ಬೆಳಗಾವಿಯಲ್ಲಿ ಕುಂದಾಪುರ ಮೂಲದ ವ್ಯಕ್ತಿಯ ಮನೆಗೆ ನುಗ್ಗಿ ಕೊಲೆ
ಶೆಟ್ಟಿಯವರು 35 ವರ್ಷಗಳಿಂದ ಲಕ್ಷ್ಮೀ ನಗರದಲ್ಲಿ ಪಾನ್ ಬೀಡ ಅಂಗಡಿ ನಡೆಸುತ್ತಿದ್ದರು.
Team Udayavani, Sep 16, 2021, 10:34 AM IST
ಕುಂದಾಪುರ/ಬೆಳಗಾವಿ, ಸೆ.15: ಬೆಳಗಾವಿಯಲ್ಲಿ ಪಾನ್ ಬೀಡ ಅಂಗಡಿ ನಡೆಸುತ್ತಿದ್ದ ಗೋಳಿಯಂಗಡಿ ಸಮೀಪದ ಹಿಲಿಯಾಣದ ಮೂಲದ ನಿವಾಸಿ ಬಾಲಕೃಷ್ಣ ಶೆಟ್ಟಿ (54) ಅವರನ್ನು ರೌಡಿಶೀಟರ್ ಎನ್ನಲಾದ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಮಂಗಳವಾರ ರಾತ್ರಿ ಬೆಳಗಾವಿಯಲ್ಲಿ ಸಂಭವಿಸಿದೆ.
ಇದನ್ನೂ ಓದಿ:ಬಸ್-ಕಂಟೈನರ್ ಲಾರಿ ನಡುವೆ ಅಪಘಾತ:ತಪ್ಪಿಸಲೆತ್ನಿಸಿದ ಲಾರಿ ಚಾಲಕನನ್ನು ಬೆನ್ನಟ್ಟಿದ ಸ್ಥಳೀಯರು
ಪ್ರಕರಣಕ್ಕೆ ಸಂಬಂಧಿಸಿದಂತೆ ದತ್ತಾತ್ರೇಯ ಆಲಿಯಾಸ್ ದತ್ತ ಶಿವಾನಂದ ಜಾಂತಿಕಟ್ಟಿ ಎನ್ನುವಾತನನ್ನು ಬಂಧಿ ಸಲಾಗಿದೆ. ಹಂತಕ ದತ್ತ ಮಂಗಳವಾರ ಮಧ್ಯಾಹ್ನ ಬೆಳಗಾವಿ ವಡಗಾವಿಯ ಬಾಲಕೃಷ್ಣ ಶೆಟ್ಟಿ ಅವರ ಬೀಡಾ ಅಂಗಡಿಗೆ ಬಂದು ಗುಟ್ಕಾ ಕೇಳಿದ್ದಾನೆ. ಆಗ ಬಾಲಕೃಷ್ಣ ಶೆಟ್ಟಿ ಹಣ ಕೇಳಿದಾಗ ಇಬ್ಬರ ಮಧ್ಯೆ ಜಗಳವಾಗಿತ್ತು. ಆಗ ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಇದರಿಂದ ಭಯಭೀತರಾಗಿ ಶೆಟ್ಟಿ ಪಾನ್ ಶಾಪ್ ಬಂದ್ ಮಾಡಿ ಬೇರೆಯವರ ಮನೆಯಲ್ಲಿ ಉಳಿದುಕೊಂಡಿದ್ದರು. ರಾತ್ರಿ ಮನೆಗೆ ಹೋದಾಗ ದತ್ತ ಏಕಾಏಕಿ ನುಗ್ಗಿ ಬಂದು ಕೊಲೆಗೈದಿದ್ದಾನೆ ಎನ್ನಲಾಗಿದೆ. ಶೆಟ್ಟಿಯವರು 35 ವರ್ಷಗಳಿಂದ ಲಕ್ಷ್ಮೀ ನಗರದಲ್ಲಿ ಪಾನ್ ಬೀಡ ಅಂಗಡಿ ನಡೆಸುತ್ತಿದ್ದು, ಪತ್ನಿ, ಪುತ್ರ, ಪುತ್ರಿಯೊಂದಿಗೆ ಅಲ್ಲಿಯೇ ನೆಲೆಸಿದ್ದರು.
ಬಾಲಕೃಷ್ಣ ಅವರ ಮನೆ ಗೋಳಿಯಂಗಡಿ ಸಮೀಪದ ಹಿಲಿಯಾಣ. ಪತ್ನಿ ಮನೆ ಗುಜ್ಜಾಡಿ ಗ್ರಾಮದ ಮಂಕಿ. ಶೆಟ್ಟಿಯವರ ಪತ್ನಿ ಮತ್ತು ಮಕ್ಕಳು ಸೋಮವಾರ ರಾತ್ರಿ ಬೆಳಗಾವಿಯಿಂದ ಊರಿಗೆ ಹೊರಟಿದ್ದು, ಮಂಗಳವಾರ ಬೆಳಗ್ಗಿನ ಜಾವ ಊರಿಗೆ ಬಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Today World Fisheries Day: ಸಮಸ್ಯೆ ಗೂಡಾಗಿರುವ ಕರಾವಳಿಯ ಪ್ರಮುಖ ಆರ್ಥಿಕತೆ
Road Mishap: ಇನ್ನೋವಾ ಕಾರಿಗೆ ಇನ್ಸುಲೇಟರ್ ಲಾರಿ ಢಿಕ್ಕಿ; ನಾಲ್ವರು ಗಂಭೀರ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.