ಮಸ್ಕಿಯಲ್ಲಿ ಸರಕಾರಿ ಜಮೀನೇ ಒತ್ತುವರಿ!
ಭೂಮಾಪನ ಇಲಾಖೆ ಸರ್ವೇ ಬಳಿಕ ಪತ್ತೆ ; ಭೂಮಿ ವಾಪಸ್ ಪಡೆದ ಕಂದಾಯ ಇಲಾಖೆ ಅಧಿಕಾರಿಗಳು
Team Udayavani, Sep 5, 2021, 4:33 PM IST
ಮಸ್ಕಿ: ಪ್ರಭಾವಿ ವ್ಯಕ್ತಿಗಳಿಂದಲೇ ಒತ್ತುವರಿಯಾಗಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಸರಕಾರಿ ಭೂಮಿಯನ್ನು ಅಧಿಕಾರಿಗಳು ವಾಪಸ್ ಪಡೆದು
ಹದ್ದುಬಸ್ತ್ ಮಾಡಿಕೊಂಡಿದ್ದಾರೆ.
ಹೌದು. ಮೆದಕಿನಾಳ, ಚಿಕ್ಕಅಂತರಗಂಗಿ ವ್ಯಾಪ್ತಿಯಲ್ಲಿ ಹತ್ತಾರು ಎಕರೆ ಸರಕಾರಿ ಗೈರಾಣಿ ಜಮೀನು ಇದ್ದು, ಇಲ್ಲಿ ಹಲವು ಪ್ರಭಾವಿಗಳು
ಜಮೀನನ್ನು ಒತ್ತುವರಿ ಮಾಡಿಕೊಂಡು ಪಟ್ಟಾ ಭೂಮಿಯಾಗಿಸಿಕೊಳ್ಳಲು ಹುನ್ನಾರ ನಡೆಸಿದ್ದರು. ಈ ಬಗ್ಗೆ ಕರ್ನಾಟಕ ರೈತ ಸಂಘ ಇತ್ತೀಚೆಗೆ ತಹಶೀಲ್ದಾರ್‌ಗೆ ದೂರು ನೀಡಿದ್ದರು. ಈ ದೂರಿನನ್ವಯ ಕಂದಾಯ ಇಲಾಖೆ ಅ ಧಿಕಾರಿಗಳು ಸ್ಥಾನಿಕ ಪರಿಶೀಲನೆ ನಡೆಸಿ, ಪಂಚನಾಮೆ ನಡೆಸಿದ ಬಳಿಕ ಮೇಲ್ನೋಟಕ್ಕೆ ಸರಕಾರಿ ಭೂಮಿ ಒತ್ತುವರಿಯಾಗಿದ್ದು ಕಂಡು ಬಂದಿತ್ತು. ನಿಖರ ಮಾಹಿತಿಗಾಗಿ ಭೂಮಾಪನ ಇಲಾಖೆಯಿಂದ ಸರ್ವೇ ಮಾಡಲಾಗಿದ್ದು, ಸರ್ವೇ ನಂ.125ರಲ್ಲಿನ ಸರಕಾರಿ ಜಮೀನಿನಲ್ಲಿ 1.36 ಎಕರೆ ಜಮೀನು ಒತ್ತುವರಿಯಾದ ಅಂಶ ಬಯಲಿಗೆ ಬಂದಿದೆ.
ಆಗಿದ್ದೇನು?: ಮಸ್ಕಿ ಪಟ್ಟಣದ ಖ್ಯಾತ ವೈದ್ಯರಿಗೆ ಸೇರಿದ ಪಟ್ಟಾ ಜಮೀನು ಮೆದಕಿನಾಳ ಸೀಮಾ ವ್ಯಾಪ್ತಿಯಲ್ಲಿ ಸೇರಿದೆ. ಆ ವೈದ್ಯರಿಗೆ ಸೇರಿದ 12 ಎಕರೆ ಜಮೀನಿದ್ದು, ಇದೇ ಜಮೀನಿನ ಗಡಿಗೆ ಹೊಂದಿಕೊಂಡಂತೆ ಇರುವ 1.36 ಎಕರೆ ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಸುತ್ತಲೂ ತಂತಿ ಬೇಲಿ ಹಾಕಿ, ಗಿಡಮರ ಬೆಳೆಸಲು ಹಾಕಲು ಗುಂಡಿ ತೋಡಲಾಗಿತ್ತು. ಕಂದಾಯ ಇಲಾಖೆ ಅಧಿ ಕಾರಿಗಳ ಪರಿಶೀಲನೆ ಬಳಿಕ ಈ ಅಂಶ ಪತ್ತೆಯಾಗುತ್ತಿದ್ದಂತೆ ನೋಟಿಸ್ ಜಾರಿ ಮಾಡಿ, ಒತ್ತುವರಿ ಜಮೀನು ತೆರವುಗೊಳಿಸಿ ಕಂದಾಯ ಇಲಾಖೆ ವಶಕ್ಕೆ ಪಡೆದಿದೆ ಅಲ್ಲದೇ ಸುತ್ತಲೂ ಹಾಕಿದ್ದ ಬಾಂಡ್‌ಕಲ್ಲು, ತಂತಿ ಬೇಲಿ ತೆರವು ಮಾಡಿ, ಸಸಿ ನೆಡಲು ಅಗೆದ ಗುಂಡಿಗಳನ್ನು ಮುಚ್ಚಿ, ಹದ್ದುಬಸ್ತು ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ:ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಅಕ್ಷತ್ ಸಾಯಿನಾಥ್ ಅವರಿಗೆ ಸನ್ಮಾನ
ಇದು ಸ್ಯಾಂಪಲ್?
ಮಸ್ಕಿ ತಾಲೂಕಿನ ಮೆದಕಿನಾಳ, ಅಂತರಗಂಗಿ ಸೇರಿ ಈ ಭಾಗದಲ್ಲಿ ನೂರಾರು ಎಕರೆ ಸರಕಾರಿ ಜಮೀನು ಇದ್ದು, ಇಲ್ಲಿ ನಿರಂತರ ಒತ್ತುವರಿ ನಡೆಯುತ್ತಿದೆ. ಮರಂ ಕ್ವಾರಿ ಆರಂಭಿಸುವುದಕ್ಕಾಗಿ ಇಲ್ಲಿ ಸರಕಾರಿ ಜಮೀನು ಒತ್ತುವರಿ ಸಾಮಾನ್ಯವಾಗಿದೆ. ಕಂದಾಯ ಇಲಾಖೆಯಿಂದ ಸ್ವಯಂ ಆಗಿ ಸರ್ವೇ ನಡೆಸಿದರೆ ಇಂತಹ ಹಲವು ಪ್ರಕರಣ ಬಯಲಿಗೆ ಬರಲಿದೆ. ಮತ್ತೂಂದು ಅಂಶವೆಂದರೆ ಜಮೀನು ಒತ್ತುವರಿ ಅಂಶ ಪತ್ತೆಯಾದರೂ ಒತ್ತುವರಿದಾರರ ವಿರುದ್ಧ ಇದುವರೆಗೆ ಕ್ರಮ ಕೈಗೊಂಡಿಲ್ಲ. ಇದೇ ಕಾರಣಕ್ಕೆ ಇಲ್ಲಿ ಸರಕಾರಿ ಜಮೀನು ಯಾರೂ ಬೇಕಾದರೂ ಒತ್ತುವರಿ
ಮಾಡುವ ಅಂಶ ನಡೆಯುತ್ತಲೇ ಇವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಸರ್ವೇ ನಂಬರ್ 125ರಲ್ಲಿ ಸರಕಾರಿ ಜಮೀನು ಒತ್ತುವರಿ ದೃಢವಾಗಿದೆ. ಆದರೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಪ್ರಭಾವಕ್ಕೆ ಹೆದರಿ ಅರೆಬರೆ ವರದಿ ನೀಡಿದ್ದಾರೆ. ಇಲ್ಲಿ ಹೆಚ್ಚಿನ ಜಮೀನು ಒತ್ತುವರಿಯಾಗಿದೆ. ಆದರೆ ವರದಿ ಸಮರ್ಪಕವಾಗಿ ನೀಡಿಲ್ಲ. ಇನ್ನು ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು. ಬೇರೆ ತಾಲೂಕಿನ ಅಧಿ ಕಾರಿಗಳನ್ನು ಪರಿಶೀಲನೆಗೆ ನೇಮಕ ಮಾಡಿ ಈ ಬಗ್ಗೆ ನೈಜ ವರದಿ ಪಡೆದು ಕ್ರಮ ಕೈಗೊಳ್ಳಬೇಕು.
-ಸಂತೋಷ ಹಿರೇದಿನ್ನಿ, ದೂರುದಾರರು.
ಮೆದಕಿನಾಳ ಸೀಮಾ ವ್ಯಾಪ್ತಿಯ ಸರ್ವೇ ನಂ.125ರಲ್ಲಿ ಸರಕಾರಿ ಜಮೀನು ಒತ್ತುವರಿ ಬಗ್ಗೆ ದೂರು ಬಂದಿತ್ತು. ಈ ಆಧಾರದ ಮೇಲೆ ಪರಿಶೀಲನೆ ನಡೆಸಿ, ಒತ್ತುವರಿ ಭೂಮಿತೆರವು ಮಾಡಿ ಹದ್ದುಬಸ್ತ್ ಮಾಡಲಾಗಿದೆ.
-ಕವಿತಾ, ಆರ್.ತಹಶೀಲ್ದಾರ್, ಮಸ್ಕಿ
-ಮಲ್ಲಿಕಾರ್ಜುನ ಚಿಲ್ಕರಾಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.