ಬಿಜೆಪಿ ಸೇರಲು ಹಣದ ಆಮಿಷವಿತ್ತು: ಶ್ರೀಮಂತ ಪಾಟೀಲ್
Team Udayavani, Sep 12, 2021, 7:20 AM IST
ಕಾಗವಾಡ: ಕಾಂಗ್ರೆಸ್ ತೊರೆದು ಬಿಜೆಪಿ ಸೇರುವಾಗ ಹಣದ ಆಮಿಷ ಬಂದಿತ್ತು. ಆದರೆ ಹಣಕ್ಕೆ ಬೇಡಿಕೆ ಇಡದೆ ಕ್ಷೇತ್ರ ಹಾಗೂ ಜನರ ಸೇವೆ ಮಾಡಲು ಒಳ್ಳೆಯ ಸ್ಥಾನಮಾನ ನೀಡುವಂತೆ ಕೇಳಿಕೊಂಡಿದ್ದೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹೇಳಿದ್ದಾರೆ.
ಶನಿವಾರ ಐನಾಪುರ ಪಟ್ಟಣದಲ್ಲಿ ಒಂದು ಕೋಟಿ ರೂ. ಅನುದಾನದಡಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ್ದಾಗ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಸೇರುವಾಗ ಸ್ಥಾನಮಾನ ನೀಡುವಂತೆ ಕೇಳಿಕೊಂಡಿದ್ದರಿಂದ ಯಡಿಯೂರಪ್ಪನವರ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಈಗ ಕೈಬಿಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಮತ್ತೆ ಸಚಿವ ಸ್ಥಾನ ನೀಡುವ ಭರವಸೆ ವರಿಷ್ಠರಿಂದ ಸಿಕ್ಕಿದೆ ಎಂದರು.
ಕೃಷಿ ಇಲಾಖೆ ಬಯಕೆ:
20 ವರ್ಷಗಳಿಂದ ಒಕ್ಕಲುತನ ಮಾಡುತ್ತಾ ಬಂದಿದ್ದು, ಕೃಷಿ ಪದವೀಧರನೂ ಆಗಿದ್ದೇನೆ. ನನಗೆ ಆಗಲೇ ಕೃಷಿ ಇಲಾಖೆ ಕೊಡಬೇಕಾಗಿತ್ತು. ಆದರೆ ಸಿಕ್ಕಿದ್ದು ಜವಳಿ ಹಾಗೂ ಅಲ್ಪಸಂಖ್ಯಾಕರ ಖಾತೆ. ಅದನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಬೊಮ್ಮಾಯಿ ಅವರು ಸಚಿವ ಸ್ಥಾನದ ಭರವಸೆ ನೀಡಿದ್ದಾರೆ. ಕೃಷಿ ಖಾತೆ ಕೊಟ್ಟರೆ ಚೆನ್ನಾಗಿ ನಿಭಾಯಿಸುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು
Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್
New Bill: ಇನ್ನು ಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ
BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.