ರೇಷ್ಮೆ ಬೆಲೆ ಹೆಚ್ಚಳ: ಸಂಕಷ್ಟದಲ್ಲಿ ರೇಷ್ಮೆ ಉದ್ಯಮ
ರಾಜ್ಯದಲ್ಲಿ 25 ಮೆಟ್ರಿಕ್ ಟನ್‌ಗೆ ಬೇಡಿಕೆ; ರೇಷ್ಮೆ ಉತ್ಪಾದನೆ 22 ಮೆಟ್ರಿಕ್ ಟನ್ ; ಇಳುವರಿ ಕುಸಿತ
Team Udayavani, Sep 8, 2021, 3:44 PM IST
ದೊಡ್ಡಬಳ್ಳಾಪುರ: ಕೋವಿಡ್ ಸಂಕಷ್ಟ, ರೇಷ್ಮೆ ಬೆಲೆ ವಿಪರೀತ ಏರಿಕೆ ಹಾಗೂ ಮಾರುಕಟ್ಟೆ ವೈಪರಿತ್ಯಗಳಿಂದಾಗಿ ರೇಷ್ಮೆ ಬಟ್ಟೆ ತಯಾರಿಕೆ ದಿನೇ ದಿನೇ ಇಳಿಮುಖವಾಗುತ್ತಿದ್ದು, ರೇಷ್ಮೆ ಬಟ್ಟೆ ತಯಾರಕರು ನಷ್ಟ ಸಿಲುಕಿದ್ದಾರೆ.
ದೊಡ್ಡಬಳ್ಳಾಪುರ ನಗರದಲ್ಲಿ ಸುಮಾರು 20 ಸಾವಿರ ಮಗ್ಗಗಳಿದ್ದು, ಶೇ.10 ಭಾಗ ಮಾತ್ರ ರೇಷ್ಮೆ ಬಟ್ಟೆ ತಯಾರಿಕೆ ನಡೆಯುತ್ತಿದೆ.ಸಾಧಾರಣ ವಾಗಿ 2.5 ಸಾವಿರ ರೂಗಳಿದ್ದ ಕಚ್ಚಾ ರೇಷ್ಮೆ ಬೆಲೆ ಈಗ 3.5 ಸಾವಿರ ದಾಟಿದ್ದು,ಸಿದ್ದ ಹುರಿ ರೇಷ್ಮೆ 4 ಸಾವಿರ ರೂ ದಾಟಿದೆ. ಚೈನಾ ರೇಷ್ಮೆ5 ಸಾವಿರ ದಾಟಿದೆ. ಆದರೆ ಇದಕ್ಕೆ ಪೂರಕವಾಗಿ ಬಟ್ಟೆ ಬೆಲೆ ಮಾತ್ರ ಹೆಚ್ಚಾಗಿಲ್ಲ.
ಈಗಾಗಲೇ ಬಹಳಷ್ಟು ಮಂದಿ ಉದ್ಯೋಗ ತೊರೆದಿದ್ದು, ರೇಷ್ಮೆ ಬಟ್ಟೆ ತಯಾರಿಸುವವರು ಬೆರಳೆಣಿಕೆ ಮಂದಿಯಾಗಿದ್ದಾರೆ. ಹಂತ ಹಂತವಾಗಿ ಅವರೂ ವಿದಾಯ ಹೇಳುವ ಹಂತದಲ್ಲಿದ್ದಾರೆ.
ಕುಸಿಯುತ್ತಿರುವ ರೇಷ್ಮೆ ಇಳುವರಿ : ರೇಷ್ಮೆ ಬೆಳೆಯಲು ಬೇಕಾದ ಇಪ್ಪು ನೇರಳೆ ಬೇಸಾಯ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ದಶಕದ ಹಿಂದೆ 90 ಸಾವಿರ ಹಕ್ಟೇರ್ ಇದ್ದ ರೇಷ್ಮೆ ಕೃಷಿ ಬೇಸಾಯ ಕಳೆದ ವರ್ಷದಲ್ಲಿ 60 ಸಾವಿರಕ್ಕೆ ಇಳಿದಿದೆ. ದೇಶದ ಶೇ.70
ಪಾಲು ರೇಷ್ಮೆ ಉತ್ಪಾದನೆಯಾಗುತ್ತಿದ್ದ ರಾಜ್ಯದಲ್ಲಿ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.
ಇತ್ತೀಚಿನ ದಿನಗಳಲ್ಲಿ ರೈತರು ರೇಷ್ಮೆ ಕೃಷಿಯಿಂದ ವಿಮುಖರಾಗುತ್ತಿರುವುದರಿಂದ ಅಗತ್ಯವಿರು ವಷ್ಟು ರೇಷ್ಮೆ ಸರಬರಾಜಾಗುತ್ತಿಲ್ಲ. ರಾಜ್ಯದಲ್ಲಿ ಅಗತ್ಯವಿರುವುದು 25 ಮೆಟ್ರಿಕ್ ಟನ್‌ಗಳಷ್ಟು. ಆದರೆ 22ಮೆಟ್ರಿಕ್ ಟನ್ ರೇಷ್ಮೆ ಮಾತ್ರ ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲಿ ರೇಷ್ಮೆ ಹೆಚ್ಚು ಬೆಳೆಯುವ ಚಿಕ್ಕಬಳ್ಳಾಪುರ, ಕೋಲಾರ, ಶಿಡ್ಲಗಟ್ಟ, ರಾಮನಗರ, ಮಳವಳ್ಳಿಯ ತಳಗವಾದಿ ಮೊದಲಾದ ಪ್ರದೇಶಗಳಲ್ಲಿಯೂ ರೇಷ್ಮೆ
ಇಳುವರಿ ಕಡಿಮೆಯಾಗುತ್ತಿದೆ.
ಇದನ್ನೂ ಓದಿ:ಅನುಶ್ರೀ ಹೇರ್ ಟೆಸ್ಟ್ ಏಕೆ ಮಾಡಿಸಿಲ್ಲ : ಇಂದ್ರಜೀತ್ ಲಂಕೇಶ್
ಕೋವಿಡ್-19 ಲಾಕ್‌ಡೌನ್ ಹಾಗೂ ಸಭೆ ಸಮಾರಂಭಗಳಿಗೆ ನಿರ್ಬಂಧಕಾರಣದಿಂದಾಗಿ ರೇಷ್ಮೆ ಸೀರೆಗಳ ಮಾರಾಟ ತೀವ್ರವಾಗಿ ಕುಸಿದಿದೆ. ಸೀರೆಗಳಿಗೆ ಸೂಕ್ತ ಬೆಲೆಯಿಲ್ಲದೇ ಸಹಸ್ರಾರು ಸೀರೆಗಳುದಾಸ್ತಾನಾಗುತ್ತಿದ್ದು ರೇಷ್ಮೆ ಬಟ್ಟೆ ತಯಾರಕರುಕಂಗಾಲಾಗಿದ್ದಾರೆ.ಕೋವಿಡ್ ಸಂಕಷ್ಟ ಉದ್ಬವಿಸುವುದಕ್ಕೂ ಮುನ್ನವೇ ಗಗನಕ್ಕೇರಿದ ರೇಷ್ಮೆ ಬೆಲೆ, ನೇಯ್ದ ಬಟ್ಟೆಗೆ ಸೂಕ್ತ ಮಾರುಕಟ್ಟೆ ಬೆಲೆ ಇಲ್ಲದೇ ನೇಯ್ಗೆ ಉದ್ಯಮ ತತ್ತರಿಸುತ್ತಿದೆ.
ಸಹಸ್ರಾರು ಸೀರೆಗಳ ದಾಸ್ತಾನು : ರೇಷ್ಮೆ ನೂಲಿನ ಬೆಲೆ ಏರಿಕೆಗೆ ಅನುಗುಣವಾಗಿ ಬಟ್ಟೆಗಳಿಗೆ ಬೆಲೆ ಇಲ್ಲ. ರೇಷ್ಮೆ ಸೀರೆಗಳ ಖರೀದಿದಾರರು ಕಡಿಮೆ ಬೆಲೆಗೆ ಕೇಳಲಾರಂಭಿಸಿದ್ದಾರೆ. ನೇಕಾರರು ವಿಧಿಯಿಲ್ಲದೇ ಮನೆಗಳಲ್ಲಿಯೇ ಸೀರೆಗಳನ್ನು ದಾಸ್ತಾನು ಮಾಡುವ ಪರಿಸ್ಥಿತಿ ಒದಗಿ ಬಂದಿದ್ದು, ಬಹುತೇಕ ಎಲ್ಲಾ ರೇಷ್ಮೆ ಉದ್ಯಮಿಗಳ ಮನೆಗಳಲ್ಲಿ ಅವರ ಸುಸ್ಥಿತಿಗನುಸಾರವಾಗಿ ದಾಸ್ತಾನು ಮಾಡುತ್ತಿದ್ದಾರೆ. ವಾರ್ಪುಗಳನ್ನು ಹಾಕಿಸಿ ಅದನ್ನು ನೇಯಿಸಿದರೆ ನಷ್ಟ ಎಂದು ಅಲ್ಲಿಗೇ ನಿಲ್ಲಿಸಿರುವ ನೇಕಾರರು ಇದ್ದಾರೆ. ಇನ್ನು ಹಲವು ನೇಕಾರರು ರೇಷ್ಮೆ ಉದ್ಯಮದಿಂದ ಆರ್ಟ್ ಸಿಲ್ಕ್, ಪಾಲಿಯಸ್ಟರ್ ನೂಲಿನ ಸೀರೆಗಳ ಉತ್ಪಾದನೆಗೆ ವಾಲಿದ್ದು ಇದು ನೇಕಾರರಲ್ಲಿಯೇ ಸ್ಪರ್ಧೆ ಏರ್ಪಡಲು ಕಾರಣವಾಗುತ್ತಿದೆ.
ಅವಲಂಬಿತ ಉದ್ಯಮಗಳಿಗೆ ಹೊಡೆತ: ರೇಷ್ಮೆ ಸೀರೆಗಳ ತಯಾರಿಕೆ ಕುಸಿತವಾಗುತ್ತಿರುವುದರಿಂದ ನೇಕಾರಿಕೆಯನ್ನು ಅವಲಂಬಿಸಿರುವ ಹುರಿಮಿಷನ್, ರೇಷ್ಮೆ ಬಣ್ಣ ಮಾಡುವ ಮಾಲಿಕರು, ಹಾಗೂಕಾರ್ಮಿಕರಿಗೆ ರೇಷ್ಮೆ ರೀಲರ್‌ಗಳ ಕೆಲಸಕ್ಕೂ ಹೊಡೆತ ಬಿದ್ದಿದೆ. ಈ ಘಟಕಗಳಲ್ಲಿಯೂ ಕೆಲಸವಿಲ್ಲದಂತಾಗಿದೆ. ರೇಷ್ಮೆ ನಗರ ಎಂದು ಇಡೀ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದ್ದ ದೊಡ್ಡಬಳ್ಳಾಪುರಕ್ಕೆ ಸ್ವಾಗತ ನೀಡುವ ಕಮಾನು ಗಳು ಮುಂದೆ ಅರ್ಥ ಕಳೆದುಕೊಂಡರೂ ಅಚ್ಚರಿಯಿಲ್ಲ.
ರೇಷ್ಮೆ ಬಟ್ಟೆ ತಯಾರಿಕೆ ಮೇಲೆ ಪರಿಣಾಮ
ರೇಷ್ಮೆ ತಯಾರಿಕೆಕಡಿಮೆಯಾಗಿ ಬೆಲೆ ಏರಿಕೆಯಾಗಿರುವ ಪರಿಣಾಮ ದೊಡ್ಡಬಳ್ಳಾಪುರದಲ್ಲಿ ರೇಷ್ಮೆ ಬಟ್ಟೆ ತಯಾರಿಸುವವರ ಸಂಖ್ಯೆ ಕಡಿಮೆ ಯಾಗುತ್ತಿದೆ. ಸಿದ್ಧ ರೇಷ್ಮೆ ಒಂದು ಗ್ರಾಂಗೆ5.5 ರೂ.ಗಳಾಗಿದ್ದು ರೇಷ್ಮೆ ಚಿನ್ನದಂತಾಗಿದೆ.ಕಚ್ಚಾ ಮಾಲಿನ ಬೆಲೆ ಹೆಚ್ಚಾದರೂ ನೇಯ್ದ ಬಟ್ಟೆಗೆ ಸೂಕ್ತ ಬೆಲೆ ಸಿಕ್ಕರೆ ಪರವಾಗಿಲ್ಲ. ಆದರೆ ಒಂದು ಉತ್ತಮ ಮಟ್ಟದ ರೇಷ್ಮೆ ಸೀರೆಗೆ ಸುಮಾರು200 ರೂ.ಗಳು ನಷ್ಟವಾಗುತ್ತಿದೆ ಎನ್ನುತ್ತಾರೆ ರೇಷ್ಮೆ ನೇಕಾರ ವೆಂಕಟೇಶ್.
ಉತ್ತರ ಭಾರತದ ಮಾರುಕಟ್ಟೆಯಿಲ್ಲ:ವಿಶೇಷವಾಗಿ ದೊಡ್ಡಬಳ್ಳಾಪುರದಲ್ಲಿ ನೇಯುವ ಕಡಿಮೆ ತೂಕದ ನಮೂನೆಯ ರೇಷ್ಮೆ ಸೀರೆಗಳು ಉತ್ತರ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತ ದೆ. ಕೋವಿಡ್-19 ಪರಿಣಾಮ ಎಲ್ಲೆಡೆ ಶುಭ ಸಮಾರಂಭಗಳಿಗೆ ನಿರ್ಬಂಧ ಹೇರಿದ್ದರಿಂದ, ವ್ಯಾಪಾರ ಕುಸಿದಿದ್ದು, ಇನ್ನೂ ಚೇತರಿಸಿ ಕೊಂಡಿಲ್ಲ ಎನ್ನುತ್ತಾರೆ ರೇಷ್ಮೆ ಸೀರೆಗಳ ಉದ್ಯಮಿ ರಮೇಶ್.
-ಡಿ.ಶ್ರೀಕಾಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.