ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಸಂಭ್ರಮದ ಮೊಂತಿ ಫೆಸ್ಟ್
Team Udayavani, Sep 8, 2021, 1:35 PM IST
ಶಿರ್ವ : ಉಡುಪಿ ಕೆಥೋಲಿಕ್ ಧರ್ಮಪ್ರಾಂತ್ಯದ ಶಿರ್ವ ವಲಯದ ಪ್ರಮುಖ ಚರ್ಚುಗಳಲ್ಲೊಂದಾದ ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ವಲಯದ ಪ್ರಧಾನ ಧರ್ಮಗುರು ರೆ| ಫಾ| ಡೆನ್ನಿಸ್ ಡೇಸಾ ನೇತೃತ್ವದಲ್ಲಿ ತೆನೆ ಹಬ್ಬದ (ಮೊಂತಿ ಫೆಸ್ಟ್) ಸಂಭ್ರಮಾಚರಣೆ ಇಂದು(ಸೆ.8 ಬುಧವಾರ) ರಂದು ಸಂಪನ್ನಗೊಂಡಿತು.
ಕೋವಿಡ್ ನಿಯಮ ಪಾಲಿಸಿಕೊಂಡು ಭಕ್ತಾಧಿಗಳ ಉಪಸ್ಥಿತಿಯಲ್ಲಿ ಪ್ರಧಾನ ಧರ್ಮಗುರು ರೆ| ಫಾ| ಡೆನ್ನಿಸ್ ಡೇಸಾ ಸಹಾಯಕ ಧರ್ಮಗುರುಗಳಾದ ರೆ| ಫಾ| ನೆಲ್ಸನ್ ಪೆರಿಸ್ ಮತ್ತು ರೆ| ಫಾ| ರೋಲ್ವಿನ್ ಅರಾನ್ಹಾ ಬಲಿ ಪೂಜೆ ನೆರವೇರಿಸಿ ಭಕ್ತಾಧಿಗಳಿಗೆ ತೆನೆ ವಿತರಿಸಿದರು. ಕೋವಿಡ್ ನಿಂದಾಗಿ ಸಂಪ್ರದಾಯದಂತೆ ಮಾತೆ ಕನ್ಯಾ ಮೇರಿಯ ವಿಗ್ರಹದ ಮೆರವಣಿಗೆ ನಡೆಯದೆ ಚರ್ಚ್ ನಲ್ಲಿಯೇ ಭಕ್ತಾಧಿಗಳು ಮೂರ್ತಿಗೆ ಪುಷ್ಪಾರ್ಚನೆ ನಡೆಸಿದರು.
ಇದನ್ನೂ ಓದಿ : ಗಾಂಜಾ ನಶೆಯಲ್ಲಿ ಮಚ್ಚು, ಲಾಂಗು ಝಳಪಿಸಿ ಪೊಲೀಸರ ಅತಿಥಿಗಳಾದ ಯುವಕರು
ಚರ್ಚ್ ಆರ್ಥಿಕ ಮಂಡಳಿಯ ಕಾರ್ಯದರ್ಶಿ ಲೀನಾ ಮಚಾದೋ, ಸದಸ್ಯರಾದ ವಿಲ್ಸನ್ ರೊಡ್ರಿಗಸ್, ಮೆಲ್ವಿನ್ ಅರಾನ್ಹಾ,ಜೂಲಿಯಾನ್ ರೊಡ್ರಿಗಸ್,ನೋರ್ಬರ್ಟ್ ಇ. ಮಚಾದೋ, ಪುಷ್ಪಾ ಫೆರ್ನಾಂಡಿಸ್, ಪ್ರಮುಖರಾದ ಪೀಟರ್ ಕೋರ್ಡಾ, ಡೆನ್ನಿಸ್ ಮತಾಯಸ್, ಪ್ರೊ | ರೊನಾಲ್ಡ್ ಮೊರಾಸ್, ಚರ್ಚ್‌ನ ಆರ್ಥಿಕ ಸಮಿತಿಯ ಸದಸ್ಯರು, ನೇಟಿವಿಟಿ ಕಾನ್ವೆಂಟ್ ನ ಧರ್ಮ ಭಗಿನಿಯರು, ವಿವಿಧ ವಾರ್ಡ್‌ಗಳ ಗುರಿಕಾರರು, ಭಕ್ತಾಧಿಗಳು ಉಪಸ್ಥಿತರಿದ್ದರು.
ಶಿರ್ವ ವಲಯದ ಪಿಲಾರು, ಪೆರ್ನಾಲು, ಪಾಂಬೂರು, ಕಳತ್ತೂರು ಮತ್ತು ಮೂಡುಬೆಳ್ಳೆ ಚರ್ಚುಗಳಲ್ಲಿ ಕೂಡಾ ಸರಳವಾಗಿ ಬಲಿ ಪೂಜೆಯೊಂದಿಗೆ ತೆನೆ ಹಬ್ಬದ ಸಂಭ್ರಮ ಸಂಪನ್ನಗೊಂಡಿತು.
ಇದನ್ನೂ ಓದಿ : ವಿಧಾನ ಸಭೆಯಲ್ಲಿ ಗದ್ದಲಗಳ ತಡೆಗೆ ಅರ್ಧ ದಿನದ ಜಂಟಿ ಅಧಿವೇಶನ : ಕಾಗೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.