ತಮಿಳುನಾಡಿಗೇಕೆ ‘ನೀಟ್’ ಕಂಡರೆ ಆಕ್ರೋಶ?
Team Udayavani, Sep 14, 2021, 8:46 AM IST
ಪ್ರತಿ ಬಾರಿಯೂ ನೀಟ್ ಪರೀಕ್ಷೆ ಬಂದರೆ ಸಾಕು, ತಮಿಳುನಾಡು ಕಡೆಯಿಂದ ಆಕ್ರೋಶ, ವಿರೋಧ ಎಲ್ಲವೂ ವ್ಯಕ್ತವಾಗುತ್ತವೆ. ಇದುವರೆಗೆ ನೀಟ್ ಅನ್ನು ನಖಶಿಖಾಂತ ವಿರೋಧ ಮಾಡಿಕೊಂಡು ಬಂದ ರಾಜ್ಯವೆಂದರೆ ತಮಿಳುನಾಡು ಮಾತ್ರ. ನೀಟ್‌ನಲ್ಲಿ ನಮ್ಮ ಹುಡುಗರು ಪಾಸಾಗುವುದೇ ಇಲ್ಲ, ಸೀಟುಗಳೆಲ್ಲವೂ ಬೇರೆ ರಾಜ್ಯ ಗಳ ಪಾಲಾಗುತ್ತಿವೆ ಎಂಬುದು ತಮಿಳುನಾಡಿನ ಆರೋಪ. ಹೀಗಾಗಿಯೇ, ಸೋಮವಾರ ನೀಟ್ ವಿರೋಧಿಸಿ ವಿಧಾನಸಭೆಯಲ್ಲಿ ಮಸೂದೆಗೆ ಅಂಗೀಕಾರ ಮಾಡಿಕೊಳ್ಳಲಾಗಿದೆ.
ಅಷ್ಟಕ್ಕೂ ನೀಟ್ ಅಂದರೇನು?
ದೇಶದಲ್ಲಿರುವ ಸುಮಾರು 90 ಸಾವಿರ ವೈದ್ಯಕೀಯ,ದಂತ ವೈದ್ಯಕೀಯ ಮತ್ತು ಬಿಡಿಎಸ್‌ಕೋರ್ಸ್‌ಗಳ ಪ್ರವೇಶಕ್ಕಾಗಿ ಪ್ರತಿ ವರ್ಷದ ಮೇನಲ್ಲಿಈಪರೀಕ್ಷೆ ನಡೆಸಲಾಗುತ್ತದೆ. (ಈಗ ಕೊರೊನಾ ಕಾರಣ ದಿಂದ ಸೆಪ್ಟೆಂಬರ್ ನಲ್ಲಿ ನಡೆಸಲಾಗಿದೆ.) ಮೊದಲಿಗೆ ಸಿಬಿಎಸ್‌ಇ ಮಂಡಳಿ ಈ ಪರೀಕ್ಷೆಯನ್ನು ನಡೆಸುತ್ತಿತ್ತು. ಈಗ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿದೆ. ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್ ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ನೀಟ್ ನಡೆಯುತ್ತದೆ. ಮೂರು ಗಂಟೆಗಳಲ್ಲಿ 180 ಅಂಕಗಳ ಪರೀಕ್ಷೆ ಎದುರಿಸಬೇಕು. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಪ್ರತ್ಯೇಕವಾಗಿ ಮೂರು ಪರೀಕಗಳು ನಡೆಯುತ್ತವೆ. ನೀಟ್‌ನಲ್ಲಿ ಪಾಸಾದವರಿಗೆ ಕೌನ್ಸೆಲಿಂಗ್ ಮೂಲಕ ವೈದ್ಯಕೀಯ ಶಿಕ್ಷಣದ ಪ್ರವೇಶ ನೀಡಲಾಗುತ್ತದೆ.
ನೀಟ್ ಇತಿಹಾಸ
ನೀಟ್ ಪ್ರಸ್ತಾಪ ಶುರುವಾಗಿದ್ದು 2012ರಲ್ಲಿ. ಮೂಲತಃ ಆ ವರ್ಷವೇ ನೀಟ್ ಅನ್ನು ಸಿಬಿಎಸ್‌ಇ ಮತ್ತು ಭಾರತೀಯ ವೈದ್ಯಕೀಯ ಮಂಡಳಿ ಜಂಟಿ ಯಾಗಿ ನಡೆಸಬೇಕಿತ್ತು. ಆದರೆ, ಆ ವರ್ಷ ನಡೆಸಲು ಆಗದೇ ಒಂದು ವರ್ಷದ ಕಾಲ ಮುಂದೂಡಿಕೆ ಮಾಡಲಾಯಿತು. 2013ರ ಮೇ 5ರಂದು ದೇಶದ ಮೊದಲ ನೀಟ್ ನಡೆಯಿತು. ಆದರೆ, ಅದೇ ವರ್ಷದ ಜುಲೈ 18ರಂದು ಸುಪ್ರೀಂ ಕೋರ್ಟ್ ನೀಟ್ ಅನ್ನೇ ರದ್ದುಪಡಿಸಿ, ವೈದ್ಯಕೀಯ ಸೀಟುಗಳ ಹಂಚಿಕೆ ವಿಚಾರದಲ್ಲಿ ಎಂಸಿಐ ಮಧ್ಯಪ್ರವೇಶ ಮಾಡಬಾರದು ಎಂದಿತ್ತು. ಹೀಗಾಗಿ 2014 ಮತ್ತು 2015ರಲ್ಲಿ ನೀಟ್ ನಡೆಯಲಿಲ್ಲ. ಆದರೆ, 2016ರಲ್ಲಿ ತನ್ನದೇ ತೀರ್ಪನ್ನು ಸುಪ್ರೀಂಕೋರ್ಟ್ ಬದಲಾವಣೆ ಮಾಡಿದ್ದರಿಂದ ಮತ್ತೆ ಪರೀಕ್ಷೆ ಶುರುವಾಯಿತು.
ನೀಟ್ ಕಷ್ಟವೇ?
ತಮಿಳುನಾಡು ಸರ್ಕಾರದ ಪ್ರಕಾರ ನೀಟ್ ತೀರಾ ಕಷ್ಟಕರ. ನೀಟ್ ಆರಂಭವಾದಾಗಿನಿಂದ ತಮಿಳುನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ 15. ಭಾನುವಾರ ಪರೀಕ್ಷೆ ಆರಂಭವಾಗುವ ಮೊದಲು ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ತಮಿಳುನಾಡಿನಲ್ಲಿ ತೀವ್ರ ಆಕ್ಷೇಪವೂ ವ್ಯಕ್ತವಾಗಿದೆ. ನೀಟ್ ಬೇಡವೇ ¸ ಬೇಡ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನವೂ ಶುರುವಾಗಿದೆ.
ಏಕೆ ಕಷ್ಟ?
ತಮಿಳುನಾಡು ಸರ್ಕಾರ ಹೇಳುವ ಪ್ರಕಾರ, ನೀಟ್ ಪ್ರಶ್ನೆ ಪತ್ರಿಕೆಯನ್ನು ತಯಾರು ಮಾಡುವುದು ಸಿಬಿಎ ಸ್‌ಇ ಮತ್ತು ಐಸಿಎಸ್‌ಇ ಸಿಲಬಸ್ ಆಧಾರದ ಮೇಲೆ. ಆದರೆ, ತಮಿಳುನಾಡಿನ ಶಿಕ್ಷಣ ಮಂಡಳಿ ಅಡಿಯಲ್ಲಿ ಕಲಿತವರಿಗೆ ನೀಟ್‌ನಲ್ಲಿ ಬರುವ ಪ್ರಶ್ನೆಗಳ ಪರಿಚಯವೇ ಇರುವುದಿಲ್ಲ. ಹೀಗಾಗಿ, ಇಲ್ಲಿನ ವಿದ್ಯಾರ್ಥಿಗಳಿಗೆ ತೀರಾ ಕಷ್ಟವಾಗುತ್ತಿದೆ. ಇದೇ ಕಾರಣಕ್ಕಾಗಿ ನೀಟ್ ಎದುರಿಸುವುದಕ್ಕೇ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ.
ತ.ನಾಡು ಸರ್ಕಾರದ ಆಕ್ರೋಶವೇನು?
ಇಡೀ ರಾಜ್ಯದಲ್ಲಿ ನಾವು ಕಷ್ಟಬಿದ್ದು, ನಮ್ಮ ಜನರ ತೆರಿಗೆ ಹಣದಲ್ಲಿ ವೈದ್ಯಕೀಯ ಕಾಲೇಜುಗಳನ್ನು ನಡೆಯುತ್ತಿದ್ದೇವೆ. ಆದರೆ, ನೀಟ್‌ನಿಂದಾಗಿ ನಮ್ಮ ವಿದ್ಯಾರ್ಥಿಗಳಿಗೇ ಸೀಟು ಸಿಗುತ್ತಿಲ್ಲ. ಬೇರೆ ರಾಜ್ಯಗಳ ವಿದ್ಯಾರ್ಥಿಗಳು ನಮ್ಮ ವಿದ್ಯಾರ್ಥಿಗಳ ಸೀಟುಗಳನ್ನು ಅಕ್ಷರಶಃ ಕಸಿದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಎಂಬಿಬಿಎಸ್ ಕಲಿತು, ವಾಪಸ್ ತವರಿಗೆ ತೆರಳುತ್ತಾರೆ. ಇದರಿಂದ ನಮ್ಮ ರಾಜ್ಯಕ್ಕೆ ಯಾವುದೇ ಉಪಯೋಗವಾಗುತ್ತಿಲ್ಲ. ವೈದ್ಯರಾಗುವ ಕನಸುಹೊತ್ತ ಸಾವಿರಾರು ವಿದ್ಯಾರ್ಥಿಗಳು ನೀಟ್ ಪಾಸಾಗದೇ ನಿರಾಶೆ ಅನುಭವಿಸುತ್ತಿದ್ದಾರೆ. ನಮಗೆ ನೀಟ್ ಸಹವಾಸವೇ ಬೇಡ ಎನ್ನುತ್ತಿದೆ ತಮಿಳುನಾಡು ಸರ್ಕಾರ.
ನೀಟ್ ಬೇಡವೆಂದು ಮಸೂದೆ
ಭಾನುವಾರವಷ್ಟೇ ನೀಟ್ ಆಗಿದೆ. ಆದರೆ, ವಿದ್ಯಾರ್ಥಿಯ ಆತ್ಮಹತ್ಯೆ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ, ನೀಟ್ ರದ್ದು ಪಡಿಸಿ ಮಸೂದೆಯೊಂದನ್ನು ಸಿದ್ಧಪಡಿಸಿ ವಿಧಾನ ಸಭೆಯಲ್ಲಿ ಸೋಮವಾರ ಅನು ಮೋದನೆ ಪಡೆದಿದೆ. ಬಿಜೆಪಿ ಹೊರತು ಪಡಿಸಿ ಎಲ್ಲಾ ಪಕ್ಷಗಳೂ ಈ ಮಸೂದೆಗೆ ಒಪ್ಪಿಗೆ ನೀಡಿವೆ. ಇನ್ನು ಈ ಮಸೂದೆ ರಾಷ್ಟ್ರಪತಿಗಳ ಸಹಿಗೆ ಹೋಗುತ್ತದೆ. ಅಲ್ಲಿ ಸಹಿ ಹಾಕಿದರೆ ಮಾತ್ರ, ತಮಿಳುನಾಡಿಗೆ ವಿನಾಯಿತಿ ಸಿಗಲಿದೆ. ಇಲ್ಲವಾದರೆ, ಮುಂದುವರಿಯುತ್ತದೆ. ಎಐಎಡಿಎಂಕೆ ಕಾಲದಲ್ಲೂ ಆಗಿತ್ತು ಈ ಹಿಂದೆ ತಮಿಳು ನಾಡಿನಲ್ಲಿದ್ದ ಎಐಎಡಿಎಂಕೆ ಸರ್ಕಾರವೂ ನೀಟ್‌ನಿಂದ ವಿನಾಯ್ತಿ ಬೇಕು ಎಂದು ವಿಧಾನಸಭೆಯಲ್ಲಿ ಮಸೂದೆ ಮಂಡಿಸಿ ಅನುಮೋದನೆ ಪಡೆದಿತ್ತು. ಆದರೆ, ರಾಷ್ಟ್ರಪತಿಗಳು ಸಹಿ ಹಾಕದೇ ಇದ್ದುದರಿಂದ ವಿನಾಯ್ತಿ ಸಿಕ್ಕಿರಲಿಲ್ಲ. ಆದರೆ, ಯುಪಿಎ ಅವಧಿಯಲ್ಲಿ ಡಿಎಂಕೆಯ ಎಂ.ಕರುಣಾನಿಧಿ ಅವರು ನೀಟ್ ನಿಂದ ವಿನಾಯ್ತಿ ಪಡೆಯುವಲ್ಲಿ ಸಫಲರಾಗಿದ್ದರು. ಕಾಂಗ್ರೆಸ್ ಮೇಲೆ ಒತ್ತಡ ತಂದು ರಾಷ್ಟ್ರಪತಿಗಳ ಬಳಿ ಸಹಿ ಹಾಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ, ನಂತರ ಬಂದ ಎಐಎಡಿಎಂಕೆಗೆ ಇದು ಸಾಧ್ಯವಾಗಲಿಲ್ಲ. ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರ, ನೀಟ್ ವಿರೋಧಿ ಕ್ರಮ ತೆಗೆದು ಕೊಳ್ಳಲಿಲ್ಲ.ಅಷ್ಟೇಅಲ್ಲ, ಸುಪ್ರೀಂ ಕೋರ್ಟ್ ಕೂಡ ನೀಟ್ ಇರಲಿ ಎಂದೇ ಹೇಳಿರುವುದರಿಂದ ಹಾಗೆಯೇ ಮುಂದುವರಿದಿದೆ.
ಸರ್ಕಾರಿ ಶಾಲೆಯ ಮಕ್ಕಳು ಕಡಿಮೆ
ನೀಟ್‌ಗೆ ವಿರೋಧ ಮಾಡುವ ತಮಿಳುನಾಡು ಸರ್ಕಾರದ ಪ್ರಮುಖ ವಾದ, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಗ್ರಾಮೀಣ ಭಾಗದ, ಬಡ ವಿದ್ಯಾರ್ಥಿಗಳು ಎಂಬಿಬಿಎಸ್‌ಗೆ ಸೇರಲಾಗುತ್ತಿಲ್ಲ ಎಂಬುದು. ಹೌದು, ಇದಕ್ಕೆ ಪುಷ್ಠಿ ನೀಡುವಂಥ ಸಂಗತಿಗಳೂ ಇದೆ. 2007ರಿಂದ 16ರ ವರೆಗೆ ಸರ್ಕಾರಿ ಮೆಡಿಕಲ್ ಕಾಲೇಜುಗಳಿಗೆ ಸೇರಿದ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳ ಸಂಖ್ಯೆ 314. ಅದೇ 2018-19ರಲ್ಲಿ ಕೇವಲ 4. 2020 -21ರಲ್ಲಿ ಇವರ ಸಂಖ್ಯೆ 237ಕ್ಕೆ ಏರಿಕೆಯಾಗಿತ್ತು. ಇನ್ನು ಖಾಸಗಿ ಮೆಡಿಕಲ್ ಕಾಲೇಜುಗ ಳಿಗೆ ಸೇರಿದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 2007 ರಿಂದ 2016ರ ವರೆಗೆ 74. 2018-19ರಲ್ಲಿ 3. 2020-21ರಲ್ಲಿ 97. 2020-21ರಲ್ಲಿ ಸರ್ಕಾರ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಶೇ.7.5ರಷ್ಟು ಮೀಸಲಾತಿ ಕೊಟ್ಟ ಕಾರಣದಿಂದಾಗಿ ಮೆಡಿಕಲ್ ಕಾಲೇಜಿಗೆ ಸೇರಿದ ಮಕ್ಕಳ ಸಂಖ್ಯೆ ಹೆಚ್ಚಾಯಿತು.
ಕಡಿಮೆಯಾಗುತ್ತಿದೆ ನೀಟ್ ಬರೆಯುವವರ ಸಂಖ್ಯೆ
ಮಹತ್ವದ ಬೆಳವಣಿಗೆಯಲ್ಲಿ ತಮಿಳುನಾಡಿನಲ್ಲಿ ನೀಟ್‌ಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಅಂದರೆ 2019ರಲ್ಲಿ ನೀಟ್‌ಗೆ ಅರ್ಜಿ ಸಲ್ಲಿಸಿದ್ದವರ ಸಂಖ್ಯೆ 1.4 ಲಕ್ಷ ವಿದ್ಯಾರ್ಥಿಗಳು. ಅದೇ 2020ರಲ್ಲಿ ಅರ್ಜಿ ಸಲ್ಲಿಸಿದವರ ಸಂಖ್ಯೆ 1.21 ಲಕ್ಷ. ಅಲ್ಲಿಗೇ ಶೇ.7ರಷ್ಟುಕಡಿಮೆಯಾಗಿದೆ. ದೇಶದ ಇತರೆ ರಾಜ್ಯಗಳಲ್ಲಿ ನೀಟ್ ಬರೆಯುವವರ ಸಂಖ್ಯೆ ಹೆಚ್ಚಾಗುತ್ತಾ ಹೋದರೂ, ತಮಿಳುನಾಡಿನಲ್ಲಿ ಕಡಿಮೆಯಾಗುತ್ತಿರುವುದು ಏಕೆ ಎಂಬುದೇ ಅರ್ಥವಾಗದ ಪ್ರಶ್ನೆಯಾಗಿದೆ. ಇದಕ್ಕೆ, ನೀಟ್ ಬರೆದರೂ, ವೈದ್ಯಕೀಯ ಸೀಟು ಸಿಗುವುದು ಖಾತ್ರಿ ಇಲ್ಲ ಎಂಬ ಕಾರಣಕ್ಕಾಗಿ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.
ಹಳೇ ವಿದ್ಯಾರ್ಥಿಗಳ ಕಮಾಲು
ತಮಿಳುನಾಡಿನಲ್ಲಿ ಇನ್ನು ಒಂದು ವಿಚಿತ್ರವಾದ ಅಭ್ಯಾಸವಿದೆ. ವೈದ್ಯಕೀಯ ವ್ಯಾಸಂಗಕ್ಕೆ ಸೇರುವ ಸಲುವಾಗಿಯೇ ಸಾವಿರಾರು ವಿದ್ಯಾರ್ಥಿಗಳು ನೀಟ್ ಅನ್ನು ಮತ್ತೆ ಮತ್ತೆ ಬರೆಯುತ್ತಾರೆ. 2019ರಲ್ಲಿ ಹೀಗೆಯೇ ಆಗಿದೆ. ಆ ವರ್ಷ ವೈದ್ಯಕೀಯ ಶಿಕ್ಷಣಕ್ಕೆ ಸೇರಿದ ಒಟ್ಟಾರೆ ವಿದ್ಯಾರ್ಥಿಗಳಲ್ಲಿ ಶೇ.70ರಷ್ಟು ಮಂದಿ ರಿಪೀಟರ್ಸ್. ಅಂದರೆ, ಹಿಂದಿನ ವರ್ಷವೂ ನೀಟ್ ಬರೆದು, ಅಲ್ಲಿಕಡಿಮೆ ಅಂಕ ಪಡೆದು, ಮಾರನೇ ವರ್ಷ ಹಿಂದಿನ ವರ್ಷದ ಅನುಭವ ಮತ್ತು ಇನ್ನೂ ಹೆಚ್ಚಿನ ಮಟ್ಟದಲ್ಲಿ ಓದಿ ಹೆಚ್ಚು ಅಂಕ ಗಳಿಸಿ ಮೆಡಿಕಲ್ ಸೀಟು ಗಳಿಸಿಕೊಂಡಿದ್ದಾರೆ. ಅಂದರೆ 2019-20ರಲ್ಲಿ ಮೆಡಿಕಲ್ ಪ್ರವೇಶ ಪಡೆದವರ ಸಂಖ್ಯೆ 4,202. ಇದರಲ್ಲಿ ಮೊದಲ ಬಾರಿಗೆ ನೀಟ್ ಬರೆದು ಸೇರಿಕೊಂಡವರು 1,286. ಆದರೆ, ಎರಡು ಅಥವಾ ಮೂರನೇ ಬಾರಿಗೆ ನೀಟ್ ಬರೆದು ಮೆಡಿಕಲ್ ಪ್ರವೇಶ ಪಡೆದವರು 2,916.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.