ನಡ ಹಿರಿಯ ಪ್ರಾಥಮಿಕ ಶಾಲೆ: ಬೇಡಿಕೆ ಈಡೇರಿಕೆಯಿಂದ ಬೆಳಗಬೇಕಿದೆ ಶಾಲೆ
Team Udayavani, Sep 7, 2021, 5:00 AM IST
ಬೆಳ್ತಂಗಡಿ: ಸುಲಭದಲ್ಲಿ ಸಿಗುವಂತಹ ವಸ್ತುಗಳ ಕಡೆಗೆ ಕಡೆಗಣನೆ ಹೆಚ್ಚು, ಹೀಗಾಗಿ ಸರಕಾರಿ ಶಾಲೆಗಳೆಂದರೆ ಸರಕಾರಕ್ಕೂ ಬೇಡ ಸಮಾಜಕ್ಕೂ ಬೇಡ ಎಂಬ ರೀತಿಯಲ್ಲಿ ಇದ್ದ ಶಾಲೆಗಳೆಲ್ಲ ಮೂಲಸೌಕರ್ಯ ನೀಡದೆ ಸೊರಗುತ್ತಿದೆ. ಆದರೆ ಪ್ರಸಕ್ತ ಕೊರೊನಾ ಸನ್ನಿವೇಷ ಬದುಕಿಗೊಂದು ಜೀವನ ಪಾಠವಾದರೆ ಸರಕಾರಿ ಶಾಲೆಯ ದಾಖಲಾತಿ ಹೆಚ್ಚಳವಾಗುವ ಮೂಲಕ ಚೈತನ್ಯ ತುಂಬಿದೆ. ಆದರೆ ಮೂಲಸೌಕರ್ಯದ್ದೇ ಎಲ್ಲೆಲ್ಲ ಚಿಂತೆಯಾಗಿದೆ.
ಶಾಲಾರಂಭಕ್ಕೆ ಮುನ್ನ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಉದಯವಾಣಿ ಬೆಳಕು ಚೆಲ್ಲಲು ಮುಂದಾಗಿದೆ. ಇದೀಗ ಶಮಾನದ ಹೊಸ್ತಿಲಲ್ಲಿರುವ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ಚಿತ್ರಣವಿದು. 1925ರಲ್ಲಿ ಆರಂಭಗೊಂಡ ಈ ಶಾಲೆ 96 ವರ್ಷ ಪೂರೈಸಿದೆ. ಒಂದರಿಂದ 7ನೇ ತರಗತಿಯಿರುವ ಈ ಶಾಲೆಯಲ್ಲಿ 2020-21ರಲ್ಲಿ 81 ಮಕ್ಕಳಿದ್ದು, 2021-22ರಲ್ಲಿ 98 ಮಕ್ಕಳ ದಾಖಲಾತಿಯ ಮೂಲಕ 17 ಮಕ್ಕಳು ಹೆಚ್ಚುವರಿಯಾಗಿದ್ದಾರೆ. ಸುತ್ತಮುತ್ತ ಒಂದೂವರೆ ಕಿ.ಮೀ. ಒಳಗಡೆ ಹೊಕ್ಕಿಲ, ಮಂಜೊಟ್ಟಿ, ಮೂಡಾಯಿಬೈಲು ಸರಕಾರಿ ಹಾಗೂ ಒಂದು ಖಾಸಗಿ ಶಾಲೆ ಗಳಿದ್ದರೂ 2 ವಿದ್ಯಾರ್ಥಿಗಳು ಖಾಸಗಿಯಿಂದ ಇಲ್ಲಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.
ನಾಲ್ವರು ಶಿಕ್ಷಕರಿರುವ ಈ ಶಾಲೆಗೆ ಕಟ್ಟಡದ್ದೇ ಕೊರತೆ ಎದು ರಾಗಿದೆ. 96 ವರ್ಷ ಪೂರೈಸಿದ್ದರಿಂದ ಎಲ್ಲವೂ ಶತಮಾನದ ಪಟ್ಟಿಗೆ ಸೇರ್ಪಡೆಗೊಂಡಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭ್ಯವಿದೆ. ಸಕ್ರಿಯ ಪೋಷಕವೃಂದ, ಶಾಲಾಭಿವೃದ್ಧಿ ಸಮಿತಿ ಪ್ರಗತಿಗೆ ಶ್ರಮಿಸುತ್ತಿದೆ. ಆದರೂ ಅನುಕೂಲತೆಗಳ ಪೂರೈಸಲು ಸರಕಾರ ಹಾಗೂ ಶಿಕ್ಷಣಪ್ರೇಮಿಗಳ ಸ್ಪಂದನೆ ಬೇಕಿದೆ.
ಬೇಡಿಕೆಗಳು :
ಮೇಲ್ಛಾವಣಿ, ಹೆಂಚುಗಳು ಕುಸಿಯುವ ಹಂತದಲ್ಲಿದೆ. ವಿದ್ಯಾರ್ಥಿಗಳ ಆಕರ್ಷಣೆಗೆ ಆರ್‌ಸಿಸಿ ಕಟ್ಟಡದ ಅನಿವಾರ್ಯ ಇಲ್ಲಿನದು. ಮಕ್ಕಳ ಶಿಕ್ಷಣ ಜ್ಞಾನ ವೃದ್ಧಿಸುವ ಸಲುವಾಗಿ ಕಂಪ್ಯೂಟರ್ ಸಹಿತ ಕೊಠಡಿ ಅವಶ್ಯವಿದೆ. ಪುಸ್ತಗಳಿದ್ದರೂ ಗ್ರಂಥಾಲಯದ ಕೊರತೆ ಕಾಡುತ್ತಿದೆ. ಈಗಾಗಲೆ ಶಾಲೆಗೆ 300 ಮೀಟರ್ ಆವರಣೆಗೋಡೆ ರಚನೆಯಾಗಿದ್ದು, ಹೆಚ್ಚುವರಿ 400 ಮೀಟರ್ ಆವರಣ ಗೋಡೆ ರಚನೆಯಾಗಬೇಕಿದೆ. ಖಾಸಗಿ ಶಾಲೆಗಳಂತೆ ಸ್ಮಾರ್ಟ್ ಕ್ಲಾಸ್ ಬೇಕಿದೆ. ಪೀಠೊಪಕರಣ, ಬೆಂಚ್, ಡೆಸ್ಕ್ಗಳು 50 ವರ್ಷ ಪೂರೈಸಿದ್ದು ಆಗಲೋ ಈಗಲೋ ಎಂಬಂತಿದೆ. ಹೀಗಿರುವಾಗ ಮಕ್ಕಳ ಶಿಕ್ಷಣಕ್ಕೆ ಪೂರಕ ಅವಶ್ಯಕತೆಗಳಿಗಾಗಿ ಶಾಲೆ ಕಾಯುತ್ತಿದೆ.
ನಡ ಗ್ರಾಮದಲ್ಲಿರುವ ಶಾಲೆಯು ಈಗಿರುವ ಸೌಲಭ್ಯದಲ್ಲೇ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ಇನ್ನಷ್ಟು ಸೌಲಭ್ಯಗಳೊಂದಿಗೆ ಶಾಲೆ ಅಭಿ ವೃದ್ಧಿ ಪಥದಲ್ಲಿ ಮುನ್ನಡೆಯಲು ದಾನಿಗಳ ನೆರವನ್ನು ನಿರೀಕ್ಷಿಸಲಾಗಿದೆ.–ಪುಷ್ಪಾ , ಮುಖ್ಯಶಿಕ್ಷಕಿ, ನಡ ಹಿ.ಪ್ರಾ.ಶಾಲೆ
ಶಾಲಾಭಿವೃದ್ಧಿ ಸಮಿತಿ ಶಿಕ್ಷಕರ ಹಾಗೂ ಪಾಲಕರ ಸಹಕಾರದೊಂದಿಗೆ ಹಲವು ಅಭಿವೃದ್ಧಿ ಕಾರ್ಯಗಳನ್ನ ನಡೆಸಲು ಪ್ರಯತ್ನಿಸುತ್ತಿದ್ದು, ಇನ್ನಷ್ಟು ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡಲ್ಲಿ ಸರಕಾರಿ ಶಾಲೆ ಉಳಿಯಲು ಸಾಧ್ಯವಾಗಿದೆ. –ವಸಂತ ಗೌಡ, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ
-ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.