ಐನ್‌ಸ್ಟೈನ್‌ಗಿಂತ ಚುರುಕು ಈ 8ರ ಪೋರಿ!
Team Udayavani, Sep 11, 2021, 11:15 PM IST
ಮೆಕ್ಸಿಕೋ: ಅಲ್ಬರ್ಟ್ ಐನ್‌ಸ್ಟೈನ್ ತೀರಾ ಜಾಣನಾಗಿದ್ದ ಎನ್ನುವ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಆದರೆ ಇದೀಗ ಅವನಿಗಿಂತ ಜಾಣೆ ಯೊಬ್ಬಳು ಕಾಣಿಸಿಕೊಂಡಿದ್ದಾಳೆ.
ಮೆಕ್ಸಿಕೋದ 8 ವರ್ಷದ ಪುಟಾಣಿ ಅಧಾರಾ ಪೆರೇಜ್ ಐನ್ ಸ್ಟೈನ್ ಮತ್ತು ಸ್ಟೀಫನ್ ಹಾಕಿಂಗ್ ಗಿಂತಲೂ ಜಾಣೆ. ಅವರಿಗೆ ಐಕ್ಯೂ 160 ಇದ್ದರೆ ಇವಳಿಗೆ 162 ಇದೆ.
ಅಧಾರಾ 3 ವರ್ಷದವಳಿದ್ದಾಗ ಆಸ್ಪರ್ಜರ್ ಸಿಂಡ್ರೋಮ್ ಹೆಸರಿನ ಕಾಯಿಲೆಯಿಂದ ಬಳಲುತ್ತಿದ್ದಳಂತೆ. ಅದರಿಂದಾಗಿ ಅವಳಿಗೆ ಬೇರೆಯವರಿಗೆ ಬೆರೆಯುವುದು ಕಷ್ಟವಾಗಿತ್ತು. ಆಕೆಗೆ ಸ್ನೇಹಿ ತರು ಚುಡಾಯಿಸುವುದನ್ನು ಕಂಡು, ಆಕೆಯ ತಾಯಿ ಬೇಸರಗೊಂಡು, ಅವಳನ್ನು ಟ್ಯಾಲೆಂಟ್ ಕೇರ್ ಸೆಂಟರ್‌ಗೆ ಸೇರಿಸಿದ್ದಳು. ಅಲ್ಲಿ ಆಕೆಯ ಐಕ್ಯೂ ಬಗ್ಗೆ ತಿಳಿದು ಬಂದಿದೆ.
ಈ ಬಾಲಕಿ ಈಗಾಗಲೇ ಪ್ರೌಢ ಶಿಕ್ಷಣವನ್ನೂ ಮುಗಿಸಿದ್ದು, ಆನ್ ಲೈನ್ ಕೋರ್ಸ್‌ಗಳ ಎರಡು ಪದವಿಯನ್ನೂ ಮುಗಿಸಿದ್ದಾಳೆ. ಡು ನಾಟ್ ಗೀವ್ ಅಪ್ ಹೆಸರಿನ ಪುಸ್ತಕವನ್ನೂ ಬರೆದಿದ್ದಾಳೆ. ದಿವ್ಯಾಂಗ ಮಕ್ಕಳ ಭಾವನೆಗಳನ್ನು ಮಾನಿಟರ್ ಮಾಡುವ ವ್ಯವಸ್ಥೆಯನ್ನು ನಿರ್ಮಿಸುತ್ತಿರುವುದರ ಜತೆಗೆ ಅಮೆರಿಕದ ಆರಿ ಜೋನಾ ವಿವಿ ಪ್ರವೇಶ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದಾಳಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.