ಶಾಲೆಯಿಂದ ಹೊರಗುಳಿದ 597ಮಕ್ಕಳು

ಕಳೆದ ಎರಡು ಸಾಲಿನಲ್ಲಿ 30ಕ್ಕೂ ಹೆಚ್ಚು ಬಾಲಕಾರ್ಮಿಕರನ್ನು ರಕ್ಷಿಸಿದ್ದಾರೆ.

Team Udayavani, Sep 13, 2021, 5:41 PM IST

ಶಾಲೆಯಿಂದ ಹೊರಗುಳಿದ 597ಮಕ್ಕಳು

ದೇವನಹಳ್ಳಿ: ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಮುಚ್ಚಿದ್ದ ಶಾಲೆಗಳು ಇದೀಗ ಜಿಲ್ಲೆಯಾದ್ಯಂತ ಪ್ರಾರಂಭವಾಗಿದೆ. ಉತ್ಸಾಹದಿಂದ ಮಕ್ಕಳು ಶಾಲೆಯತ್ತ ಮುಖ ಮಾಡುತ್ತಿದ್ದಾರೆ. ಆದರೂ ಜಿಲ್ಲೆಯಲ್ಲಿ 597 ಮಕ್ಕಳು ಶಿಕ್ಷಣ ಮೊಟಕು ಗೊಳಿಸಿದ್ದಾರೆ ಎಂಬ ಬೆಳಕಿಗೆ ಬಂದಿದೆ.

ಆರರಿಂದ ಹದಿನಾರು ವರ್ಷದ ಮಕ್ಕಳು ಸರಾಸರಿ ವರದಿಯಂತೆ ಎಸ್ಸೆಸ್ಸೆಲ್ಸಿ ಬಳಿಕ ಶಿಕ್ಷಣ ಮೊಟಕುಗೊಳಿಸಿದವರ ಸಂಖ್ಯೆ ಹೆಚ್ಚಿದೆ. ಎಸ್ಸೆಸ್ಸೆಲ್ಸಿ ತೇರ್ಗಡೆ ಯಾದರೂ ಮುಂದಿನ ಶಿಕ್ಷಣಕ್ಕೆ ಹೋಗಲು ಬಯಸದ ಕೆಲವು ವಿದ್ಯಾರ್ಥಿಗಳಿದ್ದಾರೆ. ಮತ್ತೆ ಕೆಲವು ವರದಿಯಂತೆ ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಲಿ ಯಾಗಿದ್ದಾರೆ. ಬಡತನ ಅನಾರೋಗ್ಯ ಮತ್ತಿತರ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಸೇರಿದಂತೆ ಅನೇಕ ಕಾರಣಗಳಿಂದ ಮಕ್ಕಳು ಕಾಲೇಜು ವಿದ್ಯಾಭ್ಯಾಸದಿಂದ ದೂರವಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಪೋಷಕರ ಮನವೊಲಿಕೆ: ಜಿಲ್ಲೆಯಲ್ಲಿ 395 ಮಕ್ಕಳು ಶಾಲೆಗೆ ದಾಖಲಾಗಿದ್ದರೂ ಹಾಜರಾಗುತ್ತಿಲ್ಲ. ಕೆಲವರು ವರ್ಗಾವಣೆ ಪತ್ರ ಪಡೆಯುತ್ತಿದ್ದಾರೆ. ಮತ್ತೆ 192 ಮಕ್ಕಳು ಶಾಲೆಗೆ ದಾಖಲಾಗಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ. ಇತ್ತೀಚೆಗೆ ಶಿಕ್ಷಣ ಇಲಾಖೆಯ ಪ್ರವೇಶ ದಾಖಲೆಯಲ್ಲಿ ಈ ಅಂಶ ತಿಳಿದುಬಂದಿದ್ದು,

ಪ್ರಸ್ತುತ 30 ಮಕ್ಕಳನ್ನು ಪತ್ತೆ ಮಾಡಿ ಶಾಲೆಯಿಂದ ಹೊರಗುಳಿಯಲು ಕಾರಣವೇನೆಂಬ ‌ಪರಿಶೀಲನೆ ಮಾಡಿದೆ. ಶಿಕ್ಷಣ ಇಲಾ ಖೆ ಪೋಷಕರನ್ನು ಮನವೊಲಿಸಿ ಮತ್ತೆ ಮಕ್ಕಳ ನ್ನು ಶಾಲೆಯತ್ತ ಕರೆತರುವ ಪ್ರಯತ್ನ ‌ನಡೆಯುತ್ತಿದೆ.

ಶಾಶ್ವತವಾಗಿ ಶಿಕ್ಷಣಕ್ಕೆ ತಿಲಾಂಜಲಿ?: ಕೊರೊನಾ ಕಾರಣದಿಂದ ಸುಮಾರು 18 ತಿಂಗಳುಗಳ ಕಾಲ ಶಾಲಾ ಕಾಲೇಜುಗಳು ಮುಚ್ಚಿದ್ದವು. ಈ ಹಿನ್ನೆಲೆಯಲ್ಲಿ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಬಾಲಕಾರ್ಮಿಕರಾಗಿ ದುಡಿಮೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಬಾಲಕಾರ್ಮಿಕ ಇಲಾಖೆ ನಿರಂತರ ವಾಗಿ ಕಾರ್ಯಾಚರಣೆ ನಡೆಸಿದ್ದರಿಂದ ಕಳೆದ ಎರಡು ಸಾಲಿನಲ್ಲಿ 30ಕ್ಕೂ ಹೆಚ್ಚು ಬಾಲಕಾರ್ಮಿಕರನ್ನು ರಕ್ಷಿಸಿದ್ದಾರೆ. ಹಲವು ಮಕ್ಕಳು ಮಾಂಸದಂಗಡಿ, ಗ್ಯಾರೇಜ್‌
ಸೇರಿದಂತೆ ಹಲವು ಕಡೆಗಳಲ್ಲಿ ಕಾರ್ಮಿಕರಾಗಿ ತೊಡಗಿಸಿಕೊಂಡಿದ್ದು, ಶಾಶ್ವತವಾಗಿ ಶಿಕ್ಷಣಕ್ಕೆ ತಿಲಾಂಜಲಿ ಇಡುವ ಸಾಧ್ಯತೆ ದಟ್ಟವಾಗಿದೆ.

ಎಸ್ಸೆಸ್ಸೆಲ್ಸಿಬಳಿಕಕಾಲೇಜು ಮೆಟ್ಟಿಲು ತುಳಿಯುವುದರಲ್ಲಿ ಹೆಚ್ಚು ಬಹುಪಾಲು ಹೆಣ್ಣುಮಕ್ಕಳಿದ್ದಾರೆ. ಪ್ರೌಢ ಶಾಲೆ ಶಿಕ್ಷಣ ಮುಗಿಯುತ್ತಿದ್ದಂತೆ ಹೆಣ್ಣುಮಕ್ಕಳಿಗೆ ಪೋಷಕರು ಮದುವೆ ಮಾಡಲು ಮುಂದಾಗಿದ್ದಾರೆ. ಇದೇ ಪ್ರಮುಖ ಕಾರಣಕ್ಕೆ ಬಹುತೇಕ ವಿದ್ಯಾರ್ಥಿನಿಯರು ಕಾಲೇಜು ಮೆಟ್ಟಿಲು ಹತ್ತುವ ಕನಸುಕನಸಾಗಿಯೇ ಉಳಿದಿದೆ ಎನ್ನಲಾಗುತ್ತಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಕರೆತರುವ ಪ್ರಯತ್ನ ಮಾಡುತ್ತಿದೆ. ಶಿಕ್ಷಣವಂತರಾದರೆ ಮಾತ್ರ ಮಕ್ಕಳ ಸರ್ವತೋಮುಖಅಭಿವೃದ್ಧಿ ಸಾಧ್ಯವಾಗುತ್ತದೆಎಂದು ಶಿಕ್ಷಣ ತಜ್ಞರು ಹೇಳುತ್ತಾರೆ.

ಜಿಲ್ಲೆಯಲ್ಲಿ ಪ್ರಸ್ತುತ 30 ಮಕ್ಕಳನ್ನು ಗುರುತಿಸಿದ್ದು, ಎಲ್ಲರನ್ನು ಮತ್ತೆ ಶಾಲೆಗೆಕರೆತರುವ ಪ್ರಯತ್ನ ನಡೆದಿದೆ. ಇದರಲ್ಲಿ ಪ್ರೌಢಶಾಲೆ ಬಳಿಕ ಶಿಕ್ಷಣ ಮೊಟಕುಗೊಳಿಸಿದವರ ಸಂಖ್ಯೆ ಹೆಚ್ಚಿದೆ.ಇದರಲ್ಲಿ ಎರಡು ವರ್ಗ ಗಳಿದ್ದು, ಶಾಲೆಗೆ ದಾಖಲಾಗಿ ಹಾಜರಾಗದಿರುವುದು, ಶಾಲೆಗೆ ದಾಖಲಾಗದಿರುವುದು. ಈ ರೀತಿಯಮಕ್ಕಳಬಗ್ಗೆ ನಿಗಾವಹಿಸಲಾಗಿದೆ.
ಗಂಗಮಾರೇಗೌಡ, ಜಿಲ್ಲಾ ಉಪನಿರ್ದೇಶಕರು, 
ಸಾರ್ವಜನಿಕ ಶಿಕ್ಷಣ ಇಲಾಖೆ

ಟಾಪ್ ನ್ಯೂಸ್

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’

Special Train: ಉಡುಪಿ-ಪ್ರಯಾಗರಾಜ್‌ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ

Special Train: ಉಡುಪಿ-ಪ್ರಯಾಗರಾಜ್‌ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ

New-CEC

CEC Appoint: ಜ್ಞಾನೇಶ್‌ ಕುಮಾರ್‌ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ 

Udupi: ಮತ್ಸ್ಯಗಂಧ ರೈಲಿಗೆ ನೂತನ ಎಲ್‌ಎಚ್‌ಬಿ ಬೋಗಿ ಅಳವಡಿಕೆ

Udupi: ಮತ್ಸ್ಯಗಂಧ ರೈಲಿಗೆ ನೂತನ ಎಲ್‌ಎಚ್‌ಬಿ ಬೋಗಿ ಅಳವಡಿಕೆ

ಕಾಂಞಂಗಾಡ್‌ – ಕಾಣಿಯೂರು ಹಳಿ ನಿರ್ಮಾಣಕ್ಕೆ ಕರ್ನಾಟಕ ಅನುಮತಿ ನಿರೀಕ್ಷೆ: ಸಂಸದ ಉಣ್ಣಿತ್ತಾನ್‌

ಕಾಂಞಂಗಾಡ್‌ -ಕಾಣಿಯೂರು ಹಳಿ ನಿರ್ಮಾಣಕ್ಕೆ ಕರ್ನಾಟಕ ಅನುಮತಿ ನಿರೀಕ್ಷೆ: ಸಂಸದ ಉಣ್ಣಿತ್ತಾನ್‌

Aranthodu: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾರು ಅಪಘಾತ

Aranthodu: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾರು ಅಪಘಾತ

Udupi-Kasaragod: ಪರ್ಯಾಯ ಮಾರ್ಗ ಮೂಲಕ ಅನುಷ್ಠಾನಕ್ಕೆ ಒತ್ತಾಯಿಸಿ ಫೆ.20ರಂದು ಬೃಹತ್‌ ಜಾಥಾ

Udupi-Kasaragod: ಪರ್ಯಾಯ ಮಾರ್ಗ ಮೂಲಕ ಅನುಷ್ಠಾನಕ್ಕೆ ಒತ್ತಾಯಿಸಿ ಫೆ.20ರಂದು ಬೃಹತ್‌ ಜಾಥಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

24-bng

Bengaluru: ಜಪ್ತಿ ಮಾಡಿದ ವಸ್ತುಗಳ ಮೇಲೆ ಕ್ಯೂಆರ್‌ ಕೋಡ್‌: ಪೊಲೀಸ್‌ ಆಯುಕ್ತ

WhatsApp Image 2025-01-22 at 01.46.02

ನಿವೃತ್ತ ಬಿಸಿಯೂಟ ಸಿಬಂದಿಗೆ ಇಡುಗಂಟು: ಶಿಕ್ಷಣ ಇಲಾಖೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-190: ಎಲ್ಲ ತಿಳಿದಿದೆ ಎಂಬ ಪ್ರಜ್ಞೆ ಅಪಾಯಕಾರಿ

Udupi: ಗೀತಾರ್ಥ ಚಿಂತನೆ-190: ಎಲ್ಲ ತಿಳಿದಿದೆ ಎಂಬ ಪ್ರಜ್ಞೆ ಅಪಾಯಕಾರಿ

tennis

ಫೆ. 24ರಿಂದ ಬೆಂಗಳೂರು ಓಪನ್‌ ಟೆನಿಸ್‌

1-s-n

ಮಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಡರ್ಟ್‌ ಕಾರ್‌ ರೇಸ್‌ಗೆ ತೆರೆ

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’

Special Train: ಉಡುಪಿ-ಪ್ರಯಾಗರಾಜ್‌ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ

Special Train: ಉಡುಪಿ-ಪ್ರಯಾಗರಾಜ್‌ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.