ದ್ವಿಭಾಷಾ ಶಿಕ್ಷಣ ಪದ್ದತಿಗೆ ಹೆಚ್ಚಿದ ಬೇಡಿಕೆ

Team Udayavani, Sep 5, 2021, 5:50 PM IST

hubballi news

ಹುಬ್ಬಳ್ಳಿ: ಗ್ರಾಮೀಣ, ಬಡ ಮಕ್ಕಳಿಗೆ ಆಂಗ್ಲಮಾಧ್ಯಮ ಶಿಕ್ಷಣ, ಇದರೊಂದಿಗೆ ಕನ್ನಡ ಶಾಲೆಗಳನ್ನುಉಳಿಸಬೇಕೆನ್ನುವ ಸರಕಾರದ ದ್ವಿಭಾಷಾ ಶಿಕ್ಷಣಪದ್ಧತಿಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ.ಕೋವಿಡ್‌ನಿಂದ ಕಳೆದ ವರ್ಷ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಒಂದನೇ ತರಗತಿ ಆರಂಭಿಸಲು ಸಾಧ್ಯವಾಗಿರಲಿಲ್ಲ.

ಆದರೆ ಈ ವರ್ಷ ಅನುಮತಿ ನೀಡಿದ ಎಲ್ಲಾ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ಶಿಕ್ಷಣಇಲಾಖೆ ಮುಂದಾಗಿದ್ದು, ಪ್ರವೇಶಾತಿಗಾಗಿ ಸರಕಾರಿಶಾಲೆಗಳಿಗೂ ಮುಗಿಬೀಳುವಂತಾಗಿದೆ.ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಮಕ್ಕಳಪಾಲಕರು ಡೊನೇಶನ್‌, ಶುಲ್ಕ, ಸಮವಸ್ತ್ರ, ಪುಸ್ತಕ,ವಾಹನ ಹೀಗೆ ಹತ್ತಾರು ನಾನಾ ಶುಲ್ಕ ಪಾವತಿಸಿಖಾಸಗಿಶಾಲೆಯ ಶಿಕ್ಷಣ ಕೊಡಿಸುವುದು ಕಷ್ಟ.

ಹೀಗಾಗಿ ಎಲ್ಲಾಸೌಲಭ್ಯಗಳನ್ನುಉಚಿತವಾಗಿಕಲ್ಪಿಸಿಸರಕಾರ2019-20ಹಾಗೂ 2020-21 ನೇ ಸಾಲಿನಿಂದ ಕನ್ನಡ ಹಾಗೂಉರ್ದು ಮಾಧ್ಯಮ ಶಾಲೆಗಳಲ್ಲಿ ದ್ವಿಭಾಷ ಶಿಕ್ಷಣಪದ್ಧತಿ ಜಾರಿಗೊಳಿಸಿತ್ತು. ಹೀಗಾಗಿ 2019-20ರಿಂದಇಲ್ಲಿಯವರೆಗೆ ಜಿಲ್ಲೆಯಲ್ಲಿ 65 ಶಾಲೆಗಳಲ್ಲಿ ದ್ವಿಭಾಷಾಶಿಕ್ಷಣ ಪದ್ಧತಿ ಆರಂಭಿಸಿದೆ. ಸರಕಾರಿ ಕನ್ನಡ ಮಾಧ್ಯಮಶಾಲೆಗಳು ಎಂದು ತಿರಸ್ಕರಿಸಿ ಖಾಸಗಿ ಶಾಲೆಗಳತ್ತ ಹೊರಟವರು ಇದೀಗ ಸರಕಾರಿ ಶಾಲೆಗಳಲ್ಲಿ ಪ್ರವೇಶಪಡೆಯಲುಮುಂದಾಗುತ್ತಿದ್ದು,ಬಹುತೇಕ ಶಾಲೆಗಳಲ್ಲಿಪ್ರವೇಶಾತಿ ಪೂರ್ಣಗೊಂಡಿವೆ.ಆರಂಭಕ್ಕೆ ಕಸರತ್ತು: ಗ್ರಾಮೀಣ ಪ್ರದೇಶ ಹಾಗೂ ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ಅನುಕೂಲಕರ ವಾತಾವರಣ ಇರುವ ಶಾಲೆಗಳನ್ನು ಗುರುತಿಸಿ2019-20ನೇ ಸಾಲಿನಲ್ಲಿ 28 ಕನ್ನಡ ಹಾಗೂ ಉರ್ದುಶಾಲೆಗಳಲ್ಲಿ 1ರಿಂದ ಆಂಗ್ಲ ಮಾಧ್ಯಮ ತರಗತಿಗಳು ಆರಂಭವಾದವು.

ಇದನ್ನೂ ಓದಿ:ಗುರು ಗ್ರಾಮವೆಂಬ ಖ್ಯಾತಿ ಪಡೆದ ರೊಟ್ಟಿಗವಾಡ

2020-21ರಲ್ಲಿ 11ಕನ್ನಡ, 19ಉರ್ದು ಮಾಧ್ಯಮ ಶಾಲೆಗಳಲ್ಲಿ ಆರಂಭಕ್ಕೆ ಅನುಮತಿನೀಡಲಾಗಿತ್ತು. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಕಳೆದವರ್ಷ ತರಗತಿ ಆರಂಭಿಸಲು ಸಾಧ್ಯವಾಗಿರಲಿಲ್ಲ.2021-22 ನೇ ಸಾಲಿನಲ್ಲಿ7ಶಾಲೆಗಳಿಗೆ ಅನುಮತಿನೀಡಲಾಗಿದೆ. ಈ ಬಾರಿ 6-8 ನೇ ತರಗತಿ ಆರಂಭದನಂತರ 1-5 ತರಗತಿ ಆರಂಭಿಸಲು ಚಿಂತನೆನಡೆದಿರುವ ಕಾರಣ ಅನುಮತಿ ನೀಡಿರುವ ಎಲ್ಲಾಶಾಲೆಗಳಲ್ಲೂ ಆಂಗ್ಲ ಮಾಧ್ಯಮ ತರಗತಿಗಳನ್ನು ಈವರ್ಷ ಶಿಕ್ಷಣ ಇಲಾಖೆ ಮುಂದಾಗಿದೆ.

ಹೆಚ್ಚಿದ ಬೇಡಿಕೆ: ಆಂಗ್ಲ ಮಾಧ್ಯಮ ತರಗತಿ ಆರಂಭಕ್ಕೆಕೊಠಡಿ, ಶಿಕ್ಷಕರು ಹೀಗೆ ಹಲವು ಅಂಶಗಳಮೇಲೆ ಹು-ಧಾ ವ್ಯಾಪ್ತಿಯಲ್ಲಿ 16 ಹಾಗೂ 12ಶಾಲೆಗಳನ್ನು ತಾಲೂಕುಗಳ ಗ್ರಾಮೀಣ ಶಾಲೆಗಳನ್ನುಆಯ್ಕೆ ಮಾಡಲಾಗಿತ್ತು. ಮೊದಲ ವರ್ಷವೇ28 ಶಾಲೆಗಳಲ್ಲಿ 840 ವಿದ್ಯಾರ್ಥಿಗಳು ಪ್ರವೇಶಪಡೆದಿದ್ದಾರೆ.

ಈ ವರ್ಷವೂ ಕೂಡ ಕನ್ನಡ ಮಾಧ್ಯಮಶಾಲೆಗಳಲ್ಲಿ ದಾಖಲಾತಿಗೆ ಬೇಡಿಕೆಯುಂಟಾಗಿದೆ.ಹೆಬ್ಬಳ್ಳಿ, ಉಣಕಲ್ಲ, ಎಲಿವಾಳ, ರಾಯನಾಳ,ಆನಂದನಗರ ಸೇರಿದಂತೆ ಬಹುತೇಕ ಕಡೆಗ ಎರಡುವಿಭಾಗಗಳಿಗೆ ಬೇಕಾಗುವಷ್ಟು ವಿದ್ಯಾರ್ಥಿಗಳುಪ್ರವೇಶ ಪಡೆಯುತ್ತಿದ್ದಾರೆ. ಇದರೊಂದಿಗೆ ಇತರೆಶಾಲೆಗಳಿಂದಲೂ ಬೇಡಿಕೆ ಹೆಚ್ಚಾಗುತ್ತಿದ್ದು, ಈಕುರಿತು ಶಿಕ್ಷಣ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆಸಲ್ಲಿಸಲಾಗಿದೆ. ಆದರೆ ಬೇಡಿಕೆ ತಕ್ಕಂತೆ ಅನುಮತಿನೀಡುವ ಕಾರ್ಯ ಸರಕಾರದಿಂದ ಅಗುತ್ತಿಲ್ಲ.ಇತರೆಡೆಗೆ ವರ್ಗಾವಣೆ: 2019-20 ರಲ್ಲಿಆರಂಭವಾದ ಉರ್ದು ಮಾಧ್ಯಮ ಶಾಲೆಗಳಲ್ಲಿಉತ್ತಮ ಸ್ಪಂದನೆಯಿದೆ.

ಅಂತಹ ಕೆಲ ಶಾಲೆಗಳಲ್ಲಿಇನ್ನೊಂದು ವಿಭಾಗ ಆರಂಭಕ್ಕೆ ಬೇಡಿಕೆಯಿದೆ.ಆದರೆ 2020-21 ರಲ್ಲಿ ಗುರುತಿಸಿದ 18 ಶಾಲೆಗಳಲ್ಲಿಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅಷ್ಟೊಂದು ಆಸಕ್ತಿತೋರಿದಂತೆ ಕಾಣುತ್ತಿಲ್ಲ. 6 ಶಾಲೆಯಲ್ಲಿ ಓರ್ವವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ. 2 ಶಾಲೆಗಳಲ್ಲಿಕ್ರಮವಾಗಿ 3, 4 ವಿದ್ಯಾರ್ಥಿಗಳಿದ್ದರೆ2ಶಾಲೆಗಳಲ್ಲಿ 15ವಿದ್ಯಾರ್ಥಿಗಳನ್ನು ದಾಟಿಲ್ಲ. ಹೀಗಾಗಿಈಶಾಲೆಗಳಿಗೆನೀಡಿದ ಅನುಮತಿಯನ್ನು ಅಗತ್ಯವಿರುವ ಶಾಲೆಗೆವರ್ಗಾಯಿಸಲಾಗಿದೆ.

ಸಕಾಲಕ್ಕೆ ಅನುಮತಿ ಅಗತ್ಯ: ಸರಕಾರಿ ಕನ್ನಡಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಿ ದಾಖಲಾತಿಪ್ರಮಾಣ ಹೆಚ್ಚಿಸುವುದು, ಇದರೊಂದಿಗೆ ಪ್ರಾಥಮಿಕಹಂತದಿಂದಲೇ ಆಂಗ್ಲ ಮಾಧ್ಯಮ ಶಿಕ್ಷಣದ ಕಸರತ್ತುಜಿಲ್ಲೆಯಲ್ಲಿ ಕೈಗೂಡಿದೆ. ಸರಕಾರದ ಮೂಲ ಉದ್ದೇಶಈಡೇರಬೇಕಾದರ ಆದರೆ ಬೇಡಿಕೆಯಿರುವಶಾಲೆಗಳಿಗೆ ವಿಭಾಗಹೆಚ್ಚಿಸಲುಅನುಮತಿ,ಹೊಸದಾಗಿಶಾಲೆಗಳಿಗೆ ಅನುಮತಿ ನೀಡುವ ಕೆಲಸ ಸರಕಾರದಿಂದಸಕಾಲಕ್ಕೆ ದೊರೆಯುತ್ತಿಲ್ಲ. ಈ ವರ್ಷ 7 ಶಾಲೆಗಳಿಗೆಅನುಮತಿ ನೀಡಿದ್ದು ಆಗಸ್ಟ್‌ ತಿಂಗಳಲ್ಲಿ. ಮುಂದಿನವರ್ಷದಿಂದಾದರೂ ಶೈಕ್ಷಣಿಕ ವರ್ಷದ ಆರಂಭದಲ್ಲೇಅನುಮತಿ ನೀಡುವ ಕೆಲಸ ಸರಕಾರದಿಂದಆಗಬೇಕಿದೆ.

ಹೇಮರಡ್ಡಿ ಸೈದಾಪು

ಟಾಪ್ ನ್ಯೂಸ್

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

7(1)

Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!

21-bng

Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

8

Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

7(1)

Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!

21-bng

Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.