ಈ ವ್ಯಕ್ತಿ ಪ್ರತಿದಿನ 6 ಕೆಜಿ ಚಿನ್ನ ಧರಿಸ್ತಾನೆ : 3 ಕೆಜಿ ಚಿನ್ನದ ಶರ್ಟ್ ಖರೀದಿಸಿದ್ದಾನೆ
Team Udayavani, Sep 13, 2021, 10:00 AM IST
ಮೆಕ್ಸಿಕೋ ಸಿಟಿ: ಪುಣೆಯ ದತ್ತ ಫುಗೆ ಎಂಬ ವ್ಯಕ್ತಿಯೊಬ್ಬ ಪ್ರತಿದಿನ ಬರೋಬ್ಬರಿ 6 ಕೆಜಿಯಷ್ಟು ಚಿನ್ನವನ್ನು ಧರಿಸುತ್ತಿದ್ದುದು ಹಾಗೂ ಚಿನ್ನದ ಮೇಲಿನ ಮೋಹದಿಂದ 3 ಕೆಜಿ ತೂಕದ ಚಿನ್ನದ ಎಳೆಗಳಿಂದ ಮಾಡಿದ ಶರ್ಟ್ ಅನ್ನೂ ಖರೀದಿ ಸಿದ್ದು ಭಾರೀ ಸುದ್ದಿಯಾಗಿತ್ತು.
ಈಗ ಅಂಥದ್ದೇ ಮತ್ತೂಬ್ಬ “ಸ್ವರ್ಣಮೋಹಿ’ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದಾನೆ. ಈತ ಮೆಕ್ಸಿಕೋದ ರ್ಯಾಪರ್ ಡ್ಯಾನ್ ಸುರ್. ವಯಸ್ಸು 23. ಈತನ ವಿಶೇಷ ವೆಂದರೆ, ಈತ ಚಿನ್ನದ ಸರಗಳನ್ನೇ ತನ್ನ ತಲೆಗೂದಲಾಗಿ ಮಾಡಿ ಕೊಂಡಿದ್ದಾನೆ! ಅಷ್ಟೇ ಅಲ್ಲ, ಈತ ತನ್ನ ಹಲ್ಲುಗಳಿಗೂ ಹಳದಿ ಲೋಹದ ಲೇಪನ ಮಾಡಿಕೊಂಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸಾಮಾನ್ಯವಾಗಿ, ಬೋಳು ತಲೆಯವರಿಗೆ “ಹೇರ್ ಟ್ರಾನ್ಸ್ ಪ್ಲಾಂಟೇಶನ್’ ಎಂಬ ವೈದ್ಯಕೀಯ ಪ್ರಕ್ರಿಯೆಯ ಮೂಲಕ ತಲೆಗೂದಲನ್ನು ಈ ಪ್ರಕ್ರಿಯೆಗೆ ಒಳಗಾಗುವ ತಲೆಗೆ ಜೋಡಿಸಲಾಗುತ್ತದೆ. ಆನಂತರ ಅವು ನೈಜ ಕೂದಲಿನಂತೆ ಕಾಣಿಸತೊಡಗುತ್ತವೆ.
ಆದರೆ, ಡ್ಯಾನ್ ಸುರ್, ತನ್ನ ತಲೆಯಲ್ಲಿರುವ ಕೂದಲುಗಳನ್ನೆಲ್ಲ ಕಿತ್ತುಹಾಕಿ, ತಲೆಯ ಬುಡಭಾ ಗಕ್ಕೆ ಕೊಕ್ಕೆ(ಹುಕ್ಸ್)ಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸಿಕೊಂಡು ಅವಕ್ಕೆ ಚಿನ್ನದ ಸರಗಳನ್ನು ಸಿಕ್ಕಿಸಿಕೊಂಡಿದ್ದಾನೆ! ಚಿನ್ನದ ಸರಗಳಷ್ಟೇ ಅಲ್ಲ, ಆ ಸರಗಳಿಗೆ ವಜ್ರ, ಹರಳುಗಳು ಪೋಣಿಸಿಕೊಂಡು ತೂಗುಹಾಕಿ ದ್ದಾನೆ. ಹೀಗೆ “ಚಿನ್ನದ ಕೂದಲು’ ಗಳಿಸಿದ ಬಳಿಕ ಹೊಸ ಮ್ಯೂಸಿಕ್ ವೀಡಿಯೋವನ್ನೂ ಡ್ಯಾನ್ ಸುರ್ ಬಿಡುಗಡೆ ಮಾಡಿದ್ದಾನೆ. ಈ ಮೂಲಕ ಈತ ಇತಿಹಾಸದಲ್ಲೇ ತಲೆಕೂದಲ ನ್ನು ತೆಗಿಸಿ, ಅವುಗಳ ಬದಲು ಚಿನ್ನದ ಸರಗಳನ್ನು ಕೂದಲಿನಂತೆ ಹಾಕಿಸಿಕೊಂಡ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾನೆ. ಈ ಶಸ್ತ್ರ ಚಿಕಿತ್ಸೆಗೆ ಎಷ್ಟು ವೆಚ್ಚವಾಗಿದೆ ಎಂಬುದು ಬಹಿರಂಗಗೊಂಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.