ಕಲ್ಲಿಮಾರ್‌ ಜಾಗ ಸಮತಟ್ಟು ಮಾಡಲು ಅನುದಾನದ ಕೊರತೆ

Team Udayavani, Sep 7, 2021, 3:30 AM IST

ಕಲ್ಲಿಮಾರ್‌ ಜಾಗ ಸಮತಟ್ಟು ಮಾಡಲು ಅನುದಾನದ ಕೊರತೆ

ಗ್ರಾಮಕ್ಕೆ ಬಸ್‌ ಸಂಚಾರ ವ್ಯವಸ್ಥೆಯನ್ನು ಆದ್ಯತೆಯಲ್ಲಿ ಕಲ್ಪಿಸಬೇಕಿದೆ. ಅಲ್ಲದೆ ಕಚ್ಚಾ ರಸ್ತೆಗಳಿಗೆ ಡಾಮರು ಹಾಕುವುದು ಅಗತ್ಯವಾಗಿದೆ. ಬಗ್ಗೆ ಸಂಬಂಧಪಟ್ಟವರ ಗಮನಸೆಳೆಯಲು ಉದಯವಾಣಿ ಸುದಿನದ ಒಂದು ಊರು-ಹಲವು ದೂರು ಅಭಿಯಾನದ ಮೂಲಕ ಪ್ರಯತ್ನಿಸಲಾಗಿದೆ.

ಕೈಕಂಬ: ಮುತ್ತೂರು ಗ್ರಾಮದ ಕಲ್ಲಿಮಾರ್‌ನಲ್ಲಿನ ಮನೆ ನಿವೇಶನದ 67 ಮಂದಿಗೆ ಹಕ್ಕು ಪತ್ರ ವಿತರಣೆಯಾಗಿ ಒಂದು ವರ್ಷವಾದರೂ ಇನ್ನು ಜಾಗ ಸಮತಟ್ಟು ಮಾಡಿಲ್ಲ. ಜಾಗವನ್ನು ಸಮತಟ್ಟು ಮಾಡಲು ಪಂಚಾಯತ್‌ಗೆ ಅನುದಾನದ ಕೊರತೆ ಎದು ರಾಗಿದೆ. ಇದು ಗುಡ್ಡ ಜಾಗವಾದ ಕಾರಣ ಹಕ್ಕುಪತ್ರ ಪಡೆದ ಫ‌ಲಾನುಭವಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದಕ್ಕೆ ಶೀಘ್ರವೇ ಸರಕಾರ ಅನುದಾನ ಬಿಡುಗಡೆಗೊಳಿಸಿ, ಪರಿಹಾರ ನೀಡುವುದು ಅಗತ್ಯವಾಗಿದೆ.

ಗಂಜಿಮಠ ಮೂಲರಪಟ್ಣ ರಸ್ತೆಯು ಹಿಂದೆ ಜಿ.ಪಂ. ರಸ್ತೆಯಾಗಿದ್ದು, ಈಗ ಲೋಕೋಪಯೋಗಿ ಇಲಾಖೆ ರಸ್ತೆಯಾಗಿ ಮೇಲ್ದರ್ಜೆಗೇರಿದೆ.

ರಸ್ತೆ ವಿಸ್ತರಣೆ ಮಾಡುವ ಸಂದರ್ಭ ತಾರೆಮಾರ್‌ ಸೈಟ್‌ನ  ಗುಡ್ಡದ ಜಾಗಗಳು ಜೇಸಿಬಿಯಿಂದ ಅಗೆಯಲ್ಪಟ್ಟಿವೆ. ಇದರಿಂದ ಗುಡ್ಡಗಳು ಜರಿದು ತಾರೆಮಾರ್‌ ಸೈಟ್‌ನಲ್ಲಿ ಮನೆ ಕಟ್ಟಿ ಕುಳಿತ ನಿವಾಸಿಗಳ ಮನೆಗಳು ಅಪಾಯದ ಪರಿಸ್ಥಿತಿಯಲ್ಲಿವೆ.

ವಿದ್ಯಾರ್ಥಿಗಳ ಕಾಲ್ನಡಿಗೆ :

ಕುಕ್ಕಟ್ಟೆ, ಕಲ್ಲಾಡಿ, ಮುತ್ತೂರು, ಕುಳವೂರು, ಸೂರ್‍ನಾಡು ಪ್ರದೇಶ ಶಾಲೆ ಮಕ್ಕಳು ಬಸ್‌ ವ್ಯವಸ್ಥೆ ಇಲ್ಲದೆ ಕಾರಣ ಮುತ್ತೂರು ಶಾಲೆಗೆ ಕಾಲ್ನಡಿಗೆಯಲ್ಲಿ ಬರುತ್ತಿದ್ದಾರೆ. ಬಸ್‌ ಇಲ್ಲದೇ ಶಾಲೆ ಮಕ್ಕಳು ಸುಮಾರು 6ರಿಂದ 8 ಕಿ.ಮೀ. ಕಾಲ್ನಡಿಗೆಯಲ್ಲಿ ಶಾಲೆಗೆ ಬರಬೇಕಾಗಿದೆ. ಶಾಲೆ ಸಮಯದಲ್ಲಿ ಕುಕ್ಕಟ್ಟೆ, ಕಲ್ಲಾಡಿ, ಮುತ್ತೂರು, ಕುಳವೂರು, ಸೂರ್‍ನಾಡು ಪ್ರದೇಶಗಳಿಗೆ ಸರಕಾರಿ ಅಥವಾ ಖಾಸಗಿ ಬಸ್‌ ವ್ಯವಸ್ಥೆ ಕಲ್ಪಿಸಬೇಕಿದೆ.

ಇತರ ಸಮಸ್ಯೆಗಳೇನು? :

  • ಮುತ್ತೂರು ಶ್ಮಶಾನ ಬಳಿ ಗುಡ್ಡ ಅಗೆದಿರುವುದರಿಂದ ಶ್ಮಶಾನ ಅಪಾಯದಲ್ಲಿದೆ.
  • ಮೂಲರಪಟ್ಣ ಸೇತುವೆ ಅದಷ್ಟು ಬೇಗ ಲೋಕಾರ್ಪಣೆಯಾಗಬೇಕಿದೆ.
  • ತಾರೆಮಾರ್‌ ಸೈಟ್‌ಗೆ ಹೊಸ ರಸ್ತೆಯನ್ನು ನಿರ್ಮಿಸಬೇಕಿದೆ.
  • ತಾರೆಮಾರ್‌ ಬೆಜ್ಜೆ ರಸ್ತೆ ನಾದುರಸ್ತಿಯಲ್ಲಿದ್ದು ಹೊಂಡಮಯವಾಗಿದೆ. ಅಲ್ಲಿ ಡಾಮರು ಕಾಮಗಾರಿಯಾಗಬೇಕಿದೆ.
  • ಹೊಸ ರೇಶನ್‌ ಕಾರ್ಡ್‌ ನೋಂದಾಯಿಸಿ ಒಂದು ವರ್ಷವಾದರೂ ಹೊಸ ರೇಶನ್‌ ಕಾರ್ಡ್‌ ಇನ್ನು ಬಂದಿಲ್ಲ. ಇದರಿಂದ ಶಾಲೆ ಮಕ್ಕಳಿಗೆ ಅದಾಯ ಪ್ರಮಾಣ ಪತ್ರ, ಪಡಿತರ, ಆಯುಷ್ಮಾನ್‌ ಕಾರ್ಡ್‌, ವಿದ್ಯಾರ್ಥಿ ವೇತನ ಮೊದಲಾದವುಗಳಿಗೆ ಭಾರೀ ತೊಂದರೆಯಾಗಿದೆ.
  • ಗಂಜಿಮಠ -ಒಡ್ಡೂರು – ಮುತ್ತೂರು ರಸ್ತೆ ಡಾಮರು ಕಾಮಗಾರಿ ಆಗಬೇಕಿದೆ.
  • ಮುತ್ತೂರು ಗ್ರಾಮದಲ್ಲಿ ಕಾಲುವೆಯಲ್ಲಿ ಹೂಳು ತುಂಬಿದೆ. ಸಣ್ಣ ನೀರಾವರಿ ಇಲಾಖೆ ಈ ಬಗ್ಗೆ ಗಮನನೀಡಬೇಕಿದೆ.
  • ಮುತ್ತೂರಿಗೆ ಮಾರುಕಟ್ಟೆ ಕಟ್ಟಡ ಇಲ್ಲ. ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆ ದುರಸ್ತಿ ಅಗತ್ಯ.
  • ಗ್ರಾಮದಲ್ಲಿ ಗ್ರಾಮಕರಣಿಕರ ಕಚೇರಿ ಇಲ್ಲ. ಖಾಯಂ ಗ್ರಾಮ ಕರಣಿಕರ ನೇಮಕವಾಗಬೇಕಿದೆ.
  • ಹೆರಿಗೆ ಅಸ್ಪತ್ರೆ, ತುರ್ತು ಸೇವೆ ನೀಡುವ ಸರಕಾರಿ ಆಸ್ಪತ್ರೆ ಅಗತ್ಯವಿದೆ.
  • ಇಲ್ಲೊಂದು ಐಟಿಐ ಅಗತ್ಯವಿದೆ.
  • ಕುಪ್ಪೆಪದವು ಚರ್ಚ್‌ನಿಂದ ಮುತ್ತೂರು ವರೆಗಿನ ರಸ್ತೆಗೆ ಚರಂಡಿ ಇಲ್ಲ. ಕಾಂಕ್ರೀಟ್‌ ಚರಂಡಿ ಆಗಬೇಕಿದೆ.
  • ಬಜಪೆ ಪೊಲೀಸ್‌ ಠಾಣೆಯಿಂದ ಈ ಪ್ರದೇಶ ಸುಮಾರು 15 ಕಿ.ಮೀ. ದೂರದಲ್ಲಿರುವುದರಿಂದ ಸಬ್‌ ಪೊಲೀಸ್‌ ಠಾಣೆ ಅಗತ್ಯ.

-ಸುಬ್ರಾಯ್‌ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

8

Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

2

Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

1(1

Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್‌ ದೀಪಗಳಿಂದ ಶೃಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.