ನಗರಸಭೆ: ಪರಿಷ್ಕೃತ ಮೀಸಲಾತಿ ಪಟ್ಟಿ ಪ್ರಕಟ
Team Udayavani, Sep 5, 2021, 6:13 PM IST
ಗದಗ: ರಾಜ್ಯ ಚುನಾವಣಾ ಆಯೋಗದಿಂದ ಇಲ್ಲಿನ ಗದಗ-ಬೆಟಗೇರಿನಗರಸಭೆ ಚುನಾವಣೆಗೆ ಪರಿಷ್ಕೃತ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು,ಸ್ಪರ್ಧಾಕಾಂಕ್ಷಿಗಳಲ್ಲಿ ಚುನಾವಣೆಯ ಕನಸು ಗರಿಗೆದರಿದೆ.ಗದಗ-ಬೆಟಗೇರಿ ನಗರಸಭೆಗೆ ಹಿಂದಿನ ಚುನಾಯಿತಮಂಡಳಿಯ ಐದು ವರ್ಷಗಳ ಅವ ಧಿ 9-3-2019 ರಂದು ಪೂರ್ಣಗೊಂಡಿತ್ತು. ಆನಂತರ ವಾರ್ಡ್ ಪುನರ್ ವಿಂಗಡಣೆ ಮತ್ತು ಮೀಸಲಾತಿ ಗೊಂದಲದಿಂದ ಕಳೆದ ಎರಡೂವರೆ ವರ್ಷಗಳಿಂದ ಚುನಾವಣೆ ನನೆಗುದಿಗೆ ಬಿದ್ದಿತ್ತು.
ಈ ನಡುವೆ ರಾಜ್ಯಚುನಾವಣಾ ಆಯೋಗ 2 ಬಾರಿ ವಾರ್ಡ್‌ವಾರು ಮೀಸಲಾತಿಪಟ್ಟಿ ಪ್ರಕಟಿಸಿತ್ತಾದರೂ, ರೋಸ್ಟರ್ ಪಾಲನೆಯಲ್ಲಿ ಲೋಪವಾಗಿದೆಎಂದು ಆಕ್ಷೇಪಿಸಿ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ3ನೇ ಬಾರಿಗೆ ಚುನಾವಣಾ ಆಯೋಗ ಗದಗ-ಬೆಟಗೇರಿ ನಗರಸಭೆಚುನಾವಣೆಗೆ ವರ್ಗವಾರು ಪರಿಷ್ಕೃತ ಮೀಸಲು ಪಟ್ಟಿ ಪ್ರಕಟಿಸಿದ್ದು,ಆಕ್ಷೇಪಣೆ ಸಲ್ಲಿಸಲು 7 ದಿನಗಳ ಗಡುವು ನೀಡಿದೆ.17 ವಾರ್ಡ್‌ಗಳು ಮಹಿಳೆಯರಿಗೆ: ಗದಗ-ಬೆಟಗೇರಿ ನಗರಸಭೆಯಒಟ್ಟು 35 ವಾರ್ಡ್‌ಗಳಲ್ಲಿ 17 ವಾರ್ಡ್‌ಗಳು ಮಹಿಳೆಯರಿಗೆಮೀಸಲಾಗಿವೆ.
ಪರಿಶಿಷ್ಟ ಜಾತಿ- 4(ಮಹಿಳೆ 2), ಪರಿಶಿಷ್ಟ ಪಂಗಡ-1,ಹಿಂದುಳಿದ ವರ್ಗ ಎ- 10(ಮಹಿಳೆ- 5), ಹಿಂದುಳಿದ ವರ್ಗ ಬ-2(ಮಹಿಳೆ 1), ಸಾಮಾನ್ಯ-18(ಮಹಿಳೆ-9) ವರ್ಗಕ್ಕೆ ಮೀಸಲಾತಿಕಲ್ಪಿಸಲಾಗಿದೆ.
ಮೀಸಲು ಯಾರಿಗೆ ಅನುಕೂಲ?: ಈಗಾಗಲೇ ಎರಡೂವರೆ ವರ್ಷಗಳಕಾಲ ನಗರಸಭೆ ಚುನಾವಣೆ ವಿಳಂಬವಾಗಿದೆ. ಜೊತೆಗೆ ಈಗಾಗಲೇಎರಡು ಬಾರಿ ಮೀಸಲಾತಿ ಪಟ್ಟಿ ಪರಿಷ್ಕರಣೆಗೆ ಒಳಪಟ್ಟಿದ್ದರಿಂದಬಹುತೇಕ ಇದೇ ಮೀಸಲಾತಿ ಅಂತಿಮಗೊಳ್ಳುವ ಸಾಧ್ಯತೆಗಳಿವೆಎಂಬುದು ಸ್ಥಳೀಯ ರಾಜಕೀಯ ನಾಯಕರ ಲೆಕ್ಕಾಚಾರ. ಅದರಂತೆಚುನಾವಣೆ ನಡೆದರೆ, ಕಳೆದ ಸಾಲಿನಲ್ಲಿ ನಗರಸಭೆ ಪ್ರವೇಶಿಸಿದ್ದಸದಸ್ಯರಲ್ಲಿ ಕೆಲವರಿಗೆ ಈ ಮೀಸಲು ವರವಾಗಿದ್ದರೆ, ಇನ್ನೂ ಕೆಲವರಿಗೆವಾರ್ಡ್ ಕೈತಪ್ಪಿದ್ದು, ಅನುಕೂಲಕರ ವಾರ್ಡ್‌ಗಳಿಗೆ ಪಲಾಯನಮಾಡುವ ಅನಿವಾರ್ಯತೆ ಸೃಷ್ಟಿಸಿದ್ದರೆ, ಮತ್ತಿತರೆ ಚುನಾವಣಾಕಣದಿಂದ ದೂರ ಉಳಿಯುವಂತೆ ಮಾಡಿದೆ.
ದಶಕಗಳಿಂದ ನಗರಸಭೆ ಪ್ರವೇಶಿಸುತ್ತಿರುವ ಕಾಂಗ್ರೆಸ್ ಹಿರಿಯನಾಯಕ ಎಲ್.ಡಿ.ಚಂದಾವರಿ, ಮಾಜಿ ಅಧ್ಯಕ್ಷರಾಗಿದ್ದ ಬಿ.ಬಿ.ಅಸೂಟಿ,ಪೀರಸಾಬ ಕೌತಾಳ, ಕೃಷ್ಣ ಪರಾಪುರ, ಶ್ರೀನಿವಾಸ ಹುಯಿಲಗೋಳ,ಬಿಜೆಪಿಯ ಸದಸ್ಯರಾಗಿದ್ದ ಮಾದವ ಗಣಾಚಾರಿ, ರಾಘವೇಂದ್ರಯಳವತ್ತಿ ಅವರಿಗೆ ವಾರ್ಡ್ ಮೀಸಲಾತಿ ಪೂರಕವಾಗಿವೆ.ಈ ಬಾರಿ 2ನೇ ವಾರ್ಡ್ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರಿಂದಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸುರೇಶ್ ಕಟ್ಟಿಮನಿ ಸ್ಪರ್ಧೆಗೆಅನುಕೂಲವಾಗಿವೆ.
ಕೈತಪ್ಪಿದ ವಾರ್ಡ್: ಇನ್ನು, ಮಾಜಿ ಅಧ್ಯಕ್ಷರಾದ ಶಿವಲೀಲಾ ಅಕ್ಕಿ,ರುದ್ರಮ್ಮ ಕೆರಕಲಮಟ್ಟಿ, ಉಪಾಧ್ಯಕ್ಷರಾಗಿದ್ದ ಪ್ರಕಾಶ ಬಾಕಳೆ,ಸದಸ್ಯರಾದ ಅನಿಲ್ ಸಿಂಗಟಾಲಕೇರಿ, ಅನಿಲ್ ಅಬ್ಬಿಗೇರಿ, ಚನ್ನವ್ವಹೇಮಣ್ಣ ಮುಳಗುಂದ ಅವರು ಪ್ರತಿನಿ ಸುತ್ತಿದ್ದ ವಾರ್ಡ್‌ಗಳಮೀಸಲಾತಿ ಬದಲಾಗಿದ್ದರಿಂದ ವಾರ್ಡ್ ಕೈತಪ್ಪಿದೆ. ಅದೇ ವಾಡ್ìನಿಂದ ಮರು ಆಯ್ಕೆ ಬಯಸಿದವರಿಗೆ ನಿರಾಸೆ ಮೂಡಿಸಿದೆ.ಕಳೆದ ವಿವಿಧ ವರ್ಗಗಳಿಗೆ ಮೀಸಲಾಗಿದ್ದ ವಾರ್ಡ್‌ಗಳು ಈಗಸಾಮಾನ್ಯವಾಗಿ ಪರಿವರ್ತನೆಯಾಗಿದ್ದರಿಂದ ಮೀಸಲು ಕ್ಷೇತ್ರದನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.ವಾರ್ಡ್ ಪುನರ್‌ವಿಂಗಡಣೆ ಬಿಕ್ಕಟ್ಟು: ಅದೇ ವಾರ್ಡ್‌ನಿಂದ ಮರುಆಯ್ಕೆ ಬಯಸಿ ಸಾಕಷ್ಟು ಕೆಲಸ ಮಾಡಿದ್ದಾರೆ.
ಅದರೊಂದಿಗೆ ಈಬಾರಿ ಕೆಲವರಿಗೆ ಮೀಸಲಾತಿ ಸ್ಪರ್ಧೆಗೆ ಪೂರಕವಾಗಿದ್ದರೂ, ವಾರ್ಡ್‌ಪುನರ್ ವಿಂಗಡಣೆಯಿಂದ ಜನರ ಸಂಪರ್ಕ ಹಾಗೂ ಹೊಸಮತದಾರರನ್ನು ತಲುಪುವುದು ಸವಾಲಾಗಲಿದೆ ಎನ್ನಲಾಗಿದೆ.ಒಟ್ಟಾರೆ ಪರಿಷ್ಕೃತ ಮೀಸಲಾತಿ ಪಟ್ಟಿಯಿಂದಾಗಿ ಅವಳಿ ನಗರದರಾಜಕೀಯ ವಲಯ ಹಾಗೂ ಸ್ಪರ್ಧಾಕಾಂಕ್ಷಿಗಳಲ್ಲಿ ಸಕಷ್ಟು ಚರ್ಚೆಗೆಗ್ರಾಸವಾಗಿದೆ. ಈ ನಡುವೆ ಕೆಲ ವಾರ್ಡ್‌ಗಳಲ್ಲಿ ಮೀಸಲಾತಿಬದಲಾವಣೆಯಿಂದ ಹೊಸ ನಾಯಕರಿಗೆ ಅವಕಾಶ ಸಿಗಲಿದೆ ಎಂಬಮಾತು ಕೇಳಿಬರುತ್ತಿವೆ.
ವೀರೇಂದ್ರ ನಾಗಲದಿನ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.