ಗಡಿಗ್ರಾಮಗಳಲ್ಲಿ ನರೇಗಾ ಕಾಮಗಾರಿ ಕಳಪೆ!

ಕಳಪೆ ಕಾಮಗಾರಿ ಬಗ್ಗೆ ಅಧಿಕಾರಿಗಳ ಸಮರ್ಥನೆ: ಗ್ರಾಮಸ್ಥರ ಆರೋಪ; ಕಾನೂನು ಹೋರಾಟದ ಎಚ್ಚರಿಕೆ

Team Udayavani, Sep 16, 2021, 2:51 PM IST

ಗಡಿಗ್ರಾಮಗಳಲ್ಲಿ ನರೇಗಾ ಕಾಮಗಾರಿ ಕಳಪೆ!

ನೆಲಮಂಗಲ: ನರೇಗಾ ಕಾಮಗಾರಿಗಳ ಮೂಲಕ ಗ್ರಾಮದ ಅಭಿವೃದ್ಧಿಯ ಜತೆ ಕೂಲಿ ಕಾರ್ಮಿಕರು ಹಾಗೂ ಬಡಜನರಿಗೆ ಉದ್ಯೋಗ ಸಿಗಲು ಸರ್ಕಾರ ಯೋಜನೆ ರೂಪಿಸಿದರೆ, ಮಾಗಡಿ ಹಾಗೂ ನೆಲ ಮಂಗಲ ವಿಧಾನಸಭಾ ಕ್ಷೇತ್ರದ ಸೋಲೂರು ಗಡಿ ಗ್ರಾಮಗಳಲ್ಲಿ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ದೂರು ನೀಡಿದರೂ, ಸಮರ್ಥನೆ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನೆಲಮಂಗಲ ವಿಧಾನಸಭಾ ಕ್ಷೇತ್ರದ ಮೋಟಗನ ಹಳ್ಳಿ ಗ್ರಾಪಂನ ತಾಲೂಕಿನ ಗಡಿಗ್ರಾಮವಾದ ಕಲ್ಯಾಣಪುರ, ಬಸವನಹಳ್ಳಿಯಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಾಣವಾಗಿರುವ 20 ಲಕ್ಷ ರೂ.ಗೂ ಹೆಚ್ಚು ಅನುದಾನದಲ್ಲಿ ಗೋಕಟ್ಟೆಗಳು ಹಾಗೂ ಕೆರೆಗಳಕಾಮಗಾರಿ ಮಾಡಿದ್ದು, ಅವ್ಯವಹಾರ ಹಾಗೂ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ರಾಮನಗರ ಸಿಇಒಗೆ ದೂರು ನೀಡಿದ ಬೆನ್ನಲ್ಲೆ ಮಾಗಡಿ ತಾಪಂ ಸಹಾಯಕ ನಿರ್ದೇ
ಶಕರು ಸ್ಥಳ ಪರಿಶೀಲನೆ ಮಾಡಿದ್ದು,ಕಾಮಗಾರಿಗಳನ್ನು ಸಮರ್ಥನೆ ಮಾಡಿಕೊಳ್ಳುವಂತಹಕೆಲಸ ಮಾಡಿದ್ದಾರೆ.ಇದರಿಂದ ದೂರುದಾರರು ಅಸಮಾಧಾನ ವ್ಯಕ್ತಪಡಿ ಸಿದ್ದು,ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಶಾಸಕರಿಗೆ ಹೇಳುವ ಅವಶ್ಯಕತೆ ಯಿಲ್ಲ: ಸೋಲೂರು ಹೋಬಳಿಗೆ ಮಾಗಡಿತಾಲೂಕಿನ ಅಧಿಕಾರಿಗಳಕಾರ್ಯ ನಿರ್ವಹಿಸಿದರೇ ಶಾಸಕರು ಮಾತ್ರ ನೆಲಮಂಗಲ ವಿಧಾನ ಸಭಾ ಕ್ಷೇತ್ರದವರು ಬರಲಿದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ಹಾಗೂ ಸಭೆ ಸಮಾರಂಭದಲ್ಲಿ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಅವರನ್ನು ಹೇಳಿದರೆ ಇಂತಹ ಸಮಸ್ಯೆ ಬರುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಹಾಯಕ ನಿರ್ದೇಶಕರು ನಾನು ಶಾಸಕರನ್ನು ಕರೆಯುವ ಅವಶ್ಯಕತೆಯಿಲ್ಲ, ಅವರುಈವ್ಯಾಪ್ತಿಗೆ ಬರುವುದಿಲ್ಲ. ನಮ್ಮ ಕಾರ್ಯಕ್ರಮಕ್ಕೆ ಅವರನ್ನು ಯಾಕೆ ಕರೆಯ ಬೇಕು ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ:ಆಸ್ಕರ್ ಫರ್ನಾಂಡಿಸ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಕಾಂಗ್ರೆಸ್ ನಾಯಕರು

ಪಿಡಿಒ ಸಮರ್ಥನೆ: ಜೆಸಿಬಿಗಳಲ್ಲಿ ಕೆಲಸ ಮಾಡಿದ್ದಾರೆ. ಜಿಪಿಎಸ್‌ ಮಾಹಿತಿ ಇರುವ ಫೋಟೋಗಳಿವೆ ಎಂದು ದೂರುದಾರ ಹೇಳಿದ್ದಕ್ಕೆ ಮೋಟಗನಹಳ್ಳಿ ಗ್ರಾಪಂ ಪಿಡಿಒ ನರಸಿಂಹಮೂರ್ತಿ ಮಾತನಾಡಿ, ನಾನು ನೋಡಿದಾಗ ಜೆಸಿಬಿಯಲ್ಲಿ ಕೆಲಸ ನಡೆದಿಲ್ಲ, ನಾನು ಇಲ್ಲ
ದಾಗ ನಡೆದಿದ್ದರೆ ನಾನು ಯಾವಾಗಲು ಅಲ್ಲಿಯೇ ಇರಲು ಸಾಧ್ಯವೆ ಎಂದು ಪ್ರಶ್ನೆ ಮಾಡಿದ್ದು, ಅಕ್ರಮ ಮಾಡಿದವರನ್ನು ಸಮರ್ಥನೆ ಮಾಡಿಕೊಂಡಿದ್ದು, ದೂರುದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಹಿಗಳ ಹೊಂದಾಣಿಕೆಯಿಲ್ಲ: ನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡುವಾಗ ನೀಡಿದ ಜಾಬ್‌ ಕಾರ್ಡ್‌ದಾರರ ಸಹಿಗೂ, ಕೆಲಸದ ನಂತರ ಬಿಲ್‌ ನೀಡುವಾಗ ಪಡೆದಿರುವ ಸಹಿಗೂ ವ್ಯತ್ಯಾಸವಿದ್ದು, ಯಂತ್ರೋಪಕರಣಗಳಲ್ಲಿಕೆಲಸ ಮಾಡಿ ಜನರು ಮಾಡಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ ಎಂದು ಸಾಮಾಜಿಕ ಹೋರಾಟ ಗಾರ ಮಹೇಂದ್ರಕುಮಾರ್‌ ಆರೋಪಿಸಿದ್ದು, ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಬಿಟ್ಟಸಂದ್ರ,
ಗುಡೇಮಾರನಹಳ್ಳಿ, ಸೋಲೂರು, ಬಾಣವಾಡಿ ಸೇರಿದಂತೆ ತಾಲೂಕಿನ ಗಡಿಗ್ರಾಮಗಳಲ್ಲಿ ಕಳಪೆ ಕಾಮ ಗಾರಿಯ ಬಗ್ಗೆ ದೂರುಗಳು ನೀಡಲಾಗಿದೆ.

ಎರಡು ಗುಂಪುಗಳ ನಡುವೆ ಗದ್ದಲ: ದೂರುದಾರರ ಜತೆ ಅಧಿಕಾರಿಗಳು ನರೇಗಾ ಕಾಮಗಾರಿ ಪರಿಶೀಲನೆಗೆ ಸ್ಥಳೀಯ ಹಾಲಿ ಹಾಗೂ ಮಾಜಿ ಗ್ರಾಪಂ ಕೆಲವು ಸದಸ್ಯರು ತಮ್ಮ ಬೆಂಬಲಿಗರನ್ನು ಕರೆತಂದು ದೂರುದಾರರ ವಿರುದ್ಧ ಮುಗಿಬೀಳುವಂತೆ ಮಾಡಿದ್ದು, ಸಹಾಯಕ ನಿರ್ದೇಶಕ ಜತೆಯಲ್ಲಿದ್ದರೂ, ಗದ್ದಲವನ್ನು ಕಡಿಮೆ ಮಾಡಲು ಮಾತ್ರ ಮುಂದಾಗಲಿಲ್ಲ. ಪೊಲೀಸ್‌ ಅಧಿಕಾರಿಗಳು ಸ್ಥಳದಲ್ಲಿ ಇರದಕಾರಣ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ಗುಡ್ಡದಲ್ಲಿ ಸಿಕ್ಕಕಲ್ಲಿ ಗೂಬಿಲ್‌
ಗೋಕಟ್ಟೆ ನಿರ್ಮಾಣಕ್ಕೆ ಪಕ್ಕದ ಬಂಡೆಯ ಸಮೀಪದ ಗುಡ್ಡದಲ್ಲಿ ಬಿದ್ದಿರುವ ಕಲ್ಲುಗಳನ್ನು ಕೂಲಿ ಕಾರ್ಮಿಕರಿಂದ ಸಂಗ್ರಹಿಸಿ ಬಳಕೆ ಮಾಡಿಕೊಂಡಿ
ದ್ದಾರೆ. ಆದರೆ, ಬಿಲ್‌ ಮಾಡುವ ಸಮಯದಲ್ಲಿ ಕಲ್ಲುಗಳ ಖರೀದಿ ಮಾಡಿರುವುದಾಗಿ ಬಿಲ್‌ ನೀಡಿರುವುದು ಕಂಡುಬಂದಿದೆ. ಇದರ ಬಗ್ಗೆ ಪರಿಶೀ
ಲನೆ ಮಾಡಬೇಕಾದ ಅಧಿಕಾರಿ ಮಾತ್ರ ಪಕ್ಕದ ಬಂಡೆ ಕಲ್ಲು ಬಳಕೆ ಮಾಡಿಕೊಳ್ಳಬಹುದು. ಬಿಲ್‌ ನೀಡಿರುವ ಬಗ್ಗೆ ಮತ್ತೆ ಪರಿಶೀಲಿಸುವೆ ಎಂದು ಜಾರಿ ಕೊಂಡಿದ್ದಾರೆ.ಮೊಟಗನಹಳ್ಳಿ ಗ್ರಾಪಂನಲ್ಲಿ ನಡೆಸುವ ನರೇಗಾ ಕಾಮಗಾರಿಗಳ ಸಾಮಗ್ರಿಗಳಿಗೆ ಒಬ್ಬನೇ ವ್ಯಕ್ತಿ ಬಿಲ್‌ ನೀಡುತ್ತಿದ್ದು, ಪ್ರಕೃತಿಯ ಕಲ್ಲುಗಳಿಗೂ ಬಿಲ್‌ ನೀಡಿರುವುದು ಅಚ್ಚರಿ ಮೂಡಿಸಿದೆ.

ಟಾಪ್ ನ್ಯೂಸ್

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Crime: ರೌಡಿಶೀಟರ್‌ ಕೊಲೆ ಯತ್ನ; ಆರೋಪಿಗೆ ಗುಂಡೇಟು

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

11

Lack of Bus stand: ಹೊಸಕೋಟೆ; ಬಸ್‌ ನಿಲ್ದಾಣವಿಲ್ಲದೆ ಪರದಾಟ!

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.