ಮೂರು ತಿಂಗಳೊಳಗೆ ಕೋವಿಡ್ ಮೂರನೇ ಅಲೆ, ಆದರೆ ಅಪಾಯ ಕಡಿಮೆ: ಬನಾರಸ್ ವಿವಿ
Team Udayavani, Sep 14, 2021, 9:06 AM IST
ಹೊಸದಿಲ್ಲಿ: ಇನ್ನು ಮೂರು ತಿಂಗಳ ಸಮಯದಲ್ಲಿ ದೇಶದಲ್ಲಿ ಕೋವಿಡ್ 19 ಸೋಂಕಿನ ಮೂರನೇ ಅಲೆ ಎದುರಾಗಬಹುದು. ಆದರೆ ಇದು ಕಳೆದೆರಡು ಅಲೆಗಳಿಗೆ ಹೋಲಿಸಿದರೆ ಕಡಿಮೆ ಅಪಾಯಕಾರಿಯಾಗಿರಲಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದ ಜೆನೆಟಿಸ್ಟ್, ಪ್ರೊಫೆಸರ್ ಜ್ಞಾನೇಶ್ವರ್ ಚೌಬೆ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಮೂರನೇ ಅಲೆಯು ಕೋವಿಡ್ ನಿಂದ ಗುಣಮುಖರಾದವರು, ಲಸಿಕೆ ಪಡೆದವರು ಮತ್ತು ಮಕ್ಕಳಿಗೆ ಕಡಿಮೆ ಅಪಾಯಕಾರಿ ಎಂದಿದ್ದಾರೆ.
ಕೋವಿಡ್ -19 ಲಸಿಕೆ ಪಡೆದ ಮತ್ತು ಗುಣಮುಖರಾದ ಜನರು ಮೂರನೇ ಅಲೆಯ ಸಮಯದಲ್ಲಿ ಸಂರಕ್ಷಿತ ಗುಂಪಿನ ಅಡಿಯಲ್ಲಿ ಬರುತ್ತಾರೆ ಎಂದು ಚೌಬೆ ಹೇಳಿದ್ದಾರೆ.
ಇದನ್ನೂ ಓದಿ:ತಮಿಳುನಾಡಿಗೇಕೆ ‘ನೀಟ್’ ಕಂಡರೆ ಆಕ್ರೋಶ?
ಕನಿಷ್ಠ ಮೂರು ತಿಂಗಳ ನಂತರ ಮೂರನೇ ಅಲೆ ಅಪ್ಪಳಿಸಬಹುದು, ಆದರೆ ಲಸಿಕೆ ಜನರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅಲೆಯನ್ನು ವಿರೋಧಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
“ಪ್ರತಿ ಮೂರು ತಿಂಗಳಿಗೊಮ್ಮೆ ಪ್ರತಿಕಾಯಗಳ (ಆ್ಯಂಡಿಬಾಡಿ) ಮಟ್ಟಗಳು ಕಡಿಮೆಯಾಗುತ್ತಿದ್ದಂತೆ, ಮೂರನೇ ಅಲೆಯ ಸಾಧ್ಯತೆಗಳು ಹೆಚ್ಚಾಗುತ್ತವೆ. ಹೀಗಾಗಿ ಮುಂದಿನ ಮೂರು ತಿಂಗಳಲ್ಲಿ ಪ್ರತಿಕಾಯಗಳ ಮಟ್ಟವು ಕುಸಿದರೆ, ಮೂರನೇ ಅಲೆ ಬರಬಹುದು. ಆದರೆ ನಡೆಯುತ್ತಿರುವ ಲಸಿಕೆ ಅಭಿಯಾನವು ವೈರಸ್ ವಿರುದ್ಧದ ಹೋರಾಟದಲ್ಲಿ ಸಹಾಯ ಮಾಡುತ್ತದೆ. ನಮ್ಮ ರೋಗನಿರೋಧಕ ಶಕ್ತಿ ಶೇಕಡಾ 70 ಕ್ಕಿಂತ ಹೆಚ್ಚಿದ್ದರೆ, ಆ ಗುಂಪಿನಲ್ಲಿ ಕೋವಿಡ್ -19 ರ ಪರಿಣಾಮವು ಕಡಿಮೆಯಾಗುತ್ತದೆ ಎಂದು ಪ್ರೊಫೆಸರ್ ಜ್ಞಾನೇಶ್ವರ್ ಚೌಬೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.