ಮರು ನಿರ್ಮಾಣ ಕಾಮಗಾರಿ ನನೆಗುದಿಗೆ
Team Udayavani, Sep 8, 2021, 3:00 AM IST
ಕಡಬ: ರಾಮಕುಂಜ ಸಮೀಪದ ಆತೂರಿನಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ಹಾಗೂ ಅಲ್ಲಿನ ತಾತ್ಕಾಲಿಕ ಪೊಲೀಸ್ ಚೌಕಿ ಧ್ವಂಸ ಪ್ರಕರಣ ನಡೆದು 2 ತಿಂಗಳು ಕಳೆದರೂ ಪೊಲೀಸ್ ಚೌಕಿಯ ಮರು ನಿರ್ಮಾಣದ ಮಾತ್ರ ತಳ ಪಾಯದ ಹಂತದಲ್ಲಿಯೇ ನನೆಗುದಿಗೆ ಬಿದ್ದಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಜೂ. 28 ರಂದು ಕಡಬ ಪೊಲೀಸರು ವಾಹನ ತಪಾಸಣೆೆ ಮಾಡುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಮಿನಿ ಲಾರಿ ಢಿಕ್ಕಿ ಹೊಡೆದು ಆತ ಮೃತಪಟ್ಟಾಗ ಕಿಡಿಗೇಡಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ, ದಾನಿಗಳ ನೆರವಿನಿಂದ ನಿರ್ಮಾಣವಾಗಿದ್ದ ಪೊಲೀಸ್ ಚೌಕಿಯನ್ನು ಧ್ವಂಸ ಮಾಡಿ ವಿಕೃತಿ ಮೆರೆದಿದ್ದರು. ಹೆಚ್ಚಿನ ಬಲದೊಂದಿಗೆ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. ಘಟನೆಗೆ ಸಂಬಂಧಿಸಿ 20ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಒಟ್ಟು 16 ಜನರ ಬಂಧನವಾಗಿತ್ತು. ಘಟನೆಯ ಮರುದಿನವೇ ಪೊಲೀಸ್ ಚೌಕಿಯನ್ನು ಮರು ನಿರ್ಮಿಸುವ ಉದ್ದೇಶದಿಂದ ಲೋಕೋಪಯೋಗಿ ಇಲಾಖಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ ಇಲಾಖಾಧಿಕಾರಿಗಳು ಸರ್ವೇ ಕಾರ್ಯ ಮಾಡಿ ಜಾಗ ಗುರುತಿಸಿಲಾಗಿತ್ತು. ದಾನಿಗಳ ನೆರವಿನಿಂದ ಮರಳು, ಜಲ್ಲಿ, ಕೆಂಪುಕಲ್ಲು ಸೇರಿದಂತೆ ಆಗತ್ಯ ಸಾಮಗ್ರಿಗಳನ್ನು ತರಿಸಿ ಚೌಕಿ ನಿರ್ಮಾಣಕ್ಕೆ ಅಡಿಪಾಯ ತೋಡುವ ಕಾರ್ಯ ಕೂಡ ನಡೆಯಿತು. ಆದರೆ ಇಷ್ಟೆಲ್ಲ ಆಗಿ ತಿಂಗಳು ಕಳೆದರೂ ತಳಪಾಯದ ಹಂತದಿಂದ ಕಾಮಗಾರಿ ಮುಂದುವರಿಯಲಿಲ್ಲ.
ಬಸ್ ತಂಗುದಾಣಕ್ಕೆ ಶಿಲಾನ್ಯಾಸ:
ಚೌಕಿ ನಿರ್ಮಿಸಲು ಉದ್ದೇಶಿಸಿದ ಸ್ಥಳದ ಪಕ್ಕದಲ್ಲೇ ಆಲಂಕಾರು ಸಿ.ಎ. ಬ್ಯಾಂಕಿನ ಕೊçಲ ಶಾಖಾ ಕಟ್ಟಡದ ಬಳಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಬಸ್‌ತಂಗುದಾಣ, ಸಾರ್ವಜನಿಕ ಶೌಚಾಲಯ ಹಾಗೂ ಪೊಲೀಸರ ಅತಿಥಿಗೃಹ ಗಳನ್ನೊಳಗೊಂಡ ಕಟ್ಟಡ ನಿರ್ಮಾಣಕ್ಕೆ ಸಚಿವ ಎಸ್.ಅಂಗಾರ ಕೆಲವು ದಿನಗಳ ಹಿಂದೆ ಶಿಲಾನ್ಯಾಸ ನೆರ ವೇರಿಸಿದ್ದಾರೆ. ಸಚಿವರು ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿ ಶಿಲಾನ್ಯಾಸ ನಡೆದಿದ್ದು ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ. ಈ ಮಧ್ಯೆ ಕೊçಲದಲ್ಲಿ ಪೊಲೀಸ್ ಔಟ್‌ಪೋಸ್ಟ್ ನಿರ್ಮಾಣ ಮಾಡಬೇಕೆಂದು ಸಚಿವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.
ಅಕ್ರಮಗಳಿಗೆ ಕಡಿವಾಣ ಹಾಕಿದ್ದ ಪೊಲೀಸ್ ಚೌಕಿ :
ಲಾಕ್‌ಡೌನ್ ವೇಳೆ ಆತೂರಿನಲ್ಲಿ ಪೊಲೀಸ್ ಚೆಕ್‌ಪೋಸ್ಟ್ ರಚನೆ ಮಾಡಲಾಗಿತ್ತು. ಬಳಿಕ ಸ್ಥಳೀಯ ಬೀಟ್ ಪೊಲೀಸ್ ಹರೀಶ್ ಅವರ ಮುತು ವರ್ಜಿಯಲ್ಲಿ ದಾನಿಗಳ ನೆರವಿನಿಂದ ತಾತ್ಕಲಿಕ ನೆಲೆಯಲ್ಲಿ ಪೊಲೀಸ್ ಚೌಕಿ ನಿರ್ಮಿಸಲಾಗಿತ್ತು. ಅದು ದನ ಕಳ್ಳರು, ಮರಗಳ್ಳರು, ಅಕ್ರಮ ದಂಧೆಕೋರರು ಹಾಗೂ ಪುಂಡು ಪೋಕರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು. ಚೆಕ್ ಪೋಸ್ಟ್‌ನಲ್ಲಿ ವಾಹನ ತಪಾಸಣೆ ಕಟ್ಟುನಿಟ್ಟಾದಾಗ ಅಕ್ರಮ ದಂಧೆಕೋರರು ಪೊಲೀಸರ ವಿರುದ್ಧ ಕುದಿಯಲಾರಂಭಿಸಿದರು. ಚೌಕಿ ಬಳಿ ನಡೆದ ಅಪಘಾತಕ್ಕೆ ಪೊಲೀಸರೇ ಕಾರಣವೆನ್ನುವಂತೆ ಗಲಾಟೆ ಎಬ್ಬಿಸಿದ ಕಿಡಿಗೇಡಿಗಳು ತಮಗೆ ಬೇಡವಾದ ಪೊಲೀಸ್ ಚೌಕಿಯನ್ನು ಧ್ವಂಸ ಮಾಡಿ ಪೊಲೀಸರ ವಿರುದ್ಧವೇ ಏರಿಹೋಗಿದ್ದರು.
ಆತೂರಿನಲ್ಲಿದ್ದ ತಾತ್ಕಾಲಿಕ ಪೊಲೀಸ್ ಚೌಕಿ ನಮ್ಮ ಕರ್ತವ್ಯನಿರತ ಸಿಬಂದಿಗೆ ಬಿಸಿಲು, ಗಾಳಿ ಮಳೆಯಿಂದ ರಕ್ಷಣೆ ಒದಗಿಸುತ್ತಿತ್ತು. ಆದರೆ ಅದನ್ನು ಕಿಡಿಗೇಡಿಗಳು ಪುಡಿಗೈದಿರುವುದು ದುರ ದೃಷ್ಟಕರ. ಅಲ್ಲಿ ಶೀಘ್ರದಲ್ಲಿ ಪೊಲೀಸ್ ಚೌಕಿ ನಿರ್ಮಿಸುವ ಪ್ರಯತ್ನದಲ್ಲಿದ್ದೇವೆ. –ರುಕ್ಮ ನಾಯ್ಕ, ಕಡಬ ಎಸ್ಐ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.