ಬೇಕೆ ಬೇಕು, ಡಿಜೆ ಬೇಕು: ಗಣಪತಿ ಮಂಡಳಿಯಿಂದ ಪ್ರತಿಭಟನೆ
Team Udayavani, Sep 11, 2021, 8:08 PM IST
ಬನಹಟ್ಟಿ : ಸರ್ಕಾರ ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನನ್ನು ಕೂರಿಸಲು ಅನುಮತಿ ನೀಡಿದೆ. ಆದರೆ ಶುಕ್ರವಾರ ಮಧ್ಯಾಹ್ನ ತಾಲೂಕಿನ ಹೊಸುರನಲ್ಲಿ ಡಿ ಜೆ ಸಾಂಗ್ ಹಾಕಿಕೊಂಡು ಆಟೋ ಮತ್ತು ಟ್ರ‍್ಯಾಕ್ಟರ್ ಮೇಲೆ ಮೆರವಣಿಗೆ ಮಾಡುತ್ತಾ ಗಣಪತಿ ತರುವ ಸಂಧರ್ಭದಲ್ಲಿ ಪೊಲೀಸ್ ಇಲಾಖೆ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಲು ಸೂಚಿಸಿದರು.ಇನ್ನೂ ಕೊರೊನಾ ಹಾವಳಿ ಮುಗಿದಿಲ್ಲ ಹೀಗಾಗಿ ಎಲ್ಲರೂ ಕೋವಿಡ್ ನಿಯಮ ಪಾಲಿಸಿ ಅಂತ ಸೂಚಿಸಿದರು.
ಆದರೆ ನಮಗೆ ಡಿಜೆ ಗೆ ಅನುಮತಿ ನೀಡುವವರೆಗೂ ನಾವು ಗಣಪತಿಯನ್ನು ಮುಂದೆ ಒಯ್ಯುವುದಿಲ್ಲ ಎಂದು ಗಣಪತಿ ಮಂಡಳಿ ರಸ್ತೆ ಮಧ್ಯೆಯೇ ಅನುಮತಿ ನೀಡಲು ತಾಲೂಕು ಆಡಳಿತಕ್ಕೆ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಕೂಡಾ ಸ್ಥಳ ಆಗಮಿಸಿ ಗಣಪತಿ ಮಂಡಳಿ ಅವರಿಗೆ ಮತ್ತು ಹೋರಾಟಕ್ಕೆ ಬೆಂಬಲಿಸಿದ ಮುಖಂಡರಿಗೂ, ಕಾರ್ಯಕರ್ತರಿಗೂ ಸರ್ಕಾರ ಯಾರು ಉಲ್ಲಂಘನೆ ಮಾಡುವುದು ಬೇಡ ಎಲ್ಲರೂ ಸಂತೋಷದಿಂದ ಖುಷಿಯಿಂದ ಆಚರಿಸಿ ಎಂದು ತಿಳಿ ಹೇಳಿದರು.
ಇದನ್ನೂ ಓದಿ:ಚೆಕ್ ಬೌನ್ಸ್:3.5 ಲಕ್ಷ ಪರಿಹಾರ, 6 ತಿಂಗಳ ಶಿಕ್ಷೆ
ಇದೇ ಸಂದರ್ಭದಲ್ಲಿ ತೇರದಾಳ ಶಾಸಕ ಸವದಿಯವರೊಂದಿಗೆ ಡಿಜೆ ಸೌಂಡಗೆ ಅನುಮತಿ ನೀಡಲು ವಾಗ್ವಾದ ಕೂಡ ಕೆಲ ಹೊತ್ತು ನಡೆಯಿತು.ತದ ನಂತರ ಪುನಃ ಗಣಪತಿ ಮಂಡಳಿಯವರು ರಾಮಸೇನೆ ಹಾಗೂ ಭಜರಂಗ ಧಳ ಸಂಘಟನೆಗಳ ಬೆಂಬಲದೊಂದಿಗೆ ಮತ್ತೆ ರಾತ್ರಿವರೆಗೂ ಕೂಡ ಅನುಮತಿ ಸಲುವಾಗಿ ಹೋರಾಟ ಮುಂದುವರೆಯಿತು. ಶಾಸಕ ಸವದಿ ಸುಪುತ್ರ ವಿದ್ಯಾಧರ ಸವದಿ ಕೂಡ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು.
ವಾಹನಗಳನ್ನೆಲ್ಲಾ ತಡೆ ಹಿಡಿದು ಅನುಮತಿ ನೀಡಲೇ ಬೇಕೆಂದು ಗಣೇಶನ ಜೈಕಾರ ಹಾಕುತ್ತಾ ಹೋರಾಟ ಮುಂದುವರೆಸಿದರು. ವರ್ಷಕ್ಕೆ ಒಂದು ಬಾರಿ ಗಣೇಶನ ಹಬ್ಬ ಬರುತ್ತೆ ಆದ್ದರಿಂದ ಈ ಬಾರಿ ಡಿಜೆ ಗೆ ಅವಕಾಶ ನೀಡಬೇಕು. ಕಳೆದ ಎರಡು ವರ್ಷಗಳಿಂದ ಕೊರೊನಾ ಹಾವಳಿಯಿಂದ ವಿಜೃಂಭಣೆಯಿಂದ ಆಚರಣೆ ಮಾಡೇ ಮಾಡುತ್ತೇವೆ ಎಂದು ಸ್ಥಳೀಯ ಹಿಂದೂ ಪರ ಸಂಘಟನೆಗಳಿಂದ ಶಾಸಕರಿಗೆ ಅನುಮತಿ ನೀಡುವಂತೆ ಒತ್ತಾಯಿಸಲಾಯಿತು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಸಂಜಯ್ ಇಂಗಳೇ, ಸಿಪಿಐ ಕರುನೇಶಗೌಡ, ಪಿಎಸೈ ಸುರೇಶ ಮಂಟೂರ, ಹಾಗೂ ಮಹಾಲಿಂಗಪುರ ಪಿಎಸ್‌ಐ ವಿಜಯ ಕಾಂಬಳೆ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಜನರನ್ನು ನಿಯಂತ್ರಿಸುವಲ್ಲಿ ಕಾರ್ಯನಿರತರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.