ಮೇಕೆದಾಟು: ರಾಜ್ಯ ಸರ್ಕಾರದ ಅವಿವೇಕದ ನಡೆ

ಜಲತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್‌ ಟೀಕ

Team Udayavani, Sep 9, 2021, 4:48 PM IST

ಮೇಕೆದಾಟು: ರಾಜ್ಯ ಸರ್ಕಾರದ ಅವಿವೇಕದ ನಡೆ

ಮಂಡ್ಯ: ಮೇಕೆದಾಟು ಯೋಜನೆ ಮಾಡುತ್ತಿರುವುದು ಜಲ ವಿದ್ಯುತ್‌ ತಯಾರಿಕೆಗಾಗಿ ಎಂಬ ವಾದ ಮಾಡುವುದನ್ನು ಬಿಟ್ಟು ಬೆಂಗಳೂರು ಮತ್ತು
ಕೋಲಾರಕ್ಕೆ ಕುಡಿಯುವ ನೀರು ಒದಗಿಸಲು ಯೋಜನೆ ಎಂಬ ಸರ್ಕಾರದ ಅವಿವೇಕದ ಹೇಳಿಕೆಯಿಂದಾಗಿ ಮೇಕೆದಾಟು ಯೋಜನೆಗೆ ತಡೆ
ಯುಂಟಾಗಿದೆ ಎಂದು ಜಲತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್‌ ಆರೋಪಿಸಿದರು.

ಮೇಕೆದಾಟು ಯೋಜನೆಯಿಂದಾಗಿ ಅನಗತ್ಯವಾಗಿ ಹರಿದು ಹೋಗುವ ನೀರನ್ನು ತಡೆದು ಜಲ ವಿದ್ಯುತ್‌ ಯೋಜನೆಗೆ ಬಳಸಿಕೊಳ್ಳುವುದರ ಜತೆಗೆ
ಕಾಲ ಕಾಲಕ್ಕೆ ತಮಿಳುನಾಡಿಗೆ ನೀರು ಕೊಡಲು ಅನುಕೂಲವಾಗುತ್ತದೆ. ಆದರೆ, ರಾಜ್ಯ ಸರ್ಕಾರ ಹೈಡ್ರೋ ಪ್ರಾಜೆಕ್ಟ್ಗಾಗಿ ಮಾತ್ರ ಯೋಜನೆ ರೂಪಿಸಲಾಗಿದೆ ಎನ್ನುವುದನ್ನು ಬಿಟ್ಟು ಇಲ್ಲದ ಗೊಂದಲ ಮೂಡಿಸಿದ್ದರಿಂದ ಯೋಜನೆ ನನೆಗುದಿಗೆ ಬೀಳುವಂತಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಕೇವಲ ನಾಲ್ಕು ವರ್ಷ ಮಾತ್ರ ಮಳೆ: ಮಳೆ ಋತುಮಾನವನ್ನು 12 ವರ್ಷದ ಅಳತೆಗೋಲಾಗಿ ತೆಗೆದುಕೊಂಡಿದ್ದು, ಇದರಲ್ಲಿ ಕೇವಲ ನಾಲ್ಕು
ವರ್ಷ ಮಾತ್ರ ಸಮರ್ಪಕವಾಗಿ ಮಳೆಯಾಗುತ್ತದೆ. ಉಳಿದಂತೆ 7 ರಿಂದ 8 ವರ್ಷ ಅನಾವೃಷ್ಟಿ ಉಂಟಾಗುತ್ತದೆ. ಈ ವಿಚಾರ ಕೆಆರ್‌ಎಸ್‌ ಕಟ್ಟುವ
ಮುನ್ನವೇ ತಮಿಳುನಾಡಿನ ತಜ್ಞರು ಅರಿತು ನಾಲ್ಕು ವರ್ಷ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುವುದರಿಂದ ಅಣೆಕಟ್ಟೆ ವ್ಯರ್ಥ ಎಂಬ ಅಭಿಪ್ರಾಯವನ್ನು ನೀಡಿದ್ದರು ಎಂದು ಉಲ್ಲೇಖೀಸಿದ್ದರು ಎಂದರು.

ಇದನ್ನೂ ಓದಿ:ವಿರೋಧ ಪಕ್ಷಗಳು ಒಂದಾದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬಹುದು: ಖರ್ಗೆ

ವಕೀಲ ನಾರಿಮನ್‌ರಿಂದ ರಾಜ್ಯಕ್ಕೆ ಅನ್ಯಾಯ:
ಇಂಥ ಮಹತ್ವದ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ ಗಮನಕ್ಕೆ ತಾರದೆ ರಾಜ್ಯದ ಪರ ವಕೀಲ ನಾರಿಮನ್‌ ಮುಚ್ಚಿಟ್ಟು ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಸರ್ಕಾರದ ಸಾಲಿಸಿಟರ್‌ ಜನರಲ್‌ ನದಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಧ್ಯ ಪ್ರವೇಶಿಸುವಂತಿಲ್ಲ. ಅದೇನಿದ್ದರೂ ಸಂಸತ್ತಿಗೆ ಸಂಬಂಧಿಸಿದ್ದು ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರೆ, ಅಂತಾರಾಜ್ಯ ನದಿ ನೀರಿನ ವಿವಾದವನ್ನು ಸುಪ್ರೀಂ ಕೋರ್ಟ್‌ ನಲ್ಲೂ ವಿಚಾರಣೆ ಮಾಡಬಹುದು ಎಂಬ ಅಭಿಪ್ರಾಯವನ್ನು ತಿಳಿಸುವ ಮೂಲಕ ಸ್ವತಃ ತಾವೇ ಹಗ್ಗಕೊಟ್ಟು ಕೈಕಟ್ಟಿಸಿಕೊಂಡಂತೆ ಮಾಡಿದರು. ರಾಜ್ಯಕ್ಕೆ ಇಂತಹ ಸಂಕಷ್ಟ ಬರಲು ವಕೀಲ ನಾರಿಮನ್‌ ಅವರೇ ಕಾರಣರಾಗಿದ್ದಾರೆ ಎಂದು ದೂರಿದರು.

ಸಂಕಷ್ಟ ಸೂತ್ರದಲ್ಲೂ ತಮಿಳುನಾಡಿಗೆ ನೀರು:
ಸಂಕಷ್ಟ ಸೂತ್ರ ಇದ್ದರೂ ಅದು ವರ್ಷದ ಕೊನೆಯಲ್ಲಿ ಗಣನೆಗೆ ಬರುತ್ತದೆ. ಅಷ್ಟರಲ್ಲಿ ಬಿಡುಗಡೆ ಮಾಡಬೇಕಾಗಿದ್ದ ನೀರು ತಮಿಳುನಾಡಿನ
ಪಾಲಾಗಿರುತ್ತದೆ. ಆಗ ಏನು ಮಾಡುವುದು ಎಂಬ ಬಗ್ಗೆ ಯಾವುದೇ ಉಲ್ಲೇಖವೂ ಇಲ್ಲ. ಈ ಬಗ್ಗೆ ವಕೀಲರು ಸುಪ್ರೀಂಕೋರ್ಟ್‌ನ ಗಮನಕ್ಕೆ ತರದಿರುವುದುದುರ್ದೈವದ ಸಂಗತಿಯಾಗಿದೆ ಎಂದರು. ನಗರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದರಾಜು, ಪಾಂಡವಪುರ ವಿಜಯ ಕಾಲೇಜಿನ ಅಧ್ಯಕ್ಷ ಬಸವರಾಜುಗೋಷ್ಠಿಯಲ್ಲಿದ್ದರು.

ರಾಜ್ಯ ಸರ್ಕಾರದ ವೈಫಲ್ಯ ದಿಂದಲೇ ಮೇಕೆದಾಟು ಯೋಜನೆ ಜಾರಿಗೆ ತಡೆಯುಂಟಾಗಿದೆ. ಜಲ ವಿದ್ಯುತ್‌ ಉತ್ಪಾದನೆ ಹಾಗೂ ತಮಿಳು
ನಾಡಿಗೆ ನೀರು ಹರಿಸುವ ಉದ್ದೇಶದಿಂದ ಎಂದು ವಾದ ಮಂಡಿಸ ಬೇಕಾಗಿತ್ತು. ಆದರೆ ಬೆಂಗಳೂರು ಹಾಗೂ ಕೋಲಾರಕ್ಕೆ ಕುಡಿಯುವ ನೀರು ಒದಗಿಸಲು ಎಂದು ಹೇಳಿದ್ದರಿಂದಲೇ ತಡೆಯಾಗಿದೆ.
– ಅರ್ಜುನಹಳ್ಳಿ ಪ್ರಸನ್ನಕುಮಾರ್‌,ಜಲತಜ್ಞ

ಟಾಪ್ ನ್ಯೂಸ್

ಸಹಕಾರಿ ಸಾಲದ ಮೇಲಿನ ಬಡ್ಡಿ ಹಣ ಡಿಸಿಸಿ ಬ್ಯಾಂಕ್ ಗೆ ಬಿಡುಗಡೆ

Kalaburagi: ಸಹಕಾರಿ ಸಾಲದ ಮೇಲಿನ ಬಡ್ಡಿ ಹಣ ಡಿಸಿಸಿ ಬ್ಯಾಂಕ್ ಗೆ ಬಿಡುಗಡೆ

13-

Wedding Story: ಕಂಕಣ ಕಾಲ-4: ಲಗ್ನಪತ್ರಿಕೆ ಹೋಯ್ತು, ವಾಟ್ಸಾಪ್‌ನಲ್ಲೇ ಕರೆ ಬಂತು!

Manipal: ಉದಯವಾಣಿಯ ಸಹಾಯಕ ಸುದ್ದಿ ಸಂಪಾದಕರಾಗಿದ್ದ ದಾಮೋದರ ಕಕ್ರಣ್ಣಾಯ ನಿಧನ

Manipal: ಉದಯವಾಣಿಯ ಸಹಾಯಕ ಸುದ್ದಿ ಸಂಪಾದಕರಾಗಿದ್ದ ದಾಮೋದರ ಕಕ್ರಣ್ಣಾಯ ನಿಧನ

Rajasthan: ಕುಸಿದು ಬಿದ್ದ ನಿರ್ಮಾಣ ಹಂತದ ಸುರಂಗದ ಒಂದು ಭಾಗ.. ಓರ್ವ ಕಾರ್ಮಿಕ ಮೃತ್ಯು

Rajasthan: ಕುಸಿದು ಬಿದ್ದ ನಿರ್ಮಾಣ ಹಂತದ ಸುರಂಗದ ಭಾಗ.. ಓರ್ವ ಕಾರ್ಮಿಕ ಮೃತ್ಯು

baga

Bangla; ಭಾರತೀಯ ಬಸ್‌ ಮೇಲೆ ಬಾಂಗ್ಲಾದಲ್ಲಿ ದಾಳಿ; ಭಾರತ ವಿರೋಧಿ ಘೋಷಣೆ ಕೂಗಿದ ಸ್ಥಳೀಯರು

ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾ ಆಪ್: ಕೇಜ್ರಿವಾಲ್ ಹೇಳಿದ್ದೇನು?

AAP: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾ.. ಕೇಜ್ರಿವಾಲ್ ಹೇಳಿದ್ದೇನು?

Bidar: ಬಸವಣ್ಣಗೆ ಅವಮಾನ ಮಾಡಿದ ಯತ್ನಾಳ್‌ ಮಾನಸಿಕ ರೋಗಿ: ಈಶ್ವರ ಖಂಡ್ರೆ

Bidar: ಬಸವಣ್ಣಗೆ ಅವಮಾನ ಮಾಡಿದ ಯತ್ನಾಳ್‌ ಮಾನಸಿಕ ರೋಗಿ: ಈಶ್ವರ ಖಂಡ್ರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

ಸಹಕಾರಿ ಸಾಲದ ಮೇಲಿನ ಬಡ್ಡಿ ಹಣ ಡಿಸಿಸಿ ಬ್ಯಾಂಕ್ ಗೆ ಬಿಡುಗಡೆ

Kalaburagi: ಸಹಕಾರಿ ಸಾಲದ ಮೇಲಿನ ಬಡ್ಡಿ ಹಣ ಡಿಸಿಸಿ ಬ್ಯಾಂಕ್ ಗೆ ಬಿಡುಗಡೆ

13-

Wedding Story: ಕಂಕಣ ಕಾಲ-4: ಲಗ್ನಪತ್ರಿಕೆ ಹೋಯ್ತು, ವಾಟ್ಸಾಪ್‌ನಲ್ಲೇ ಕರೆ ಬಂತು!

Manipal: ಉದಯವಾಣಿಯ ಸಹಾಯಕ ಸುದ್ದಿ ಸಂಪಾದಕರಾಗಿದ್ದ ದಾಮೋದರ ಕಕ್ರಣ್ಣಾಯ ನಿಧನ

Manipal: ಉದಯವಾಣಿಯ ಸಹಾಯಕ ಸುದ್ದಿ ಸಂಪಾದಕರಾಗಿದ್ದ ದಾಮೋದರ ಕಕ್ರಣ್ಣಾಯ ನಿಧನ

Rajasthan: ಕುಸಿದು ಬಿದ್ದ ನಿರ್ಮಾಣ ಹಂತದ ಸುರಂಗದ ಒಂದು ಭಾಗ.. ಓರ್ವ ಕಾರ್ಮಿಕ ಮೃತ್ಯು

Rajasthan: ಕುಸಿದು ಬಿದ್ದ ನಿರ್ಮಾಣ ಹಂತದ ಸುರಂಗದ ಭಾಗ.. ಓರ್ವ ಕಾರ್ಮಿಕ ಮೃತ್ಯು

baga

Bangla; ಭಾರತೀಯ ಬಸ್‌ ಮೇಲೆ ಬಾಂಗ್ಲಾದಲ್ಲಿ ದಾಳಿ; ಭಾರತ ವಿರೋಧಿ ಘೋಷಣೆ ಕೂಗಿದ ಸ್ಥಳೀಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.