ಹೆದ್ದಾರಿಯಲ್ಲಿ ಜಂಗಲ್ ಗಿಡಗಳು: ತೊಂದರೆ
Team Udayavani, Sep 9, 2021, 5:10 PM IST
ಗುಬ್ಬಿ: ರಾಜ್ಯ ಹೆದ್ದಾರಿ 84ರ ಶಿರಾ- ನಂಜನಗೂಡು ರಸ್ತೆಯ ಎರಡು ಬದಿಯಲ್ಲಿ ಜಂಗಲ್ ಗಿಡಗಳು ಸೇರಿದಂತೆ ಬೃಹತ್ ಪ್ರಮಾಣದಲ್ಲಿ ಬೇಲಿ ಗಿಡಗಳು ಬೆಳೆದಿದ್ದು, ಆ ಗಿಡಗಳನ್ನು ಸ್ವಚ್ಛಗೊಳಿಸಿ ವಾಹನ ಸವಾರರಿಗೆ ಓಡಾಡುವುದಕ್ಕೆ ಅನುಕೂಲ ಮಾಡಿಕೊಡುವಲ್ಲಿ ಪಿಡಬ್ಲೂಡಿ ಇಲಾಖೆ ಸಂಪೂರ್ಣ ವಿಫಲಗೊಂಡಿದೆ.
ಗುಬ್ಬಿ ಪಟ್ಟಣದಿಂದ ಚನ್ನಶೇಟ್ಟಿಹಳ್ಳಿ, ಅಮ್ಮನಘಟ್ಟ, ತಿಪ್ಪೂರು ಗ್ರಾಮಗಳು ಸೇರಿದಂತೆ ಚೇಳೂರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ-04ಕ್ಕೆ ಸಂಪರ್ಕಿಸುವ ಈ ರಸ್ತೆಯ ಎರಡುಬದಿಯಲ್ಲಿ ಜಂಗಲ್ ಗಿಡಗಳು ಬೆಳೆದಿದ್ದು, ವಾಹನ ಸವಾರರು ದಿನನಿತ್ಯ ಓಡಾಡುವಾಗ ತೊಂದರೆ
ಅನುಭವಿಸುವಂತಾಗಿದೆ.
ಕಾಡು-ಪ್ರಾಣಿಗಳ ಭಯ: ರಾಜ್ಯ ಹೆದ್ದಾರಿ 84ರ ಶಿರಾ-ನಂಜನಗೂಡು ಹೆದ್ದಾರಿ ರಸ್ತೆಯು ಗ್ರಾಮೀಣಾ ಭಾಗದಲ್ಲಿ ಹಾದು ಹೋಗಿದ್ದು, ಇಲ್ಲಿನ
ಗ್ರಾಮಗಳ ಅಕ್ಕಪಕ್ಕದ ತೋಟಗಳಲ್ಲಿ ಚಿರತೆ, ಕರಡಿ ಸೇರಿದಂತೆ ಹಲವು ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತಿರುವುದು ಜನರನ್ನು ಭಯ ಭೀತರನ್ನಾಗಿಸಿದೆ. ರಸ್ತೆಯ ಇಕ್ಕೆಲ ಗಳಲ್ಲಿ ಗುಂಪು- ಗುಂಪಾಗಿ ಬೆಳೆದಿರುವ ಪೊದೆಗಳಲ್ಲಿ ಕಾಡು ಪ್ರಾಣಿಗಳು ಆಡಗಿ ಕುಳಿತು ಕೊಳ್ಳುವುದಕ್ಕೆ ಸಹಕಾರಿಯಾಗಿದೆ. ಸಂಬಂಧಪಟ್ಟ ಇಲಾಖೆ ಯವರು ಇದನ್ನು ಪರಿಹರಿಸ ಬೇಕಾಗಿದೆ.
ಇದನ್ನೂ ಓದಿ:ಮತ್ತೋರ್ವ ಸಹಾಯಕ ಸಿಬ್ಬಂದಿಗೆ ಕೋವಿಡ್: ಅಭ್ಯಾಸ ಸ್ಥಗಿತಗೊಳಿಸಿದ ಟೀಂ ಇಂಡಿಯಾ
ತಿರುವುಗಳು ಹೆಚ್ಚಾಗಿ ಬರುವ ಈ ಹೆದ್ದಾರಿಯಲ್ಲಿ ಎದುರುಗಡೆಯಿಂದ ಬರುವ ವಾಹನಗಳು ಸರಿಯಾಗಿ ಕಾಣಿಸುವುದಿಲ್ಲ. ರಾತ್ರಿ ವೇಳೆಯಲ್ಲಿ ಈ ರಸ್ತೆಯಲ್ಲಿ ಓಡಾಡುವುದಕ್ಕೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿದ್ದು, ದೊಡ್ಡ ವಾಹನಗಳು ಎದುರುಗಡೆ ಬಂದಾಗ ರಸ್ತೆಯ
ಕೆಳಕ್ಕೆ ಇಳಿಸುವುದಕ್ಕೂ ಆಗುವುದಿಲ್ಲ. ಅಪಘಾತಗಳಿಗೆ ಎಡೆ ಮಾಡಿಕೊಟ್ಟಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕಿದೆ ಎಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿದ್ದಾರೆ.
ಚನ್ನಶೆಟ್ಟಿಹಳ್ಳಿ, ಅಮ್ಮನಘಟ್ಟ ಸೇರಿದಂತೆ ತಿಪ್ಪೂರು ಗ್ರಾಮಗಳಿಂದ ವಿವಿಧಕೆಲಸ ನಿಮಿತ್ತ ಪಟ್ಟಣಕ್ಕೆ ಈ ರಸ್ತೆಯಲ್ಲೆ ಬರಬೇಕು. ಸಂಜೆ
ಇದೆ ರಸ್ತೆಯಲ್ಲೇ ಹೋಗಬೇಕು.ಕಾಡು ಪ್ರಾಣಿಗಳು ಸೇರಿದಂತೆಕಳ್ಳರ ಭಯದ ಜತೆಗೆ ದಿನಕಳೆಯುವಂತಾಗಿದೆ.
-ಯತೀಶ್, ಸ್ಥಳೀಯ
ರಾಜ್ಯ ಹೆದ್ದಾರಿಗಳ ಅಕ್ಕಪಕ್ಕದಲ್ಲಿ ಬೆಳೆದಿರುವ ಜಂಗಲ್ ಗಿಡಹಾಗೂ ಪೊದೆಗಳನ್ನು ತೆಗೆಯಲು ಈಗಾಗಲೇ ಟೆಂಡರ್ ಪ್ರಕ್ರಿಯೆಯ ಹಂತದಲ್ಲಿದ್ದು, ಆದಷ್ಟು ಬೇಗ ರಸ್ತೆ ಬದಿಯ ಗಿಡಗಳನ್ನು ಸ್ವಚ್ಛಗೊಳಿಸಲುಕ್ರಮ ವಹಿಸುತ್ತೇನೆ.
-ವಿಜಯ್‌ಕುಮಾರ್, ಪಿಡಬ್ಲೂಡಿ ಎಂಜಿನಿಯರ್, ಗುಬ್ಬಿ
-ಕೆಂಪರಾಜು ಜಿ.ಆರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.