![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Sep 11, 2021, 6:26 PM IST
ಸುಬ್ರಹ್ಮಣ್ಯ : ವಾರಾಂತ್ಯದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರ ಪ್ರವೇಶ ಸಂಪೂರ್ಣ ನಿಷೇದಿಸಲಾಗಿದ್ದರೂ ಕ್ಷೇತ್ರಕ್ಕೆ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ತೆರವುಗೊಳಿಸಿದ ಬಳಿಕ ಸುಬ್ರಹ್ಮಣ್ಯದಲ್ಲಿ ತೀರ್ಥ ಪ್ರಸಾದ, ಅನ್ನಸಂತರ್ಪಣೆಗೆ ಅವಕಾಶ ನೀಡಲಾಗಿತ್ತು. ಆದರೆ ವಾರಂತ್ಯದಲ್ಲಿ ದೇವಳಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು.
ಆದರೆ ಮಾಹಿತಿ ಕೊರತೆಯಿಂದ ಶನಿವಾರ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರ ದಂಡು ಬಂದಿತ್ತು. ದೇವಳ ಪ್ರವೇಶ ಅವಕಾಶ ಇಲ್ಲದ ಹಿನ್ನಲೆಯಲ್ಲಿ ಹೊರಗಿನಿಂದಲೇ ದೇವರಿಗೆ ಕೈ ಮುಗಿದು ನಮಸ್ಕರಿಸಿ ತೆರಳುತ್ತಿರುವ ದೃಶ್ಯ ಕಂಡುಬಂತು.
ಕ್ಷೇತ್ರದಲ್ಲಿ ಹೆಚ್ಚಿನ ಭಕ್ತರ ಸಂಖ್ಯೆಯ ಜತೆಗೆ ವಾಹನ ದಟ್ಟನೆಯೂ ಅಧಿಕವಾಗಿತ್ತು. ಹಲವು ದಿನಗಳ ಬಳಿಕ ವಾರಂತ್ಯ ಕರ್ಫ್ಯೂ ತೆರವುಗೊಳಿಸಿದ ಹಿನ್ನಲೆಯಲ್ಲಿ ಜನ, ವಾಹನ ಓಡಾಟವೂ ಹೆಚ್ಚು ಕಂಡುಬಂದಿತ್ತು.
ಇದನ್ನೂ ಓದಿ :ಟೋಲ್ ವಸೂಲಿ ಮಾಡಿ ಸೌಲಭ್ಯ ನೀಡದ ಜಿಕೆಸಿ ಕಂಪನಿ ವಿರುದ್ಧ ಜನರ ಆಕ್ರೋಶ
You seem to have an Ad Blocker on.
To continue reading, please turn it off or whitelist Udayavani.