
ಭೂಗರ್ಭ ತಜ್ಞರಿಂದ ಭೂಕಂಪದ ಅಧ್ಯಯನ
Team Udayavani, Sep 7, 2021, 7:31 PM IST

ವಿಜಯಪುರ:ಶನಿವಾರ ಮಧ್ಯರಾತ್ರಿ ಜಿಲ್ಲೆಯ ಜನರನ್ನು ಜೀವ ಭಯದಲ್ಲಿ ಬೀದಿಯಲ್ಲಿ ನಿಲ್ಲಿಸಿದ್ದ ಭೂಕಂಪದ ಅಧ್ಯಯನ ನಡೆಸಲು ಭೂಗರ್ಭ ತಜ್ಞರು ಜನರಿಂದ ಅನುಭವ, ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಸೋಮವಾರ ವಿಜಯಪುರ ನಗರ ಹಾಗೂ ಜಿಲ್ಲೆಗ ವಿವಿಧ ತಾಲೂಕುಗಳ ಹಳ್ಳಿಗಳಿಗೆ ಭೇಟಿ ನೀಡಿದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ತಜ್ಞರ ತಂಡ ಭೂಕಂಪದ ಅನುಭವ ಆಗಿರುವ ಜನರಿಂದ ಮಾಹಿತಿ ಸಂಗ್ರಹಿಸಿತು.
ವಿಜಯಪುರ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ವಿಜಯಪುರ ತಹಶೀಲ್ದಾರ್ ಸಿದ್ದರಾಯ ಬೋಸಗಿ ಹಾಗೂ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ತಜ್ಞರ ತಂಡ ಭೂಕಂಪದ ಮಾಹಿತಿ ಸಂಗ್ರಹಿಸಿತು.
ಇದನ್ನೂ ಓದಿ:ರಾಜ್ಯದಲ್ಲಿಂದು 851 ಜನರಲ್ಲಿ ಕೋವಿಡ್ ಸೋಂಕು ದೃಢ : 790 ಸೋಂಕಿತರು ಗುಣಮುಖ
ಭೂಕಂಪ ಆಗಿರುವ ನಗರದ ಟೇಕಡೆ ಗಲ್ಲಿ, ಟಕ್ಕೆ, ಕೀರ್ತಿ ನಗರ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ತಜ್ಞರ ತಂಡ ಜನರಿಂದ ಭೂಕಂಪ ಸಂಭವಿಸಿದ ಕುರಿತು ಅವರಿಗಾದ ಅನುಭವ ಸಂಗ್ರಹಿಸಿತು. ಭೂಕಂಪ ಸಂಭವಿಸಿದ ಸಮಯ,ಭೂಕಂಪದ ಸಂದರ್ಭದಲ್ಲಿ ಭೂಮಿಯ ಆಳದಿಂದ ಕೇಳಿ ಬಂದ ಭಾರಿ ಸದ್ದಿನ ಪ್ರಮಾಣ, ಇದರಿಂದ ಮನೆಗಳಲ್ಲಿ ಮಲಗಿದವರಿಗೆ ಆಗಿರುವ ಅನುಭವ, ಎಚ್ಚರ ಇದ್ದವರಿಗೆ ಆಗಿರುವ ಅನುಭವಗಳ ಕುರಿತು ಪ್ರಶ್ನೆ ಮಾಡಿ ಮಾಹಿತಿ ಸಂಗ್ರಹಿಸಿತು.
ನಗರದಲ್ಲಿ ಅಧ್ಯಯನ ನಡೆಸಿದ ನಂತರೆ ಭೂಕಂಪ ಸಂಭವಿಸಿದ ಜಿಲ್ಲೆಯ ಬಬಲೇಶ್ವರ, ತಿಕೋಟಾ ತಾಲೂಕುಗಳಿಗೆ ಭೇಟಿ ನೀಡಿ ಭೂಕಂಪದ ಕುರಿತು ಜನರಿಂದ ಮಾಹಿತಿ ಸಂಗ್ರಹಿಸಿದರು. ಆಲಮಟ್ಟಿಯಲ್ಲಿರುವ ಭೂಕಂಪನ ಪ್ರಮಾಣದ ದಾಖಲೀಕರಣ ರಿಕ್ಟರ್ ಮಾಪನದಲ್ಲಿ ಶನಿವಾರ ರಾತ್ರಿಯ ಭೂಕಂಪನದ ಪ್ರಮಾಣದ ಕುರಿತು ಜನರಿಗೆ ಮಾಹಿತಿ ನೀಡಿದ ತಜ್ಞರ ತಂಡ, 3.9 ಪ್ರಮಾಣದ ಲಘು ಭೂಕಂಪ ಸಂಭವಿಸಿದೆ. ಇದರಿಂದ ದೊಡ್ಡ ಮಟ್ಟದ ಅಪಾಯ ಸಂಭವಿಸದು ಎಂಬ ಕುರಿತು ತಿಳಿವಳಿಕೆ ನೀಡಲಾಯಿತು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ

Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.