ಮುಸ್ಲಿಂ ಮಹಿಳೆ ಕೈಯಲ್ಲಿಅರಳುವ ಗಣೇಶ
| ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾದ ಸುಮನ್ | ಸ್ವಂತ ಮನೆಯಿಲ್ಲ-ಮೂರ್ತಿ ತಯಾರಿಕಾ ಶೆಡ್ ಎಲ್ಲ
Team Udayavani, Sep 8, 2021, 1:13 PM IST
ವರದಿ: ಬಸವರಾಜ ಹೂಗಾರ
ಹುಬ್ಬಳ್ಳಿ: ಮುಸ್ಲಿಂ ಮಹಿಳೆಯೊಬ್ಬರು ಹಲವಾರು ವರ್ಷಗಳಿಂದ ಗಣೇಶ ಮೂರ್ತಿಗಳತಯಾರಿಕೆಯಲ್ಲಿ ತೊಡಗಿದ್ದು, ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿ ಗಮನ ಸೆಳೆದಿದ್ದಾರೆ.
ಮೂಲತಃ ಹಾವೇರಿ ಜಿಲ್ಲೆ ಹಾನಗಲ್ಲದವರಾದ ಇಲ್ಲಿನ ಗೋಪನಕೊಪ್ಪದ ನಿವಾಸಿ ಸುಮನ್ ಹಾವೇರಿ ಎಂಬ ಮುಸ್ಲಿಂ ಮಹಿಳೆ ಹಲವಾರು ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇಲ್ಲಿನ ಗೋಪನಕೊಪ್ಪದ ಮೂರ್ತಿ ಕಲಾವಿದ ಅರುಣ ಯಾದವ ಅವರ ಬಳಿ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಸುಮನ್ ಎಲ್ಲ ಅಳತೆಯ ಗಣೇಶ ಮೂರ್ತಿ ತಯಾರಿಸುತ್ತಾರೆ. ಗಣೇಶ ಮೂರ್ತಿಗೆ ಬೇಕಾಗುವ ಎಲ್ಲ ಕಚ್ಚಾ ವಸ್ತುಗಳನ್ನು ಸಹ ಸುಮನ್ ಅವರು ತಯಾರಿ ಮಾಡಿಕೊಳ್ಳುತ್ತಾರೆ.
ಸುಮಾರು 7-8 ತಿಂಗಳ ಕಾಲ ಕಲಾವಿದರ ಬಳಿ ಕೆಲಸ ನಿರ್ವಹಿಸುವ ಅವರು 1 ಅಡಿಯಿಂದ 10 ಅಡಿ ಗಣೇಶ ಮೂರ್ತಿ ತಯಾರಿಕೆಯಲ್ಲಿಕೈಜೋಡಿಸುತ್ತಾರೆ.ಜೊತೆಗೆ ತಾವೇ ಸ್ವತಃ ಗಣೇಶ ಮೂರ್ತಿಗಳನ್ನು ಸಿದ್ದಪಡಿಸುತ್ತಾರೆ.
ಗಣೇಶನ ಶೆಡ್ ಎಲ್ಲ: ಮನೆ ಇಲ್ಲದ ಸುಮನ್ ಹಾವೇರಿ ಅವರಿಗೆ ವರ್ಷದಲ್ಲಿ8 ತಿಂಗಳ ಕಾಲ ಅರುಣ ಯಾದವ ಅವರ ಗಣೇಶ ಮೂರ್ತಿ ತಯಾರು ಮಾಡುವ ಶೆಡ್ ಮನೆಯಾಗಿದೆ. ವರ್ಷಪೂರ್ತಿ ಅರುಣ ಯಾದವ ಅವರ ಗಣೇಶ ಮೂರ್ತಿ ತಯಾರಿಸುವ ಶೆಡ್‌ನಲ್ಲಿ ತಮ್ಮ ಜೀವನ ಕಳೆಯುವ ಸುಮನ್ ಅವರು,8 ತಿಂಗಳಕಾಲ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನುಳಿದ ಸಮಯದಲ್ಲಿ ಮನೆಗಳ ಕೆಲಸಕ್ಕೆ ತೆರಳುತ್ತಾರೆ. ಅವರ ಪತಿ ಮೆಹಬೂಬ್ ಹಾವೇರಿ ಅವರು ಕೂಲಿ ಕೆಲಸ ಮಾಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.