“ಶಾ’ಕಿಂಗ್‌ ಹೇಳಿಕೆಗೆ ಕಮಲದಲ್ಲಿ ಕಂಪನ

Team Udayavani, Sep 6, 2021, 2:05 PM IST

political news

ಹುಬ್ಬಳ್ಳಿ: ಮುಂದಿನ ವಿಧಾನಸಭೆ ಚುನಾವಣೆನಾಯಕತ್ವ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ಶಾ ಹೇಳಿಕೆ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದ್ದು,ಜಿಜ್ಞಾಸೆ ಹುಟ್ಟು ಹಾಕುವಂತೆ ಮಾಡಿದೆ.ವಿಧಾನಸಭೆ ಚುನಾವಣೆಗೆ ಇನ್ನೂ ಸುಮಾರು18 ತಿಂಗಳು ಕಾಲಾವಕಾಶವಿದೆ. ಅಗತ್ಯವಿಲ್ಲದವೇದಿಕೆಯಲ್ಲಿ “ಚುನಾವಣೆ ನಾಯಕತ್ವ ಘೋಷಣೆ’ಮೂಲಕ ಅಮಿತ್‌ ಶಾ, ಬಿಜೆಪಿಯಲ್ಲಿ ಮಹತ್ವದ ಚರ್ಚೆ ಹುಟ್ಟು ಹಾಕುವಂತೆ ಮಾಡಿದ್ದಾರೆ.

ಅಲ್ಲಿಗೆ ರಾಜ್ಯದಲ್ಲಿ ಬಿಜೆಪಿ ಹೊಸ ನಾಯಕತ್ವಬೆಳೆಸಲು ತಾಲೀಮು ಶುರುವಿಟ್ಟುಕೊಂಡಿದ್ದೇವೆಎಂಬ ಸಂದೇಶ ನೀಡಿದ್ದಾರೆಯೇ ಎಂಬ ಪ್ರಶ್ನೆಮೂಡತೊಡಗಿದೆ.ರಾಜ್ಯ ರಾಜಕೀಯದಲ್ಲಿ ನಡೆದಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸ್ಥಾನಬದಲಾಗಿತ್ತು. ಯಡಿಯೂರಪ್ಪ ಸ್ಥಾನದಲ್ಲಿ, ಅವರಸಮ್ಮತಿಯೊಂದಿಗೆ ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದರು.

ನಾಯಕತ್ವಬದಲಾವಣೆಗೆ ಒಂದು ತಿಂಗಳಾಗಿದೆಯಷ್ಟೇ.ಮುಂದಿನ ಚುನಾವಣೆ ನಾಯಕತ್ವದ ಕುರಿತುಸ್ಪಷ್ಟ ಚರ್ಚೆ, ತೀರ್ಮಾನಗಳೂ ಆಗಿಲ್ಲ ಎಂದುಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಇನ್ನೊಂದುಕಡೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಹಾಗೂಪಕ್ಷದ ಉಸ್ತುವಾರಿ ಅರುಣಸಿಂಗ್‌ ಅವರುಯಡಿಯೂರಪ್ಪ ನೇತೃತ್ವ-ಮಾರ್ಗದರ್ಶನದಲ್ಲೇಚುನಾವಣೆ ಎದುರಿಸಲಾಗುವುದು ಎಂದುಹೇಳಿದ್ದರ ಬೆನ್ನಲ್ಲೇ ಅಮಿತ್‌ ಶಾ ಹೇಳಿಕೆ ಹೊಸ ವಿದ್ಯಮಾನಗಳನ್ನು ಸೃಷ್ಟಿಸುವಂತೆ ಮಾಡಿದೆ.

ಪ್ರಯೋಗಾತ್ಮಕ ಅಸ್ತ್ರ ಬಳಸಿದರೆ ಚಾಣಕ್ಯ?:ರಾಜಕೀಯ ತಂತ್ರಗಾರಿಕೆಯಲ್ಲಿ ತಮ್ಮದೇಸಾಮರ್ಥ್ಯ ಹೊಂದಿರುವ ಅಮಿತ್‌ ಶಾರಾಜಕೀಯ ನಡೆ, ಚಿಂತನೆ ವಿಭಿನ್ನ ಹಾಗೂವಿಶೇಷತೆಗಳನ್ನು ಕೂಡಿರುತ್ತವೆ. ಅವರುಪ್ರಯೋಗಿಸುವ ರಾಜಕೀಯ ಅಸ್ತ್ರಗಳು ಹಾಗೂದಾಳ ಫಲ ನೀಡಿದ ನಂತರವೇ ಗೋಚರಿಸುತ್ತವೆಎಂಬ ಮಾತು ರಾಷ್ಟ್ರ ರಾಜಕೀಯದ ಹಲವುಪ್ರಕರಣಗಳಲ್ಲಿ ಸಾಬೀತಾಗಿದೆ.

ಇದೀಗರಾಜ್ಯದಲ್ಲಿಯೂ ಮುಂದಿನ ವಿಧಾನಸಭೆಚುನಾವಣೆ ನಾಯಕತ್ವದ ಕುರಿತು ಪ್ರಯೋಗಾತ್ಮಕಅಸ್ತ್ರ ಬಳಸಿದರೇ ಎಂಬ ಪ್ರಶ್ನೆ ಉದ್ಬವಿಸಿದೆ.ಸಾಮಾನ್ಯವಾಗಿ ಮುಖ್ಯಮಂತ್ರಿಯಾಗಿದ್ದವರನಾಯಕತ್ವದಲ್ಲೇ ಚುನಾವಣೆಗಳನ್ನುಎದುರಿಸಲಾಗುತ್ತದೆ. ಆದರೆ, ಬಿಜೆಪಿಯಲ್ಲಿಯಡಿಯೂರಪ್ಪ ಹೊರತಾಗಿ ನಾಯಕತ್ವದಚಿಂತನೆ ಕಷ್ಟ ಸಾಧ್ಯ ಎನ್ನುವಂತಿದೆ. ಆದರೂ,ಹೊಸ ನಾಯಕತ್ವ ಬೆಳೆಸುವ, ವ್ಯಕ್ತಿಗಿಂತ ಣಪಕ್ಷಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಬಿಜೆಪಿಹೈಕಮಾಂಡ್‌ ಹಲವು ಪ್ರಯೋಗ, ಯತ್ನಗಳಿಗೆಅನೇಕ ರಾಜ್ಯಗಳಲ್ಲಿ ಮುಂದಾಗಿದೆ.

ಕೆಲರಾಜ್ಯಗಳಲ್ಲಿ ಯಶಸ್ಸನ್ನೂ ಕಂಡಿದೆ. ಅದೇ ಮಾದರಿಪ್ರಯೋಗವನ್ನು ಕರ್ನಾಟಕದಲ್ಲಿ ಮಾಡಲುಮುಂದಾಗಿದೆಯೇ? ಇದರ ಸಾಧಕ-ಬಾಧಕಸನ್ನಿವೇಶ ಏನೆಲ್ಲಾ ಸೃಷ್ಟಿಯಾಗಬಹುದು,ಯಾವ ತಿರುವುಗಳನ್ನು ಪಡೆದುಕೊಳ್ಳಬಹುದುಎಂಬ ಪರೀಕ್ಷೆಗೆ ಈ ಪ್ರಾಯೋಗಿಕ ಅಸ್ತ್ರಬಳಸಿರಬಹುದು ಎಂಬ ಅನಿಸಿಕೆ ಬಿಜೆಪಿವಲಯದಲ್ಲಿ ಮೂಡಿವೆ.

ಸಿಎಂಗೆ ಟಾಸ್ಕ್ ಕೊಟ್ಟರೆ ಶಾ?: ರಾಜ್ಯದಲ್ಲಿ ಹೊಸನಾಯಕತ್ವ ಬೆಳೆಸುವ ಚಿಂತನೆಯಲ್ಲಿರುವ ಬಿಜೆಪಿಹೈಕಮಾಂಡ್‌ ಚುನಾವಣೆಗೆ ಇನ್ನೂ ಸುಮಾರು 18ತಿಂಗಳು ಇರುವಾಗಲೇ ಅಗತ್ಯ ಪೂರ್ವ ತಯಾರಿ,ಪಕ್ಷ ಸಂಘಟನೆ, ನಾಯಕತ್ವ ಬೆಳೆಸಿಕೊಳ್ಳುವ,ಪಕ್ಷದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು,ಒಗ್ಗೂಡಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸಿಎಂಬಸವರಾಜ ಬೊಮ್ಮಾಯಿ ಅವರಿಗೆ ಟಾಸ್ಕ್ನೀಡಿದೆಯೇ? ಅಮಿತ್‌ ಶಾ ಅವರ ಹೇಳಿಕೆಇಂತಹ ವ್ಯಾಖ್ಯಾನಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿಯಾಗಿ ಕಳೆದೊಂದು ತಿಂಗಳಲ್ಲಿಯೇ ಬಸವರಾಜ ಬೊಮ್ಮಾಯಿ ಸರಳನಡೆ, ಆರ್ಥಿಕ ವೆಚ್ಚ ಕಡಿತ, ವಿಐಪಿ ಸಂಸ್ಕೃತಿಗೆವಿದಾಯ, ಹಂತ ಹಂತವಾಗಿ ಆಡಳಿತದಲ್ಲಿಬಿಗಿ ಹಿಡಿತ, ಅಧಿಕಾರಿ ಶಾಹಿಗೆ ಮೂಗುದಾರಹಾಕುವ, ಆಡಳಿತ ಸುಧಾರಣೆಗೆ ಮಹತ್ವದಹೆಜ್ಜೆಗಳನ್ನಿರಿಸುವ, ಯಾವುದೇ ವಿವಾದಗಳಿಗೆಅವಕಾಶ ನೀಡದ ರೀತಿಯಲ್ಲಿ ಸಾಗಿರುವುದು,ಸಹಜವಾಗಿಯೇ ಬಿಜೆಪಿ ಹೈಕಮಾಂಡ್‌ ಗಮನಸೆಳೆದಿದೆ ಎಂದು ಹೇಳಲಾಗುತ್ತಿದೆ.

2023 ವಿಧಾನಸಭೆ ಚುನಾವಣೆಗೆ ಇನ್ನೂಕಾಲವಕಾಶವಿದೆ ಅಲ್ಲಿವರೆಗೆ ಏನಾಗುತ್ತದೆಯೋನೋಡೋಣ. ಆದರೆ ನಾವೆಲ್ಲ ಪಕ್ಷದ ಶಿಸ್ತಿನಸಿಪಾಯಿಗಳು. ಪಕ್ಷ ಹೇಳುವುದನ್ನು ಒಪ್ಪಿನಡೆಯುತ್ತೇವೆ ಎಂಬ ಬಿಜೆಪಿ ಹಿರಿಯನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶಶೆಟ್ಟರ ಅಭಿಪ್ರಾಯ ಹಾಗೆಯೇ ಸಾಮೂಹಿಕನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂಬ ಮತ್ತೂಬ್ಬ ಹಿರಿಯ ಮುಖಂಡ ಈಶ್ವರಪ್ಪಹೇಳಿಕೆ ಜತೆಗೆ ಇನ್ನೂ ಕೆಲ ಸಚಿವರು-ನಾಯಕರು ಬೊಮ್ಮಾಯಿ ನಾಯಕತ್ವಕ್ಕೆ “ಸೈ’ ಎಂದಿರುವುದು ಬಿಜೆಪಿಯಲ್ಲಿನ ಸಂಚಲನ, ಜಿಜ್ಞಾಸೆಗೆನಾಂದಿಯಾಡಿದೆ.

ಮತ್ತೂಂದೆಡೆ ಮಾಜಿ ಸಿಎಂಯಡಿಯೂರಪ್ಪರನ್ನು ಬದಿಗೆ ಸರಿಸುವ ಯತ್ನನಡೆಯುತ್ತಿಲ್ಲ ಎಂಬ ಸ್ಪಷ್ಟನೆಗಳೂ ಕೇಳಿಬರುತ್ತಿರುವಹಿನ್ನೆಲೆಯಲ್ಲಿ ಶಾ ಹೇಳಿಕೆ ಮುಂದಿನ ದಿನಗಳಲ್ಲಿಯಾವ ತಿರುವುಗಳನ್ನು ಪಡೆದುಕೊಳ್ಳಲಿದೆ ಎಂದುಕಾದು ನೋಡಬೇಕಾಗಿದೆ.

ಅಮರೇಗೌಡ ಗೋನವಾ

ಟಾಪ್ ನ್ಯೂಸ್

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

Puttur: ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

1-naxal

NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

Puttur: ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

1-naxal

NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.