಇನ್ನು ಕೆಲವು ಕಡೆಗಳಲ್ಲಿ ಲಿಂಗಾಯತಬಣಜಿಗ, ಪಂಚಮಸಾಲಿ, ಸಾದರ, ಗಾಣಿಗ, ನೇಕಾರ,ಕುರಹಿನಶೆಟ್ಟಿ, ಆದಿ ಬಣಜಿಗ, ಜಂಗಮ, ಉಪ್ಪಾರ ಹೀಗೆಉಪ ಜಾತಿಗಳ ಅಭ್ಯರ್ಥಿಗಳನ್ನು ಲೆಕ್ಕ ಹಾಕಿ ಕಣಕ್ಕೆ ಇಳಿಸಿದೆ.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಧರ್ಮ ಮತ್ತುಜಾತಿಗಳನ್ನು ತೀವ್ರವಾಗಿಯೇ ಪರಿಗಣಿಸಿದ್ದು, ಆಯಾವಾರ್ಡ್‌ಗಳಲ್ಲಿನ ಧರ್ಮ, ಜಾತಿಗಳ ಮತದಾರರ ಸಂಖ್ಯೆಅನುಸರಿಸಿಯೇ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದೆ. ಬಿಜೆಪಿಗೆಹೋಲಿಸಿದರೆ ಧರ್ಮವಾರು ಲೆಕ್ಕಾಚಾರದಲ್ಲಿ ಮುಸ್ಲಿಂಅಭ್ಯರ್ಥಿಗಳಿಗೆ ಕೈ ಮಣೆ ಹಾಕಿದ್ದು, ಜಾತಿವಾರು ಲೆಕ್ಕದಲ್ಲಿಹಿಂದುಳಿದ ಪಂಗಡಗಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಿದೆ.ಕಷ್ಟ ಕಷ್ಟ: ಬೆಲೆ ಏರಿಕೆ, ಕೊರೊನಾ ಕಾಲಘಟ್ಟದ ಕಹಿಘಟನೆಗಳು, ಆಗಲೇ ಆಡಳಿತದಲ್ಲಿರುವ ಬಿಜೆಪಿಜಾರಿಗೊಳಿಸಿರುವ ವಿವಿಧ ತೆರಿಗೆಗಳ ಬಗ್ಗೆ ಸಹಜವಾಗಿಯೇಜನ ಸಾಮಾನ್ಯರಲ್ಲಿ ಆಕ್ರೋಶವಿತ್ತು.
ಆದರೆ ಇದನ್ನುರಾಜಕೀಯವಾಗಿ ಬಳಸಿಕೊಂಡುಮತ್ತೆ ಹೆಚ್ಚು ಸೀಟುಗಳನ್ನುಗೆದ್ದು ಅಧಿಕಾರಕ್ಕೆ ಬರಲುರಣತಂತ್ರ ರೂಪಿಸುವಲ್ಲಿಯೇಕೈ ವಿಫಲವಾಗಿದೆ. ಇದಕ್ಕೆಪ್ರಮುಖ ಕಾರಣ, ಜಿಲ್ಲೆಯಕಾಂಗ್ರೆಸ್‌ನ ಪ್ರಭಾವಿ ನಾಯಕವಿನಯ್ ಕುಲಕರ್ಣಿ ಅನುಪಸ್ಥಿತಿ.ಅವರು ಧಾರವಾಡದಲ್ಲಿ ಇದ್ದಿದ್ದರೆಖಂಡಿತವಾಗಿಯೂ ಕೈ ಪಡೆಗೆಆನೆಬಲವಿದ್ದೇ ಇತ್ತು. ಆದರೆಅವರಿಲ್ಲದೇ ಹೋಗಿರುವುದು ಕೈಬಲ ಕಡಿಮೆಯಾಗಿದೆ.
ಹೀಗಾಗಿಕಾಂಗ್ರೆಸ್ ಅಧಿಕಾರದ ಚುಕ್ಕಾಣಿಹಿಡಿಯುವುದಕ್ಕೆ ವಿದ್ಯಾನಗರಿಧಾರವಾಡದಿಂದ ಹೆಚ್ಚುಸೀಟುಗಳನ್ನು ಕೊಡುವುದುಕಷ್ಟವೇ ಆಗಿದೆ. ಈ ಮಧ್ಯೆಬಿಜೆಪಿಗೆ ಬೆಲೆ ಏರಿಕೆ ಬಿಸಿ ತಟ್ಟುವಸಾಧ್ಯತೆ ಅಲ್ಲಗಳೆಯುವಂತಿಲ್ಲ.ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆಲ್ಲಿಸಿದರೆಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಸರ್ಕಾರಗಳೇ ಇದ್ದು ಸದ್ಯಕ್ಕೆ ಬರುವಅಭಿವೃದ್ಧಿ ಯೋಜನೆಗಳ ಹಣ ತಕ್ಕಮಟ್ಟಿಗೆ ಬರದೇಹೋಗಬಹುದು ಎನ್ನುವ ಆತಂಕ ಕೂಡ ಪ್ರಜ್ಞಾವಂತಮತದಾರರನ್ನು ಕಾಡದೇ ಬಿಟ್ಟಿಲ್ಲ.
ಸದ್ದು ಮಾಡದ ಪೊರಕೆ: ಚುನಾವಣೆ ಮುನ್ನಾದಿನಮತ್ತು ಮತದಾನ ಮುಗಿಯುವ ವರೆಗೂ ಬಿಜೆಪಿತನ್ನ ಕಾರ್ಯಕರ್ತರನ್ನು ಮತ ಸೆಳೆಯುವುದಕ್ಕೆಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಲೆಕ್ಕದಲ್ಲಿಬಿಜೆಪಿಗೆ ವಿದ್ಯಾನಗರಿಯಿಂದ ಹೆಚ್ಚಿನ ಸೀಟುಗಳುಲಭಿಸಬಹುದು. ಇನ್ನೊಂದೆಡೆ ಕಾಂಗ್ರೆಸ್ ಕೂಡ ಆಯ್ದಕೆಲವು ವಾರ್ಡ್‌ಗಳನ್ನು ಗೆಲ್ಲಲೇ ಬೇಕೆಂದು ನಿರ್ಧರಿಸಿತೀವ್ರ ಪೈಪೋಟಿ ನೀಡಿದೆ.
ಮತದಾರರ ಮನವೊಲಿಕೆಯಲ್ಲಿ ಕಮಲ ಪಡೆ ಈ ಬಾರಿ ಕಷ್ಟ ಅನುಭವಿಸಿದ್ದು ಸತ್ಯ. ಇನ್ನುಜೆಡಿಎಸ್ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸುವಅಭ್ಯರ್ಥಿಗಳನ್ನು ಹುಡುಕಿದ್ದು, ಕೆಲವು ವಾರ್ಡ್‌ಗಳಲ್ಲಿಕಲಾವಿದರನ್ನು ಗುರುತಿಸಿ ಟಿಕೆಟ್ ನೀಡಿದೆ. ಹುಬ್ಬಳ್ಳಿಯಲ್ಲಿಪೊರಕೆ ಅಲ್ಲಲ್ಲಿ ಸದ್ದು ಮಾಡಿದ್ದರೂ ಧಾರವಾಡದಲ್ಲಿ ಮಾತ್ರಆಪ್ ಪಕ್ಷದ ಪೊರಕೆ ಎಲ್ಲಿಯೂ ಸದ್ದು ಮಾಡಿಲ್ಲ.
ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.