ಹಬ್ಬ ಸನಿಹವಿದ್ದರೂ ಗಣೇಶ ವಿಗ್ರಹ ಕೇಳುವವರಿಲ್ಲ
ಪ್ರತಿ ವರ್ಷ ಮುಂಗಡ ಕಾಯ್ದಿರಿಸುತ್ತಿದ್ದ ಯುವಕರುಈ ಬಾರಿ ನಿರಾಸಕಿ
Team Udayavani, Sep 7, 2021, 3:57 PM IST
ಗುಂಡ್ಲುಪೇಟೆ: ಗೌರಿ-ಗಣೇಶ ಹಬ್ಬದ ಹಿನ್ನೆಲೆ ವಿಗ್ರಹ ತಯಾರಕರು ಈಗಾಗಲೇ ಗಣೇಶ ಮೂರ್ತಿಗಳನ್ನು ಸಿದ್ಧಗೊಳಿಸಿ ಮಾರಾಟಕ್ಕೆ ತಯಾರಿ ನಡೆಸಿದ್ದಾರೆ. ಆದರೆ, ಕೇಳುವವರಿಲ್ಲದೆ ಇರುವುದು ವಿಗ್ರಹ ತಯಾರಕರನ್ನ ಚಿಂತೆಗೆ ದೂಡಿದೆ.
ಹಲವು ಮಂದಿ ಗಣೇಶ ವಿಗ್ರಹ ತಯಾರಕರು ಸಾಲ ಮಾಡಿ ಬಂಡವಾಳ ಹೂಡಿಕೆ ಮಾಡಿದ್ದಾರೆ. 5 ಅಡಿ, 10 ಅಡಿ, 15 ಅಡಿ ದೊಡ್ಡ ವಿಗ್ರಹ ಗಳನ್ನು ತಯಾರಿಸಿ ಮಾರಾಟ ಮಾಡಲು ಸಿದ್ಧಗೊಳಿಸಿದ್ದಾರೆ. ಆದರೆ, ಯಾರೂ ಮುಂಗಡವಾಗಿ ಬುಕಿಂಗ್ ಮಾಡುತ್ತಿಲ್ಲ.
ಸರ್ಕಾರದ ನಿಯಮಗಳ ಅನುಸಾರ ಗಣೇಶ ಮೂರ್ತಿ ಕೊಳುತ್ತಾರೆ ಎಂಬ ಆಶಾಭಾವನೆಯಲ್ಲಿ ಹಲವು ಮಂದಿ ತಯಾರಕರು ಮಣ್ಣು, ವಾಟರ್
ಪೇಯಿಂಟ್‌ಗೆ ಬಂಡವಾಳ ಹೂಡಿ ಮನೆ ಮಂದಿ, ಕೆಲಸಗಾರರು ಸೇರಿ ಮೂರ್ತಿಗಳನ್ನು ತಯಾರು ಮಾಡಿ ಇಟ್ಟಿದ್ದೇವೆ. ಇದನ್ನು ಜನರು ತೆಗೆದುಕೊಂಡು ಹೋದರೆ ನಮ್ಮಗಳ ಜೀವನ ಸುಧಾರಣೆ ಆಗುತ್ತದೆ. ಇಲ್ಲವಾದಲ್ಲಿ ಸಾಲ ತಲೆ ಮೇಲೆ ಬರುತ್ತದೆ. ಕಳೆದ ವರ್ಷ ಮಾಡಿದ
ವಿಗ್ರಹಗಳನ್ನು ತೆಗೆದುಕೊಳ್ಳುವವರೆ ಇಲ್ಲದ ಕಾರಣ ಅವುಗಳುಹಾಗೇಉಳಿದು ಸಾಲದ ಸುಳಿಗೆ ಸಿಲುಕಿದ್ದೆವು.
ಇದನ್ನೂ ಓದಿ:ಆಸೆಗಣ್ಣಿನ ಗೊಂಬೆ ಟು ‘ಹುಣ್ಸ್ ಮಕ್ಕಿ ಹುಳ’ : ಬೆಂದ ಬದುಕಿನ ಸ್ಫೂರ್ತಿದಾಯಕ ನಡೆ
ಈ ಬಾರಿ ಅದೇ ಪುನರಾವರ್ತನೆಯಾದರೆ ಬದುಕು ಬೀದಿಗೆ ಬೀಳುತ್ತದೆ ಎಂದು ವಿಗ್ರಹ ತಯಾರಕ ನಾಗರಾಜು ಅಳಲು ತೋಡಿಕೊಂಡರು.
ದೊಡ್ಡ ಗಾತ್ರದ ವಿಗ್ರಹಗಳಿಗಂತೂ ಬೇಡಿಕೆ ಇಲ್ಲವಾಗಿದೆ. ಸಂಘ-ಸಂಸ್ಥೆಗಳಿಂದ, ಗ್ರಾಮಸ್ಥರಿಂದ ದೊಡ್ಡ ಗಣೇಶ ವಿಗ್ರಹಗಳಿಗೆ ಎರಡು ವರ್ಷದ ಹಿಂದೆ ಹೆಚ್ಚು ಬೇಡಿಕೆ ಇತ್ತು. ಈ ಸಂದರ್ಭದಲ್ಲಿ ಲಾಭವನ್ನೂ ಕಾಣುತ್ತಿದ್ದೇವು. ಕೋವಿಡ್ ಕಾರಣ ಎಲ್ಲರ ಬದುಕು ವಿಷಮವಾಗಿದೆ ಎಂದು ಮೂರ್ತಿ ತಯಾರಕ ಮಹಿಳೆ ಲಕ್ಷಮ್ಮ ಬೇಸರದ ನುಡಿಗಳನ್ನಾಡಿದರು.
ಕಳೆದ 65 ವರ್ಷದಿಂದಲೂ ಗಣೇಶ ವಿಗ್ರಹ ತಯಾರಿಸಿ ಮಾರಾಟ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದೆವು. ಆದರೆ, ಕಳೆದ ವರ್ಷ
ಗಣೇಶ ಮೂರ್ತಿ ಖರೀದಿಸುವವರು ಇಲ್ಲದ ಕಾರಣ ಜೀವನ ನಡೆಸುವುದೇ ಕಷ್ಟಕರವಾಗಿತ್ತು. ಕೋವಿಡ್ ಸಂದರ್ಭದಲ್ಲಿ ಅನೇಕರಿಗೆ ಸರ್ಕಾರ ದಿಂದ ಪರಿಹಾರ ಸಿಕ್ಕಿತಾದರೂ ಮೂರ್ತಿ ತಯಾರಕರಿಗೆ ಯಾವ ಪರಿಹಾರ ದೊರಲಿಲ್ಲ ಎಂದು ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.