ಭಾರತದ ಮುಂದಿದೆ ಗೆಲುವಿನ ಯೋಜನೆ
Team Udayavani, Sep 6, 2021, 5:50 AM IST
ಲಂಡನ್: ಓವಲ್ ಟೆಸ್ಟ್ ಪಂದ್ಯದಲ್ಲಿ ಸಂಭಾವ್ಯ ಅಪಾಯದಿಂದ ಪಾರಾದ ಭಾರತವೀಗ ಇಂಗ್ಲೆಂಡ್ ಮೇಲೆ ಒತ್ತಡ ಹೇರುವ ಮೂಲಕ ಗೆಲುವಿನ ಯೋಜನೆ ರೂಪಿಸತೊಡಗಿದೆ.
ಪಂದ್ಯದ 4ನೇ ದಿನ ತನ್ನ ದ್ವಿತೀಯ ಇನ್ನಿಂಗ್ಸ್ ಮೊತ್ತವನ್ನು 466ಕ್ಕೆ ಏರಿಸಿ ರೂಟ್ ಬಳಗಕ್ಕೆ 126 ಓವರ್‌ಗಳಲ್ಲಿ 368 ರನ್ನುಗಳ ಗೆಲುವಿನ ಗುರಿ ನೀಡಿದೆ. ಓವಲ್‌ನಲ್ಲಿ 4ನೇ ಸರದಿಯ ಯಶಸ್ವಿ ಚೇಸಿಂಗ್ ಮೊತ್ತ 263 ರನ್ ಎಂಬುದನ್ನೊಮ್ಮೆ ನೆನಪಿಸಿಕೊಳ್ಳಬೇಕಿದೆ.
ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 43 ರನ್ ಗಳಿಸಿ ಆಡುತ್ತಿದೆ.
ಪಂತ್, ಶಾರ್ದೂಲ್ ಅವರ ಅರ್ಧಶತಕ 4ನೇ ದಿನದಾಟದ ವಿಶೇಷ ಆಕರ್ಷಣೆ ಎನಿಸಿತು. ಬಳಿಕ ಬೌಲರ್‌ಗಳಾದ ಉಮೇಶ್ ಯಾದವ್, ಬುಮ್ರಾ ಸೇರಿಕೊಂಡು ತಂಡದ ಮೊತ್ತವನ್ನು 450ರ ಗಡಿ ದಾಟಿಸಿ ಮಿಂಚಿದರು.
ಠಾಕೂರ್-ಪಂತ್ ಹೋರಾಟ :
99 ರನ್ ಹಿನ್ನಡೆ ಬಳಿಕ 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟಿಗೆ 270 ರನ್ ಗಳಿಸಿ ಹೋರಾಟದ ಸೂಚನೆ ನೀಡಿದ್ದ ಭಾರತ, ರವಿವಾರದ ಮೊದಲ ಅವಧಿಯಲ್ಲಿ 3 ಬಿಗ್ ವಿಕೆಟ್ ಕಳೆದುಕೊಂಡು ಸಂಕಟಕ್ಕೆ ಸಿಲುಕಿತು. ರವೀಂದ್ರ ಜಡೇಜ (17), ನಾಯಕ ವಿರಾಟ್ ಕೊಹ್ಲಿ (44) ಮತ್ತು ಅಜಿಂಕ್ಯ ರಹಾನೆ (0) ವಿಕೆಟ್ ಪತನವಾದಾಗ ಇಂಗ್ಲೆಂಡಿಗೆ ಮೇಲುಗೈ ಲಭಿಸುವ ಸಾಧ್ಯತೆ ಗೋಚರಿಸಿತು. ಲಂಚ್ ವೇಳೆ ಭಾರತ 6 ವಿಕೆಟಿಗೆ 329 ರನ್ ಗಳಿಸಿತ್ತು. ಆದರೆ ರಿಷಭ್ ಪಂತ್ ಮತ್ತು ಶಾದೂìಲ್ ಠಾಕೂರ್ ಸೇರಿಕೊಂಡು 7ನೇ ವಿಕೆಟಿಗೆ ಭರ್ತಿ 100 ರನ್ ಪೇರಿಸಿ ಭಾರತವನ್ನು ಸುರಕ್ಷಿತ ಸ್ಥಿತಿಗೆ ತಲುಪಿಸಿದರು.
ಪಂತ್ ಮತ್ತು ಠಾಕೂರ್ ಇಬ್ಬರೂ ಅರ್ಧ ಶತಕ ಬಾರಿಸಿ ಇಂಗ್ಲೆಂಡ್ ಬೌಲರ್‌ಗಳಿಗೆ ತಲೆನೋವಾಗಿ ಪರಿಣಮಿಸಿದರು. ಪಂತ್ ಕೊಡುಗೆ ಭರ್ತಿ 50 ರನ್. 106 ಎಸೆತಗಳ ಈ ಆಟದಲ್ಲಿ 4 ಬೌಂಡರಿ ಸೇರಿತ್ತು.
ಮೊದಲ ಸರದಿಯಲ್ಲಿ 57 ರನ್ ಹೊಡೆದು ಟಾಪ್ ಸ್ಕೋರರ್ ಆಗಿದ್ದ ಠಾಕೂರ್ ಮತ್ತೂಂದು ಸ್ಫೋಟಕ ಇನ್ನಿಂಗ್ಸ್ ಮೂಲಕ ಮತ್ತೂಮ್ಮೆ ತಮ್ಮ ಬ್ಯಾಟಿಂಗ್ ಸಾಹಸವನ್ನು ತೆರೆದಿಟ್ಟರು. ಅದೇ ಬಿರುಸಿನಲ್ಲಿ ಸಾಗಿದ ಠಾಕೂರ್ 72 ಎಸೆತಗಳಿಂದ 60 ರನ್ ಸಿಡಿಸಿದರು.
ರವಿವಾರದ ಮೊದಲ ಅವಧಿಯಲ್ಲಿ ಕ್ರಿಸ್ ವೋಕ್ಸ್ ಸತತ ಓವರ್‌ಗಳಲ್ಲಿ ಅವಳಿ ಹೊಡೆತ ನೀಡಿದಾಗ ಭಾರತ ಒತ್ತಡಕ್ಕೆ ಸಿಲುಕಿತು. ಮೊದಲು ಜಡೇಜ ವಿಕೆಟ್ ಕಿತ್ತ ವೋಕ್ಸ್, ಮುಂದಿನ ಓವರ್‌ನಲ್ಲಿ ರಹಾನೆ ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.