ಸೂರ್ಯ ನಮಸ್ಕಾರದ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ ತುಕಾರಾಮ
30 ನಿಮಿಷದಲ್ಲಿ 278 ಸೂರ್ಯ ನಮಸ್ಕಾರ ಹಾಕಿದ 49 ವಯಸ್ಸಿನ ತುಕಾರಾಮ...
Team Udayavani, Sep 15, 2021, 2:45 PM IST
ಚಿಕ್ಕೋಡಿ: ಆರೋಗ್ಯವನ್ನು ಸುಧಾರಿಸಿಕೊಳ್ಳುವ ಉದ್ದೇಶದಿಂದಲೇ ವ್ಯಾಯಾಮ ಆರಂಭಿಸಿದ ಅಪ್ಪಟ್ಟ ಗ್ರಾಮೀಣ ಪ್ರದೇಶದ 49 ವಯಸ್ಸಿನ ತುಕಾರಾಮ ಕೋಳಿ ಕಡಿಮೆ ಸಮಯದಲ್ಲಿ ಹೆಚ್ಚು ಸೂರ್ಯ ನಮಸ್ಕಾರ ಹಾಕಿ ಏಷ್ಯಾ ಬುಕ್ ಆಫ್ ರೆಕಾರ್ಡ್ ಮೂಲಕ ದಾಖಲೆ ಬರೆದು ಯುವಕರು ನಾಚುವಂತ ಸಾಧನೆಯ ಮೆಟ್ಟಿಲೇರಿದ್ದಾರೆ.
ಕೃಷ್ಣಾ ನದಿ ತೀರದ ತಾಲೂಕಿನ ಕಲ್ಲೋಳ ಗ್ರಾಮದ ತುಕಾರಾಮ ಕೋಳಿ(49) ಎಂಬ ಯೋಗ ಪಟು. ಕಳೆದ ನಾಲ್ಕೈದು ವರ್ಷಗಳಿಂದ ಆರೋಗ್ಯ ಸುಧಾರಣೆಗಾಗಿ ರೂಢಿಸಿಕೊಂಡ ಯೋಗಾಭ್ಯಾಸ ಅವರ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರುವಂತೆ ಮಾಡಿದೆ.
ಕಲ್ಲೋಳ ಗ್ರಾಮದ ಕೃಷ್ಣಾ ನದಿ ಬದಿಯಲ್ಲಿ ಹಾಗೂ ಚಿಕ್ಕೋಡಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತಿ ದಿನ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಸೂರ್ಯ ಸಮಸ್ಕಾರ ಹಾಕುವ ಮೂಲಕ ಯೋಗಾಭ್ಯಾಸದಲ್ಲಿ ತೊಡಗಿಕೊಂಡು ಇತರರಿಗೆ ಯೋಗಭ್ಯಾಸ ಮಾಡಿಸುತ್ತಾರೆ.
ದೇಹದ ಆರೋಗ್ಯ ಸಮಸ್ಯೆ ಕೈ, ಕಾಲು, ಕುತ್ತಿಗೆ ನೋವುಗಳು ಕಾಣಿಸಿಕೊಳ್ಳುತ್ತಿದ್ದವು. ಇವುಗಳ ನೋವು ಸಹಿಸಲಾರದೆ ವ್ಯಾಯಾಮದಿಂದ ನೋವುಗಳಿಂದ ಮುಕ್ತಿ ಪಡೆಯಬೇಕು ಎಂದಕೊಂಡೆ. ಬಳಿಕ ಯೋಗ ಯಾವುದನ್ನು ಅನುಸರಿಸಿದರೆ ಉತ್ತಮ ಎಂಬುದರಲ್ಲಿ ಗೊಂದಲವಿತ್ತು. ಅಧ್ಯಯನ ನಡೆಸಿದೆ. ದೇಹ ಮನಸ್ಸಿನ ಆಗಾಧವಾದ ಸಕಾರಾತ್ಮಕ ಪರಿಣಾಮ ಬೀರುವ ಪರಿಪೂರ್ಣ ವ್ಯಾಯಾಮ ಸೂರ್ಯ ನಮಸ್ಕಾರ ಆಯ್ಕೆ ಮಾಡಿಕೊಂಡೆ. ಪ್ರತಿದಿನ ಸೂರ್ಯ ನಮಸ್ಕಾರ ಮಾಡಲು ಆರಂಭಿಸಿದೆ ಎನ್ನುತ್ತಾರೆ ತುಕಾರಾಮ.
ಇದನ್ನೂ ಓದಿ:ಬಿಲ್ಲವ ಸಮಾಜದ ಹಿತಚಿಂತನೆ ಮುಖ್ಯ ಉದ್ದೇಶ: ಹರೀಶ್ ಜಿ. ಅಮೀನ್
ಸೂರ್ಯ ನಮಸ್ಕಾರವು 12 ಯೋಗ ಭಂಗಿಗಳಿಂದ ಕೂಡಿದ್ದು, ನರಮಂಡಲವನ್ನು ಉತ್ತೇಜಿಸುತ್ತದೆ. ಮೊದಲು 4ರಿಂದ 5 ಸೂರ್ಯ ನಮಸ್ಕಾರ ಹಾಕಲು ಕಷ್ಟ ವಾಗುತ್ತಿತ್ತು. 500 ಸೂರ್ಯ ನಮಸ್ಕಾರ ಹಾಕುವುದನ್ನು ಕರಗತ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದೆ. 6 ತಿಂಗಳ ಅಭ್ಯಾಸದಿಂದ 50 ರಿಂದ 60 ಸೂರ್ಯ ನಮಸ್ಕಾರ ಹಾಕುವುದನ್ನು ಕರಗತ ಮಾಡಿಕೊಂಡಿದ್ದೆ ಎಂದರು.
ಚೆನ್ನೈನ ಪಿ.ವಿಜಯಕುಮಾರ ಎಂಬುವವರು 15 ನಿಮಿಷದಲ್ಲಿ 108 ಸೂರ್ಯ ನಮಸ್ಕಾರ ಹಾಕಿ ಲಿಮ್ಕಾ ಬುಕ್ ಆಫ್ ರಿಕಾರ್ಡ್ ಹೆಸರು ದಾಖಲಿಸಿದ್ದಾರೆ ಎಂಬುವುದು ತಿಳಿಯಿತು. ಅವರ ದಾಖಲೆಯನ್ನು ಮೀರಿಸಬೇಕು ಎಂದು ಗುರಿ ಇಟ್ಟುಕೊಂಡು ದಿನನಿತ್ಯ ಅಭ್ಯಾಸ ಆರಂಭಿಸಿದೆ. 10 ನಿಮಿಷದಲ್ಲಿ 112 ಸೂರ್ಯ ನಮಸ್ಕಾರ ಹಾಕುವುದನ್ನು ಕಲಿತೆ. ಅದು ಈಗ ನನ್ನ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ 2019ರಲ್ಲಿ ದಾಖಲಾಗಿದೆ. ಅದರಂತೆ 30 ನಿಮಿಷದಲ್ಲಿ 278 ಸೂರ್ಯ ನಮಸ್ಕಾರ ಹಾಕಿ ಕಳೆದ ವರ್ಷ ಏಷ್ಯಾ ಬುಕ್ ಆಫ್ ರೆಕಾರ್ಡದಲ್ಲಿ ದಾಖಲಾಗಿದೆ ಎಂದು ಯೋಗಪಟು ಸಾಧನೆ ಬಿಚ್ಚಿಟ್ಟರು.
ಇಂದಿನ ಯುವಕರು ಐಶಾರಾಮಿ ಜೀವನದ ಮೂಲಕ ಆರೋಗ್ಯದ ನಿರ್ಲಕ್ಷ್ಯ ಮಾಡುತ್ತಿರುವುದು ನೋವಿನ ಸಂಗತಿ. ದೇಹವನ್ನು ದಂಡಿಸಲು ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತುಕಾರಾಮ ಕೋಳಿ ಯುವಕರಿಗೆ ಕರೆ ನೀಡಿದರು.
ವರದಿ- ಮಹಾದೇವ ಪೂಜೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.