ಶರಿಯಾ ನೀತಿ; ತಾಲಿಬಾನಿಗಳು ಒಳ್ಳೆ ಆಡಳಿತ ಕೊಡಲಿ: ಫಾರುಕ್ ಅಬ್ದುಲ್ಲಾ
ಫಾರುಕ್ ಅಬ್ದುಲ್ಲಾ ವಿವಾದಾತ್ಮಕ ಹೇಳಿಕೆ
Team Udayavani, Sep 9, 2021, 11:10 AM IST
ಶ್ರೀನಗರ: ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಿರುವ ತಾಲಿಬಾನಿಗಳು ಉತ್ತಮ ಆಡಳಿತ ನೀಡಲಿ ಎಂದು ಹೇಳುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರುಕ್ ಅಬ್ದುಲ್ಲಾ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಆಫ್ಘನ್ ನಲ್ಲಿ ಇಸ್ಲಾಮಿಕ್ ತತ್ವಗಳೊಂದಿಗೆ ತಾಲಿಬಾನಿಗಳು ಉತ್ತಮ ಆಡಳಿತ ನಡೆಸಬೇಕು. ಅವರು ಬೇರೆ ದೇಶಗಳೊಂದಿಗೆ ಸ್ನೇಹ ಸಾಧಿಸಿಕೊಳ್ಳಲು ನೋಡಬೇಕು. ದೇಶದ ಎಲ್ಲ ಜನರ ಮಾನವ ಹಕ್ಕುಗಳನ್ನು ಕಾಪಾಡಬೇಕು ಹಾಗೂ ಎಲ್ಲರಿಗೂ ಗೌರವ ಸಿಗುವಂತೆ ನೋಡಿಕೊಳ್ಳಬೇಕು ಎಂದು ಫಾರೂಕ್ ಅಬ್ದುಲ್ಲಾ ನುಡಿದಿದ್ದಾರೆ.
ವಿಶ್ವಕ್ಕೇ ಉದಾಹರಣೆಯಾಗಬಲ್ಲರು:
ತಾಲಿಬಾನಿಗಳು ಸರಿಯಾದ ರೀತಿಯಲ್ಲಿ ಶರಿಯಾ ನೀತಿ ಅನುಸರಿಸಿದರೆ ಅವರು ಪೂರ್ತಿ ವಿಶ್ವಕ್ಕೇ ಉದಾಹರಣೆಯಾಗಬಲ್ಲರು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ತಾಲಿಬಾನಿಗಳು ಈ ಹಿಂದಿನಂತೆ ಮಾನವ ಹಕ್ಕು ಉಲ್ಲಂಘನೆ ಮಾಡಬಾರದು. ಅವರು ಹೆಣ್ಣು ಮಕ್ಕಳಿಗೆ ಗೌರವ ನೀಡಿ ನಿಜ ವಾದ ಶರಿಯಾ ನಿಯಮ ಪಾಲಿಸಬೇಕು. 1990ರಲ್ಲಿ ಮಾಡಿ ದಂತೆಯೇ ಮಾಡಿದರೆ ಅದು ಇಡೀ ವಿಶ್ವಕ್ಕೇ ಅಪಾಯ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಜೆಡಿಎಸ್ ಬೆಂಬಲ ಕೋರಿಕೆ, ಸಿದ್ದರಾಮಯ್ಯ ಅಸಮಾಧಾನ?
ಫಾರೂಕ್ ಮತ್ತು ಮೆಹ ಬೂಬಾ ಹೇಳಿಕೆಗಳು ನಮ್ಮ ದೇಶ ದಲ್ಲೂ ತಾಲಿಬಾನಿ ಮನಸ್ಥಿತಿಯ ಜನರಿದ್ದಾರೆ ಹಾಗೂ ಉಗ್ರರ ಏಜೆಂಟ್ಗಳಾಗಿ ವರ್ತಿಸುತ್ತಿದ್ದಾರೆ ಎಂಬುದನ್ನು ಸಾಬೀತು ಪಡಿಸಿದೆ.
– ರಾಕೇಶ್ ಸಿನ್ಹಾ, ಬಿಜೆಪಿ ರಾಜ್ಯ ಸಭಾ ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.