ಮಂಡ್ಯ ಜಿಲ್ಲೆಯಲ್ಲಿ 140 ದೇವಾಲಯ ಅನಧಿಕೃತ

ಸಾರ್ವಜನಿಕರು, ಭಕ್ತರ ವಿರೋಧ ಹಿನ್ನೆಲೆ 51 ದೇವಾಲಯ ಅನಧಿಕೃತದಿಂದ ಅಧಿಕೃತ „ 76 ತೆರವು, 13 ಸ್ಥಳಾಂತರ

Team Udayavani, Sep 15, 2021, 4:43 PM IST

ಮಂಡ್ಯ ಜಿಲ್ಲೆಯಲ್ಲಿ 140 ದೇವಾಲಯ ಅನಧಿಕೃತ

ಮಂಡ್ಯ: ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಇದುವರೆಗೂ 76 ದೇವಾಲಯ ತೆರವುಗೊಳಿಸಲಾಗಿದೆ.

2020ರಲ್ಲಿ ಕೆಲವು ದೇವಾಲಯ ತೆರವು: 2009ರ ಹಿಂದೆ ನಿರ್ಮಿಸಲಾದ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವು, ಸ್ಥಳಾಂತರಸಂಬಂಧ ಜಿಲ್ಲೆಯಾದ್ಯಂತ ಸಾರ್ವಜನಿಕ ರಸ್ತೆ, ಉದ್ಯಾನ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡ ಗಳನ್ನು ಗುರುತಿಸಲಾಗಿತ್ತು. ಅದರಂತೆ 2020ರಲ್ಲಿ ಕೆಲವು ದೇವಾಲಯ ತೆರವುಗೊಳಿಸಲಾಗಿತ್ತು.

140 ದೇವಾಲಯ ಅನಧಿಕೃತ: 2009ರ ಸೆ.29ಕ್ಕೆ ಸುಪ್ರೀಂಕೋರ್ಟ್‌ ಆದೇಶದಂತೆ ಜಿಲ್ಲೆಯಾದ್ಯಂತ ಅನಧಿಕೃತವಾಗಿ ನಿರ್ಮಾಣವಾಗಿದ್ದ 140 ದೇವಾಲಯ ಗುರುತಿಸಲಾಗಿತ್ತು. ಅದರಂತೆ 2020ರಲ್ಲಿ ಅನೇಕ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲಾಗಿತ್ತು. ಆಗ ಸಾಕಷ್ಟು ಸಾರ್ವಜನಿಕರು ಹಾಗೂ ಭಕ್ತರ ವಿರೋಧದಿಂದ ಕೆಲವೊಂದನ್ನು ತೆರವು ಪಟ್ಟಿಯಿಂದ ಕೈಬಿಡಲಾಗಿತ್ತು.

76 ಅನಧಿಕೃತ ಕಟ್ಟಡಗಳು ತೆರವು: ಇದುವರೆಗೂ 76 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಮಂಡ್ಯ ಉಪವಿಭಾಗ, ಮದ್ದೂರು, ಮಳವಳ್ಳಿ, ನಾಗಮಂಗಲ, ಶ್ರೀರಂಗಪಟ್ಟಣ, ಮಳ ವಳ್ಳಿ, ಪಾಂಡವಪುರ ಹಾಗೂ ಕೆ.ಆರ್‌.ಪೇಟೆ ತಾಲೂಕುಗಳಲ್ಲಿನ ತೆರವು ಗೊಳಿಸಲಾಗಿದೆ.

ಇದನ್ನೂ ಓದಿ:ಬೆಲೆ ಕುಸಿತ: ರಸ್ತೆಗೆ ಈರುಳ್ಳಿ ಸುರಿದ ಬೆಳೆಗಾರ

13 ದೇವಾಲಯ ಸ್ಥಳಾಂತರ: ಜಿಲ್ಲೆಯಲ್ಲಿರುವ 13 ದೇವಾಲಯ ಸ್ಥಳಾಂತರ ಮಾಡಲಾಗಿದೆ. ಇವುಗಳು ಸಾರ್ವಜನಿಕವಾಗಿ ಸ್ವಲ್ಪ ತೊಂದರೆ ಇದ್ದುದ್ದರಿಂದ ಹಾಗೂ ಸಾರ್ವಜನಿಕರು, ಭಕ್ತರ ಒತ್ತಡಕ್ಕೆ ಮಣಿದು ಸ್ಥಳಾಂತರ ಮಾಡಲಾಗಿದೆ. ಸುಪ್ರೀಂಕೋರ್ಟ್‌ ಆದೇಶದಂತೆ ಜಿಲ್ಲೆ ಯಾದ್ಯಂತ ಸಾರ್ವಜನಿಕವಾಗಿ ಯಾವುದೇ ತೊಂದರೆ ಇಲ್ಲದ ಹಾಗೂ ಕೆಟಿಸಿಪಿ ಕಾಯ್ದೆ ಮುನಿಸಿಪಾಲಿಟಿ ಕಾಯ್ದೆ, ಪುರಸಭೆ, ಸ್ಥಳೀಯ ಕಾನೂನು ಕಾಯ್ದೆಗಳಿಗೆ ವ್ಯತಿರಿಕ್ತವಾಗಿಲ್ಲದಿರುವ ಕಾರಣ ಅನಧಿಕೃತ 51 ದೇವಾಲಯಗಳನ್ನು ಅ ಧಿಕೃತಗೊಳಿಸಲಾಗಿದೆ. ಅಲ್ಲದೆ, 13 ದೇವಾಲಯ ಸ್ಥಳಾಂತರ ಮಾಡಿರುವುದರಿಂದ ಒಟ್ಟು 64 ದೇವಾಲಯ ಅಧಿಕೃತಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಅಧಿಕೃತವಾದ ದೇವಾಲಯಗಳ ವಿವರ
ಮಂಡ್ಯ ನಗರದ ರೈಲ್ವೆ ಸ್ಟೇಷನ್‌ನ ಮುಂಭಾಗದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ, ಕಲ್ಲಹಳ್ಳಿಯ ಶ್ರೀ ಆದಿಶಕ್ತಿ ಮಾರಮ್ಮ, ಹಳೇ ತಾಲೂಕು ಕಚೇರಿ ಆವರಣದ ಶ್ರೀ ಚಾಮುಂಡೇಶ್ವರಿ, ಕೆಎಚ್‌ಬಿ ಬಡಾವಣೆಯ ಗಣೇಶ, ಶಂಕರನಗರದ ಮಹದೇಶ್ವರ, ಸ್ವರ್ಣಸಂದ್ರದ ಎಡಮುರಿ ಗಣಪತಿ, ಅಬಕಾರಿ ಕಚೇರಿ ಮುಂಭಾಗದ ಶ್ರೀ ಸುಬ್ರಹ್ಮಣ್ಯ ನಾಗರಕಟ್ಟೆ, ಸಕ್ಕರೆ ನಗರದ ಶ್ರೀ ಮಾರಮ್ಮ, ಹೌಸಿಂಗ್‌ ಬೋರ್ಡ್‌ ಕಾಲೋನಿಯ ಶ್ರೀ ಗಣಪತಿ-ಬಸವೇಶ್ವರ, ಕುವೆಂಪು ನಗರದ ಶ್ರೀ ಪ್ರಶಾಂತ ಬಲಮುರಿ ಗಣಪತಿ ಅ ಧಿಕೃತಗೊಳಿಸಲಾಗಿದೆ. ಸಂತೆಮಾಳದಲ್ಲಿದ್ದ ಶ್ರೀ ಮಾರಮ್ಮ ಕಾಳಮ್ಮ ದೇವಾಲಯವನ್ನು ತೆರವುಗೊಳಿಸಿರುವುದರಿಂದ ಪಟ್ಟಿಯಿಂದ ಕೈಬಿಡಲಾಗಿದೆ.

ಅದರಂತೆ ಮದ್ದೂರಿನ ಶ್ರೀ ದಂಡಿನ ಮಾರಮ್ಮ, ಶಿವಪುರದ ಶ್ರೀ ಅರಳಿಕಟ್ಟೆ ಬಸವೇಶ್ವರ ದೇವಸ್ಥಾನ ಅಧಿಕೃತಗೊಳಿಸಲಾಗಿದೆ. ಉಳಿದಂತೆ ಚನ್ನೇಗೌಡನದೊಡ್ಡಿಯ ಮಹದೇಶ್ವರ ದೇವಸ್ಥಾನ ತೆರವುಗೊಳಿಸಲಾಗಿದೆ. ಶ್ರೀ ಆಂಜನೇಯಸ್ವಾಮಿ ದೇವಾಲಯ ಖಾಸಗಿ ಸ್ವತ್ತಾಗಿರುವುದರಿಂದ ತೆರವು ಪಟ್ಟಿಯಿಂದ ಕೈಬಿಡಲಾಗಿದೆ. ಶಿವಪುರ ಶ್ರೀ ಬಸವೇಶ್ವರ ದೇವಸ್ಥಾನ ಕೈಬಿಡಲಾಗಿದೆ. ಮಳವಳ್ಳಿಯ ಗಾಜನೂರಿನ ಶ್ರೀ ಆಂಜನೇಯಸ್ವಾಮಿ, ಪಟ್ಟಣದ ಮಹದೇಶ್ವರ, ಜಾಲಿಮರದ ಕಟ್ಟೆ, ಅಂಕನಹಳ್ಳಿಯ ಕುಳ್ಳಿàರಮ್ಮ, ಕೋಡಿಪುರದ ಕ್ಯಾತಮ್ಮ, ಹಾಡ್ಲಿ ಗ್ರಾಮದ
ಬಸವೇಶ್ವರ, ಆಗಸನಪುರದ ಬಸವೇಶ್ವರ, ಕಿರುಗಾವಲಿನ ನಾಗರಕಲ್ಲು ಅರಳೀಕಟ್ಟೆ, ರಾಮಂದೂರಿನ ಕಾಳಿಕಾಂಭ, ಮಿಕ್ಕೆರೆಯ ವೀರ ಭದ್ರೇಶ್ವರ, ಬಂಡೂರಿನ ಬಸವೇಶ್ವರ, ಮಲಿಯೂರಿನ ನಾಗರಕಲ್ಲು ವಿನಾಯಕ, ಬೆಂಡರವಾಡಿಯ ಗಣೇಶ ದೇವಸ್ಥಾನ, ಕಲ್ಕುಣಿಯಏಳೂರಮ್ಮ. ವಿಜಯನಗರೇಶ್ವರಿ, ರಾಗಿಬೊಮ್ಮನಹಳ್ಳಿಯ ಬೊಮ್ಮಲಿಂಗೇಶ್ವರ, ಹೊನಗನಹಳ್ಳಿಯ ಚೌಡೇಶ್ವರಿ, ದೇಶಹಳ್ಳಿಯ ರಾಮ ಮಂದಿರ, ದೇವಮ್ಮ, ಮಸೀದಿ, ಸುಜ್ಜಲೂರಿನ ಮಾರಿಗುಡಿ, ಶನೇಶ್ವರ, ಚಿಕ್ಕವಾಗಿಲು ಬಸವೇಶ್ವರಮಠ, ಮುಟ್ಟನ ಹಳ್ಳಿಯ ದೊಡ್ಡಮ್ಮ ತಾಯಿ, ಬಿ.ಜಿ.ಪುರದ ಶನೇಶ್ವರ, ಮಂಟೇಸ್ವಾಮಿ, ದಾಸನದೊಡ್ಡಿಯ ಬಸವೇಶ್ವರ, ನೆಟ್ಕಲ್‌ನ ಮಹದೇಶ್ವರ.ದಬ್ಬಳ್ಳಿಯ 2 ಶನೇಶ್ವರ ದೇವಾಲಯ, ಶಿರಮಹಳ್ಳಿಯ ಮಾರಮ್ಮ, ಬೆಳಕವಾಡಿಯ ಸಿದ್ದಪ್ಪಾಜಿ, ಹಾಲುಕಲ್ಲು ಬಸವೇಶ್ವರ, ಬಾಚಹಳ್ಳಿಯ ಆಂಜನೇಯ, ಲಿಂಗಪಟ್ಟಣದ ಶನೇಶ್ವರ, ಹಲಗೂರಿನ ಕಾಳಮ್ಮ ದೇವಾಲಯಗಳನ್ನು ಅಧಿಕೃತಗೊಳಿಸಲಾಗಿದೆ.

ಕೆ.ಆರ್‌.ಪೇಟೆ ತಾಲೂಕಿನ ಬೊಮ್ಮೇನಹಳ್ಳಿಯ ಶನೇಶ್ವರ, ಬಸವೇಶ್ವರ, ರಂಗನಾಥಪುರ ಕ್ರಾಸ್‌ನ ಚಾಮುಂಡೇಶ್ವರಿ,  ಆಂಜನೇಯ, ನಾರ್ಗೋನಹಳ್ಳಿಯ ಆಂಜನೇಯ, ಪಟ್ಟಣದ ಬಸವನ ಕಟ್ಟೆ, ಹೊಸಹೊಳಲುವಿನ ಬಸವೇಶ್ವರ, ಹರಳಹಳ್ಳಿಯ ಬಸವೇಶ್ವರ, ಶೀಳನೆರೆಯ ಬಸವೇಶ್ವರ ದೇವಾಲಯಗಳನ್ನು ಅಧಿಕೃತಗೊಳಿಸಲಾಗಿದೆ.

ಈಗಾಗಲೇ ಅನಧಿಕೃತವಾಗಿ ದೇವಾಲಯಗಳನ್ನು ತೆರವುಗೊಳಿಸಲಾಗಿದೆ. ಈ ವರ್ಷವೂ ಅನಧಿಕೃತ ದೇವಾಲಯಗಳ ಬಗ್ಗೆ ಪರಿಷ್ಕರಣೆ
ನಡೆಸಲಾಗಿದ್ದು, ಸಾರ್ವಜನಿಕವಾಗಿ ಯಾವುದೇ ತೊಂದರೆ ಇಲ್ಲದಿರುವುದರಿಂದ 51 ದೇವಾಲಯಗಳನ್ನು ಅಧಿಕೃತಗೊಳಿಸಲಾಗಿದೆ. ಇದರ ಪ್ರಕ್ರಿಯೆ ಆಡಳಿತಾತ್ಮಕ ವಾಗಿ ಚರ್ಚೆ ನಡೆಸಿ ಮುಂದಿನ ಕ್ರಮ ವಹಿಸಲಾಗುವುದು.
– ಅರುಣ್‌ಸಾಗರ್‌, ಶಿರಸ್ತೇದಾರ್‌,
ಧಾರ್ಮಿಕ ದತ್ತಿ ವಿಭಾಗ, ಮಂಡ್ಯ

– ಎಚ್‌.ಶಿವರಾಜ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ

Suicide 3

Maddur; ಕೆಲಸದ ಒತ್ತಡ: ಎಂಜಿನಿಯರ್‌ ಆತ್ಮಹ*ತ್ಯೆ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.