ಮೂರು ಘಟನೆ ಸೇರಿ ಒಂದು ಸಿನಿಮಾ: ಸೆಟ್ಟೇರಿತು ‘ತ್ರಿವೇದಂ’
Team Udayavani, Sep 14, 2021, 3:26 PM IST
ಮೂರು ಕಡೆಗಳಲ್ಲಿ ನಡೆದ ನೈಜ ಘಟನೆಗಳನ್ನು ಒಟ್ಟು ಸೇರಿಸಿ ಹೊಸಬರ ತಂಡವೊಂದು ಸಿನಿಮಾ ಮಾಡಲು ಹೊರಟಿದೆ. ಆ ಚಿತ್ರದ ಹೆಸರು”ತ್ರಿವೇದಂ’. ಈ ಚಿತ್ರಕ್ಕೆ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನಡೆಯಿತು.
2012ರಲ್ಲಿ ಬೆಂಗಳೂರಿನ ಕುರುಬರಹಳ್ಳಿ, ಆರು ವರ್ಷದ ಕೆಳಗೆ ಮಂಡ್ಯಾ ಮತ್ತು ಹನ್ನರೆಡು ವರ್ಷದ ಹಿಂದೆ ಮೈಸೂರಿನಲ್ಲಿ ನಡೆದ ಘಟನೆಯನ್ನಿಟ್ಟುಕೊಂಡು ಅದಕ್ಕೊಂದು ಕಥೆ ಮಾಡಿ ಈಗ ಸಿನಿಮಾ ಮಾಡಲು ತಂಡ ಮುಂದಾಗಿದೆ. ಅರುಣ್ ಜಯರಾಂ ಈ ಚಿತ್ರದ ನಿರ್ದೇಶಕರು. ಆರ್. ಕೆ. ಭವಾನಿ ಹೇಮಂತ್ ಈ ಚಿತ್ರದ ನಿರ್ಮಾಪಕರು.
ಚಿತ್ರದ ಬಗ್ಗೆ ಮಾತನಾಡುವ, ನಿರ್ದೇಶಕರು, “ಚಿತ್ರದಲ್ಲಿ ಮೂರು ಘಟನೆಗಳಿಗೆ ಒಂದಕ್ಕೊಂದು ಸಂಬಂಧವಿರುವುದಿಲ್ಲ. ಈ ಮೂರು ಘಟನೆಗಳು ಕೂಡಾ ಪ್ರೀತಿಗೆ ಸಂಬಂಧಿಸಿದ್ದೇ ಆಗಿವೆ ಎಂಬುದು ವಿಶೇಷ. ಅದೇ ಕಾರಣಕ್ಕೆ ಚಿತ್ರಕ್ಕೆ “ತ್ರಿವೇದಂ’ ಎಂದು ಹೆಸರಿಟ್ಟಿದ್ದೇವೆ’ ಎಂದರು.
ಚಿತ್ರದಲ್ಲಿ ಮೂವರು ನಾಯಕರು ಆಯ್ಕೆಯಾಗಿದ್ದು, ಮೂವರು ನಾಯಕಿಯರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಚಿತ್ರದಲ್ಲಿ ಪ್ರತಾಪ್ ನಾರಾಯಣ್ ಕೂಡಾ ಒಂದು ಕಥೆಯಲ್ಲಿ ನಾಯಕರಾಗಿ ನಟಿಸುತ್ತಿದ್ದು, ಅವರು ಕೊರಿಯರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಕೊರಿಯರ್‌ದಲ್ಲಿ ಕೆಲಸ ಮಾಡುವ ಹುಡುಗರನ್ನು ಭೇಟಿ ಮಾಡಿ ಅವರುಗಳಿಂದ ಒಂದಷ್ಟು ಸಲಹೆಗಳನ್ನು ಪಡೆದುಕೊಂಡಿದ್ದಾರಂತೆ. “ಜೀವನದಲ್ಲಿ ಯಾವ ರೀತಿ ಪ್ರೀತಿಗೋಸ್ಕರ ಹೋರಾಡುತ್ತಾನೆ ಎಂಬ ಅಂಶ ಹೈಲೈಟ್. ಚಿತ್ರದಲ್ಲಿ ಮೂರು ಮೂರು ಫೈಟ್ಸ್ ಹಾಗೂ ಎರಡು ಹಾಡುಗಳು ನನಗಿವೆ’ ಎಂದರು.
ಇದನ್ನೂ ಓದಿ:100% ರಿಲೀಸ್ ಕ್ಲಾರಿಟಿ ಇಲ್ಲ: ಬಿಡುಗಡೆಗೆ ಕಾಯುತ್ತಿವೆ ಧನಂಜಯ್ ಸಿನಿಮಾಗಳು
ಮತ್ತೂಬ್ಬ ನಾಯಕರಾಗಿ ಅಚ್ಯುತ್ ಕುಮಾರ್ ಹಾಗೂ ಮೂರನೇ ಕಥೆಯಲ್ಲಿ ರಂಗಭೂಮಿ ಹಿನ್ನಲೆ ಇರುವ ಶಶಿ ನಟಿಸುತ್ತಿದ್ದಾರೆ. ನಾಯಕನ ಗೆಳಯನಾಗಿ ಧರ್ಮಣ್ಣಕಡೂರು ನಟಿಸುತ್ತಿದ್ದಾರೆ. ನಟನೆಗೆ ಅವಕಾಶಕೇಳಿಕೊಂಡು ಮಂಡ್ಯದಿಂದ ಬರುವ ಕಲಾವಿದನಾ ಗಿ ನಟಿಸುತ್ತಿದ್ದಾರೆ. ಉಳಿದಂತೆ ಓಂ ಪ್ರಕಾಶ್ ರಾವ್, ಕುರಿ ಪ್ರತಾಪ್, ಮಳವಳ್ಳಿ ಸಾಯಿಕೃಷ್ಣ, ಗೋಪಾಲ್ ದೇಶಪಾಂಡೆ ಮುಂತಾದವರ ತಾರಾಬಳಗವಿದೆ.
ರಘು ಧನ್ವಂತ್ರಿ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಸಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣವಿದೆ. ಚಿತ್ರಕ್ಕೆ ಡಾ.ವಿ.ನಾಗೇಂದ್ರ ಪ್ರಸಾದ್, ಅರಸು ಅಂತಾರೆ, ಗೌಸ್‌ಪೀರ್ ಸಾಹಿತ್ಯವಿದೆ.ಬೆಂಗಳೂರು ಮತ್ತು ಸಕಲೇಶಪುರ ಸುತ್ತಮುತ್ತ ಚಿತ್ರೀಕರಣದ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.