ಜವಳಿ ಉದ್ಯಮಕ್ಕೆ ಪಿಎಲ್‌ಐ ಜೀವಬಲ ನಿರೀಕ್ಷೆ

ಯೋಜನೆ ಸಾಕಾರಕ್ಕೆ ಬೇಕಿದೆ ರಾಜಕೀಯ ಇಚ್ಛಾ ಶಕ್ತಿ |ಮರುಕಳಿಸೀತೇ"ಮ್ಯಾಂಚೆಸ್ಟರ್‌ ಸಿಟಿ' ಗತವೈಭವ?

Team Udayavani, Sep 14, 2021, 7:45 PM IST

ಜವಳಿ ಉದ್ಯಮಕ್ಕೆ ಪಿಎಲ್‌ಐ ಜೀವಬಲ ನಿರೀಕ್ಷೆ

ದಾವಣಗೆರೆ: ಜವಳಿ ಉದ್ಯಮಕ್ಕೆ ಪುನಶ್ಚೇತನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಉತ್ಪಾದನೆ ಆಧಾರಿತ ಉತ್ತೇಜನ ಯೋಜನೆ ಯನ್ನು ಜವಳಿ ಕ್ಷೇತ್ರಕ್ಕೂ ವಿಸ್ತರಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಸರ್ಕಾರದ ಈ ನಿರ್ಧಾರದಿಂದ “ಕರ್ನಾಟಕದ ಮ್ಯಾಂಚೆಸ್ಟರ್‌ ಸಿಟಿ’ ಖ್ಯಾತಿ ಪಡೆದು ಮೆರೆದಿದ್ದ ದಾವಣಗೆರೆಯಲ್ಲಿ ಮತ್ತೆ ಜವಳಿ ಉದ್ಯಮದ ವೈಭವ ಮರುಕಳಿಸಬಹುದು ಎಂಬ ನಿರೀಕ್ಷೆ ಗರಿಗೆದರಿದೆ.

ಜವಳಿ ಕ್ಷೇತ್ರಕ್ಕೆ ಉತ್ಪಾದನೆ ಆಧಾರಿತಉತ್ತೇಜನ ಯೋಜನೆಯಡಿ 10,683 ಕೋಟಿರೂ. ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ ನೂಲು, ಬಟ್ಟೆ, ಉಡುಪುಗಳ ತಯಾರಿಕೆ, ಅವುಗಳ ‌ಗುಣಮಟ್ಟ, ಮೌಲ್ಯ ವೃದ್ಧಿ, ಜವಳಿ ವಲಯದ ಗುಣಮಟ್ಟದ ಉತ್ಪಾದನೆ ಹೆಚ್ಚಳ ಹಾಗೂ ರಫ್ತು ಹೆಚ್ಚಿಸುವ ನಿರೀಕ್ಷೆ ಹೊಂದಲಾಗಿದೆ. ಈ ಯೋಜನೆ ಲಾಭವನ್ನು ದೇಶದ ವಿವಿಧ ರಾಜ್ಯಗಳು ಪಡೆದುಕೊಳ್ಳಲು ಉತ್ಸುಕತೆ
ತೋರುತ್ತಿವೆ. ಕರ್ನಾಟಕದಲ್ಲಿ ಜವಳಿ ಉದ್ಯಮಕ್ಕೆ ಹೆಸರಾಗಿದ್ದ ದಾವಣಗೆರೆ ಜಿಲ್ಲೆಗೆ ಇದರ ಲಾಭ ಪಡೆಯಲು ವಿಫುಲ ಅವಕಾಶವಿದ್ದು, ಯೋಜನೆ ಅನುಷ್ಠಾನಕ್ಕೆ ಆಸಕ್ತಿ, ಇಚ್ಛಾಶಕ್ತಿಯ ಅಗತ್ಯತೆ ಇದೆ.

ಮತ್ತೆ ಮ್ಯಾಂಚೆಸ್ಟರ್‌ ಖ್ಯಾತಿ ನಿರೀಕ್ಷೆ: ಎರಡು-ಮೂರು ದಶಕಗಳ ಹಿಂದೆ ದಾವಣಗೆರೆ ಎಂದರೆ ಎಲ್ಲರೂ ಕಾಟನ್‌ ಮಿಲ್‌ಗ‌ಳ ಹೆಸರು ಹೇಳುತ್ತಿದ್ದರು.  ದಾವಣಗೆರೆ ಕಾಟನ್‌ ಮಿಲ್‌ನ ಉತ್ಕೃಷ್ಟ ಗುಣಮಟ್ಟದ ಬಟ್ಟೆ ದೇಶ,ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿತ್ತು. ಇಲ್ಲಿ ಬಟ್ಟೆ ತಯಾರಿಸುವ ಹಾಗೂ ನೂಲು ತಯಾರಿಸುವ 20ಕ್ಕೂ ಹೆಚ್ಚು ಕಾಟನ್‌ ಮಿಲ್‌ಗ‌ಳು ಕಾರ್ಯ ನಿರ್ವಹಿಸುತ್ತಿದ್ದವು.

ಲಕ್ಷಾಂತರ ಕಾರ್ಮಿಕರು ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದರು. ಹೀಗಾಗಿಯೇ ದಾವಣಗೆರೆ ಕರ್ನಾಟಕದ “ಮ್ಯಾಂಚೆಸ್ಟರ್‌ ಸಿಟಿ’ ಎಂಬ ಬಿರುದು ಪಡೆದುಕೊಂಡಿತ್ತು. ಕಾಟನ್‌ ಮಿಲ್‌ಗಳಲ್ಲಿ ಸರ್ಕಾರದಿಂದ ನಡೆಯುತ್ತಿದ್ದ (ಯಲ್ಲಮ್ಮ ಕಾಟನ್‌ ಮಿಲ್‌) ಮಿಲ್‌ ಸಹ ಇತ್ತು. ಆದರೆ ಈಗ ಅದೆಲ್ಲವೂ ಇತಿಹಾಸ. ಈಗ ಕೇಂದ್ರ ಸರ್ಕಾರದ ಪಿಎಲ್‌ಐ ಯೋಜನೆಯಿಂದ ನಗರದ ಜವಳಿ ಉದ್ಯಮ ಮತ್ತೆ ಜೀವ ಪಡೆಯಬಹುದು ಎಂಬ ಆಸೆ ಚಿಗುರೊಡೆದಿದೆ.

ಇದನ್ನೂ ಓದಿ:ಬಸವಸಾಗರದ ಜಲಾಶಯದಿಂದ ಕೃಷ್ಣಾ ನದಿಗೆ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಪಿಐಎಲ್‌ ಯೋಜನೆಯಡಿ ಸರ್ಕಾರ ಕಂಪನಿಗಳ ಉತ್ಪಾದನೆ ಆಧರಿಸಿ ಹಣ ನೀಡುತ್ತದೆ. ಮಾನವ ನಿರ್ಮಿತ ನೂಲಿನ ಬಟ್ಟೆಗಳು, ತಾಂತ್ರಿಕ ವಸ್ತ್ರವಿನ್ಯಾಸ ಉತ್ಪನ್ನ ಸೇರಿದಂತೆ ಆಯ್ದ 10 ವಲಯಗಳಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ. ಹೊಸದಾಗಿ ಕಾರ್ಖಾನೆ ಆರಂಭಿಸಲು ಸಹ ಪ್ರೋತ್ಸಾಹಧನ ಸಿಗಲಿದೆ. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಗೂ ಅನುಕೂಲವಾಗಲಿದೆ.

ಮುಚ್ಚಿರುವ ಕಾಟನ್‌ ಮಿಲ್‌ಗ‌ಳನ್ನು ಪುನಶ್ವೇತನಗೊಳಿಸಿ ಮತ್ತೆ ಜವಳಿ ಉದ್ಯಮವನ್ನು ಉತ್ತುಂಗಕ್ಕೇರಿಸಲು ಕೇಂದ್ರ ಸರ್ಕಾರದ ಈ ಯೋಜನೆ ಸಹಕಾರಿಯಾಗಬಹುದು. ಇದರಿಂದ ಹತ್ತಾರು ಜವಳಿ ಉದ್ಯಮಗಳು ಮತ್ತೆ ಬಾಗಿಲು ತೆರೆದು ಸಾವಿರಾರು ಜನರಿಗೆ ಅದರಲ್ಲೂ ಮಹಿಳೆಯರಿಗೂ ಹೆಚ್ಚಿನ ಉದ್ಯೋಗಾವಕಾಶ ದೊರಕಿಸಿಕೊಡಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ.

ಮ್ಯಾಂಚೆಸ್ಟರ್‌ ಆಗಿದ್ದು ಹೇಗೆ?
ಮೈಸೂರು ಸಂಸ್ಥಾನದ ಮಾಜಿ ದಿವಾನರಾಗಿದ್ದ ಆರ್ಕಾಟ್‌ ರಾಮಸ್ವಾಮಿ ಮೊದಲಿಯಾರ್‌ ಅವರು ದಾವಣಗೆರೆ ಮೈಸೂರು ರಾಜ್ಯದ
ಮ್ಯಾಂಚೆಸ್ಟರ್‌ಎಂದು ಹೊಗಳಿದ್ದರು. ಇಂಗ್ಲೆಂಡ್‌ನ‌ ಮ್ಯಾಂಚೆಸ್ಟರ್‌ ನಗರ ಹತ್ತಿ ನೂಲಿನ ಬಟ್ಟೆಗೆ ವಿಶ್ವದಲ್ಲಿ ಪ್ರಸಿದ್ಧ ನಗರವಾಗಿತ್ತು. ಅದರಂತೆ ದಾವಣಗೆರೆ ಕೂಡ ರಾಜ್ಯದಲ್ಲಿ ಹತ್ತಿ, ನೂಲು, ಬಟ್ಟೆ ತಯಾರಿಕೆಯಿಂದ ಕರ್ನಾಟಕ, ಭಾರತದಾದ್ಯಂತಪ್ರಸಿದ್ಧಿಯಾಗಿ ಕೈಗಾರಿಕಾ ಕೇಂದ್ರ ಎನ್ನಿಸಿತ್ತು. ದಾವಣಗೆರೆಯ ಲಾಂಗ್‌ ಕ್ಲಾತ್‌ಬಟ್ಟೆಎಂದರೆ ಎಲ್ಲೆಡೆಪ್ರಸಿದ್ಧಿ ಪಡೆದಿತ್ತು

ಬೇಕಿದೆ ಇಚ್ಛಾಶಕ್ತಿ
ಜವಳಿ ಉದ್ಯಮ ಪುನಶ್ಚೇತನಗೊಳಿಸಿ ಗತವೈಭವ ಮರುಕಳಿಸುವಂತೆ ಮಾಡಲು ದಾವಣಗೆರೆಯಲ್ಲಿ ಅವಕಾಶ ಇದೆಯಾದರೂ ಅದಕ್ಕೆ ಇಚ್ಛಾಶಕ್ತಿಯ ಅಷ್ಟೇ ಅಗತ್ಯವಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಈ ಕುರಿತು ಹೆಚ್ಚಿನ ಆಸಕ್ತಿ ತೋರಿದರೆಕೇಂದ್ರ ಸರ್ಕಾರ ಜವಳಿ ಕ್ಷೇತ್ರಕ್ಕೆ ವಿಸ್ತರಿಸಿದ ಪಿಎಲ್‌ಐಯೋಜನೆಯ ಲಾಭ ಪಡೆಯಬಹುದಾಗಿದೆ

ಜವಳಿ ಕ್ಷೇತ್ರಕ್ಕೆವಿಸ್ತರಿಸಿದ ಪಿಎಲ್‌ಐ ಯೋಜನೆ ಒಂದು ಉತ್ತಮ ಪ್ಯಾಕೇಜ್‌.ಅದರ ಮಾರ್ಗಸೂಚಿಗಳು ಇನ್ನೂ ಬರಬೇಕಿದೆ.ಈ ಯೋಜನೆಯಿಂದ ಉದ್ಯಮ ಅಭಿವೃದ್ಧಿಗೊಳಿಸಲು ಹಾಗೂ ಮುಚ್ಚಿರುವ ಉದ್ಯಮ ಪುನರ್‌ ಆರಂಭಿಸಲು ಅನುಕೂಲವಾಗುವ ನಿರೀಕ್ಷೆಇದೆ.ಈ
ಯೋಜನೆಯಿಂದ ಅತ್ಯಾಧುನಿಕ ಯಂತ್ರೋಪಕರಣ ಖರೀದಿಸಲು, ರಫ್ತು ಗುಣಮಟ್ಟದಉತ್ಪನ್ನ ತಯಾರಿಕೆಗೆ ಸಹಕಾರಿಯಾಗಬಹುದು. ಕಾರ್ಮಿಕರ ವಿಭಾಗದಲ್ಲಿ ಸರ್ಕಾರದಿಂದ ವಿಶೇಷ ಭತ್ಯೆ ಸಿಗುವ ಸಾಧ್ಯತೆ ಇದ್ದು,ಉದ್ದಿಮೆಗಳನ್ನುಪುನಶ್ಚೇತನಗೊಳಿಸಲು ಸಹಕಾರಿಯಾಗುವ ಆಶಾಭಾವವಿದೆ.
-ಮಂಜುನಾಥ ನಾಯ್ಕ, ಜವಳಿ ಉದ್ಯಮಿ, ಬಂಜಾರ ಗಾರ್ಮೆಂಟ್ಸ್‌

-ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್

1-a-ccc

INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

1-renuuu

Darshan Bail; ನಾವು ಏನೂ ಹೇಳಲು ಆಗುವುದಿಲ್ಲ..: ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ

Davanagere: ಬಿಜೆಪಿಯ ಬಾಯಿಚಟದ ಮೂರ್ನಾಲ್ಕು ಜನರ ವಿರುದ್ದ ರೇಣುಕಾಚಾರ್ಯ ಟೀಕೆ

Davanagere: ಬಿಜೆಪಿಯ ಬಾಯಿಚಟದ ಮೂರ್ನಾಲ್ಕು ಜನರ ವಿರುದ್ದ ರೇಣುಕಾಚಾರ್ಯ ಟೀಕೆ

Gold worth Rs 12.95 crore stolen from Nyamathi SBI Bank

Nyamathi: ಎಸ್‌ಬಿಐ ಬ್ಯಾಂಕ್ ನಿಂದ 12.95 ಕೋಟಿ ರೂ ಮೌಲ್ಯದ ಚಿನ್ನ ಕಳ್ಳತನ

Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್:‌ ಮಹಾನಗರ ಪಾಲಿಕೆಯ ಹೊಸ ಕ್ರಮ

Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್:‌ ಮಹಾನಗರ ಪಾಲಿಕೆಯ ಹೊಸ ಕ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.