ಐಆರ್ಸಿಟಿಸಿ ಮೂಲಕ ಇನ್ನು ಸಮುದ್ರ ಯಾನವೂ ಸಾಧ್ಯ!
Team Udayavani, Sep 9, 2021, 7:10 AM IST
ಹೊಸದಿಲ್ಲಿ: ಭಾರತೀಯ ರೈಲ್ವೇಯ ಅಂಗ ಸಂಸ್ಥೆಯಾದ, ಇಂಡಿಯನ್ ರೈಲ್ವೇಸ್ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್ (ಐಆರ್ಸಿಟಿಸಿ), ಇದೇ ಮೊದಲ ಬಾರಿಗೆ ಸಾಗರ ಯಾನ ಕ್ಷೇತ್ರಕ್ಕೂ ಕಾಲಿರಿಸಿದೆ.
ಈ ಕುರಿತಂತೆ ಐಆರ್ಸಿಟಿಸಿ ಪ್ರಕಟನೆೆ ಹೊರಡಿಸಿದ್ದು, “ಭಾರತದ ವಾಟರ್ ವೇಸ್ ಲೀಶರ್ ಟೂರಿಸಂ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಂಗಸಂಸ್ಥೆಯಾದ ಕಾರ್ಡೇಲಿಯಾ ಕ್ರುಯ್ಸಸ್ ಸಂಸ್ಥೆಯ ಜತೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಸಂಸ್ಥೆಯು, ಭಾರತದಲ್ಲಿ ಮೊದಲ ಬಾರಿಗೆ ಐಶಾರಾಮಿ ಸಮುದ್ರಯಾನ ಸೇವಾ ಕ್ಷೇತ್ರಕ್ಕೆ ಕಾಲಿಟ್ಟಿದೆ. ಭಾರತೀಯರ ಪ್ರವಾಸಿ ಹವ್ಯಾಸವನ್ನು ಮತ್ತೂಂದು ಮಟ್ಟಕ್ಕೆ ಕೊಂಡೊಯ್ಯ ಲಿದ್ದೇವೆ” ಎಂದು ಹೇಳಿದೆ.
ಎಲ್ಲೆಲ್ಲಿಗೆ ಸೇವೆ?: ಆರಂಭಿಕ ಹಂತದಲ್ಲಿ, ಭಾರತದ ಜನಪ್ರಿಯ ಸಮುದ್ರ ತೀರ ತಾಣಗಳಾದ ಗೋವಾ, ದಿಯು, ಲಕ್ಷದ್ವೀಪ, ಕೊಚ್ಚಿ ಹಾಗೂ ಶ್ರೀಲಂಕಾದ ಕೊಲಂಬೊ ಹಾಗೂ ಇತ್ಯಾದಿ ಕಡೆಗೆ ಸಮುದ್ರಯಾನ ಸೇವೆ ನೀಡುವುದಾಗಿ ಐಆರ್ಸಿಟಿಸಿ ತಿಳಿಸಿದೆ.
ಪ್ರಯಾಣಿಕರಿಗೆ ವಿವಿಧ ಸೌಲಭ್ಯ: ಕಾರ್ಡೆಲಿಯಾ ಹಡಗುಗಳಲ್ಲಿ ಐಶಾರಾಮಿತನಕ್ಕೆ, ಮನೋರಂಜನೆಗೆ ಕೊರತೆಯಿರುವುದಿಲ್ಲ. ಪ್ರತಿಯೊಂದು ಹಡಗುಗಳಲ್ಲಿ ಸಕಲ ಸೌಲಭ್ಯಗಳುಳ್ಳ ಕೊಠಡಿಗಳು, ರೆಸ್ಟೋರೆಂಟ್ಗಳು, ಈಜುಕೊಳ, ಬಾರ್ಗಳು, ಚಿತ್ರಮಂದಿರಗಳು, ಮಕ್ಕಳ ಆಟದ ತಾಣ, ಜಿಮ್ ಇತ್ಯಾದಿಗಳಿರುತ್ತವೆ ಎಂದು ಐಆರ್ಸಿಟಿಸಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.