ಎಸ್ಪಿ ನಿವಾಸ ಆವರಣದ ಮರಗಳ ಹನನ?
ಅನುಮತಿ ಪಡೆಯದೇ ಮರಗಳ ಕಟಾವು ಮಾಡಿದ ಆರೋಪ
Team Udayavani, Sep 14, 2021, 5:44 PM IST
ಮಂಡ್ಯ: ಅರಣ್ಯ ಇಲಾಖೆ ಅನುಮತಿ ಪಡೆಯದೇ ಎಸ್ಪಿ ಡಾ.ಎಂ.ಅಶ್ವಿನಿ ಅವರು, ಸುಭಾಷ್ ನಗರದಲ್ಲಿರುವ ತಮ್ಮ ಅಧಿಕೃತ ನಿವಾಸದ
ಆವರಣದಲ್ಲಿದ್ದ ಮರಗಳನ್ನುಕತ್ತರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸೋಮವಾರ ಮಧ್ಯಾಹ್ನ ರಸ್ತೆಯನ್ನು ಬಂದ್ ಮಾಡಿ ನಿವಾಸದ ಒಳ ಆವರಣದಲ್ಲಿದ್ದ 11 ಅಶೋಕ ಮರಗಳನ್ನು ಕತ್ತರಿಸಿದ್ದು, ಸಾರ್ವಜನಿಕರ
ಟೀಕೆಗೆ ಗುರಿಯಾಗಿದೆ. ತಮ್ಮ ಮಕ್ಕಳು ಆಟವಾಡುತ್ತಿದ್ದಾಗ ಒಂದು ಮರದ ಕೊಂಬೆ ಬಿದ್ದಿದ್ದರಿಂದ ಹಾಗೂ ಕಾಂಪೌಂಡ್‌ಗೆ ಹಾನಿಯಾಗಬಾರದು ಎಂಬ ಉದ್ದೇಶದಿಂದ ಸೋಮವಾರ ಯಂತ್ರದ ಮೂಲಕ ಮರಗಳನ್ನು ಕತ್ತರಿಸಲಾಗಿದೆ ಎಂದು ತಿಳಿದು ಬಂದಿದೆ.
ನೋಟಿಸ್ ನೀಡಲು ತೀರ್ಮಾನ: ಮರಗಳ ಕತ್ತರಿಸಲು ಅರಣ್ಯ ಇಲಾಖೆಯಿಂದ ಮಾಹಿತಿ ಪಡೆದಿಲ್ಲ ಎಂದು ತಿಳಿದು ಬಂದಿದೆ. ಈ ಸಂಬಂಧ ಸುದ್ದಿಗಾರರೊಂದಿಗೆ ಸಹಾಯಕ ಅರಣ್ಯ ಸಂರಕ್ಷಣಾಕಾರಿ ಶಶಿಧರ್ ಮಾತನಾಡಿ, ಎಸ್ಪಿಯವರು ನಮ್ಮಿಂದ ಯಾವುದೇ ರೀತಿಯ ಅನುಮತಿ ಪಡೆ ದಿಲ್ಲ. ಸರ್ಕಾರಿ ನಿವಾಸ ಆಗಿರುವುದರಿಂದ ಅನುಮತಿ ಪಡೆಯಬೇಕಾಗಿದೆ. ಈ ಬಗ್ಗೆ ನೋಟಿಸ್ ನೀಡಲಾಗುವುದು. ಉತ್ತರ ನೀಡದಿದ್ದರೆ ಪ್ರಕರಣ
ದಾಖಲಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ರಾಜ್ಯದಲ್ಲಿ ಐದು ಸಾವಿರ ಶಿಕ್ಷಕರ ನೇಮಕ : ಸಚಿವ ಬಿ.ಸಿ. ನಾಗೇಶ್ ಭರವಸೆ
ವಸತಿ ಗೃಹದ ಸುರಕ್ಷತೆಗಾಗಿ ಮರಗಳಿಗೆ ಟ್ರಿಮ್ಮಿಂಗ್: ಎಸ್ಪಿಸ್ಪಷ್ಟನೆ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್ಪಿ ಅಶ್ವಿನಿ, ವಸತಿ ಗೃಹದ
ಸುರಕ್ಷತೆಗಾಗಿ ಮರದ ರೆಂಬೆ-ಕೊಂಬೆಗಳ ಟ್ರಿಮ್ಮಿಂಗ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಮರಗಳ ರೆಂಬೆ-ಕೊಂಬೆಗಳು ಬೆಳೆದು ವಿದ್ಯುತ್ ತಂತಿಗಳಿಗೆ ತಗಲುತ್ತಿದ್ದು, ಮಳೆಗಾಲವಿರುವುದರಿಂದ ತೊಂದರೆಯಾಗಲಿದೆ. ರೆಂಬೆ-ಕೊಂಬೆಗಳುಕಾಂಪೌಂಡ್‌ಗೆ ವಾಲಿದ್ದು, ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ವಸತಿ ಗೃಹಗಳ ಲೈನ್ ಅಧಿಕಾರಿ ಆರ್‌ಪಿಐ ಡಿಎಆರ್, ಚೆಸ್ಕಾಂ ಮತ್ತು ಅರಣ್ಯ ಇಲಾಖೆ ಅವರಿಗೆ ಲಿಖಿತ ಮನವಿಯನ್ನು ಸೋಮವಾರ ಸಲ್ಲಿಸಲಾಗಿದೆ. ಅದರಂತೆ ವಸತಿ ಗೃಹದ ಸುರಕ್ಷತೆಗಾಗಿ ಮರಗಳಿಗೆ ಟ್ರಿಮ್ಮಿಂಗ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.