ದಸರಾ ಜಂಬೂ ಸವಾರಿಗೆ 8 ಆನೆ ಆಯ್ಕೆ
ಈ ಬಾರಿಯೂ ಅಂಬಾರಿ ಹೊರಲಿರುವ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು
Team Udayavani, Sep 8, 2021, 4:00 PM IST
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿಯೂ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಅಂಬಾರಿ ಹೊರುವುದು
ಖಚಿತವಾಗಿದ್ದು, ಈ ಬಾರಿ 8 ಆನೆಗಳನ್ನು ಕರೆತರಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ಸತತ 2ನೇ ವರ್ಷವೂ ನಾಡಹಬ್ಬ ದಸರಾ ಸರಳ ಹಾಗೂ ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತಗೊಳಿಸಲಾಗಿದೆ. ಬೆಂಗಳೂರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ದಸರಾ ಉನ್ನತ ಸಮಿತಿ ಸಭೆಯಲ್ಲಿ ಜಂಬೂಸವಾರಿ ಮೆರವಣಿಗೆಯನ್ನು ಕಳೆದ ವರ್ಷದಂತೆ ಈ ಬಾರಿಯೂ ಅರಮನೆ ಅಂಗಳಕ್ಕಷ್ಟೇ ಸೀಮಿತಗೊಳಿಸಿರುವುದರಿಂದ ದಸರಾ ಗಜಪಡೆಯಲ್ಲಿ 8 ಆನೆಗಳು
ಸ್ಥಾನ ಪಡೆಯಲಿದೆ.
ಕಳೆದ ವರ್ಷ ಅರಮನೆ ಅಂಗಳಕ್ಕೆ ಸೀಮಿತವಾಗಿದ್ದ ಜಂಬೂ ಸವಾರಿಯಲ್ಲಿ ಕೇವಲ 5 ಆನೆಗಳಷ್ಟೇ ಪಾಲ್ಗೊಂಡಿದ್ದವು. ಈ ಸಲಹೆಚ್ಚುವರಿಯಾಗಿ 3 ಆನೆಗಳನ್ನೂ ಕರೆತರಲಾಗುತ್ತಿದ್ದು, ಹೆಚ್ಚುವರಿ ಆನೆಗಳ ಪೈಕಿ 2 ಗಂಡಾನೆ ಮತ್ತು1ಹೆಣ್ಣಾನೆ ಸೇರಿವೆ. ಆನೆಗಳ ಆರೋಗ್ಯ ಕೈಕೊಟ್ಟರೆ ಪರ್ಯಾಯ ಆನೆಗಳ ಬಳಕೆ ಮಾಡಲು ಹೆಚ್ಚುವರಿ 3 ಆನೆಗಳನ್ನು ತಂದು ತಾಲೀಮು ನೀಡಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಈ ಬಾರಿಯ ಗಜಪಡೆ: ಈ ಸಾಲಿನ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊರಲಿರುವ ಗಜಪಡೆಯ ನಾಯಕ, ಮತ್ತಿಗೋಡು ಶಿಬಿರದ ಅಭಿಮನ್ಯು (55), ಗೋಪಾಲಸ್ವಾಮಿ (39), ಆನೆಕಾಡು ಶಿಬಿರದ ವಿಕ್ರಮ (48), ದುಬಾರೆ ಶಿಬಿರದ ಕಾವೇರಿ (43), ಧನಂಜಯ (38), ನಾಗರಹೊಳೆಯ ದೊಡ್ಡಹರವೆ ಶಿಬಿರದ ಅಶ್ವತ್ಥಾಮ (34), ಬಂಡೀಪುರ ರಾಂಪುರ ಶಿಬಿರದ ಚೈತ್ರಾ (50) ಹಾಗೂ ಲಕ್ಷ್ಮೀ(17) ಪಾಲ್ಗೊಳ್ಳುವುದು ಖಚಿತವಾಗಿದೆ.
ಇದನ್ನೂ ಓದಿ:ಮುಸ್ಲಿಂ ಕುಟುಂಬ ತಯಾರಿಸುವ ಗಣಪನಿಗೆ ಭಾರೀ ಬೇಡಿಕೆ
ಕೆಲ ದಿನಗಳ ಹಿಂದೆಯೇ ಅರಣ್ಯಾಧಿಕಾರಿಗಳ ತಂಡ ಎಲ್ಲ ಶಿಬಿರಗಳಿಗೆ ತೆರಳಿ, ಆನೆಗಳ ದೈಹಿಕ ಸದೃಢತೆ ಪರಿಶೀಲನೆ ನಡೆಸಿ 14 ಆನೆಗಳ ಪಟ್ಟಿ ಸಿದ್ಧಪಡಿಸಿದೆ. ಇದರಲ್ಲಿ8ಆನೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಗಜಪಡೆಗೆ ಈಗಾಗಲೇ ಅರಣ್ಯ ಇಲಾಖೆಯ ತಾಂತ್ರಿಕ ಸಮಿತಿ ಒಪ್ಪಿಗೆ ನೀಡಿದೆ. ಜಿಲ್ಲಾಡಳಿತಕ್ಕೆಈಕುರಿತುಮಾಹಿತಿರವಾನಿಸಲಾಗಿದೆ. ಜಿಲ್ಲಾ ಸಮಿತಿ ಹಾಗೂ ಪಿಸಿಸಿಎಫ್(ವನ್ಯಜೀವಿ) ಅನುಮತಿ ದೊರೆಯುವ ಸಾಧ್ಯತೆ ಇದೆ.
13ರಂದು ಸಪ್ತಮಿ ಶುಭ ದಿನ ಗಜಪಯಣ ಸಾಧ್ಯತೆ
ಪ್ರಸಕ್ತ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಕರೆತರಲು ಮೂರು ದಿನಗಳನ್ನು ಪಟ್ಟಿ ಮಾಡಲಾಗಿದೆ. ಸೆ.13, 15 ಹಾಗೂ 16ರಂದು ಶುಭ ದಿನವಾಗಿದೆ. ಅದರಲ್ಲೂ ಸೆ.13 ಉತ್ತಮ ದಿನವಾಗಿದ್ದು, ಭಾದ್ರಪದ ಸಪ್ತಮಿ ದಿನ ಆಗಿರುವುದರಿಂದ ಗಜಪಯಣಕ್ಕೆ
ಒಳ್ಳೆಯ ದಿನ ಎನ್ನಲಾಗಿದೆ. ಸೆ.13ರಂದು ಬೆಳಗ್ಗೆ 11ರಂದು ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್ ಬಳಿ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಮೈಸೂರಿನ ಅರಣ್ಯ ಭನವನಕ್ಕೆ ಕರೆತರಲಾಗುತ್ತದೆ. ಸೆ.16ರಂದು ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಪೂಜೆ ಸಲ್ಲಿಸಿ, ನಂತರ ಅರಮನೆಗೆ ಕರೆದುಕೊಂಡು ಬರಲು ಉದ್ದೇಶಿಸಲಾಗಿದೆ
ಇಂದು ಅಂತಿಮ ನಿರ್ಧಾರ
ದಸರಾ ಕಾರ್ಯಕಾರಿ ಸಮಿತಿ ಸಭೆ ನಗರದಲ್ಲಿ ಬುಧವಾರ ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ನಡೆಯಲಿದೆ. ಈ ವೇಳೆ ದಸರಾ ರೂಪುರೇಷೆ ಬಗ್ಗೆ ಚರ್ಚೆ ನಡೆಯಲಿದ್ದು, ಗಜಪಡೆ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದೇ ಸಂದರ್ಭದಲ್ಲಿ ಗಜಪಯಣ ಮತ್ತು ಸ್ವಾಗತ ಕಾರ್ಯಕ್ರಮದ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.