ನಾಸಾ ಗಗನಯಾತ್ರಿಯೊಬ್ಬನ ಕಣ್ಣಲ್ಲಿ  9/11


Team Udayavani, Sep 12, 2021, 6:30 AM IST

ನಾಸಾ ಗಗನಯಾತ್ರಿಯೊಬ್ಬನ ಕಣ್ಣಲ್ಲಿ  9/11

ಸೆಪ್ಟಂಬರ್‌ 11, 2001, ನ್ಯೂಯಾರ್ಕ್‌ ನಗರದ ವಿಶ್ವ ವ್ಯಾಪಾರ ಕೇಂದ್ರ, ವಾಷಿಂಗ್ಟನ್‌ ಡಿ.ಸಿಯಲ್ಲಿನ ಪೆಂಟಗಾನ್‌ ಮತ್ತು ಪೆನ್ಸುಲ್ವೇನಿಯಾದ ಮೈದಾನದಲ್ಲಿ ವಿಮಾನಗಳ ಮೂಲಕ ದಾಳಿಗಳಾಗಿದ್ದವು. ಈ ದಾಳಿಯಿಂದಾಗಿ ಅಮೆರಿಕ ಮತ್ತು ಇಡೀ ಜಗತ್ತೇ ದಿಗ್ಭ್ರಮೆಗೆ ಒಳಗಾಗಿತ್ತು.

ಈ ಸಂದರ್ಭದಲ್ಲಿ ನಾಸಾ ಗಗನಯಾತ್ರಿ ಫ್ರಾಂಕ್‌ ಕಲ್ಬರ್ಟ್‌ಸನ್‌ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್‌) ದಿಂದ ಈ ಘಟನೆಯನ್ನು ಕಣ್ಣಾರೆ ಕಂಡಿದ್ದರು. ಘಟನೆ ಅನಂತರದ ಸ್ಥಿತಿಯನ್ನು ಬಣ್ಣಿಸಿದ್ದ ಅವರು, “ವಿಶ್ವ ವ್ಯಾಪಾರ ಕೇಂದ್ರದ ಒಂದು ಕಾಲಂನಿಂದ ಹೊಗೆಯು ವಿಚಿತ್ರ ಹೂವಿನ ರೀತಿ ಹೊರಬರುತ್ತಿದ್ದು, ಅದು ನಗರದ ದಕ್ಷಿಣ ದಿಕ್ಕಿಗೆ ಹರಿಯುತ್ತಿದೆ ಎಂದಿದ್ದರು’. ಅಷ್ಟೇ ಅಲ್ಲ,”ನನ್ನ ದೇಶದ ಅದ್ಭುತ ಜಾಗದ ಮೇಲೆ ಆಗಿರುವ ಗಾಯದಿಂದ ಹೊಗೆ ಏಳುತ್ತಿರುವುದನ್ನು ನೋಡುವುದು ಭಯಾನಕವೆನಿಸುತ್ತಿದೆ’ “ಭೂಮಿಯ ಮೇಲಿರುವ ಜೀವನವನ್ನು ಸುಧಾರಿಸುವ ಸಲುವಾಗಿ ಮೀಸಲಾಗಿರುವ ಈ ಬಾಹ್ಯಾಕಾಶ ನೌಕೆಯಲ್ಲಿ ಇದ್ದುಕೊಂಡು ಮತ್ತು ಉದ್ದೇಶಪೂರ್ವಕ ಭಯಾನಕ ಕೃತ್ಯಗಳಿಂದ ಜೀವನವು ನಾಶವಾಗುವುದನ್ನು ನೋಡುವುದು ಮನಸ್ಸಿಗೆ ಕಷ್ಟವೆನಿಸುತ್ತಿದೆ’ ಎಂದು ಬರೆದುಕೊಂಡಿದ್ದರು.

ಸರಿಯಾಗಿ 20 ವರ್ಷಗಳ ಹಿಂದೆ ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರ ಮತ್ತು ಪೆಂಟಗಾನ್‌ ಮೇಲಿನ ದಾಳಿ ನಡೆದಾಗ, ಭೂಮಿಯಲ್ಲಿ ಇಲ್ಲದ ಏಕೈಕ ಅಮೆರಿಕದ ಪ್ರಜೆ ಎಂಬುದಾಗಿ ಫ್ರಾಂಕ್‌ ಕಲ್ಬರ್ಟ್‌ಸನ್‌ ಅವರನ್ನು ಕರೆಯಲಾಗಿತ್ತು.  ಅಂದು ಅಲ್‌ಕಾಯಿದಾ ಭಯೋತ್ಪಾದಕರು ನಾಲ್ಕು ವಾಣಿಜ್ಯ ವಿಮಾನಗಳನ್ನು ಅಪಹರಿಸಿ, ಅಮೆರಿಕದ ಮೇಲೆ ಆತ್ಮಹತ್ಯಾ ದಾಳಿ ನಡೆಸಿದ್ದರು. ಎರಡು ವಿಮಾನಗಳು ನ್ಯೂಯಾರ್ಕ್‌ನಲ್ಲಿದ್ದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳ ಮೇಲೆ ದಾಳಿ ಮಾಡಿದ್ದವು. ಆಗ ಈ ಎರಡೂ ಕಟ್ಟಡಗಳು ಭೂಮಿಗೆ ಕುಸಿದು ಹೋಗಿದ್ದವು. ಮೂರನೇ ವಿಮಾನವು ಪೆಂಟಗಾನ್‌ನತ್ತ ತೆರಳಿ ದಾಳಿ ಮಾಡಿದ್ದರೆ, ನಾಲ್ಕನೇ ವಿಮಾನವು ಪೆನ್ಸುಲ್ವೇನಿಯಾದಲ್ಲಿ ಅಪಘಾತಕ್ಕೀಡಾಗಿತ್ತು. ಈ ಸಂದರ್ಭದಲ್ಲಿ 2,977 ಮಂದಿ ಸಾವನ್ನಪ್ಪಿದ್ದರು. ಅಮೆರಿಕದ ನೆಲದ ಮೇಲೆ ನಡೆದ ಅತ್ಯಂತ ದೊಡ್ಡ ದಾಳಿ ಇದಾಗಿತ್ತು.

ಭೂಮಿಯ ಮೇಲ್ಮೆ„ಯಿಂದ 400 ಕಿ.ಮೀ. ಮೇಲೆ ಇನ್ನೂ ನಿರ್ಮಾಣ ಹಂತದಲ್ಲಿದ್ದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇಬ್ಬರು ರಷ್ಯಾದ ಗಗನಯಾತ್ರಿಗಳೊಂದಿಗೆ ಕಲ್ಬರ್ಟ್‌ಸನ್‌ ಇದ್ದರು. ಅಲ್ಲಿನಿಂದಲೇ ನ್ಯೂಯಾರ್ಕ್‌ ಪಟ್ಟಣ ನೋಡಿದ ಅವರಿಗೆ ಎರಡು ದೊಡ್ಡ ಕಟ್ಟಡಗಳು ಭಾರೀ ಪ್ರಮಾಣದ ಹೊಗೆಯೊಂದಿಗೆ ಬೀಳುತ್ತಿರುವುದು ಕಂಡು ಬಂದಿತ್ತು. ಆಗ ಕಲ್ಬರ್ಟ್‌ಸನ್‌ ನಾಸಾಕ್ಕಾಗಿ ಫೋಟೋ ಮತ್ತು ವೀಡಿಯೋಗಳನ್ನು ತೆಗೆದಿದ್ದರು. ಇಡೀ ಘಟನೆಯನ್ನು ಉಪಗ್ರಹಗಳು ಸೆರೆಹಿಡಿದಿದ್ದವು.

ಘಟನೆಯಾದ ಮಾರನೇ ದಿನ ಕಲ್ಬರ್ಟ್‌ಸನ್‌ ಅವರು ತಮಗಾದ ಅನುಭವದ ಬಗ್ಗೆ ಬರೆದುಕೊಂಡಿದ್ದರು. ಅಂದರೆ “ನಿಜವಾಗಿಯೂ ಜಗತ್ತು ಇಂದು ಬದಲಾಗಿದೆ’. ನಾನು ಹೇಳುವುದು ಏನು ಅಥವಾ ನಾನು ಮಾಡುವುದೇನು ಎಂಬುದು ಈಗ ಅತ್ಯಂತ ಪುಟ್ಟದಾದರೂ, ಇಂದು ನಮ್ಮ ದೇಶಕ್ಕೆ ಏನಾಗಿದೆ ಎಂಬುದು ಅತ್ಯಂತ ಮಹತ್ವದ್ದಾಗಿದೆ. ಹಾಗೆಯೇ ಇಂದು ದಾಳಿಯಾಗಿರುವುದು ಯಾರಿಂದ? ನಾವೆಲ್ಲರೂ ಊಹೆ ಮಾಡಿದಂತೆ ಭಯೋತ್ಪಾದಕರು. ಜತೆಗೆ, ಈಗ ನಮ್ಮ ಕೋಪ ಮತ್ತು ಭಯವನ್ನು ಯಾರತ್ತ ತೋರಿಸುವುದು ಎಂಬುದೇ ಕಷ್ಟಕರವಾಗಿದೆ’ ಎಂದು ಬರೆದುಕೊಂಡು ತಮ್ಮ ಸಿಟ್ಟನ್ನು ಹೊರಹಾಕಿದ್ದರು.

ಅಂದು ಫ್ಲೈಟ್‌ ಸರ್ಜನ್‌ ಜತೆಗೂ ಕಲ್ಬರ್ಟ್‌ಸನ್‌ ಘಟನೆ ಬಗ್ಗೆ ಮಾತನಾಡಿದ್ದರು. ಅವರಿಂದ ಘಟನೆಯ ವಿವರಣೆ ಪಡೆದ ಬಳಿಕ ನಾನು ದಿಗ್ಬ್ರಮೆಗೊಂಡೆ, ಅನಂತರ ಗಾಬರಿಗೊಂಡೆ. ಇದು ನಿಜಕ್ಕೂ ಸಂಭಾಷಣೆಯಲ್ಲ. ನಾನು ಇನ್ನೂ ನನ್ನ ಟಾಮ್‌ ಕ್ಲಾನ್ಸಿ ಟೇಪ್‌ಗಳಲ್ಲಿ ಒಂದನ್ನು ಕೇಳುತ್ತಿದ್ದೇನೆ ಎಂಬುದು ನನ್ನ ಮೊದಲ ಆಲೋಚನೆಯಾಗಿತ್ತು ಎಂದು ಕಲ್ಬರ್ಟ್‌ಸನ್‌ ಹೇಳಿಕೊಂಡಿದ್ದರು. ನಮ್ಮ ದೇಶದಲ್ಲಿ ಈ ಪ್ರಮಾಣದ ದಾಳಿ ಮಾಡುವುದು ಸಾಧ್ಯವಿರಲಿಲ್ಲ. ಜತೆಗೆ ಮತ್ತಷ್ಟು ವಿನಾಶದ ಸುದ್ದಿ ಬರುವ ಮೊದಲೇ ನನಗೆ ಎಲ್ಲವನ್ನೂ ಊಹಿಸಲೂ ಸಾಧ್ಯವಾಗಲಿಲ್ಲ ಎಂದಿದ್ದರು.

ಅಷ್ಟೇ ಅಲ್ಲ, ಅಂದಿನ ಘಟನೆ ಬಗ್ಗೆ ತಮ್ಮ ಜತೆಗೆ ಇದ್ದ ಇಬ್ಬರು ರಷ್ಯಾದ ಗಗನಯಾತ್ರಿಗಳಾದ ಟೈರಿನ್‌ ಮತ್ತು ಡೆಝೋರಾವ್‌ಗೂ ವಿವರಿಸಿದ್ದರು. ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ ಮತ್ತು ಪೆಂಟಗಾನ್‌ ಮೇಲೆ ಆದ ಉಗ್ರ ಕೃತ್ಯದ ಬಗ್ಗೆ ಹೇಳಿ ಇದರಿಂದ ಆಗುವ ಪರಿಣಾಮಗಳ ಬಗ್ಗೆಯೂ ತಿಳಿಸಿದ್ದರು. ಅವರಿಬ್ಬರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ವಿಷಾದ ವ್ಯಕ್ತಪಡಿಸಿದ್ದರು ಎಂದು ಹೇಳಿಕೊಂಡಿದ್ದಾರೆ.

ಐಎಸ್‌ಎಸ್‌ನಲ್ಲಿದ್ದ ಕೆಮರಾವೊಂದರಿಂದ ಇಡೀ ದೃಶ್ಯವನ್ನು ನೋಡುತ್ತಿದ್ದೆ. ಜತೆಗೆ ವೀಡಿಯೋ ಕೆಮರಾವೊಂದರಲ್ಲಿ ಎಲ್ಲವೂ ಸೆರೆಯಾಗುತ್ತಿತ್ತು. “ವಿಶ್ವ ವ್ಯಾಪಾರ ಕೇಂದ್ರದ ಒಂದು ಕಾಲಂನಿಂದ ಹೊಗೆಯು ವಿಚಿತ್ರ ಹೂವಿನ ರೀತಿ ಹೊರಬಂದು ನಗರದ ದಕ್ಷಿಣ ದಿಕ್ಕಿಗೆ ಹರಿಯುತ್ತಿದ್ದ ಹಾಗೆ ದೃಶ್ಯವಿತ್ತು’. ಇದು ಏನೆಂಬುದು ಗೊತ್ತಾಗಿದ್ದು, ತತ್‌ಕ್ಷಣವೇ ಬಂದ ಸುದ್ದಿಯಿಂದ. ಅದಾದ ಅನಂತರವೇ ನ್ಯೂಯಾರ್ಕ್‌ನ ಪ್ರಮುಖ ಕಟ್ಟಡದ ಮೇಲೆ ದಾಳಿಯಾಗಿದೆ, ನಾವು ನೋಡಿದ್ದು ಒಂದು ಕಟ್ಟಡ ಬಿದ್ದಿದ್ದನ್ನು ಎಂಬುದು ಗೊತ್ತಾಯಿತು. ಹಾಗೆಯೇ ನೋಡನೋಡುತ್ತಲೇ ಇನ್ನೊಂದು ಕಟ್ಟಡವೂ ಸಂಪೂರ್ಣವಾಗಿ ಕುಸಿದು ಬಿತ್ತು. ಇಡೀ ದೃಶ್ಯ ಭಯಾನಕವಾಗಿತ್ತು. ಇದಾದ ಅನಂತರ ಪರಿಸ್ಥಿತಿ ಹೇಗಿರುತ್ತದೆ ಎಂಬ ಬಗ್ಗೆ ಊಹೆ ಮಾಡುವುದು ಕಷ್ಟವಾಗಿತ್ತು. ಎರಡರಿಂದ ಮೂರು ನೂರು ಮೈಲು ದೂರದಿಂದ ಈ ಘಟನೆ ನೋಡುವುದು ಮಹತ್ವದ್ದಾಗಿತ್ತು. ಆದರೆ ಘಟನೆ ನಡೆದ ಸ್ಥಳದಲ್ಲಿನ ದುರಂತ ಕ್ಷಣಗಳನ್ನು ನಾನು ಕಲ್ಪನೆ ಮಾಡಲಾರೆ ಎಂದು ಕಲ್ಬರ್ಟ್‌ಸನ್‌ ಬರೆದುಕೊಂಡಿದ್ದರು.

“ನಮ್ಮ ದೇಶದ ಮೇಲಿನ ದಾಳಿ ಮತ್ತು  ಸಾವಿರಾರು ನಾಗರಿಕರು ಹಾಗೂ ಬಹುಶಃ ನನ್ನ ಕೆಲವು ಸ್ನೇಹಿತರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬುದು ನನಗೆ ತೀರಾ ಭಾವನಾತ್ಮಕ ಸಂಗತಿಯಾಗಿತ್ತು. ಹಾಗೆಯೇ ಈ ಸಂದರ್ಭದಲ್ಲಿ ನಾನೊಬ್ಬನೇ ಏಕಾಂಗಿಯಾಗಿದ್ದೇನೆ ಎಂಬುದೂ ಇನ್ನೂ  ಭಾವನಾತ್ಮಕ ವಿಚಾರವಾಗಿತ್ತು’ ಎಂದು ಅವರು ವಿವರಿಸಿದ್ದರು.

9/11 ಪ್ರಮುಖ ದಾಳಿಕೋರರು :

ಒಸಾಮ ಬಿನ್‌ ಲಾಡೆನ್‌:

ಇಡೀ ಘಟನೆಯ ಸೂತ್ರದಾರ. ಅಲ್‌ಕಾಯಿದಾ ಸ್ಥಾಪಕ. ಕಾಲಿದ್‌ ಶೇಕ್‌ ಮೊಹಮ್ಮದ್‌ ಜತೆ ಸೇರಿ ಅಮೆರಿಕದ ಮೇಲೆ ವಿಮಾನಗಳ ಮೂಲಕ ದಾಳಿ ಮಾಡುವ ಸಂಚು ರೂಪಿಸಿದ. 2001ರಲ್ಲಿನ ವಿಶ್ವ ವ್ಯಾಪಾರ ಕೇಂದ್ರಗಳ ಮೇಲಿನ ದಾಳಿಗೆ 10 ವರ್ಷಗಳಾದ ಹೊತ್ತಿನಲ್ಲೇ ಪಾಕಿಸ್ಥಾನದಲ್ಲಿ ಸಿಐಎ ಈತನನ್ನು ಕೊಂದು ಹಾಕಿತು.

ಖಾಲಿದ್‌ ಶೇಕ್‌ ಮೊಹಮ್ಮದ್‌  :

ಮೂಲತಃ ಪಾಕಿಸ್ಥಾನದ ಈತ ಅಮೆರಿಕಕ್ಕೆ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಕಲಿಯಲು ಹೋಗಿದ್ದ. ಅಲ್ಲೇ ಧಾರ್ಮಿಕ ಮತಾಂಧತೆ ಬೆಳೆಸಿಕೊಂಡಿದ್ದ ಈತ 1990ರಲ್ಲೇ ಏಷ್ಯಾದಲ್ಲಿ 12 ವಿಮಾನಗಳನ್ನು ಅಪಹರಿಸಿ ದಾಳಿ ನಡೆಸುವ ಸಂಚು ರೂಪಿಸಿದ್ದ. ಇವು ವಿಫ‌ಲವಾಗಿದ್ದವು. ಕಡೆಗೆ ಒಸಾಮಾ ಬಿನ್‌ ಲಾಡೆನ್‌ ಜತೆಗೂಡಿ ಅಮೆರಿಕದ ಮೇಲಿನ ದಾಳಿಗೆ ಸಂಚು ರೂಪಿಸಿದ. ಸದ್ಯ ಅಮೆರಿಕದ ಜೈಲಿನಲ್ಲಿದ್ದಾನೆ.

ಮೊಹಮ್ಮದ್‌ ಆತೀಫ್ :

ಈತ ಅಲ್‌ಕಾಯಿದಾದ ಮಿಲಿಟರಿ ಕಮಾಂಡರ್‌. ಈತನ ಮೂಲಕವೇ ಖಾಲಿದ್‌ ಶೇಕ್‌ ಮೊಹಮ್ಮದ್‌ ಲಾಡೆನ್‌ನನ್ನು ಭೇಟಿ ಮಾಡಿದ್ದು. ಲಾಡೆನ್‌, ಖಾಲಿದ್‌, ಆತೀಫ್ ಸೇರಿಯೇ ಅಮೆರಿಕದ ಮೇಲೆ ದಾಳಿಗೆ ಸಂಚು ರೂಪಿಸಿದ್ದರು. 1999ರಲ್ಲೇ ಯೋಜನೆ ಸಿದ್ಧವಾಗಿತ್ತು. 2001ರ ನವೆಂಬರ್‌ನಲ್ಲಿ ಅಮೆರಿಕ ಅಫ್ಘಾನಿಸ್ಥಾನದಲ್ಲಿ ಅಲ್‌ಕಾಯಿದಾ ಉಗ್ರರ ಮೇಲೆ ದಾಳಿ ಶುರು ಮಾಡಿದಾಗ ಈತ ಹತನಾದ.

ಮೊಹಮ್ಮದ್‌ ಅಟ್ಟಾ  :

ವಿಶ್ವ ವ್ಯಾಪಾರ ಕೇಂದ್ರದ ಮೇಲೆ ವಿಮಾನ ನುಗ್ಗಿಸಿದ ಮೊದಲ ದಾಳಿಕೋರ. ಈಜಿಪ್ಟ್ ನಿವಾಸಿ. ಮೊದಲಿಗೆ ದಾಳಿಕೋರರಲ್ಲಿ ಈತನ ಹೆಸರೇ ಇರಲಿಲ್ಲ. ಆದರೆ ಲಾಡೆನ್‌ ಈತನಿಗೇ ನಾಯಕತ್ವ ಕೊಟ್ಟು ದಾಳಿ ಮಾಡಲು ಆದೇಶಿಸಿದ್ದ.

ಮಾರ್ವಲ್‌ ಅಲ್‌ ಶೇಹಿ  :

ವಿಶ್ವ ವ್ಯಾಪಾರ ಕೇಂದ್ರದ ಮೇಲೆ  ವಿಮಾನ ನುಗ್ಗಿಸಿದ ಎರಡನೇ ದಾಳಿಕೋರ. ಈತ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಈತ ಜರ್ಮನಿಗೆ ತೆರಳಿ, ಅಲ್ಲಿ ಕೆಲವು ದಾಳಿಕೋರರ ಪರಿಚಯ ಮಾಡಿಕೊಂಡಿದ್ದ.

ಝೈದ್‌ ಜರ್ಹಾ :

ಈತ ಅಮೆರಿಕದ ಕ್ಯಾಪಿಟೋಲ್‌ ಮೇಲೆ ದಾಳಿ ಮಾಡುವ ಸಲುವಾಗಿ ವಿಮಾನ ತೆಗೆದುಕೊಂಡು ಹೋಗಿದ್ದ. ಆದರೆ, ಅಲ್ಲಿದ್ದ ಪ್ರಯಾಣಿಕರು ಇದಕ್ಕೆ ಅಡ್ಡಿಪಡಿಸಿದ್ದರು. ಕಡೆಗೆ ಪೆನ್ಸುಲ್ವೇನಿಯಾದಲ್ಲಿ ವಿಮಾನ ಬಿದ್ದಿತ್ತು. ಈತ ಮೂಲತಃ ಲೆಬೆನಾನ್‌ನವನು.

ಹನಿ ಹಂಜೂರ್‌:

ಈತ ಪೆಂಟಗಾನ್‌ ಮೇಲೆ ದಾಳಿ ನಡೆಸಿದ ವಿಮಾನದ ಪೈಲಟ್‌. ಈತನೂ ಸೌದಿ ಅರೆಬಿಯಾದವನು. 1991ರಲ್ಲೇ ಅಮೆರಿಕಕ್ಕೆ ಓದುವ ಸಲುವಾಗಿ ತೆರಳಿದ್ದ. 1990ರಲ್ಲೇ ವಾಣಿಜ್ಯ ವಿಮಾನದ ಪೈಲಟ್‌ ಆಗಲು ಹೋಗಿ ವೈಫ‌ಲ್ಯ ಹೊಂದಿದ್ದ.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

ravishankar-guruji

Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್‌

iran

Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.